1,350 ಕಿ.ಮೀ ದೂರ ನಡೆದೇ ಮನೆ ಸೇರಿದ 47 ವರ್ಷದ ವ್ಯಕ್ತಿ

ಕರೋನಾ ವೈರಸ್ ಇಡೀ ಪ್ರಪಂಚದದ್ಯಾಂತ ಜನರ ಜೀವನವನ್ನು ತಲೆಕೆಳಗು ಮಾಡಿದೆ. ಕರೋನಾ ವೈರಸ್ ಕಾರಣಕ್ಕೆ ಜಾರಿಗೊಳಿಸಲಾಗಿದ್ದ ಲಾಕ್ ಡೌನ್ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು.

1,350 ಕಿ.ಮೀ ದೂರ ನಡೆದೇ ಮನೆ ಸೇರಿದ 47 ವರ್ಷದ ವ್ಯಕ್ತಿ

ಮಾರ್ಚ್ 24ರಂದು ಲಾಕ್ ಡೌನ್ ಜಾರಿಯಾದ ನಂತರ ಎಲ್ಲಾ ರೀತಿಯ ಸಾರ್ವಜನಿಕ ಸಾರಿಗೆಗಳಾದ ಬಸ್ಸು, ಆಟೋ, ಟ್ಯಾಕ್ಸಿ, ರೈಲು ಹಾಗೂ ವಿಮಾನಗಳ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಖಾಸಗಿ ವಾಹನಗಳ ಸಂಚಾರದ ಮೇಲೂ ನಿರ್ಬಂಧ ವಿಧಿಸಲಾಯಿತು. ನಿರ್ಬಂಧ ವಿಧಿಸಿ ರಸ್ತೆಗಿಳಿದ ವಾಹನಗಳನ್ನು ವಶಕ್ಕೆ ಪಡೆದು ವಾಹನ ಮಾಲೀಕರಿಗೆ ದಂಡ ವಿಧಿಸಲಾಯಿತು.

1,350 ಕಿ.ಮೀ ದೂರ ನಡೆದೇ ಮನೆ ಸೇರಿದ 47 ವರ್ಷದ ವ್ಯಕ್ತಿ

ಸದ್ಯಕ್ಕೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದ್ದರೂ, ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಬಂದಿಲ್ಲ. ಈಗಲೂ ಸಹ ದೇಶದ ಹಲವು ಭಾಗಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ತಮಿಳುನಾಡಿನಲ್ಲಿ ಅಂತರ್ ಜಿಲ್ಲಾ ಪ್ರಯಾಣದ ಮೇಲೆ ನಿರ್ಬಂಧ ವಿಧಿಸಲಾಗಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

1,350 ಕಿ.ಮೀ ದೂರ ನಡೆದೇ ಮನೆ ಸೇರಿದ 47 ವರ್ಷದ ವ್ಯಕ್ತಿ

ಅಂತರ್ ಜಿಲ್ಲಾ ಪ್ರಯಾಣ ಮಾತ್ರವಲ್ಲದೇ ಅಂತರ್ ರಾಜ್ಯ ಪ್ರಯಾಣದ ಮೇಲೂ ನಿರ್ಬಂಧ ವಿಧಿಸಲಾಗಿದೆ. ಇದರಿಂದಾಗಿ ಜನರು ತುರ್ತು ಅಗತ್ಯಗಳಿಗೂ ಸಹ ಪ್ರಯಾಣಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕೆಲವರು ಬೈಕ್‌ ಹಾಗೂ ಸೈಕಲ್‌ ಮೂಲಕ ಪ್ರಯಾಣಿಸುತ್ತಿದ್ದಾರೆ.

1,350 ಕಿ.ಮೀ ದೂರ ನಡೆದೇ ಮನೆ ಸೇರಿದ 47 ವರ್ಷದ ವ್ಯಕ್ತಿ

ಇದೇ ವೇಳೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ವ್ಯಕ್ತಿಯೊಬ್ಬರು ಮುಂಬೈನಿಂದ ಕಾಲ್ನಡಿಗೆಯಲ್ಲಿಯೇ ಚೆನ್ನೈ ತಲುಪಿದ್ದಾರೆ. ಕಾಂಚೀಪುರಂ ಜಿಲ್ಲೆಯ ವಲತೂರ್ ಮೂಲದ ಬರಾಂಡಮನ್ ಮುಂಬೈನಿಂದ ನಡೆದುಕೊಂಡೇ ಚೆನ್ನೈಗೆ ಬಂದಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

1,350 ಕಿ.ಮೀ ದೂರ ನಡೆದೇ ಮನೆ ಸೇರಿದ 47 ವರ್ಷದ ವ್ಯಕ್ತಿ

ಮುಂಬೈನ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ 47 ವರ್ಷದ ಬರಾಂಡಮಾನ್ ಸೋರಿಯಾಸಿಸ್ ನಿಂದ ಬಳಸುತ್ತಿದ್ದಾರೆ. ಈ ಕಾರಣಕ್ಕೆ ಬರಾಂಡಮನ್ ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಳನ್ನು ಖರೀದಿಸುತ್ತಿದ್ದರು. ಆದರೆ ಲಾಕ್ ಡೌನ್ ಕಾರಣಕ್ಕೆ ಅವರಿಗೆ ಚೆನ್ನೈಗೆ ಬಂದು ಔಷಧ ಖರೀದಿಸಲು ಸಾಧ್ಯವಾಗಲಿಲ್ಲ.

1,350 ಕಿ.ಮೀ ದೂರ ನಡೆದೇ ಮನೆ ಸೇರಿದ 47 ವರ್ಷದ ವ್ಯಕ್ತಿ

ಔಷಧವಿಲ್ಲದೇ ಬಳಲುತ್ತಿದ್ದ ಬರಾಂಡಮಾನ್ ಕೆಲಸವನ್ನು ಸಹ ಕಳೆದುಕೊಂಡರು. ಈ ಕಾರಣಕ್ಕೆ ಚೆನ್ನೈಗೆ ಮರಳಲು ತೀರ್ಮಾನಿಸಿದರು. ಚೆನ್ನೈಗೆ ಯಾವುದೇ ಸಾರಿಗೆ ಸೌಲಭ್ಯಗಳಿಲ್ಲದ ಕಾರಣಕ್ಕೆ ಕಾಲ್ನಡಿಗೆಯಲ್ಲಿಯೇ ತೆರಳಲು ನಿರ್ಧರಿಸಿದರು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

1,350 ಕಿ.ಮೀ ದೂರ ನಡೆದೇ ಮನೆ ಸೇರಿದ 47 ವರ್ಷದ ವ್ಯಕ್ತಿ

ಚೆನ್ನೈ - ಮುಂಬೈ ನಗರಗಳ ನಡುವಿನ ಅಂತರ ಸುಮಾರು 1,350 ಕಿ.ಮೀಗಳಾಗಿದೆ. ಇಷ್ಟು ದೂರ ನಡೆಯುವುದು ಅಸಾಧ್ಯದದ ಮಾತಾದರೂ ಬರಾಂಡಮನ್ ಎದೆಗುಂದದೇ ಮುನ್ನುಗ್ಗಿದರು. 115 ದಿನಗಳ ಪ್ರಯಾಣದ ನಂತರ ಬರಾಂಡಮನ್ ಇತ್ತೀಚೆಗೆ ಗುಮ್ಮಿಡಿಪೂಂಡಿ ನಗರವನ್ನು ತಲುಪಿದ್ದಾರೆ.

1,350 ಕಿ.ಮೀ ದೂರ ನಡೆದೇ ಮನೆ ಸೇರಿದ 47 ವರ್ಷದ ವ್ಯಕ್ತಿ

ಗುಮ್ಮಿಡಿಪೂಂಡಿ ಬಸ್ ನಿಲ್ದಾಣ ತಲುಪಿ ಬಳಲುತ್ತಿದ್ದ ಬರಾಂಡಮಾನ್ ಅವರನ್ನು ಕಂಡ ಅಲ್ಲಿನ ಸಹಾಯಕ ಇನ್ಸ್‌ಪೆಕ್ಟರ್ ರಾಜೇಂದ್ರನ್ ಆಂಬುಲೆನ್ಸ್‌ಗೆ ಕರೆ ಮಾಡಿ ಬರಾಂಡಮನ್ ರವರನ್ನು ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

1,350 ಕಿ.ಮೀ ದೂರ ನಡೆದೇ ಮನೆ ಸೇರಿದ 47 ವರ್ಷದ ವ್ಯಕ್ತಿ

ಎಂತಹವರೇ ಆದರೂ 1,350 ಕಿ.ಮೀ ನಡೆಯಲು ದೈಹಿಕ ಹಾಗೂ ಮಾನಸಿಕ ಶಕ್ತಿ ಬೇಕೇ ಬೇಕು. ಈ ಎರಡೂ ಇರುವವರು ಮಾತ್ರ ಇಂತಹ ಕಠಿಣ ಪ್ರಯಾಣವನ್ನು ಕೈಗೊಳ್ಳಬಹುದು. 47ನೇ ವಯಸ್ಸಿನಲ್ಲೂ ಇಷ್ಟು ದೂರ ನಡೆದು ಕೊಂಡು ಸಾಗಿದ ಬರಾಂಡಮಾನ್ ಅವರ ಸಾಹಸ ನಿಜಕ್ಕೂ ಶ್ಲಾಘನೀಯ.

ಮೂಲ: ಪುಥಿಯತಲೈಮುರೈ

Most Read Articles

Kannada
English summary
47 year old man walks 1350 kms to reach Chennai from Mumbai. Read in Kannada.
Story first published: Monday, August 17, 2020, 9:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X