ಟಾಟಾ ಬೋಲ್ಟ್ ಬೆಂಗಳೂರು ಎಂಟ್ರಿ; ಪ್ರಾರಂಭಿಕ ಬೆಲೆ 4.5 ಲಕ್ಷ ರು.

Written By:

ಈಗಾಗಲೇ ದೇಶಕ್ಕೆ ಎಂಟ್ರಿ ಕೊಟ್ಟಿರುವ ಟಾಟಾ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರು ಸ್ಥಳೀಯ ಬಿಡುಗಡೆ ಭಾಗವಾಗಿ ಬೆಂಗಳೂರು ಪ್ರವೇಶ ಕಂಡಿದೆ. ಹೊಸ ಟಾಟಾ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರಿನ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳ ಪ್ರಾರಂಭಿಕ ದರಗಳು 4.50 ಹಾಗೂ 5.59 ಲಕ್ಷ ರು.ಗಳಾಗಿರಲಿದೆ.

ಇವನ್ನೂ ಓದಿ: ಟಾಟಾ ಅದೃಷ್ಟಿ ಬದಲಾಯಿಸಿತೇ ಬೋಲ್ಟ್

ಮುಖ್ಯಾಂಶಗಳು:

 • ದೇಶದಲ್ಲೇ ಮೊದಲ ಬಾರಿಗೆ ಮಲ್ಟಿ ಡ್ರೈವ್ ಆಯ್ಕೆ (ಸ್ಪೋರ್ಟ್, ಎಕೊ, ಸಿಟಿ),
 • ಹೊಸತಾದ 1.2 ಲೀಟರ್ ಎಂಪಿಎಫ್‌ಐ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್,
 • ಹೊಸ ಪೀಳಿಗೆಯ ಸುರಕ್ಷತಾ ಕ್ರಮಗಳು
 • ಬಾಷ್ 9ನೇ ಜನಾಂಗದ ಎಬಿಎಸ್ (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ),
 • ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ (ಸಿಎಸ್‌ಸಿ),
 • ಮುಂಭಾಗದಲ್ಲಿ ಡ್ಯುಯಲ್ ಏರ್ ಬ್ಯಾಗ್,
 • ಹರ್ಮಾನ್ ಸಂಸ್ಥೆಯ ಅತ್ಯಾಧುನಿಕ ತಂತ್ರಜ್ಞಾನದ ಕನೆಕ್ಟ್ ನೆಕ್ಸ್ಟ್ ಇನ್ಫೋಟೈನ್ಮೆಂಟ್ ಸಿಸ್ಟಂ.

ಈಗ ಬೆಂಗಳೂರು ನಗರಕ್ಕೆ ಎಂಟ್ರಿ ಕೊಟ್ಟಿರುವ ಹೊಸ ಸ್ಪೋರ್ಟಿ ಶೈಲಿಯ ಟಾಟಾ ಬೋಲ್ಟ್, ದೇಶದ ಅಗ್ರಗಣ್ಯ ಪ್ರಯಾಣಿಕ ಕಾರು ಸಂಸ್ಥೆಗಳಾದ ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಹ್ಯುಂಡೈ ಎಲೈಟ್ ಐ20 ಮಾದರಿಗಳಿಗೆ ಕಠಿಣ ಸವಾಲನ್ನು ಒಡ್ಡಲಿದೆ.

ಬೆಂಗಳೂರಿನಲ್ಲಿ ಟಾಟಾ ಬೋಲ್ಟ್ ಬಿಡುಗಡೆ

ಮಹಾರಾಷ್ಟ್ರದ ಪುಣೆ ಸಮೀಪದ ಪಿಂಪ್ರಿ ಕಾರು ತಯಾರಿಕಾ ಘಟಕದಲ್ಲಿ ನಿರ್ಮಾಣವಾಗಿರುವ ಟಾಟಾ ಬೋಲ್ಟ್ ಅದ್ವಿತೀಯ ವಿನ್ಯಾಸ ಸುಲಭಾ ಚಾಲನೆ ಹಾಗೂ ಕ್ಷಿಪ್ರ ಸಂಪರ್ಕಅವಕಾಶ ಮಾಡಿಕೊಡುವ ವಾಹನ ತಯಾರಿಕೆಗೆಂದೇ ವಿಶೇಷವಾಗಿ ನಿರ್ಮಾಣವಾಗಿರುವ ಹೊರಿಝೊನೆಕ್ಸ್ಟ್ ಸಿದ್ಧಾಂತದಲ್ಲಿ ಬೋಲ್ಟ್ ಮಾದರಿ ನಿರ್ಮಾಣವಾಗಿದೆ.

ಬೋಲ್ಟ್ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಬೋಲ್ಟ್ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಪೆಟ್ರೋಲ್ (ಲಕ್ಷ ರು.ಗಳಲ್ಲಿ)

 • ಎಕ್ಸ್‌ಇ - 4,50,100
 • ಎಕ್ಸ್‌ಎಂ - 5,22,162
 • ಎಕ್ಸ್‌ಎಂಎಸ್ - 5,46,380
 • ಎಕ್ಸ್‌ಟಿ - 6,13,966

ಬೋಲ್ಟ್ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಬೋಲ್ಟ್ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಡೀಸೆಲ್ (ಲಕ್ಷ ರು.ಗಳಲ್ಲಿ)

 • ಎಕ್ಸ್‌ಇ - 5,59,074
 • ಎಕ್ಸ್‌ಎಂ - 6,21,716
 • ಎಕ್ಸ್‌ಎಂಎಸ್ - 6,45,145
 • ಎಕ್ಸ್‌ಟಿ - 7,12,020
ಬೆಂಗಳೂರಿನಲ್ಲಿ ಟಾಟಾ ಬೋಲ್ಟ್ ಬಿಡುಗಡೆ

ಸ್ಪರ್ಧಾತ್ಮಕ ಬೆಲೆಗಳಲ್ಲಿ ಎಂಟ್ರಿ ಕೊಟ್ಟಿರುವ ಹೊಸ ಬೋಲ್ಟ್ ದೇಶದ್ಯಾಂತ ಸ್ಥಿತಗೊಂಡಿರುವ ಟಾಟಾ ಮೋಟಾರ್ಸ್‌ನ 450 ಮಾರಾಟ ಮಳಿಗೆಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಅಲ್ಲದೆ ಈಗಾಗಲೇ 50,000ರಷ್ಟು ಮಂದಿ ಗ್ರಾಹಕರು ಬೋಲ್ಟ್ ಪೂರ್ವ ವಿಚಾರಣೆಗಾಗಿ ಹಾಗೂ ಟೆಸ್ಟ್ ಡ್ರೈವ್‌ಗಾಗಿ ಟಾಟಾ ಡೀಲರುಗಳನ್ನು ಸಮೀಪಿಸಿದ್ದಾರೆ.

ಬೆಂಗಳೂರಿನಲ್ಲಿ ಟಾಟಾ ಬೋಲ್ಟ್ ಬಿಡುಗಡೆ

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನಗಳ ವಾಣಿಜ್ಯ ವಿಭಾಗದ ಅಧ್ಯಕ್ಷರಾದ ಶ್ರೀ ಮಯಾಂಕ್ ಪಾರೀಕ್, "ನಮ್ಮ ಗ್ರಾಹಕರಿಗೆ ಅತ್ಯುತ್ತಮವಾದ ವಾಹನವನ್ನೇ ನೀಡಬೇಕು ಎಂಬ ಉದ್ದೇಶದಿಂದಲೇ ಬೋಲ್ಟ್ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಈ ವಿಶಿಷ್ಟ ಕಾರಿನ ವಿನ್ಯಾಸಕ್ಕಾಗಿ ಭಾರತ, ಬ್ರಿಟನ್ ಮತ್ತು ಇಟಲಿಯಲ್ಲಿನ ಟಾಟಾ ತಾಂತ್ರಿಕ ನಿಪುಣರ ತಂಡ ಸಾಕಷ್ಟು ಸಮಯ ಶ್ರಮಿಸಿದೆ. ಅದರಿಂದಾಗಿಯೇ ಬಹು ನಿರೀಕ್ಷೆಯ ಸ್ಪೋರ್ಟಿ ಹ್ಯಾಚ್‌ಬ್ಯಾಕ್ ಕಾರು ಸಿದ್ಧವಾಗಿದೆ" ಎಂದಿದ್ದಾರೆ.

ಬೆಂಗಳೂರಿನಲ್ಲಿ ಟಾಟಾ ಬೋಲ್ಟ್ ಬಿಡುಗಡೆ

ಇಲ್ಲಿ 'ಬೋಲ್ಟ್' ಎಂಬ ಪದವು ಮಿಂಚಿನ ವೇಗವನ್ನು ಪ್ರತಿಧ್ವನಿಸುತ್ತದೆ. ಅಷ್ಟೇ ಅಲಲದೆ ಸದಾ ಕಾಲ ಮುಂಚೂಣಿಯಲ್ಲೇ ಇರುವುದು ಮತ್ತು ಗೆಲುವಿನ ಅರ್ಥವನ್ನೂ ಕೊಡುತ್ತದೆ. ಇವೇ ಗುಣಗಳನ್ನು ಬೋಲ್ಟ್ ಕಾರು ಮೈಗೂಡಿಸಿ ಬಂದಿದೆ.

ಬೆಂಗಳೂರಿನಲ್ಲಿ ಟಾಟಾ ಬೋಲ್ಟ್ ಬಿಡುಗಡೆ

ಅಂದ ಹಾಗೆ ಹೊಸ ಬೋಲ್ಟ್ ಕಾರು ಮಾರುಕಟ್ಟೆ ಪ್ರವೇಶದ ಜೊತೆಗೆ ಟಾಟಾ ಸಂಸ್ಥೆಯು ಹೊಸ ರೀತಿಯ ಸೇವಾ ಖಾತರಿಯನ್ನು ನೀಡುತ್ತದೆ. ಹೊಸ ಬೋಲ್ಟ್ ಕಾರು ಮೊದಲ ಮೂರು ವರ್ಷ ಅಥವಾ 1 ಲಕ್ಷ ಕೀ.ಮೀ. ವರೆಗೂ (ಯಾವುದು ಮೊದಲೋ ಅದಕ್ಕೆ ಅನ್ವಯ) ವಾರಂಟಿ ಅಲ್ಲದೇ 3 ವರ್ಷದವರೆಗೂ ವಾರದ ಏಳೂ ದೀನ, ದಿನದ 24 ಗಂಟೆಗಳ ಕಾಲ ಕಾರು ಸಂಚಾರದಲ್ಲಿದ್ದಾಗ ಅದಿರುವ ಜಾಗದಲ್ಲಿಯೇ (ರೋಡ್ ಸೈಡ್) ದುರಸ್ತಿ ಸೇವೆಯ ಭರವಸೆಯನ್ನು ನೀಡಲಾಗುವುದು. ಬೋಲ್ಟ್‌ನ ಮಾಲಿಕರು ಮೊದಲ 3 ಸರ್ವಿಸ್‌ಗಳನ್ನು ಉಚಿತವಾಗಿ ಪಡೆಯುವರು (30 ಸಾವಿರ ಕೀ.ಮೀ. ಅಥವಾ 2 ವರ್ಷ) ಯಾವುದು ಮೊದಲೋ ಅದಕ್ಕೆ ಅನ್ವಯ.

ಅತ್ಯಾಧುನಿಕ ಎಂಜಿನ್

ಅತ್ಯಾಧುನಿಕ ಎಂಜಿನ್

ಬೋಲ್ಟ್ ಕಾರಿಗೆ ಹೊಸದಾಗಿ ಅಭಿವೃದ್ಧಿಪಡಿಸಿದ ಅತ್ಯುತ್ಕೃಷ್ಟ ಶ್ರೇಣಿಯ 'ರೆವೊಟ್ರಾನ್' ಎಂಜಿನ್ ಆಳವಡಿಸಲಾಗಿದೆ. ಇದು ಭಾರತದ ಪ್ರಪ್ರಥಮ 1.2 ಲೀಟರ್ ಎಂಪಿಎಫ್‌ಐ ಟರ್ಬೋಚಾರ್ಜ್ಡ ಪೆಟ್ರೋಲ್ ಎಂಜಿನ್ ಆಗಿದೆ. ಇನ್ನು ವಿಶೇಷತೆಯೆಂದರೆ ರೆವೊಟ್ರಾನ್ ಎಂಜಿನ್ ಅನ್ನು ಟಾಟಾ ತಂತ್ರಜ್ಞರೇ ಅಭಿವೃದ್ಧಿಪಡಿಸಿದ್ದಾರೆ. ಇದು 500 ಆರ್‌ಪಿಎಂನಲ್ಲಿ 90 ಪಿಎಸ್‌ಗಳಷ್ಟು ಅಶ್ವಶಕ್ತಿ ನೀಡುವ ಸಾಮರ್ಥ್ಯ ಹೊಂದಿದ್ದು, ಈ ಶ್ರೇಣಿಯ ಕಾರುಗಳಲ್ಲಿ ಗರಿಷ್ಠ ಮಟ್ಟದ್ದಾಗಿದೆ. ಹಾಗೆಯೇ 3 ಲಕ್ಷ ಗಂಟೆಗಳ ಕಾಲ ಈ ಎಂಜಿನನ್ನು ಪರೀಕ್ಷಿಸಿ ಅದರ ಸಾಮರ್ಥ್ಯವನ್ನು ದೃಢಿಕರಿಸಲಾಗಿದೆ.

ಇನ್ನು ಡೀಸೆಲ್ ಮಾದರಿಯಲ್ಲಿ 1.3 ಲೀಟರ್ ಕ್ವಾಡ್ರಾಜೆಟ್ ಎಂಜಿನ್ ಅಭಿವೃದ್ಧಿಪಡಿಸಲಾಗಿದ್ದು, 4000 ಆರ್‌ಪಿಎಂನಲ್ಲಿ 75 ಪಿಎಸ್ ಶಕ್ತಿಯನ್ನು ಹುಟ್ಟುಹಾಕುತ್ತದೆ.

ಮೈಲೇಜ್

ಮೈಲೇಜ್

ಅಂತೆಯೇ ಭಾರತ ವಾಹನ ಅಧ್ಯಯನ ಸಂಸ್ಥೆ (ಎಆರ್‌ಎಐ) ನೀಡಿರುವ ಪ್ರಮಾಣ ಪತ್ರದ ಪ್ರಕಾರ ಹೊಸ ಬೋಲ್ಟ್ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳು ಪ್ರತಿ ಲೀಟರ್‌ಗೆ ಅನುಕ್ರಮವಾಗಿ 17.57 ಹಾಗೂ 22.95 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಸುರಕ್ಷತೆ

ಸುರಕ್ಷತೆ

 • ಜನರೇಷನ್ ನೆಕ್ಸ್ಟ್ ಸೇಫ್ಟಿ - ಬಾಷ್ 9ನೇ ಜನಾಂಗದ ಎಬಿಎಸ್ ಜೊತೆಗೆ ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ಸಿಎಸ್‌ಸಿ (ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್),
 • ಡ್ಯುಯಲ್ ಫ್ರಂಟ್ ಏರ್ ಬ್ಯಾಗ್,
 • ಎಲ್ಲ ಬಾಗಿಲುಗಳಲ್ಲೂ ಸ್ಪೇಡಿ ಸೆನ್ಸಿಂಗ್ ಆಟೋ ಲಾಕ್,
 • ಸ್ಮಾರ್ಟ್ ರಿಯರ್ ವೈಪರ್,
ಆರಾಮದಾಯಕತೆ

ಆರಾಮದಾಯಕತೆ

 • ಕ್ಲಾಸ್ ಲೀಡಿಂಗ್ ಕ್ಯಾಬಿಸ್ ಸ್ಪೇಸ್,
 • ಫಸ್ಟ್ ಇನ್ ಕ್ಲಾಸ್ - ಸಂಪೂರ್ಣ ಆಟೋಮ್ಯಾಟಿಕ್ ಎಸಿ ಜೊತೆಗೆ ಟಚ್ ಸ್ಕ್ರೀನ್ ಕಂಟ್ರೋಲ್ ,
 • ರಗ್ಬಿ ಶೋಲ್ಡರ್ ಸೀಟು,
 • ಎಲೆಕ್ಟ್ರಾನಿಕ್ ಪವರ್ ಅಸಿಸ್ಟಡ್ ಸ್ಟೀರಿಂಗ್ ಜೊತೆ ಸ್ಪೀಡ್ ಸೆನ್ಸಿಂಗ್ ಹಾಗೂ ಆಕ್ಟಿವ್ ರಿಟರ್ನ್ ಫಂಕ್ಷನ್,
 • ನ್ಯೂ ಜನರೇಷನ್ ಟಾಟಾ ಸಿಗ್ನೇಚರ್ ಸ್ಟೀರಿಂಗ್ ವೀಲ್ ಜೊತೆ ಇಂಟೆಗ್ರೇಟಡ್ ಕಂಟ್ರೋಲ್,
 • ಜಿಯೊ ಪ್ರತಿಕ್ರಿಯೆ
ವಿನ್ಯಾಸ

ವಿನ್ಯಾಸ

 • ಫಸ್ಟ್ ಇನ್ ಕ್ಲಾಸ್ ಸ್ಪೋಕ್ಡ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
 • ಟಾಟಾ ಸಿಗ್ನೇಚರ್ ಗ್ರಿಲ್, ಯೂನಿಕ್ ಹ್ಯುಮಾನಿಟಿ ಲೈನ್, ಪಿಯಾನೊ ಬ್ಲ್ಯಾಕ್ ಫಿನಿಶ್,
 • ಬೊನೆಟ್ ಮೇಲೆ ಸ್ಟ್ರೈಕಿಂಗ್ ಪವರ್ ಬಲ್ಜ್,
 • ಡೈನಾಮಿಕ್ ಅಲಾಯ್ ವೀಲ್,
 • ಫ್ಲೇಮ್ ಆಕಾರದ ಟೈಲ್ ಲ್ಯಾಂಪ್,
 • ಫ್ಲೋಟಿಂಗ್ ರೂಫ್,
 • ಸ್ಪೋರ್ಟಿ ರಿಯರ್ ಸ್ಪಾಯ್ಲರ್,
 • ಸ್ನಾಝಿ ಜಾವಾ ಬ್ಲ್ಯಾಕ್ ಇಂಟಿರಿಯರ್
ಕನೆಕ್ಟಿವಿಟಿ

ಕನೆಕ್ಟಿವಿಟಿ

 • ಹರ್ಮಾನ್ ಕನೆಕ್ಟ್‌ನೆಕ್ಸ್ಟ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ,
 • ಮ್ಯಾಪ್ ಮೈ ಇಂಡಿಯಾ ಜೊತೆಗೆ ಸ್ಮಾರ್ಟ್ ಫೋನ್ ಸಂಪರ್ಕಿತ ನೇವಿಗೇಷನ್,
 • ಯುಎಸ್‌ಬಿ ಹಾಗೂ ಎಸ್‌ಡಿ ಕಾರ್ಡ್ ಮುಖಾಂತರ ವೀಡಿಯೋ ಪ್ಲೇಬ್ಯಾಕ್ ಹಾಗೂ ಇಮೇಜ್ ವ್ಯೂ ಆಯ್ಕೆ,
 • ವಾಯ್ಸ್ ಕಮಾಂಡ್ - ಕರೆ ಮಾಡಲು, ಟ್ರ್ಯಾಕ್ ಬದಲಾಯಿಸಲು, ಎಸಿ ನಿಯಂತ್ರಣ,
 • ಮೇಸೇಜ್ ಅಧಿಸೂಚನೆ ಹಾಗೂ ಓದುವ ಆಯ್ಕೆ,
 • ಸುತ್ತಲೂ ಆಡಿಯೋ ಎಫೆಕ್ಟ್ ಜೊತೆಗೆ 4 ಸ್ಪೀಡ್ ಹಾಗೂ 4 ಟ್ವೀಟರ್,
 • ಸ್ಪೀಡ್ ಸೆನ್ಸಿಟಿವ್ ಆಟೋ ವೋಲ್ಯಮ್ ಕಂಟ್ರೋಲ್
English summary
Tata Motors today have launched their highly anticipated 'Bolt' hatchback in Bangalore, India. The Indian manufacturer had showcased its new hatchback and compact sedan at the 2014 Auto Expo in Delhi.
Story first published: Wednesday, January 28, 2015, 15:53 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark