ಮಾಡಿದ ಕೆಲಸಕ್ಕೆ ಹಣ ನೀಡದ ಮಾಲೀಕನ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರಿಗೆ ಬೆಂಕಿಯಿಟ್ಟ ಕಾರ್ಮಿಕ

ಉತ್ತರಪ್ರದೇಶದ ನೋಯ್ಡಾದಲ್ಲಿ ರೂ,1 ಕೋಟಿಗೂ ಹೆಚ್ಚು ಮೌಲ್ಯದ ಮರ್ಸಿಡಿಸ್ ಬೆಂಝ್ ಕಾರಿಗೆ ಅದರ ಮಾಲೀಕರು ಸಂಪೂರ್ಣ ವೇತನ ನೀಡಲು ನಿರಾಕರಿಸಿದ ಕಾರಣಕ್ಕೆ ಬೆಂಕಿ ಹಚ್ಚಿದ್ದಾರೆ. ಕಾರ್ಮಿಕನನ್ನು ರಣವೀರ್ ಎಂದು ಗುರುತಿಸಲಾಗಿದೆ.

ಮಾಡಿದ ಕೆಲಸಕ್ಕೆ ಹಣ ನೀಡದ ಮಾಲೀಕನ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರಿಗೆ ಬೆಂಕಿಯಿಟ್ಟ ಕಾರ್ಮಿಕ

ಮರ್ಸಿಡಿಸ್ ಮಾಲೀಕನ ಮನೆಗೆ ಆರೋಪಿ ಟೈಲ್ಸ್ ಹಾಕಿದ್ದಾನೆ. ಆದರೆ ಆತನ ಸಂಪೂರ್ಣ ವೇತನವನ್ನು ನೀಡಿಲ್ಲ ಎಂದು ಆರೋಪಿಸಲಾಗಿದೆ. ಹಣ ಪಾವತಿಯಾಗದಿದ್ದಕ್ಕೆ ಮನನೊಂದ ಕಾರ್ಮಿಕರು ಸೇಡು ತೀರಿಸಿಕೊಳ್ಳಲು ನಿರ್ಧರಿಸಿ ಐಷಾರಾಮಿ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿ ಕಾರ್ಮಿಕ ಹೆಲ್ಮೆಟ್ ಧರಿಸಿ ಮೋಟಾರ್ ಬೈಕ್ ಬಳಿ ನಿಂತಿರುವುದು ಕಂಡುಬಂದಿದೆ. ನಂತರ ಅವರು ಬಿಳಿ ಮರ್ಸಿಡಿಸ್ ಕಾರಿನ ಬಳಿಗೆ ಹೋಗುತ್ತಾನೆ. ಸೀಮೆ ಎಣ್ಣೆಯನ್ನು ಹಾಕಿ ನಂತರ ಬೆಂಕಿ ಹಚ್ಚಿ ಆತ ತನ್ನ ಮೋಟಾರ್ ಬೈಕ್ ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಮಾಡಿದ ಕೆಲಸಕ್ಕೆ ಹಣ ನೀಡದ ಮಾಲೀಕನ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರಿಗೆ ಬೆಂಕಿಯಿಟ್ಟ ಕಾರ್ಮಿಕ

ಎನ್‌ಡಿಟಿವಿ ವರದಿಯ ಪ್ರಕಾರ, ಮರ್ಸಿಡಿಸ್ ಮಾಲೀಕರು ಕಾರ್ಮಿಕರಿಗೆ 2 ಲಕ್ಷ ರೂಪಾಯಿಗಳನ್ನು ಪಾವತಿಸಿರಲಿಲ್ಲ ಎಂದು ಆರೋಪಿಸಲಾಗಿದೆ. 2019-20ರಲ್ಲಿ ನೋಯ್ಡಾದಲ್ಲಿರುವ ಕಾರು ಮಾಲೀಕರ ಮನೆಯಲ್ಲಿ ಟೈಲ್ಸ್ ಕಂತು ಕಟ್ಟುವ ಕೆಲಸ ನಡೆದಾಗ ಇಬ್ಬರ ನಡುವೆ ವಿವಾದ ಉಂಟಾಗಿತ್ತು.

ಮಾಡಿದ ಕೆಲಸಕ್ಕೆ ಹಣ ನೀಡದ ಮಾಲೀಕನ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರಿಗೆ ಬೆಂಕಿಯಿಟ್ಟ ಕಾರ್ಮಿಕ

ಮರ್ಸಿಡಿಸ್ ಬೆಂಝ್ ಕಾರಿನ ಮಾಲೀಕನ ಕುಟುಂಬವು ಈ ಆರೋಪವನ್ನು ನಿರಾಕರಿಸಿದ್ದಾರೆ. ಆರೋಪಿಯನ್ನು 10 ವರ್ಷಗಳಿಂದ ತಿಳಿದಿದ್ದೇವೆ ಮತ್ತು ಎರಡು ವರ್ಷಗಳ ಹಿಂದೆ ಅವರನ್ನು ಬದಲಾಯಿಸಿದ್ದರಿಂದ ಅವರು ಅಸಮಾಧಾನಗೊಂಡಿದ್ದರು ಎಂದು ಅವರು ಹೇಳಿದರು.

ಮಾಡಿದ ಕೆಲಸಕ್ಕೆ ಹಣ ನೀಡದ ಮಾಲೀಕನ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರಿಗೆ ಬೆಂಕಿಯಿಟ್ಟ ಕಾರ್ಮಿಕ

ಕಳೆದ 10-12 ವರ್ಷಗಳಿಂದ ರಣವೀರ್ ಅವರನ್ನು ನಾವು ತಿಳಿದಿದ್ದೇವೆ, ಅವರು ಕುಟುಂಬದ ಸದಸ್ಯರಂತೆ ಇದ್ದರು. ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಅವರು ಮನೆಗೆ ಹೋದಾಗ ನಾವು ಅವರ ಎಲ್ಲಾ ಬಾಕಿಗಳನ್ನು ಪಾವತಿಸಿದ್ದೇವೆ. ನಾವು ಯಾವಾಗಲೂ ಒಂದೇ ದಿನದಲ್ಲಿ ಪಾವತಿಗಳನ್ನು ಮಾಡುತ್ತೇವೆ.

ಮಾಡಿದ ಕೆಲಸಕ್ಕೆ ಹಣ ನೀಡದ ಮಾಲೀಕನ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರಿಗೆ ಬೆಂಕಿಯಿಟ್ಟ ಕಾರ್ಮಿಕ

ರೂ. 2 ಲಕ್ಷ ಬಾಕಿ ಉಳಿದಿದೆ ಎಂಬ ಅವರ ಹೇಳಿಕೆ ನಗೆಪಾಟಲಿಗೀಡಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ಆರೋಪಿಯು ತನ್ನ ಮನೆಗೆ ಹೋಗಿದ್ದಾಗ ಅವರು ಮನೆಯಲ್ಲಿ ಕೆಲವು ಕೆಲಸಕ್ಕೆ ಇನ್ನೊಬ್ಬ ಮೇಸನ್‌ನನ್ನು ನೇಮಿಸಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ಆತ ಹೊಸ ಕೆಲಸಗಾರನಿಗೆ ಬೆದರಿಕೆ ಹಾಕಿದ್ದಾನೆ. ಎಂದು ಕಾರು ಮಾಲೀಕರ ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಅಜಯ್ ಚೌಹಾಣ್ ಹೇಳಿದ್ದಾರೆ.

ಮಾಡಿದ ಕೆಲಸಕ್ಕೆ ಹಣ ನೀಡದ ಮಾಲೀಕನ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರಿಗೆ ಬೆಂಕಿಯಿಟ್ಟ ಕಾರ್ಮಿಕ

ಮರ್ಸಿಡಿಸ್ ಮಾಲೀಕರ ದೂರಿನ ಮೇರೆಗೆ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ. ನೋಯ್ಡಾದ ಸೆಕ್ಟರ್ 45 ರಲ್ಲಿ ಈ ಘಟನೆ ನಡೆದಿದೆ. ಒಟ್ಟಾರೆಯಾಗಿ ಪೊಲೀಸ್ ತನಿಖೆಯಲ್ಲಿ ಸತ್ಯ ಹೊರಬರಲಿದೆ.

ಮಾಡಿದ ಕೆಲಸಕ್ಕೆ ಹಣ ನೀಡದ ಮಾಲೀಕನ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರಿಗೆ ಬೆಂಕಿಯಿಟ್ಟ ಕಾರ್ಮಿಕ

ಕಾರ್ಮಿಕ ಬೆಂಕಿ ಹಾಕಿರುವ ಕಾರು ವಿಡಿಯೋ ನೋಡಿ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ ಮಾದರಿ ಎಂದು ನಿರೀಕ್ಷಿಸುತ್ತೇವೆ. ಈ ಜಿಎಲ್ಎಸ್ ಎಂಬುದು ಮರ್ಸಿಡಿಸ್ ಬೆಂಝ್ ಪ್ರಮುಖ ಎಸ್‍ಯುವಿಯಾಗಿದೆ. ಈ ಎಸ್‍ಯುವಿಯಲ್ಲಿ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

ಮಾಡಿದ ಕೆಲಸಕ್ಕೆ ಹಣ ನೀಡದ ಮಾಲೀಕನ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರಿಗೆ ಬೆಂಕಿಯಿಟ್ಟ ಕಾರ್ಮಿಕ

ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯ 450 4 ಮ್ಯಾಟಿಕ್ ರೂಪಾಂತರ ಪೆಟ್ರೋಲ್ ಎಂಜಿನ್ ಹೊಂದಿದ್ದರೆ, ಜಿಎಲ್ಎಸ್ 400 ಡಿ 4 ಮ್ಯಾಟಿಕ್ ರೂಪಾಂತರ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯ 450 4 ಮ್ಯಾಟಿಕ್ ರೂಪಾಂತರದಲ್ಲಿ 3.0-ಲೀಟರ್ ಇನ್-ಲೈನ್ ಸಿಕ್ಸ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಬ್ರ್ಯಾಂಡ್ ನ ಇಕ್ಯೂ ಬೂಸ್ಟ್ ಸಿಸ್ಟಂ ಅನ್ನು ಒಳಗೊಂಡಿದೆ.

ಮಾಡಿದ ಕೆಲಸಕ್ಕೆ ಹಣ ನೀಡದ ಮಾಲೀಕನ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರಿಗೆ ಬೆಂಕಿಯಿಟ್ಟ ಕಾರ್ಮಿಕ

ಈ ಎಂಜಿನ್ 367 ಬಿಹೆಚ್‍ಪಿ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಜಿಎಲ್ಎಸ್ 400 ಡಿ 4 ಮ್ಯಾಟಿಕ್ ರೂಪಾಂತರವು 3.0 ಲೀಟರ್ ಇನ್-ಲೈನ್ ಆರು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 330 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಾಡಿದ ಕೆಲಸಕ್ಕೆ ಹಣ ನೀಡದ ಮಾಲೀಕನ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರಿಗೆ ಬೆಂಕಿಯಿಟ್ಟ ಕಾರ್ಮಿಕ

ಈ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯುಯಲ್ಲಿ ಎಲ್‌ಇಡಿ ಡಿಆರ್‌ಎಲ್‌, ಎಲ್‌ಇಡಿ ಟೈಲ್ ಲೈಟ್, ಕ್ರೋಮ್ ಅಡ್ಡಲಾಗಿರುವ ಸ್ಲ್ಯಾಟ್‌ಗಳೊಂದಿಗೆ ಫ್ರಂಟ್ ಗ್ರಿಲ್ ಮತ್ತು ಮಧ್ಯದಲ್ಲಿ ಮರ್ಸಿಡಿಸ್ ಬೆಂಝ್ ಲೋಗೊವನ್ನು ಹೊಂದಿದೆ. ಇನ್ನು ಈ ದುಬಾರಿ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯುಯಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, 21 ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್, ಕ್ರೋಮ್ ಬೆಜೆಲ್‌ಗಳೊಂದಿಗೆ ಡ್ಯುಯಲ್ ಎಕ್ಸಾಸ್ಟ್ ಮಫ್ಲರ್‌ಗಳು ಮತ್ತು ಹಲವಾರು ಸೂಕ್ಷ್ಮ ನವೀಕರಣಗಳನ್ನು ಈ ಹಿಂದೆ ನಡೆಸಲಾಗಿತ್ತು.

ಮಾಡಿದ ಕೆಲಸಕ್ಕೆ ಹಣ ನೀಡದ ಮಾಲೀಕನ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರಿಗೆ ಬೆಂಕಿಯಿಟ್ಟ ಕಾರ್ಮಿಕ

ಈ ಮರ್ಸಿಡಿಸ್ ಜಿಎಲ್ಎಸ್ ತನ್ನ ಹಿಂದಿನ ಕಾರಿಗಿಂತ 77 ಎಂಎಂ ಮತ್ತು 22 ಎಂಎಂ ಅಗಲವನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ 60 ಎಂಎಂನಷ್ಟು ವ್ಹೀಲ್ ಬೇಸ್ ಅನ್ನು ಹೊಂದಿದೆ. ಈ ಎಸ್‍ಯುವಿ ಐಷಾರಾಮಿ ಆರು ಸೀಟುಗಳ ಕ್ಯಾಬಿನ್ ಅನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮೂರನೇ ತಲೆಮಾರಿನ ಮಾದರಿಯಾಗಿದೆ. ಈ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಕ್ಸ್7 ಎಸ್‍ಯುವಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
40 year old man sets mercedes benz on fire for non payment of dues in noida details
Story first published: Thursday, September 15, 2022, 13:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X