Vande Bharat: ಅಭಿವೃದ್ಧಿ ಪಥದತ್ತ ಭಾರತ.. 2047ರ ವೇಳೆಗೆ 4,500 ವಂದೇ ಭಾರತ್ ರೈಲುಗಳ ಸಂಚಾರ

ದೇಶಾದ್ಯಂತ ಪ್ರೀಮಿಯಂ ಸೆಮಿ ಹೈ - ಸ್ವೀಡ್ ರೈಲುಗಳಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲುಗಳು ಖ್ಯಾತಿ ಗಳಿಸಿವೆ. ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ವಂದೇ ಭಾರತ್ ಸ್ಲೀಪರ್, ವಂದೇ ಸಾಧಾರಣ್ ಹಾಗೂ ವಂದೇ ಮೆಟ್ರೋ ರೈಲುಗಳನ್ನು ಅಭಿವೃದ್ಧಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಶುಕ್ರವಾರ ವಂದೇ ಭಾರತ್ ರೈಲುಗಳ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ (Union Minister of Civil Aviation) ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಅವರು ಮಾತನಾಡಿದ್ದಾರೆ. 'ದೇಶಾದ್ಯಂತ ಸದ್ಯ, 23 ವಂದೇ ಭಾರತ್ ರೈಲುಗಳು ಕಾರ್ಯಾಚರಣೆ ನಡೆಸುತ್ತಿವೆ. 2047ರ ವೇಳೆಗೆ 4,500 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ಉದ್ದೇಶಿಸಲಾಗಿದೆ' ಎಂದು ಹೇಳಿದ್ದಾರೆ.

Vande Bharat: ಅಭಿವೃದ್ಧಿ ಪಥದತ್ತ ಭಾರತ.. 2047ರ ವೇಳೆಗೆ 4,500 ವಂದೇ ಭಾರತ್ ರೈಲುಗಳ ಸಂಚಾರ

ಭಾರತವು 2026 - 2027ರ ನಡುವೆ ತನ್ನ ಮೊದಲ ಹೈಸ್ಪೀಡ್ ಬುಲೆಟ್ ರೈಲಿಗೆ ಸಾಕ್ಷಿಯಾಗಿದ್ದು, ನವಿ ಮುಂಬೈನಲ್ಲಿ ಎರಡನೇ ವಿಮಾನ ನಿಲ್ದಾಣವು 2024ರ ಅಂತ್ಯದ ವೇಳೆಗೆ ಉದ್ಘಾಟನೆಗೊಳ್ಳಿಲಿದೆ ಎಂದಿದ್ದಾರೆ. ಮುಂದಿನ ವರ್ಷದ ಜೆವಾರ್‌ನಲ್ಲಿ 'ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ' ಲೋಕಾರ್ಪಣೆಯಾಗಲಿದ್ದು, ಡಿಸೆಂಬರ್ ಅಂತ್ಯದೊಳಗೆ ಅಯೋಧ್ಯೆಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ಸಿದ್ಧವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಸಿಂಧಿಯಾ ಹೇಳಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಬುಲೆಟ್ ರೈಲುಗಳ ಉತ್ತೇಜನದ ಹೊರತಾಗಿಯೂ ರೈಲುಗಳಿಂದ ಇಂಗಾಲದ ಹೊರಸುವುವಿಕೆಯನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. 2014ಕ್ಕಿಂತ ಮೊದಲು ದೇಶದಲ್ಲಿ ನಾಯಕತ್ವ ಹಾಗೂ ದೂರದೃಷ್ಟಿಯ ಕೊರತೆಯಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ದೇಶವು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಸಿಂಧಿಯಾ ತಿಳಿಸಿದ್ದಾರೆ.

Vande Bharat: ಅಭಿವೃದ್ಧಿ ಪಥದತ್ತ ಭಾರತ.. 2047ರ ವೇಳೆಗೆ 4,500 ವಂದೇ ಭಾರತ್ ರೈಲುಗಳ ಸಂಚಾರ

2019ರ ಫೆಬ್ರವರಿಯಲ್ಲಿ ನವದೆಹಲಿ - ವಾರಣಾಸಿ ನಡುವೆ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಅವರು, ಚಾಲನೆ ನೀಡಿದ್ದರು. ವಂದೇ ಭಾರತ್ ಎಕ್ಸ್‌ಪ್ರೆಸ್ ವೇಗದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಗರಿಷ್ಠ ವೇಗವನ್ನು ಗಂಟೆಗೆ 130 ಕಿಮೀ.ಗೆ ಸೀಮಿತಗೊಳಿಲಾಗಿದೆ. ಈ ರೈಲಿನ ಸೀಟುಗಳು ಆರಾಮದಯವಾಗಿದ್ದು, ಸಂಪೂರ್ಣ ಎಸಿ ವ್ಯವಸ್ಥೆ, ವೈಫೈ ಹಾಗೂ ಸ್ವಯಂ ಚಾಲಿತ ಬಾಗಿಲುಗಳನ್ನು ಕೂಡ ಒಳಗೊಂಡಿದೆ.

ರೈಲ್ವೆ ಇಲಾಖೆಯು ಪ್ರಯಾಣಿಕರ ಹಿತದೃಷ್ಟಿಯಿಂದ ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಫೆಬ್ರವರಿ 2024 ರೊಳಗೆ ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಸಹಯೋಗದಲ್ಲಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಉತ್ಪಾದನಾ ಘಟಕದಲ್ಲಿ ಈ ರೈಲುಗಳನ್ನು ತಯಾರಿಸಲಾಗುತ್ತಿದೆ.

ಈ ವಂದೇ ಭಾರತ್ ಸ್ಲೀಪರ್ ರೈಲು, ಒಟ್ಟು 16 ಕೋಚ್‌ಗಳನ್ನು ಹೊಂದಿರಲಿದ್ದು, ಎಲ್ಲವು ಸೇರಿ, 823 ಬರ್ತ್‌ಗಳನ್ನು ಒಳಗೊಂಡಿರಲಿದೆ. ಗಂಟೆಗೆ 160 ವೇಗದಲ್ಲಿ ಸಂಚಾರಿಸುವ ಸಾಮರ್ಥ್ಯ ಹೊಂದಿರಲಿದ್ದು, ಪ್ರಯಾಣದ ಅವಧಿಯು ಸಾಕಷ್ಟು ಉಳಿತಾಯವಾಗಲಿದೆ. ಈ ರೈಲಿನಲ್ಲಿ ಅತ್ಯಾಧುನಿಕ ಸೌಲಭ್ಯಗಳಿರಲಿದ್ದು, ವಾಸನೆ ಮುಕ್ತ ಶೌಚಾಲಯ ಹಾಗೂ ಹೊರಭಾಗದಲ್ಲಿ ಸ್ವಯಂ ಚಾಲಿತ ಬಾಗಿಲನ್ನು ಹೊಂದಿರಲಿದೆ.

ಕಡಿಮೆ ಖರ್ಚಿನ ವಂದೇ ಸಾಧಾರಣ್ ಎಕ್ಸ್‌ಪ್ರೆಸ್ (Vande Sadharan Express) ರೈಲುಗಳು ಕೂಡ ಕೆಲವೇ ದಿನಗಳಲ್ಲಿ ಸಂಚರಿಸಲಿವೆ. ಇವು 800 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸಬಲ್ಲವು. ಇಂಟರ್‌ಸಿಟಿ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿದ್ದು, ಹಗಲು - ರಾತ್ರಿ ಸಂಚಾರಕ್ಕೆ ಬಳಕೆ ಮಾಡಬಹುದಾಗಿದೆ. ಈ ರೈಲು, 22 ಕೋಚ್‌ಗಳನ್ನು ಒಳಗೊಂಡಿರಲಿದೆ.

ಹೊಸ ವಂದೇ ಸಾಧಾರಣ್ ರೈಲು ಅ.29 ರಂದು ಮುಂಬೈನ ವಾಡಿ ಬಂದರ್ ಯಾರ್ಡ್‌ಗೆ ಆಗಮಿಸಿತ್ತು. ನವೆಂಬರ್ 8ರಂದು ಅಹಮದಾಬಾದ್ - ಮುಂಬೈ ನಡುವೆ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರವನ್ನು ನಡೆಸಿತ್ತು. ಪ್ರಸ್ತುತ, ದೇಶಾದ್ಯಂತ ರೈಲ್ವೆ ಇಲಾಖೆಯು 30 ಮಾರ್ಗಗಳಲ್ಲಿ ವಂದೇ ಸಾಧಾರಣ್ ರೈಲುಗಳ ಓಡಾಟವನ್ನು ಆರಂಭಿಸಲು ನಿರ್ಧರಿಸಿದೆ. ಇನ್ನು ಹತ್ತಿರದ ನಗರದ ಪ್ರಯಾಣಕ್ಕಾಗಿ ವಂದೇ ಮೆಟ್ರೊ ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದೆ.

Article Published On: Saturday, December 9, 2023, 13:20 [IST]
English summary
2047 india have to 4500 vande bharat express trains cabinet minister jyotiraditya scindia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+