5 ರೂ. ಚಿಲ್ಲರೆ ಕೊಟ್ಟಿಲ್ಲವೆಂದು ರೊಚ್ಚಿಗೆದ್ದ ಪ್ರಯಾಣಿಕ: ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದೇನು ಗೊತ್ತಾ?
ಬಸ್‌ನಲ್ಲಿ ಪ್ರಯಾಣ ಮಾಡುವಾಗ ಸಾಮಾನ್ಯವಾಗಿ ಚಿಲ್ಲರೆ ಕುರಿತಾಗಿ ಚರ್ಚೆಗಳಾಗುವುದು, ಜಗಳವಾಗುವುದು ಮಾಮೂಲಿ. ಕೆಲವೊಮ್ಮೆ ಪ್ರಯಾಣಿಕರು ಚಿಲ್ಲರೆ ವಾಪಸ್ ಕೊಡಿ ಎಂದು ಕೇಳುವುದೇ ಇಲ್ಲ. ಆದರೆ ಇಲ್ಲೊಂದು ಕಡೆ ಚಿಲ್ಲರೆ ವಿಷಯದಲ್ಲಿ ವಿಲಕ್ಷಣವಾದ ಘಟನೆಯೊಂದು ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಎಲ್ಲರ ಗಮನ ಸೆಳೆದಿದೆ.
ಹೌದು, ಪ್ರಯಾಣ ಮಾಡುತ್ತಿದ್ದ ವೇಳೆ ಟಿಕೆಟ್ ಪಡೆದು ಕಂಡಕ್ಟರ್ ವಾಪಸ್ ಚಿಲ್ಲರೆ ಕೊಟ್ಟಿಲ್ಲವೆಂದು ಪ್ರಯಾಣಿಕನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಘಟನೆ ಸಂಭವಿಸಿದೆ. ತನಗೆ ಬರಬೇಕಾಗಿದ್ದ 5 ರೂ. ಚಿಲ್ಲರೆಯನ್ನು ಕಂಡಕ್ಟರ್ ವಾಪಸ್ ನೀಡದ ಕಾರಣ, ಪ್ರಯಾಣಿಕ ಹೀಗೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಈ ವಿಷಯದ ಬಗ್ಗೆ ಗಮನಸುವುದಾದರೆ, ಈ ಪೋಸ್ಟ್ನ್ನು ನಿತೀನ್ ಕೃಷ್ಣ (N_4_NITHIN) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ಕಂಡಕ್ಟರ್ ಬಳಿ 1 ರೂಪಾಯಿ ಚೇಂಜ್ ಕೂಡಾ ಇಲ್ಲವೇ? ನಾನು ನನ್ನ 5 ರೂಪಾಯಿ ಹಣವನ್ನು ಕಳೆದುಕೊಂಡೆ, ಇದಕ್ಕೆ ಏನಾದರೂ ಪರಿಹಾರ ಇದೆಯೇ?" ಎಂದು ಬಿ.ಎಂ.ಟಿ.ಸಿಯ ಅಧೀಕೃತ ಎಕ್ಸ್ ಖಾತೆಯಲ್ಲಿ ಟ್ಯಾಗ್ ಮಾಡಿ ತಲೆಬರಹವನ್ನು ಸಹ ನೀಡಿದ್ದಾರೆ.
ಮಾಹಿತಿಗಳ ಪ್ರಕಾರ, ಘಟನೆಗೆ ಸಂಭಂಧಿಸಿದ ನಿತಿನ್ ಅವರು ಬಿ.ಎಂ.ಟಿ.ಸಿ ಬಸ್‌ನಲ್ಲಿ ರಾಗಿಗುಡ್ಡ ದೇವಸ್ಥಾನದಿಂದ ಹೆಚ್.ಎಸ್.ಆರ್ ಡಿಪೋದ ಕಡೆ ಪ್ರಯಾಣ ಮಾಡುತ್ತಿದ್ದರು. ಇವರ ಟಿಕೆಟ್ ಬೆಲೆ ರೂಪಾಯಿ 15 ಆಗಿದ್ದರಿಂದ ನಿತೀನ್ 20 ರೂಪಾಯಿ ನೋಟನ್ನು ಕಂಡಕ್ಟರ್ ಗೆ ನೀಡುತ್ತಾರೆ. ಆದರೆ ಆ ಕಂಡಕ್ಟರ್ ವಾಪಸ್ 5 ರೂಪಾಯಿ ಚಿಲ್ಲರೆ ಹಣವನ್ನು ನೀಡಲಿಲ್ಲ.

ಈ ರೀತಿಯಾಗಿ ಕಂಡಕ್ಟರ್ ಚಿಲ್ಲರೆ ಹಣವನ್ನು ವಾಪಸ್ ನೀಡಿಲ್ಲ ಎಂಬ ವಿಚಾರವನ್ನು ನಿತೀನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಕುರಿತಾಗಿ ಏಪ್ರಿಲ್ 14 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 72 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ರೀತಿ ಸಮಸ್ಯೆಯಾಗಬಾರದೆಂದರೆ UPI ಮೂಲಕ ಟಿಕೆಟ್ ಹಣ ನೀಡಬೇಕು ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.
ಈ ರೀತಿಯ ಘಟನೆಗಳು ದಿನಕ್ಕೆ ಸಾವಿರಾರು ನಡೆಯುತ್ತದೆ. ಆದರೆ ಈ ಕುರಿತಾಗಿ ಧೈರ್ಯದಿಂದ ಕಂಡಕ್ಟರ್ ಅನ್ನು ಕೇಳುವುದಾಗಲಿ ಅಥವಾ ಘಟನೆಗೆ ಸ್ಪಂದಿಸುವುದಾಗಲಿ ತುಂಬಾನೇ ಕಮ್ಮಿ. ಕೆಲವು ಮಂದಿಯಷ್ಟೇ ಈ ರೀತಿಯ ಘಟನೆಗೆ ಧೈರ್ಯವಾಗಿ ಪ್ರಶ್ನೆ ಮಾಡುತ್ತಾರೆ. ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಜಗಳ ನಡೆದ ಘಟನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಿಗುತ್ತದೆ.
ಬಿಎಂಟಿಸಿ (BMTC) ಬಸ್ ಕುರಿತಾದ ವಿಲಕ್ಷಣವಾದ ಘಟನೆಗಳು ನಡೆದಿರುವುದು ಇದೇ ಮೊದಲೇನಲ್ಲ. ನಮಗೆ ನೆನಪಿರುವಂತೆ ಸ್ವಾರಸ್ಯಕರವಾದ ಘಟನೆಯೆಂದರೆ, ಇಟ್ಟಿಗೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುವ ಯಶಪ್ಪ ಸೂರ್ಯವಂಶಿ, ತನ್ನ ಸ್ವಗ್ರಾಮಕ್ಕೆ ತೆರಳಲು ಔರಾದ್ ಬಸ್ ನಿಲ್ದಾಣಕ್ಕೆ ಬಂದು, ಮದ್ಯದ ಅಮಲಿನಲ್ಲಿ ಬಸ್ ತೆಗೆದುಕೊಂಡು ಹೋಗಿ, ಅಪಘಾತ ಮಾಡಿದ್ದಾನೆ. ತಪ್ಪಿಸಿಕೊಂಡು ಹೋಗಲು ಯತ್ನಿಸಿದ ಆತನನ್ನು ಸ್ಥಳೀಯರ ಸಹಾಯದಿಂದ ಪೊಲೀಸರು ಹಿಡಿದಿದ್ದಾರೆ.
ಪೊಲೀಸರ ವಿಚಾರಣೆಯಲ್ಲಿ ಸುಮಾರು ಹೊತ್ತು ಬಸ್ ಸ್ಟಾಂಡ್ ನಲ್ಲಿ ಕಾದರೂ ಬಸ್ ಬರಲಿಲ್ಲ. ಅದಕ್ಕಾಗಿ ಈ ಕೆಲಸ ಮಾಡಿರುವುದಾಗಿ ಹೇಳಿದ್ದಾನೆ ಎಂಬ ವಿಚಾರ ಗೊತ್ತಾಗಿದೆಯಂತೆ. ಇದಕ್ಕೂ ಮೊದಲು, ಪಾನಮತ್ತನಾಗಿದ್ದ ಈತ ತನ್ನೂರಿಗೆ ಬಸ್ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಿದ್ದನಂತೆ. ಆದರೆ, ಸಹ ಪ್ರಯಾಣಿಕರು, ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇದೇನೂ ಹೊಸ ಘಟನೆಯಲ್ಲ. ಈ ಹಿಂದೆಯೂ ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ಇಂತಹದ್ದೇ ಪ್ರಕರಣ ಫೆಬ್ರವರಿಯಲ್ಲಿ ವರದಿಯಾಗಿತ್ತು. ಸ್ಟ್ಯಾಂಡ್ನಲ್ಲಿ ರಾತ್ರಿ ಹಾಲ್ಟ್ ಮಾಡಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ (ಕೆಕೆಆರ್‌ಟಿಸಿ) ಬಸ್ ಅನ್ನು ಕಳ್ಳರು ಕದ್ದಿದ್ದರು. ಸುಮಾರು 80 ಕಿಲೋಮೀಟರ್ ದೂರದವರೆಗೆ ಓಡಿಸಿ, ತೆಲಂಗಾಣದ ತಾಂಡೂರು ಸಮೀಪ, ಡೀಸೆಲ್ ಖಾಲಿಯಾದ ಮೇಲೆ ಬಿಟ್ಟು ಹೋಗಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications