ಸ್ವಾವಲಂಭಿ ಭಾರತ: ಬಿಎಂಡಬ್ಲ್ಯು ಕಾರುಗಳಿಗೆ ಪರ್ಯಾಯವಾಗಬಲ್ಲ ಮೇಡ್ ಇನ್ ಇಂಡಿಯಾ ಕಾರುಗಳಿವು

ಕರೋನಾ ವೈರಸ್ ಜಗತ್ತಿನ ಬಹುತೇಕ ಎಲ್ಲಾ ದೇಶಗಳನ್ನು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿರವರು ಸ್ವಾವಲಂಬಿ ಭಾರತಕ್ಕೆ ಕರೆ ನೀಡಿದ್ದಾರೆ. ದೇಶದ ನಾಗರಿಕರು ಆಮದು ಮಾಡಿಕೊಂಡಿರುವ ವಸ್ತುಗಳ ಬದಲಿಗೆ ಸ್ಥಳೀಯವಾಗಿ ತಯಾರಾದ ವಸ್ತುಗಳನ್ನು ಬಳಸಬೇಕೆಂದು ಕರೆ ನೀಡಿದ್ದಾರೆ.

ಸ್ವಾವಲಂಭಿ ಭಾರತ: ಬಿಎಂಡಬ್ಲ್ಯು ಕಾರುಗಳಿಗೆ ಪರ್ಯಾಯವಾಗಬಲ್ಲ ಮೇಡ್ ಇನ್ ಇಂಡಿಯಾ ಕಾರುಗಳಿವು

ನಮ್ಮ ಪ್ರಧಾನಿ ಮಂತ್ರಿಯವರೂ ಸೇರಿದಂತೆ ಇತರ ಸರ್ಕಾರಿ ಅಧಿಕಾರಿಗಳು ಹೆಚ್ಚಿನ ಸುರಕ್ಷತೆಗಾಗಿ ಆಮದು ವಾಹನಗಳನ್ನು ಬಳಸುತ್ತಾರೆ. ನರೇಂದ್ರ ಮೋದಿರವರು ಬಿಎಂಡಬ್ಲ್ಯು 7-ಸೀರೀಸ್ ಹೈ ಸೆಕ್ಯುರಿಟಿ, ಲ್ಯಾಂಡ್ ರೋವರ್ ರೇಂಜ್ ರೋವರ್ ಸೆಂಟಿನೆಲ್, ಆರ್ಮರ್ಡ್ ಟೊಯೊಟಾ ಲ್ಯಾಂಡ್ ಕ್ರೂಸರ್ ಮುಂತಾದ ಕಾರುಗಳನ್ನು ಬಳಸುತ್ತಿದ್ದಾರೆ. ಅವರು ಪ್ರಧಾನ ಮಂತ್ರಿಯಾದ ನಂತರ ಮಹೀಂದ್ರಾ ಸ್ಕಾರ್ಪಿಯೋ ಬದಲು ಬಿಎಂಡಬ್ಲ್ಯು 7-ಸೀರೀಸ್ ಹೈ ಸೆಕ್ಯುರಿಟಿ ಕಾರನ್ನು ಬಳಸುತ್ತಿದ್ದಾರೆ.

ಸ್ವಾವಲಂಭಿ ಭಾರತ: ಬಿಎಂಡಬ್ಲ್ಯು ಕಾರುಗಳಿಗೆ ಪರ್ಯಾಯವಾಗಬಲ್ಲ ಮೇಡ್ ಇನ್ ಇಂಡಿಯಾ ಕಾರುಗಳಿವು

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಸಿಇಒ ಆನಂದ್ ಮಹೀಂದ್ರಾರವರು ಭಾರತದಲ್ಲಿಯೇ ತಯಾರಾದ ಕಾರುಗಳನ್ನು ಬಳಸುವಂತೆ ಒತ್ತಾಯಿಸಿ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಸ್ಥಳೀಯ ಕಾರುಗಳನ್ನು ಉತ್ತೇಜಿಸಲು ಭಾರತದಲ್ಲಿ ತಯಾರಾದ ಕಾರುಗಳನ್ನು ಬಳಸಬೇಕೆಂದು ಅವರು ಪ್ರಧಾನಿಯವರಿಗೆ ಸಲಹೆ ನೀಡಿದ್ದಾರೆ. ಬಿಎಂಡಬ್ಲ್ಯು, ಲ್ಯಾಂಡ್ ರೋವರ್ ಮತ್ತು ಟೊಯೊಟಾ ಕಾರುಗಳಿಗೆ ಪರ್ಯಾಯವಾದ ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಾದ ಕಾರುಗಳನ್ನು ಈ ಲೇಖನದಲ್ಲಿ ನೋಡೋಣ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಸ್ವಾವಲಂಭಿ ಭಾರತ: ಬಿಎಂಡಬ್ಲ್ಯು ಕಾರುಗಳಿಗೆ ಪರ್ಯಾಯವಾಗಬಲ್ಲ ಮೇಡ್ ಇನ್ ಇಂಡಿಯಾ ಕಾರುಗಳಿವು

1. ಮಹೀಂದ್ರಾ ಸ್ಕಾರ್ಪಿಯೋ

ಮಹೀಂದ್ರಾ ಸ್ಕಾರ್ಪಿಯೋ ಹಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿದೆ. ಈ ಕಾರನ್ನು ಅನೇಕ ಭಾರತೀಯ ರಾಜಕಾರಣಿಗಳು ಬಳಸುತ್ತಾರೆ. ಸ್ಕಾರ್ಪಿಯೋ ತನ್ನ ಆಫ್-ರೋಡಿಂಗ್ ಸಾಮರ್ಥ್ಯಗಳಿಗಾಗಿ ಹೆಸರುವಾಸಿಯಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ, ನರೇಂದ್ರ ಮೋದಿರವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಶಸ್ತ್ರಸಜ್ಜಿತ ಸ್ಕಾರ್ಪಿಯೋವನ್ನು ಬಳಸುತ್ತಿದ್ದರು. ಇದು ಅವರ ಅಧಿಕೃತ ಕಾರ್ ಆಗಿತ್ತು.

ಸ್ವಾವಲಂಭಿ ಭಾರತ: ಬಿಎಂಡಬ್ಲ್ಯು ಕಾರುಗಳಿಗೆ ಪರ್ಯಾಯವಾಗಬಲ್ಲ ಮೇಡ್ ಇನ್ ಇಂಡಿಯಾ ಕಾರುಗಳಿವು

2. ಟಾಟಾ ಹ್ಯಾರಿಯರ್

2019ರಲ್ಲಿ ಬಿಡುಗಡೆಯಾದ ಟಾಟಾ ಹ್ಯಾರಿಯರ್ ಎಸ್‌ಯುವಿಯನ್ನು 2020ರಲ್ಲಿ ಅಪ್‌ಡೇಟ್ ಮಾಡಲಾಯಿತು. ಈ ಮಧ್ಯಮ ಗಾತ್ರದ ಎಸ್‌ಯುವಿಯನ್ನು ಹೊಸ ಒಮೆಗಾ-ಆರ್ಕ್ ಪ್ಲಾಟ್‌ಫಾರ್ಮ್ ಮೇಲೆ ತಯಾರಿಸಲಾಗಿದೆ. ಫ್ರಂಟ್-ವ್ಹೀಲ್-ಡ್ರೈವ್ ಎಸ್‌ಯುವಿಯಾದ ಹ್ಯಾರಿಯರ್ ಹಲವಾರು ಆಧುನಿಕ ಫೀಚರ್‌ಗಳನ್ನು ಹೊಂದಿದೆ. ಈ ಎಸ್‌ಯುವಿಯಲ್ಲಿರುವ 2.0-ಲೀಟರಿನ ಡೀಸೆಲ್ ಎಂಜಿನ್ 170 ಬಿಹೆಚ್‌ಪಿ ಪವರ್ ಹಾಗೂ 350 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಸ್‌ಯುವಿ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಸ್ವಾವಲಂಭಿ ಭಾರತ: ಬಿಎಂಡಬ್ಲ್ಯು ಕಾರುಗಳಿಗೆ ಪರ್ಯಾಯವಾಗಬಲ್ಲ ಮೇಡ್ ಇನ್ ಇಂಡಿಯಾ ಕಾರುಗಳಿವು

3. ಟಾಟಾ ಹೆಕ್ಸಾ

ಟಾಟಾ ಮೋಟಾರ್ಸ್ ಟಾಟಾ ಏರಿಯಾ ಕಾರಿಗೆ ಬದಲಿಯಾಗಿ ಹೆಕ್ಸಾ ಕಾರ್ ಅನ್ನು ಬಿಡುಗಡೆಗೊಳಿಸಿತು. ಈ ಕಾರು ದೇಶೀಯ ಮಾರುಕಟ್ಟೆಯಲ್ಲಿರುವ ಬಲಶಾಲಿಯಾದ ಹಾಗೂ ಆರಾಮದಾಯಕ ಕಾರುಗಳಲ್ಲಿ ಒಂದಾಗಿದೆ. ಟಾಟಾ ಮೋಟಾರ್ಸ್ ಹೆಕ್ಸಾ ಕಾರಿನ ಬಿಎಸ್ 6 ಆವೃತ್ತಿಯನ್ನು ಬಿಡುಗಡೆಗೊಳಿಸಿಲ್ಲ. ಶೀಘ್ರದಲ್ಲಿಯೇ ಬಿಎಸ್ 6 ಆವೃತ್ತಿಯನ್ನು ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ದೊಡ್ಡ ಗಾತ್ರದ ಕ್ಯಾಬಿನ್ ಹೊಂದಿರುವ ಹೆಕ್ಸಾ ಪ್ರಧಾನಿ ಸೇರಿದಂತೆ ಇತರ ಮಂತ್ರಿಗಳಿಗೆ ಆರಾಮದಾಯಕ ಸವಾರಿಯನ್ನು ನೀಡಲಿದೆ.

ಸ್ವಾವಲಂಭಿ ಭಾರತ: ಬಿಎಂಡಬ್ಲ್ಯು ಕಾರುಗಳಿಗೆ ಪರ್ಯಾಯವಾಗಬಲ್ಲ ಮೇಡ್ ಇನ್ ಇಂಡಿಯಾ ಕಾರುಗಳಿವು

4. ಮಹೀಂದ್ರಾ ಎಕ್ಸ್‌ಯುವಿ 500

ಮಹೀಂದ್ರಾ ಎಕ್ಸ್‌ಯುವಿ 500ಯನ್ನು ಅನೇಕ ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಕಾರು ದಕ್ಷಿಣ ಆಫ್ರಿಕಾದಂತಹ ಅನೇಕ ದೇಶಗಳಲ್ಲಿ ಜನಪ್ರಿಯ ಎಸ್‌ಯುವಿಯಾಗಿದೆ. ಬಲಶಾಲಿಯಾದ ಎಂಜಿನ್ ಹೊಂದಿರುವ ಈ ಎಸ್‌ಯುವಿ ಏಳು ಸೀಟುಗಳನ್ನು ಹೊಂದಿದೆ. ಮಹೀಂದ್ರಾ ಎಕ್ಸ್‌ಯುವಿ 500ನಲ್ಲಿರುವ ಡೀಸೆಲ್ ಎಂಜಿನ್ 170 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸ್ವಾವಲಂಭಿ ಭಾರತ: ಬಿಎಂಡಬ್ಲ್ಯು ಕಾರುಗಳಿಗೆ ಪರ್ಯಾಯವಾಗಬಲ್ಲ ಮೇಡ್ ಇನ್ ಇಂಡಿಯಾ ಕಾರುಗಳಿವು

5. ಮಾರುತಿ ಸುಜುಕಿ ಸಿಯಾಜ್

ಮಾರುತಿ ಸುಜುಕಿ ಸಿಯಾಜ್ ಅನೇಕ ಸರ್ಕಾರಿ ನೌಕರರ ಅಧಿಕೃತ ವಾಹನವಾಗಿದೆ. ಈ ಸೆಡಾನ್‌ ಕಾರನ್ನು ಸರ್ಕಾರಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಾರೆ. ಸೆಡಾನ್ ಸೆಗ್‌ಮೆಂಟ್‌ನಲ್ಲಿ ಜನಪ್ರಿಯವಾಗಿರುವ ಸಿಯಾಜ್ ಕಾರು, ಕಾರು ಮಾರುಕಟ್ಟೆಯಲ್ಲಿ ವಿಶಿಷ್ಟ ಗುರುತನ್ನು ಹೊಂದಿದೆ. ಈ ಕಾರನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಿಸಲಾಗಿದ್ದು, ಭಾರತದ ಪ್ರಧಾನ ಮಂತ್ರಿಗಳು ಬಳಸುವ ಶಸ್ತ್ರಸಜ್ಜಿತ ಸೆಡಾನ್‌ಗೆ ಪರ್ಯಾಯವಾಗಬಲ್ಲದು.

ಸ್ವಾವಲಂಭಿ ಭಾರತ: ಬಿಎಂಡಬ್ಲ್ಯು ಕಾರುಗಳಿಗೆ ಪರ್ಯಾಯವಾಗಬಲ್ಲ ಮೇಡ್ ಇನ್ ಇಂಡಿಯಾ ಕಾರುಗಳಿವು

ಸುರಕ್ಷತೆಯ ಬಗ್ಗೆ ಹೇಳುವುದಾದರೆ ಈ ಎಲ್ಲಾ ಕಾರುಗಳನ್ನು ಶಸ್ತ್ರಸಜ್ಜಿತಗೊಳಿಸಬಹುದು. ಯಾವುದೇ ವಾಹನದಲ್ಲಿ ಉನ್ನತ ಮಟ್ಟದ ಸುರಕ್ಷತಾ ರಕ್ಷಾಕವಚವನ್ನು ಸ್ಥಾಪಿಸಬಲ್ಲ ಅನೇಕ ವೃತ್ತಿಪರರು ಭಾರತದಲ್ಲಿದ್ದಾರೆ. ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗುವ ಮೊದಲು ಬಳಸುತ್ತಿದ್ದ ಸ್ಕಾರ್ಪಿಯೋ ಕಾರು ಶಸ್ತ್ರಸಜ್ಜಿತವಾಗಿದೆ.

Most Read Articles

Kannada
English summary
Indian alternatives for Prime Minister Narendra Modi's BMW, Range Rover. Read in Kannada.
Story first published: Saturday, May 16, 2020, 13:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X