ದೇವರ ದರ್ಶನಕ್ಕಾಗಿ 2,200 ಕಿ.ಮೀ ದೂರ ಸೈಕಲ್ ತುಳಿಯುತ್ತಿರುವ 68 ವರ್ಷದ ಮಹಿಳೆ

ಭಾರತದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆ ವಾಹನಗಳಾದ ಬಸ್ಸು, ರೈಲು, ವಿಮಾನ, ಆಟೋ ಹಾಗೂ ಟ್ಯಾಕ್ಸಿ ಸೇರಿದಂತೆ ಎಲ್ಲಾ ರೀತಿಯ ಸಂಚಾರ ವ್ಯವಸ್ಥೆಗಳನ್ನು ನಿಷೇಧಿಸಲಾಗಿತ್ತು.

ದೇವರ ದರ್ಶನಕ್ಕಾಗಿ 2,200 ಕಿ.ಮೀ ದೂರ ಸೈಕಲ್ ತುಳಿಯುತ್ತಿರುವ 68 ವರ್ಷದ ಮಹಿಳೆ

ತುರ್ತು ಪ್ರವಾಸ ಮಾಡಬೇಕಾಗಿದ್ದವರು ಪಾಸ್ ಗಳನ್ನು ಪಡೆದು ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣ ಬೆಳೆಸಿದರು. ಈ ಅವಧಿಯಲ್ಲಿ ಹಲವಾರು ಜನ ಸೈಕಲ್ ಮೂಲಕ ಸಾವಿರಾರು ಕಿ.ಮೀ ಸಂಚರಿಸಿದ್ದ ಬಗ್ಗೆ ವರದಿಗಳಾಗಿದ್ದವು. ಕೆಲವರು ಕುಟುಂಬ ಸದಸ್ಯರ ಅನಾರೋಗ್ಯದಿಂದಾಗಿ ಸೈಕಲ್‌ನಲ್ಲಿ ಸಂಚರಿಸಿದರೆ, ಇನ್ನೂ ಕೆಲವರು ಲಾಕ್‌ಡೌನ್ ಕಾರಣದಿಂದ ಕೆಲಸ ಕಳೆದುಕೊಂಡು ಸೈಕಲ್ ಮೂಲಕ ತಮ್ಮ ಊರುಗಳಿಗೆ ವಾಪಸ್ಸಾದರು.

ದೇವರ ದರ್ಶನಕ್ಕಾಗಿ 2,200 ಕಿ.ಮೀ ದೂರ ಸೈಕಲ್ ತುಳಿಯುತ್ತಿರುವ 68 ವರ್ಷದ ಮಹಿಳೆ

ಆದರೆ ಈಗ ಪರಿಸ್ಥಿತಿ ಬದಲಾಗಿದೆ. ದೇಶದ ಎಲ್ಲಾ ಭಾಗಗಳಲ್ಲಿ ಸಂಚಾರ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಿದೆ. ರೈಲು, ವಿಮಾನ, ಆಟೋ ಹಾಗೂ ಟ್ಯಾಕ್ಸಿಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ದೇವರ ದರ್ಶನಕ್ಕಾಗಿ 2,200 ಕಿ.ಮೀ ದೂರ ಸೈಕಲ್ ತುಳಿಯುತ್ತಿರುವ 68 ವರ್ಷದ ಮಹಿಳೆ

ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದ್ದರೂ ಸಹ ವಯಸ್ಸಾದ ಮಹಿಳೆಯೊಬ್ಬರು ಇನ್ನೂ ಸೈಕಲ್ ಮೂಲಕ ಪ್ರಯಾಣಿಸುತ್ತಿದ್ದಾರೆ. ಸೈಕಲ್ ಮೂಲಕ ಅವರು 2,200 ಕಿ.ಮೀಗಳಷ್ಟು ದೂರ ಸಾಗುತ್ತಿದ್ದಾರೆ.

ದೇವರ ದರ್ಶನಕ್ಕಾಗಿ 2,200 ಕಿ.ಮೀ ದೂರ ಸೈಕಲ್ ತುಳಿಯುತ್ತಿರುವ 68 ವರ್ಷದ ಮಹಿಳೆ

68 ವರ್ಷ ವಯಸ್ಸಿನ ಅವರು ಈ ವಯಸ್ಸಿನಲ್ಲಿ ಸೈಕಲ್ ಮೂಲಕ ಇಷ್ಟು ದೂರ ಸಾಗಲು ಕಾರಣ ಅವರಲ್ಲಿರುವ ದೈವ ಭಕ್ತಿ. ಮಹಾರಾಷ್ಟ್ರದ ಈ ಅಜ್ಜಿ ಜಮ್ಮು- ಕಾಶ್ಮೀರದಲ್ಲಿರುವ ವೈಷ್ಣವಿ ದೇವಿ ದೇವಸ್ಥಾನಕ್ಕೆ ಸೈಕಲ್ ಮೂಲಕ ತೆರಳುತ್ತಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ದೇವರ ದರ್ಶನಕ್ಕಾಗಿ 2,200 ಕಿ.ಮೀ ದೂರ ಸೈಕಲ್ ತುಳಿಯುತ್ತಿರುವ 68 ವರ್ಷದ ಮಹಿಳೆ

ರೇಖಾ ದೇವಪಂಕರ್ ಎಂಬ ಹೆಸರಿನ ಈ ಧೈರ್ಯಶಾಲಿ ಅಜ್ಜಿ ಜುಲೈ 24ರಂದು ತಮ್ಮ ಸೈಕಲ್ ಸವಾರಿಯನ್ನು ಆರಂಭಿಸಿದರು. ಅವರು ಪ್ರತಿದಿನ ಸುಮಾರು 40 ಕಿ.ಮೀ ಸೈಕಲ್ ತುಳಿಯುತ್ತಿದ್ದಾರೆ. ಅವರು ಆದಷ್ಟು ಬೇಗ ವೈಷ್ಣವಿ ದೇವಿ ದೇವಸ್ಥಾನವನ್ನು ತಲುಪುವ ನಿರೀಕ್ಷೆಗಳಿವೆ.

ದೇವರ ದರ್ಶನಕ್ಕಾಗಿ 2,200 ಕಿ.ಮೀ ದೂರ ಸೈಕಲ್ ತುಳಿಯುತ್ತಿರುವ 68 ವರ್ಷದ ಮಹಿಳೆ

ರೇಖಾ ದೇವಪಂಕರ್ ಅವರ ಸೈಕಲ್ ಸವಾರಿಯ ವೀಡಿಯೊವನ್ನು ರತನ್ ಶಾರದಾ ಎಂಬುವವರು ಪೋಸ್ಟ್ ಮಾಡಿದ್ದಾರೆ. ರೇಖಾ ದೇವಪಂಕರ್ ಅವರ ಪ್ರಯಾಣದ ಬಗ್ಗೆ ಅವರು ಟ್ವಿಟರ್ ನಲ್ಲಿ ಅಕ್ಟೋಬರ್ 19ರಂದು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ದೇವರ ದರ್ಶನಕ್ಕಾಗಿ 2,200 ಕಿ.ಮೀ ದೂರ ಸೈಕಲ್ ತುಳಿಯುತ್ತಿರುವ 68 ವರ್ಷದ ಮಹಿಳೆ

ವೀಡಿಯೊದಲ್ಲಿ ಹೇಳಿರುವಂತೆ 68 ವರ್ಷದ ರೇಖಾ ದೇವಪಂಕರ್ ಸೈಕಲ್ ಮೂಲಕ ವೈಷ್ಣವಿ ದೇವಿ ದೇವಸ್ಥಾನಕ್ಕೆ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದಾರೆ. ಕೊರೆಗಾಂವ್‌ನಿಂದ ಜಮ್ಮು ಕಾಶ್ಮೀರಕ್ಕೆ ತೆರಳುತ್ತಿದ್ದಾರೆ ಎಂದು ಆ ಪೋಸ್ಟ್‌ನಲ್ಲಿ ಹೇಳಲಾಗಿದೆ.

ಕೊರೆಗಾಂವ್ ಮಹಾರಾಷ್ಟ್ರದಲ್ಲಿರುವ ಒಂದು ನಗರವಾಗಿದೆ. ವೀಡಿಯೊ ನೋಡಿದವರು ಈ ವಯೋವೃದ್ಧ ಮಹಿಳೆಯನ್ನು ಶ್ಲಾಘಿಸಿದ್ದಾರೆ. ಕೆಲವರು ಅವರ ಧೈರ್ಯ ಹಾಗೂ ದೃಢ ನಿಶ್ಚಯವನ್ನು ಪ್ರಶಂಸಿಸಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ದೇವರ ದರ್ಶನಕ್ಕಾಗಿ 2,200 ಕಿ.ಮೀ ದೂರ ಸೈಕಲ್ ತುಳಿಯುತ್ತಿರುವ 68 ವರ್ಷದ ಮಹಿಳೆ

ವಯಸ್ಸು ಎಂಬುದು ಕೇವಲ ಸಂಖ್ಯೆ ಎಂದು ಈ ವಯೋವೃದ್ಧ ಮಹಿಳೆ ಸಾಬೀತುಪಡಿಸಿದ್ದಾರೆ. ಇನ್ನೂ ಕೆಲವರು ಅವರ ಸುರಕ್ಷತೆಯ ಬಗ್ಗೆ ಕಾಳಜೆ ವಹಿಸಿದ್ದಾರೆ.

Most Read Articles

Kannada
English summary
68 year old woman from Maharashtra travelling on bicycle to visit temple. Read in Kannada.
Story first published: Friday, October 23, 2020, 18:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X