2024 ಹ್ಯುಂಡೈ i20 N Line ಅನಾವರಣ: ಅಗ್ರೆಸಿವ್ ಲುಕ್, ಸಖತ್ ಪರ್ಫಾಮೆನ್ಸ್, ಭಾರತಕ್ಕೆ ಯಾವಾಗ?
ಪ್ರಸಿದ್ದ ದಕ್ಷಿಣ ಕೊರಿಯಾದ ಕಾರು ನಿರ್ಮಾಣ ಕಂಪನಿಯಾದ ಹ್ಯುಂಡೈ, 2024 ರ ಆರಂಭದಿಂದಲೂ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆ ಗುರುತನ್ನು ಬಲವಾಗಿ ಊರುತ್ತಲಿದೆ. ಈಗಾಗಲೇ ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಿ, ಭಾರತೀಯರಿಂದ ಭರ್ಜರಿ ಬುಕಿಂಗ್ ಅನ್ನು ಪಡೆದಿದ್ದು, ಕ್ರೇಟಾ ಎನ್‌ಲೈನ್ ಅನ್ನು ಸಹ ಕೊಂಚದರಲ್ಲೇ ಮಾರುಕಟ್ಟೆಗೆ ತರಲಿದೆ.
ಇದೀಗ ಹ್ಯುಂಡೈ ತನ್ನ ಹೊಸ ಇ೨೦ ಎನ್‌ಲೈನ್ 2024 ಅನ್ನು ರಿವೀಲ್ ಮಾಡಿದ್ದು, ಇದರ ಹೊರಭಾಗ ಮತ್ತು ಒಳಭಾಗದ ಪೀಚರ್‌ಗಳು ಹೊರಬಿದ್ದಿವೆ. ಸದ್ಯಕ್ಕೆ ಯೂರೋಪಿಯನ್ ಮಾರುಕಟ್ಟೆಯಲ್ಲಿ ಹ್ಯುಂಡೈ ತನ್ನ ಹೊಸ i20 N Line, 2024 ಅನ್ನು ಅನಾವರಣಗೊಳಿಸಿದ್ದು, ಇಂದಿನ ಲೇಖನದಲ್ಲಿ ಈ ಕುರಿತಾಗಿ ನಾವು ನೋಡಲಿದ್ದು, ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೆ ಓದಿ.

ಮಾಹಿತಿಗಳ ಪ್ರಕಾರ ಹ್ಯುಂಡೈ ಕಂಪನಿಯು ಎಪ್ರಿಲ್ ತಿಂಗಳಿಂದ ಯೂರೋಪಿಯನ್ ಮಾರುಕಟ್ಟೆಯಲ್ಲಿ ಹೊಸ i20 N Line, 2024 (2024 Hyundai i20 N Line) ಉತ್ಪಾದನೆ ಆರಂಭಿಸಲಿದ್ದು, ಭಾರತದಲ್ಲಿ ಈ ವರ್ಷದ ಕೊನೆಯಲ್ಲಿ ಈ ಕಾರನ್ನು ಲಾಂಚ್ ಮಾಡಲಿದೆ ಎಂದು ತಿಳಿದು ಬಂದಿದೆ. ಏನೇ ಆದರೂ ಆಕರ್ಷಕ ವಿನ್ಯಾಸದಿಂದ ಕೂಡಿರುವ ಈ ಕಾರು ಭಾರತದಲ್ಲಿ ಹವಾ ಸೃಷ್ಟಿಸುವುದಂತೂ ಖಂಡಿತ ಎಂಬ ಮಾತುಗಳೂ ಕೇಳಿ ಬರುತ್ತಿದೆ.
ಈ ಕಾರಿನ ಡಿಸೈನ್ ಕುರಿತಾಗಿ ನೋಡುವುದಾದರೆ, ಕಳೆದ ಬಾರಿಯ i20 N Line ಗಿಂತಲೂ ಹೆಚ್ಚು ಆಕರ್ಷಕವಾಗಿರಲಿದೆ. ಟ್ವೀಕ್ಡ್ ಫ್ರಂಟ್ ಗ್ರಿಲ್ ಈ ಕಾರಿನಲ್ಲಿ ಬರಲಿದ್ದು ಹೊಸ 17 ಇಂಚ್‌ನ ಅಲಾಯ್ ವ್ಹೀಲ್‌ಗಳನ್ನು ನಾವು ಇದರಲ್ಲಿ ಕಾಣಬಹುದಾಗಿದೆ. ಇದರ ಜೊತೆಗೆ ಸಾಧಾರಣ i20 ಗಿಂತ, ಎನ್‌ಲೈನ್‌ನಲ್ಲಿ ಇರುವಂತಹ ಕೆಲವೊಂದು ಡೀಟೈಲ್‌ಗಳನ್ನು ನಾವು ಈ ಕಾರಿನಲ್ಲಿ ಕಾಣಬಹುದಾಗಿದೆ.

ಮಾಹಿತಿಗಳ ಪ್ರಕಾರ ಹೊಸ i20 N Line, 2024 ಕಾರು ನಾಲ್ಕು ಬಣ್ಣಗಳಲ್ಲಿ ಲಭ್ಯವಾಗಲಿದೆ. ಲೂಮಾ ಗ್ರೇ ಪರ್ಲ್, ಮೆಟಾ ಬ್ಲೂ ಪರ್ಲ್, ವೈಬ್ರಂಟ್ ಬ್ಲೂ ಪರ್ಲ್ ಮತ್ತು ಲೂಸಿಡ್ ಬ್ಲೂ ಮೆಟಾಲಿಕ್‌ನಲ್ಲಿ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ. ಇನ್ನು ಈ ಕಾರಿನ ಒಳಭಾಗದಲ್ಲಿ ಗ್ರೇ ಮತ್ತ ಬ್ಲಾಕ್ ಬಣ್ಣದ ಕಾಂಬಿನೇಷನ್‌ನಲ್ಲಿ ಲಬ್ಯವಾಗಲಿದ್ದು, ಅಲ್ಲಲ್ಲಿ ಕೆಂಪು ಬಣ್ಣದ ಇನ್ಸರ್ಟ್‌ಗಳನ್ನು ಕಾಣಬಹುದು.
3 ಸ್ಪೋಕ್ ಪರ್ಫರೆಟೆಡ್ ಲೆದರ್ ಆವೃತವಾಗಿರುವ ಸ್ಟೀರಿಂಗ್ ಲಭ್ಯವಾಗಲಿದೆ. ಗಿಯರ್ ನಾಬ್ ಸಹ ಲೆದರ್ ಫಿನಿಶಿಂಗ್‌ನಲ್ಲಿ ಇರಲಿದ್ದು, ಅಲ್ಲಲ್ಲಿ ಕೆಂಪು ಬಣ್ಣದ ಡಿಸೈನ್‌ಗಳಿರಲಿವೆ. ನಿಮ್ಮ ಪ್ರಯಾಣವನ್ನು ಮತ್ತಷ್ಟು ಆರಾಮದಾಯಕವಾಗಿರಿಸಲು ನಾನ್ ಸ್ಲಿಪ್ ಅಲ್ಯುಮಿನಿಯಂ ಪೆಡಲ್‌ಗಳು ಲಭ್ಯವಾಗಲಿದೆ. ಇದು ಚಾಲಕರ ಅನುಭವವನ್ನು ಮತ್ತಷ್ಟು ಆಹ್ಲಾದಕರವಾಗಿರಿಸಲಿದೆ.

ಎನ್‌ಲೈನ್ ಲೈನ್‌ಅಪ್ ಬಗ್ಗೆ ಹೇಳುವುದಾದರೆ, Hyundai i20 N Line ಕಾರು ಪರ್ಫಾಮೆನ್ಸ್ ಕಾರಿನ ಬಗ್ಗೆ ಹೇಳುವುದಾದರೆ, ಇದು ಪರ್ಫಾಮೆನ್ಸ್ ಕಾರು ಆಗಿರುವುದರಿಂದ ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿರುತ್ತದೆ. ಈ ಪರ್ಫಾಮೆನ್ಸ್ ಕಾರು ಹೊಸ ಫ್ರಂಟ್ ಮತ್ತು ರೇರ್ ಬಂಪರ್, ಸೈಡ್ ಸ್ಕರ್ಟ್ ಗಳು ಮತ್ತು ವಿಭಿನ್ನ ವಿನ್ಯಾಸದ ಅಲಾಯ್ ವ್ಹಿಲ್ ಗಳನ್ನು ಹೊಂದಿರುತ್ತದೆ.
ಇನ್ನು ಕ್ರೋಪ್ ಟ್ರಿಪ್ಡ್ ಡ್ಯುಯಲ್ ಎಕ್ಸಾಸ್ಟ್ ಅನ್ನು ಹೊಂದಿದೆ. ಸ್ಟ್ಯಾಂಡರ್ಡ್ i20 ಮಾದರಿಗೆ ಹೋಲಿಸಿದರೆ i20 N Line ಕಾರು ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಒಟ್ಟಾರೆಯಾಗಿ ಈ i20 N Line ಮಾದರಿಯು ಕಾರು ಪ್ರಿಯರನ್ನು ಸೆಳೆಯುಂತಹ ಆಕರ್ಷಕ ಲುಕ್ ಒಳಗೊಂಡಿರುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications