ಬೆಂಗಳೂರಿನಲ್ಲಿ ಟೀ ಕುಡಿದು ಟಿಫನ್ ವೇಳೆಗೆ ಹುಬ್ಬಳ್ಳಿ ತಲುಪಿ... ಶೀಘ್ರದಲ್ಲೇ 2ನೇ ವಂದೇ ಭಾರತ್ ರೈಲು

ಭಾರತದ ರೈಲ್ವೇ ವಲಯದಲ್ಲಿ ಸದ್ಯ ವಂದೇ ಭಾರತ್ ರೈಲುಗಳದ್ದೇ ಚರ್ಚೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳಲ್ಲೂ ಸೇವೆ ಸಲ್ಲಿಸಲಿರುವ ಈ ಅತ್ಯಾಧುನಿಕ ರೈಲುಗಳು ಕ್ರಾಂತಿ ಸೃಷ್ಟಿಸಲಿವೆ. ಈಗಾಗಲೇ ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವ ವಂದೇ ಭಾರತ್ ರೈಲು, ತನ್ನೊಂದಿಗೆ ಇನ್ನೊಂದನ್ನು ಸ್ವಾಗತಿಸಲು ಸಜ್ಜಾಗಿದೆ.

ಹೌದು ಕರ್ನಾಟಕ ತನ್ನ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಜುಲೈನಲ್ಲಿ ಸ್ವೀಕರಿಸಲಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಧಾರವಾಡದಿಂದ ಇಂಡಿಯಾ ಟುಡೇಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಹೊಸ ವಂದೇ ಭಾರತ್ ರೈಲು ರಾಜಧಾನಿ ಬೆಂಗಳೂರು-ಹುಬ್ಬಳ್ಳಿ ಮತ್ತು ಧಾರವಾಡ ನಡುವೆ ಕಾರ್ಯಾಚರಣೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.

vande-bharat-train

ಜುಲೈನಲ್ಲಿ ರೈಲು ಕಾರ್ಯಾಚರಣೆಯನ್ನು ನಾವು ನಿರೀಕ್ಷಿಸಬಹುದು ಎಂದ ಅವರು, ಇದು ಬಹುಕಾಲದ ಬೇಡಿಕೆಯಾಗಿತ್ತು. ನಾನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಅವರು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ವಂದೇ ಭಾರತ್ ರೈಲು ನೀಡುವುದಾಗಿ ಭರವಸೆ ನೀಡಿದ್ದರು ಎಂದು ಸಂಸದರಾಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಬೆಂಗಳೂರಿನ ನಂತರ ಹುಬ್ಬಳ್ಳಿ- ಧಾರವಾಡ ಅತಿ ಹೆಚ್ಚು ಪ್ರಯಾಣಿಸುವ ಪ್ರದೇಶವಾಗಿದೆ. ಇದು ಬಹುಕಾಲದ ಬೇಡಿಕೆಯಾಗಿತ್ತು, ಸದ್ಯ ಬೆಂಗಳೂರಿನಿಂದ ಹುಬ್ಬಳ್ಳಿ ತಲುಪಲು 7 ಗಂಟೆಗಳ ಸಮಯ ಬೇಕು. ಜುಲೈ ನಂತರ ಬರಲಿರುವ ವಂದೇ ಭಾರತ್ ರೈಲು ಮೂಲಕ ಇದು ಕೇವಲ 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.

vande-bharat-train

ಮೈಸೂರು ಮತ್ತು ಬೆಂಗಳೂರಿನಂತೆಯೇ ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳಿಗೆ ಬೆಂಗಳೂರಿನಿಂದ ಸಾಕಷ್ಟು ಜನರು ಹೆಚ್ಚಾಗಿ ಪ್ರಯಾಣಿಸುತ್ತಾರೆ. ಹಾಗಾಗಿ ವಂದೇ ಭಾರತ್ ರೈಲು ಈಗಿನ ಪರಿಸ್ಥಿತಿಗಳಿಗೆ ತುಂಬಾ ಅಗತ್ಯವಾಗಿದೆ. ವಿದ್ಯುದೀಕರಣ ಕಾಮಗಾರಿ ಮತ್ತು ಹಳಿಗಳ ಬಲವರ್ಧನೆ ಪೂರ್ಣಗೊಂಡಿದ್ದು, ಯೋಜನೆಯು ಅಂತಿಮ ಹಂತದ ಚರ್ಚೆಯಲ್ಲಿದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.

ನವೆಂಬರ್ 2022 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಿಂದ ಭಾರತದ ಐದನೇ ಮತ್ತು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದರು. ಈ ಮೊದಲ ದಕ್ಷಿಣ ಭಾರತದ ರೈಲು ಮೈಸೂರು ಮತ್ತು ಚೆನ್ನೈ ನಡುವೆ ಕಾರ್ಯಾಚರಿಸುತ್ತಿದೆ. ಈ ಎರಡು ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು ಬಹುತೇಕ ಕಡಿತಗೊಳಿಸಿದೆ.

vande-bharat-train

ಭಾರತದಲ್ಲಿ ಈಗಾಗಲೇ ಒಂದೊಂದೇ ರಾಜ್ಯಗಳು ಈ ಅತ್ಯಾಧುನಿಕ ವಂದೇ ಭಾರತ್ ರೈಲುಗಳನ್ನು ಪಡೆಯುತ್ತಿರುವುದು ರೈಲ್ವೆ ಪ್ರಯಾಣಿಕರಿಗೆ ತುಸು ನಿರಾಳ ನೀಡುತ್ತಿದೆ. ಏಕೆಂದರೆ ಪ್ಯಾಸಿಂಜರ್ ರೈಲುಗಳಿಂದ ತುಂಬಾ ಪ್ರಯಾಣ ಸಮಯವನ್ನು ಅನುಭವಿಸುತ್ತಿದ್ದ ಪ್ರಯಾಣಿಕರಿಗೆ ವಂದೇ ಭಾರತ್ ರೈಲುಗಳು ಪ್ರಯಾಣ ಸಮಯವನ್ನು ಕಡಿತಗೊಳಿಸಿ ಹೊಸ ಅನುಭವ ನೀಡುತ್ತಿರುವುದು ಒಂದೆಡೆಯಾದ್ರೆ ದುಬಾರಿ ಪ್ರಯಾಣ ಎಂಬ ಮಾತುಗಳು ಕೂಡ ಅಲ್ಲಲ್ಲಿ ಕೇಳಿಬರುತ್ತಿವೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Thursday, June 1, 2023, 17:09 [IST]
English summary
2nd vande bharat train operation soon in karnataka
Read more on ರೈಲು train
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+