ಪ್ರಪಂಚದ 7 ಅದ್ಭುತಗಳನ್ನು ಮೀರಿಸಿದ ರಸ್ತೆಗಳಿವು
ಜಗತ್ತಿನಲ್ಲೆಡೆ ವಾಹನಗಳಿಗೆ ಬೇಡಿಕೆ ಹೆಚ್ಚುಗುತ್ತಲೇ ಇವೆ. ಇಂದಿನ ಆಧುನಿಕ ಯುಗದಲ್ಲಿ ಗ್ರಾಹಕರು ತಾವು ಬಯಸಿದ ಕಾರನ್ನು ಕೊಂಡುಕೊಳ್ಳುವಲ್ಲಿ ಸಕ್ಷಮರಾಗಿದ್ದಾರೆ. ಅವುಗಳನ್ನು ರಸ್ತೆಗಳಲ್ಲಿ ಸುಮ್ನೆ ಜಾಲಿ ರೈಡ್ ಹೊಡೆಯುವುದು ಅಂತವರ ಹವ್ಯಾಸವಾಗಿರುತ್ತಾರೆ. ಇನ್ನು ಯುವ ಜನಾಂಗವಂತೂ ಸಾಹಸಿ ಹಾದಿಗಳನ್ನು ಇಷ್ಟಪಡುತ್ತಾರೆ.
ವಾಹನಗಳ ಬೇಡಿಕೆ ಹೆಚ್ಚುತ್ತಿರುವಂತೆಯೇ ರಸ್ತೆ ವ್ಯಾಪ್ತಿ ಕಡಿಮೆಯಾಗುತ್ತಾ ಸಾಗುತ್ತಿದೆ. ಇದರಿಂದ ಅನಿವಾರ್ಯವಾಗಿ ಇಂತಹ ಕೆಲವು ಸಾಹಸಿ ಮಾರ್ಗಗಳನ್ನು ನಿರ್ಮಿಸಬೇಕಾಗುತ್ತದೆ.
ಸಮಕಾಲೀನ ಕಾಲಘಟ್ಟದಲ್ಲಿ ಫ್ಲೈ ಓವರ್ ಎಂಬುದು ನಗರಗಳ ಪ್ರತೀಕವಾಗಿದೆ. ಹಾಗಿಯೇ ಇದು ಬೆಳೆದು ಬಂದಿರುವ ನಗರಗಳ ಪ್ರಭುತ್ವವನ್ನು ಸಾರುತ್ತವೆ. ಅಭಿವೃದ್ಧಿಯ ಈ ಯುಗದಲ್ಲಿ ಎಷ್ಟೇ ಖರ್ಚಾದರೂ ಇಂತಹ ಹಾದಿಗಳನ್ನು ಸಿದ್ಧಪಡಿಸಲು ಸರಕಾರಗಳು ತಯಾರಾಗಿರುತ್ತವೆ. ಇದರಿಂದ ಪ್ರಯಾಣಿಕರ ಸಯಮದ ಜತೆ ದೂರ ಕಡಿಮೆಯಾಗುತ್ತದೆ.
ಇಂದಿನ ಈ ಲೇಖನದ ಮೂಲಕ ಲೇಖನದ ಮೂಲಕ ಡ್ರೈವ್ ಸ್ಪಾರ್ಕ್ ಜಗತ್ತಿನ ಅಪಾಯಕಾರಿ ಹಾದಿಗಳನ್ನು ಪರಿಚಯಿಸಲಿದೆ. ಇದರಲ್ಲಿ ಡ್ರೈವಿಂಗ್ ಮಾಡುವುದು ಒಂಥರ ಸವಾಲಿನ ವಿಷಯವಾಗಿದ್ದು, ಅದ್ಭುತ ಡ್ರೈವಿಂಗ್ ಕೌಶಲ್ಯ ಹೊಂದಿರಬೇಕಾಗುತ್ತದೆ. ಖಂಡಿತವಾಗಿಯೂ ಈ ಕೆಳಗಡೆ ಕೊಡಲಾಗಿರುವ ಚಿತ್ರಗಳು ಪ್ರಪಂಚದ ಏಳು ಅದ್ಭುತಗಳನ್ನು ಮೀರಿಸಿತೇ ಎಂಬ ಭಾವನೆಯನ್ನುಂಟು ಮಾಡಲಿದೆ.

ಪ್ರಪಂಚದ ಏಳು ಅದ್ಭುತಗಳನ್ನು ಮೀರಿಸಿದ ರಸ್ತೆಗಳ ದೃಶ್ಯಗಳಿಗಾಗಿ ಫೋಟೊ ಫೀಚರ್ ಮುಂದಕ್ಕೆ ಕ್ಲಿಕ್ಕಿಸಿರಿ...ಖಂಡಿತವಾಗಿ ಸಾಹಸಿ ಚಾಲಕರನ್ನು ಕೈಬೀಸಿ ಕರೆಯಲಿದೆ.

Winston Churchill Avenue – Gibraltar
ನೈಜ ವಿಮಾನ ನಿಲ್ದಾಣವೊಂದರಲ್ಲಿ ಈ ರೋಡ್ ಹಾದು ಹೋಗುವುದರದರಿಂದ ಇದನ್ನು ನಾವು ಮೊದಲು ಪಟ್ಟಿ ಮಾಡಿದ್ದೇವೆ. ಇಲ್ಲಿ ರಸ್ತೆಯನ್ನೇ ವಿಮಾನದ ರನ್ ವೇ ಆಗಿ ಬಳಸಲಾಗಿದೆ. ಸ್ಪೇನ್‌ನಲ್ಲಿ ಈ ಅದ್ಭುತ ನೆಲೆಗೊಂಡಿದ್ದು, ವಿಮಾನ ಹಾದು ಹೋಗುವ ಸಂದರ್ಭದಲ್ಲಿ ವಾಹನಗಳು ನಿಲುಗಡೆಗೊಳ್ಳುತ್ತವೆ. ನಮ್ಮ ಭವ್ಯ ಭಾರತದಲ್ಲಿ
ಇಂತಹ ವ್ಯವಸ್ಥೆಯನ್ನು ನಿಮ್ಮಿಂದ ಊಹಿಸಲು ಸಾಧ್ಯವೇ?

The Lena Highway – Russia
ಲೆನಾ ಹೈವೇ ರಷ್ಯಾದ ಸಿಬೆರಿಯಾದಲ್ಲಿರುವ ರಾಷ್ಟ್ರೀಯ ಹೈವೇ ಆಗಿದೆ. ನದಿ ಪಕ್ಕದಲ್ಲಿ ಈ ಕೆಸರು ರಸ್ತೆಯಿದ್ದು, ಸಾಹಸಿ ಚಾಲಕರನ್ನು ಕೈಬೀಸಿ ಕರೆಯುತ್ತಿದೆ. ಚಳಿಗಾಲದಲ್ಲಂತೂ ಇಲ್ಲಿನ ತಾಪಮಾನ ಮೈನಸ್ 40 ಡಿಗ್ರಿಯ ವರೆಗೂ ಕುಸಿಯುತ್ತದೆ.

Karakoram Highway – Pakistan to China
ಇದು ನೆರೆಯ ಪಾಕಿಸ್ತಾನ ಹಾಗೂ ಚೀನಾವನ್ನು ಬಂಧಿಸಲ್ಪಟ್ಟ ತೂಗು ಸೇತುವೆಯಾಗಿದೆ. ಎರಡು ರಾಷ್ಟ್ರಗಳ ಒಪ್ಪಂದದಂತೆ 15,500 ಫೀಟ್ ಮೇಲ್ಫಾಗದಲ್ಲಿ ಸಂಪರ್ಕದ ಜಾಲ ಸೃಷ್ಟಿಸಲಾಯಿತು. ಕರೊಕೊರಮ್ ಹೈವೇಯಲ್ಲಿ ಆಮ್ಲಜನಕ ಪಡೆಯುವುದಕ್ಕೆ ಸಾಕಷ್ಟು ಒದ್ದಾಡಬೇಕಾಗಿದೆ.

Guoliang Tunnel - China
ಚೀನಾದಲ್ಲಿ ನೆಲೆಗೊಂಡಿರುವ ಈ ಸುರಂಗ ಮಾರ್ಗ ಮಾನವ ನಿರ್ಮಿತವಾಗಿದೆ. ಗುಡ್ಡ ಬೆಟ್ಟಗಳನ್ನೇರಿ ಮತ್ತೊಂದು ಬದಿಗೆ ಚಲಿಸಬೇಕಾಗಿರುವುದನ್ನು ಅರಿತುಕೊಂಡಿರುವ ಅಲ್ಲಿನ ಸ್ಥಳೀಯರು ಗುಹೆ ಕೊರೆದು ಸುರಂಗ ಮಾರ್ಗ ನಿರ್ಮಿಸಿದ್ದಾರೆ. ಇನ್ನು ಒಳಗಡೆ ಬೆಳಕಿನ ಪ್ರವೇಶಕ್ಕಾಗಿ ಸುರಂಗದೊಳಗೆ ಅಲ್ಲಲ್ಲಿ ಕಿಟಕಿಗಳ ರೀತಿಯಲ್ಲಿ ಮಣ್ಣನ್ನು ಕೊರೆಯಲಾಗಿದೆ. (ಚಿತ್ರ ನೋಡಿ)

Gate Tower, Osaka, Japan
ಎತ್ತರದ ಕಟ್ಟಡಗಳ ನಡುವಣ ರಸ್ತೆ ಹಾದು ಹೋಗುವುದನ್ನು ನೀವು ಎಂದಾದರೂ ಕೇಳಿದ್ದೀರಾ..? ಜಪಾನ್‌ನ ಒಸಾಕ ನಗರದಲ್ಲಿ ಈ ರೋಮಾಂಚನ ದೃಶ್ಯವಿದ್ದು, ಕಟ್ಟಡಗಳ ನಡುವೆ ಪ್ಲೈ ಓವರ್ ಹಾದು ಹೋಗುತ್ತಿದೆ. ಮಾಲಿಕರು ಕಟ್ಟಡವನ್ನು ತೆರಳುಗೊಳಿಸಲು ನಿರಾಕರಿಸಿದ್ದಾಗ ಬುದ್ದಿ ಖರ್ಚು ಮಾಡಿರುವ ಎಂಜಿನಿಯರ್‌ಗಳು ಕಟ್ಟಡಗಳ ನಡುವೆ ಪ್ಲೈ ಓವರ್ ನಿರ್ಮಿಸಿದ್ದಾರೆ.

Chesapeake Bay Bridge
ಈ ವರೆಗೆ ನೀವು ನೋಡಿರುವ ರಸ್ತೆಗಳೆಲ್ಲ ಭೂಮಿ ಮೇಲಿರುವ ದೃಶ್ಯಗಳಾಗಿವೆ. ಆದರೆ ಇಲ್ಲಿ ನೋಡಿ ಸಮುದ್ರವನ್ನೇ ಲೆಕ್ಕಕ್ಕಿಡದ ವಿಜ್ಞಾನಿಗಳು ಸಾಗರ ಕಿನಾರೆ ಮೂಲದ ರಸ್ತೆ ನಿರ್ಮಿಸಿದ್ದಾರೆ. ಅಮೆರಿಕದ ಮೇರಿಲ್ಯಾಂಡ್‌ನಲ್ಲಿ 12 ಮೈಲ್ ದೂರದ ವರೆಗೆ ಈ Chesapeake ಬೇ ಬ್ರಿಡ್ಜ್ ನೆಲೆಗೊಂಡಿದೆ. ಅಲ್ಲಿ ಬ್ರಿಡ್ಜ್ ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದಾಗ ಲಂಗಾರು ಹಾಕುವ ಅಮೆರಿಕ ನೌಕಸೇನೆ ವಿರೋಧ ವ್ಯಕ್ತಪಡಿಸಿತ್ತು. ಹಾಗಾಗಿ ಸಮುದ್ರದ ಒಳಗಡೆಯಿಂದಲೇ ರಸ್ತೆ ನಿರ್ಮಿಸಲಾಯಿತು. ಸುಮಾರು 2 ಮೈಲಿನಷ್ಟು ದೂರ ಸಮುದ್ರದ ಒಳಗಡೆಯೇ ಸಂಚರಿಸಬೇಕಾಗುತ್ತದೆ.


Click it and Unblock the Notifications








