ಭರದಿಂದ ಮಾರಾಟವಾಗುತ್ತಿದೆ ಮೋಟೋ ಜಿಪಿ ಭಾರತ್ ಟಿಕೆಟ್‌ಗಳು: ಮೂರುದಿನಗಳಲ್ಲಿ30 ಸಾವಿರ ಟಿಕೆಟ್ ಮಾರಾಟ
ಭಾರತದಲ್ಲಿ ಸೆಪ್ಟಂಬರ್ 22 ರಿಂದ 24 ರವರೆಗೆ ಮೋಟೋ ಜಿಪಿ ಭಾರತ್ ರೇಸ್ ಬುದ್ಧ್ ಇಂಟರ್ ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಡೆಯಲಿದ್ದು, ಇದಕ್ಕೆ ಬೇಕಾದ ಸಿದ್ದತೆಗಳ ಭರದಿಂದ ನಡೆಯುತ್ತಿದೆ. ಮೋಟೋ ಜಿಪಿ ಭಾರತ್‌ನ ಟಿಕೆಟ್ ಅನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಿತ್ತು.
ಭಾರತ್ ಮೋಟೋ ಜಿಪಿಯ (MotoGp) ಮೊದಲ ರೇಸ್‌ನ ಟಿಕೆಟನ್ನು ಕಳೆದ ಶುಕ್ರವಾರ ಆದಿತ್ಯನಾಥ್ ಟಿಕೇಟ್ ಅನ್ನು ಬಿಡುಗಡೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 30000 ಟಿಕೆಟ್‌ಗಳು ಮಾರಾಟವಾಗಿದೆ ಎಂದು ಫೇರ್ ಸ್ಟ್ರೀಟ್ ಸ್ಪೋರ್ಟ್ಸ್ ಮಾಹಿತಿಗಳಿಂದ ತಿಳಿದು ಬಂದಿದೆ. ಈ ಫೇರ್‌ಸ್ಟ್ರೀಟ್ ಸ್ಪೋರ್ಟ್ಸ್ ಸಂಸ್ಥೆಯು ಭಾರತದಲ್ಲಿ ಏಳು ವರ್ಷದವರೆಗೆ ರೇಸ್‌ಗಳನ್ನು ನಡೆಸುವ ಹಕ್ಕನ್ನು ಹೊಂದಿದೆ.

ಉತ್ತರ ಪ್ರದೇಶದ ಕೈಗಾರಿಕಾ ಅಭಿವೃದ್ಧಿ ಸಚಿವ ಮನೋಜ್ ಕುಮಾರ್ ಸಿಂಗ್ ಅವರೂ ಕೂಡ ರೇಸ್ ನಡೆಯಲಿರುವ ಈ ಬುದ್ಧ್ ಇಂಟರ್ ನ್ಯಾಷನಲ್ ಸರ್ಕ್ಯೂಟ್ ಅನ್ನು ಸೋಮವಾರ ಭೇಟಿ ಮಾಡಿದ್ದು, ಅಲ್ಲಿನ ಸಿದ್ಧತೆಗಳ ಕುರಿತಾಗಿ ಕೂಲಂಕುಷ ಪರಿಶೀಲನೆಯನ್ನು ನಡೆಸಿದ್ದು, ಸಿದ್ದತೆಗಳ ಕುರಿತಾಗಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಈ ಮೋಟೋ ಜಿಪಿಯು ಬುದ್ಧ್ ಇಂಟರ್ ನ್ಯಾಷನಲ್ ಸರ್ಕ್ಯೂಟ್ ನ ಐದನೇ ಸ್ಟೇಡಿಯಂನಲ್ಲಿ ನಡೆಯಲಿದ್ದು, ಇದರಲ್ಲಿ ಮೋಟೋ ಜಿಪಿ ಮತ್ತು ಫಾರ್ಮುಲಾ ವನ್ ಎರಡನ್ನೂ ಸಹ ಆಯೋಜನೆ ಮಾಡಲು ಸಾಧ್ಯವಿರುವಂತಹ ವ್ಯವಸ್ಥೆಗಳಿವೆ. ರೇಸ್ ನಡೆಸಲು ಬೇಕಿರುವ ಎಲ್ಲಾ ಮಾನದಂಡಗಳನ್ನು ಬುದ್ಧ್ ಇಂಟರ್ ನ್ಯಾಷನಲ್ ಸರ್ಕ್ಯೂಟ್ ಹೊಂದಿದೆ.
ಈ ಕುರಿತಾಗಿ ಫೇರ್ ಸ್ಟ್ರೀಟ್ ಫೋರ್ಸ್‌ನ ಚೀಫ್ ಆಪರೇಟಿಂಗ್ ಆಫಿಸರ್ ಆದ ನಾತ್ ಶ್ರೀವಾತ್ಸವ ಮಾತನಾಡಿ, ಕಾರ್ ರೇಸ್‌ನ ಅಂತರಾಷ್ಟ್ರೀಯ ಸಂಸ್ಥೆಯಾದ ಎಫ್‌ಐಎ ಮತ್ತು ಮೋಟೋರ್ ಸೈಕಲ್ ರೇಸ್ ಸಂಸ್ಥೆಯಾದ ಎಫ್‌ಐಎಮ್ ನಿಗದಿಪಡಿಸಿರುವ ಮಾನದಂಡಗಳನ್ನು ಈ ಸ್ಟೇಡಿಯಂ ಹೊಂದಿದೆ ಎಂದು ತಿಳಿಸಿದ್ದಾರೆ.
ಇನ್ನು ಕೆಲವೇ ತಿಂಗಳಲ್ಲಿ ಬಹು ನಿರೀಕ್ಷಿತ ರೇಸ್ ನಡೆಯಲಿದೆ. ಈಗಾಗಲೇ ಟಿಕೆಟ್‌ಗಳು ಭರದಿಂದ ಸೇಲ್ ಆಗುತ್ತಿದೆ. ಈ ರೇಸ್ ನಡೆಯುವುದರಿಂದ ರಾಜ್ಯದಲ್ಲಿ ಸುಮಾರು ಒಂದು ಸಾವಿರ ಕೋಟಿ ರೂಗಳ ವಹಿವಾಟು ನಡೆಯಲಿದೆ. ಜೊತೆಗೆ ಸುಮಾರು ಐದು ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ ಎಂದು ಮಾಹಿತಿಗಳು ತಿಳಿಸಿವೆ.
ಮಾಹಿತಿಗಳ ಪ್ರಕಾರ ಮೋಟೋ ಜಿಪಿ ಭಾರತ್ ರೇಸ್‌ಗೆ ಸುಮಾರು 100 ಕೋಟಿ ರೂಗಳ ಟಿಕೆಟ್ ಮಾರಾಟವಾಗಲಿದೆ. ಇನ್ನು ಸುಮಾರು 1.06 ಲಕ್ಷದಷ್ಟು ದೊಡ್ಡ ಸೀಟಿಂಗ್ ಕೆಪಾಸಿಟಿಯೂ ಸಹ ಸ್ಟೇಡಿಯಂನಲ್ಲಿ ಇದೆ ಎಂದು ತಿಳಿದು ಬಂದಿದೆ. ಮೊಟೋ ಜಿಪಿ ಭಾರತ್ ರೇಸ್ಗೆ ಸಾಕಷ್ಟು ಮಂದಿ ಕಾತುರದಿಂದ ಕಾಯುತ್ತಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








