29 ವರ್ಷದ ಊಬರ್ ಚಾಲಕನಿಂದು ಆಗರ್ಭ ಶ್ರೀಮಂತ... ಈತ ಮಾಡದ ಕೆಲಸವಿಲ್ಲ!

ಯುವ ಉದ್ಯಮಿಯೊಬ್ಬರ ಕಥೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಒಂದು ಕಾಲದಲ್ಲಿ ಊಬರ್ ಓಡಿಸುತ್ತಿದ್ದ ಈ ಯುವಕ ಈಗ ಅತಿ ದುಬಾರಿ ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದಾರೆ. ಅವರ ಬಳಿ ಸದ್ಯ ಆಸ್ಟನ್ ಮಾರ್ಟಿನ್, ಬೆಂಟ್ಲಿ, ಮರ್ಸಿಡಿಸ್-ಬೆಂಝ್ ಜಿ-ವ್ಯಾಗನ್ ಸೇರಿದಂತೆ ಕೋಟ್ಯಾಂತರ ಬೆಲೆಯ ಕಾರುಗಳು ಇವೆ.

ಸದ್ಯ ವೈರಲ್ ಆಗಿರುವ ಯುವಕನ ಹೆಸರು ಶಾಹಿದ್ ಅನ್ವರ್, ಯುವಕನ ಕುರಿತ ವೀಡಿಯೊವನ್ನು ಇಮ್ತಿಯಾಜ್ ಚಾಂಡಿಯೋ ಎಂಬಾತ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. 7 ವರ್ಷಗಳ ಹಿಂದೆ ಶಾಹಿದ್ ಅನ್ವರ್ ಸೌದಿ ಅರೇಬಿಯಾದಿಂದ ಅಮೆರಿಕಕ್ಕೆ 2016 ರಲ್ಲಿ ಬಂದಿದ್ದರು. ಆಗ ಕೇವಲ 5,000 (4.15 ಲಕ್ಷ ರೂ. ಪ್ರಸ್ತುತ ಭಾರತೀಯ ಕರೆನ್ಸಿ) ಡಾಲರ್‌ನೊಂದಿಗೆ ಬದುಕು ಸಾಗಿಸಲು ಬಂದಿದ್ದರಂತೆ.

29-year-old-uber-driver-made-himself-rich-inspirational-story

ಶಾಹಿದ್ ಮೊದಲು ನ್ಯೂಯಾರ್ಕ್‌ಗೆ ಬಂದಿಳಿದರು. ಕೆಲ ತಿಂಗಳಗಳವರೆಗೆ ಅಲ್ಲಿ ಕೆಲಸ ಮಾಡಿದ ಅವರು, ನ್ಯೂಯಾರ್ಕ್‌ ನಗರವು ಅಷ್ಟು ಚೆನ್ನಾಗಿಲ್ಲ ಎಂದು ಅರಿತುಕೊಂಡರು. ಬಳಿಕ ಅಲ್ಲಿಂದ ಕ್ಯಾಲಿಫೋರ್ನಿಯಾಗೆ ತೆರಳಿದರು, ಆದರೆ ಈ ನಗರ ಕೂಡ ಅವರಿಗೆ ಇಷ್ಟವಾಗಲಿಲ್ಲ. ನಂತರ ನ್ಯೂಜೆರ್ಸಿಗೆ ಆನಂತರ ಅಂತಿಮವಾಗಿ ವರ್ಜೀನಿಯಾಗೆ ತೆರಳಿ ಅಲ್ಲೇ ಸ್ಥಿರಗೊಂಡರು.

ಶಾಹಿದ್ ವರ್ಜೀನಿಯಾದಲ್ಲಿ ಊಬರ್ ಓಡಿಸುತ್ತಾ, ಚೈನೀಸ್ ವೆಬ್‌ಸೈಟ್‌ಗಳಿಂದ ಪರ್ಸ್‌ಗಳನ್ನು ಖರೀದಿಸಿ ಅವುಗಳನ್ನು ತಾವಿರುವ ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಇವೆಲ್ಲದರ ನಂತರ ಅಂತಿಮವಾಗಿ ಫ್ರೈಡ್ ಚಿಕನ್ ರೆಸ್ಟೋರೆಂಟ್ ಅನ್ನು ತೆರೆದರು. ಆಗಲೇ ಕೊರೊನಾ ಸೋಂಕು ವ್ಯಪಿಸತೊಡಗಿತು. ಇದರಿಂದ ರೆಸ್ಟಾರೆಂಟ್ ಅನ್ನು ಮುಚ್ಚಲಾಯಿತು, ನಂತರ ಅಮೆಜಾನ್ ಮಾರಾಟಗಾರರಾಗಿ ಅತ್ಯಂತ ಯಶಸ್ವಿಯಾದರು.

29-year-old-uber-driver-made-himself-rich-inspirational-story

ದುಬಾರಿ ಕಾರುಗಳ ಮಾಲೀಕ: ಶಾಹಿದ್ ತಮ್ಮ 2022 ಬೆಂಟ್ಲಿ ಕಾಂಟಿನೆಂಟಲ್ ಜಿಟಿಯನ್ನು ಹೊಂದಿದ್ದು, ಈ ಕಾರು ಸುಮಾರು 3,50,000 ಡಾಲರ್ ಬೆಲಯನ್ನು ಹೊಂದಿದೆ. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 3 ಕೋಟಿ ರೂ. ಇರಬಹುದು. ಬೆಂಟ್ಲಿ ಕಾಂಟಿನೆಂಟಲ್ GT 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಹೊಂದಿದ್ದು, 542 bhp ಪವರ್ ಮತ್ತು 770 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆಸ್ಟನ್ ಮಾರ್ಟಿನ್: ಅವರ ಮತ್ತೊಂದು ದುಬಾರಿ ಕಾರೆಂದರೆ ಆಸ್ಟನ್ ಮಾರ್ಟಿನ್ ವಾಂಟೇಜ್ ರೋಡ್‌ಸ್ಟರ್. ಇದು ಬರೋಬ್ಬರಿ $220,000, ಅಂದರೆ ರೂ. 1.9 ಕೋಟಿ ಬೆಲೆ. ಈ ಕಾರು 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಸುಮಾರು 502 bhp ಪವರ್ ಮತ್ತು 675 Nm ಟಾರ್ಕ್ ಅನ್ನು ಹೊರಹಾಕುತ್ತದೆ.

29-year-old-uber-driver-made-himself-rich-inspirational-story

ಅವರ ಮತ್ತೊಂದು ಫೆವರೆಟ್ ಕಾರೆಂದರೆ ಮರ್ಸಿಡಿಸ್-ಬೆಂಝ್ G63 AMG SUV. ಶಾಹಿದ್ ಅನ್ವರ್ ಸರಕುಗಳನ್ನು ತರಲು ಈ ವಾಹನವನ್ನು ಬಳಸುವುದಾಗಿ ಹೇಳಿದ್ದಾರೆ. Mercedes-Benz G63 AMG ಸಹ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು ಗರಿಷ್ಠ 576 bhp ಪವರ್ ಮತ್ತು 850 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಶಾಹಿದ್ ಅನ್ವರ್ ಅವರು ಮೆಕ್ಲಾರೆನ್ ಮತ್ತು ಫೆರಾರಿಯನ್ನು ಕೂಡ ಬುಕ್ ಮಾಡಿದ್ದು ಡೆಲಿವರಿಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. ಈ ವ್ಯಕ್ತಿ ಹಲವರಿಗೆ ಸ್ಪೂರ್ತಿಯಾಗಿದ್ದಾರೆ, ನಮ್ಮಲ್ಲಿ ಕೆಲವರು ಯಾವುದಾದರೊಂದು ಕೆಲಸ ವಿಫಲವಾದ್ರೆ ವಿಚಲಿತಗೊಂಡು ಅಲ್ಲಿಗೆ ನಿಂತುಬಿಡುತ್ತಾರೆ. ಆದ್ರೆ ಯಾವುದೇ ಕೆಲಸವಾಗಲಿ ಯಶಸ್ಸು ಸಿಗುವವರೆಗೆ ಶ್ರಮಿಸಬೇಕು ಎಂಬುದನ್ನು ಈತ ತೋರಿಸಿಕೊಟ್ಟಿದ್ದಾನೆ.

ಕೇವಲ ನಾಲ್ಕು ಲಕ್ಷ ಹಣದೊಂದಿಗೆ ಅಮೆರಿಕಾದಂತಹ ದೇಶಕ್ಕೆ ತೆರಳಿದ ಈತ ಇಂದು ಕೋಟ್ಯಾಂತರ ರೂ. ಬೆಲೆ ಬಾಳುವ ಬೆಂಝ್ ಕಾರಿನ್ನು ಮನೆ ಸರಕುಗಳನ್ನು ತರಲು ಬಳಸುತ್ತಿದ್ದಾರೆ ಎಂದರೆ ಅವರ ಆದಾಯವನ್ನು ನಾವು ಊಹಿಸಬಹುದು. ನಮ್ಮ ಶ್ರಮಕ್ಕೆ ಪ್ರತಿಫಲ ಇದ್ದೇ ಇರುತ್ತದೆ ಎಂಬುದು ಅವರು ಬಲವಾಗಿ ನಂಬಿರುವ ಸಿದ್ದಾಂತ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, December 18, 2023, 17:40 [IST]
English summary
29 year old uber driver made himself rich inspirational story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+