ಮೋಜು ಮಸ್ತಿಗೆ ಬಂದು ಕೇಬಲ್‌ ಕಾರಿನಲ್ಲಿ ಸಿಕ್ಕಾಕೊಂಡ 75 ಮಂದಿ: ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಆಪತ್ಭಾಂದವರು

ಮೋಜು ಮಸ್ತಿಗೆಂದು ಹೋಗಿ ಕೊನೆಗೆ 75 ಜನರೂ ಯಮರಾಯನ ಬಾಗಿಲು ತಟ್ಟಿ ವಾಪಸ್‌ ಬಂದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಕೊಂಚ ಯಾಮಾರಿದ್ದರೂ ನೇರವಾಗಿ ಶಿವನ ಪಾದ ಸೇರುತ್ತಿದ್ದ ಅಷ್ಟೂ ಜನರು ಸರಿಯಾದ ಸಮಯದ ರಕ್ಷಣಾ ಕಾರ್ಯದಿಂದ ಜೀವಂತವಾಗಿ ಬದುಕುಳಿದ ಘಟನೆ ನಡೆದಿದೆ.

ಈಕ್ವಿಡಾರ್‌ ರಾಜಧಾನಿಯಾದ ಕ್ವಿಂಟೋದಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಕೆಲವು ತಾಂತ್ರಿ ದೋಷದ ಕಾರಣದಿಂದ ಕೇಬಲ್‌ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 75 ಕ್ಕೂ ಅಧಿಕ ಮಂದಿ 10 ಗಂಟೆಗಳ ಕಾಲ ಕೇಬಲ್‌ ಕಾರಿನಲ್ಲಿ (Cable Car Mission) ಸಿಕ್ಕಿ ಹಾಕಿಕೊಂಡಿದ್ದರು ಎಂದು ಮೂಲಗಳು ವರದಿ ಮಾಡಿದೆ.

High-Stakes Cable Car Mission

ವರದಿಗಳ ಪ್ರಕಾರ ಸುಮಾರು 75 ಕ್ಕೂ ಅಧಿಕ ಮಂದಿ ಈಕ್ವಿಡಾರ್‌ನ ರಾಜಧಾನಿಯಾದ ಕ್ವಿಂಟೋದಲ್ಲಿ ಕೇಬಲ್‌ ಕಾರ್‌ನಲ್ಲಿ ಪ್ರಯಾಣಿಸುವುದಕ್ಕಾಗಿ ಬಂದಿದ್ದರು. ಸಮುದ್ರ ಮಟ್ಟಕ್ಕಿಂತ ಸುಮಾರು 4000 ಅಡಿ ಮೇಲ್ಮಟ್ಟದಲ್ಲಿದೆ ಎಂದು ತಿಳಿದು ಬಂದಿದೆ. ಇನ್ನು ಅಷ್ಟು ಮಂದಿ ಕೇಬಲ್‌ ಕಾರ್‌ನಲ್ಲಿ ಕುಳಿತಿರುವಾಗಲೇ ಘಟನೆ ನಡೆದಿದೆ.

ಮಾಹಿತಿಗಳ ಪ್ರಕಾರ ಕೇಬಲ್‌ನಲ್ಲಿ ಕೆಲವು ತಾಂತ್ರಿಕ ದೊಷಗಳಿಂದ ವಿದ್ಯುತ್‌ ಹರಿಯದ ಕಾರಣ ಘಟನೆ ನಡೆದಿದೆ. ವಿದ್ಯುತ್‌ ಇಲ್ಲದೇ ಕೇಬಲ್‌ ಕಾರುಗಳು ಮುಂದಕ್ಕೆ ಚಲಿಸದೆ ಅದರಲ್ಲಿದ್ದ ಸುಮಾರು 75 ಕ್ಕೂ ಅಧಿಕ ಮಂದಿ ಕೇಬಲ್‌ ಕಾರಿನಿಂದ ಹೊರಬರಲಾಗದೇ 10 ಗಂಟೆಗಳ ಕಾಲ ಅದರಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದಾರೆ.

ಇನ್ನು ಕ್ವಿಂಟೋ ಮುನ್ಸಿಪಾಲಿಟಿ ನೀಡಿದ ವರದಿಗಳ ಪ್ರಕಾರ 75 ಮಂದಿಯಲ್ಲಿ ಸುಮಾರು 40 ಮಂದಿ ತೀರಾ ಅಪಾಯದ ಮಟ್ಟದಲ್ಲಿ ಇದ್ದರು. ಆದರೆ ಅಗ್ನಿ ಶಾಮಕ ದಳದ ರಕ್ಷಣಾ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಬಂದ ಕಾರಣ ಯಾವುದೇ ಪ್ರಾಣಾಪಾಯ ಇಲ್ಲದೆ ಜನರು ಪಾರಾಗಿದ್ದಾರೆ ಎಂದು ವಿವರಿಸಿದ್ದಾರೆ.

ಇನ್ನು ಕೇಬಲ್‌ ಕಾರು ಸುಮಾರು 2.5 ಕಿಮೀ ದೂರವಿದ್ದು ಎರಡು ಟರ್ಮಿನಲ್‌ ಸ್ಟೇಷನ್‌ಗಳ ಮೂಲಕ ಹಾದು ಹೋಗುತ್ತದೆ. ಆಗಲೇ ತಿಳಿಸಿದಂತೆ ಇದು ಸುಮಾರು ಸಮುದ್ದ ಮಟ್ಟಕ್ಕಿಂದ 4000 ಅಡಿಗಳಷ್ಟು ಮೇಲಿದ್ದು, ಇದರಿಂದ ಸ್ವಾಭಾವಿಕವಾಗಿಯೇ ಏನಾದರೂ ತಪ್ಪಾದರೆ ಪ್ರಾಣಾಪಾಯಗಳ ಸಾಧ್ಯತೆ ಹೆಚ್ಚಾಗಿರುತ್ತದೆ.

ಸರಿಯಾದ ಸಮಯಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಕ್ಕೆ ಬಂದಿದ್ದರಿಂದ ಸಂಭವಿಸಬಹುದಾದ ದೊಡ್ಡ ದುರಂತವೊಂದು ನಡೆಯದೇ ಹೋಗಿದ್ದು ಹಲವು ಮಂದಿಯ ಪ್ರಾಣ ಉಳಿದಿದೆ. ಇನ್ನು ಮಾಹಿತಿಗಳ ಪ್ರಕಾರ ರಕ್ಷನೆಗೆ ಒಳಗಾದವರಲ್ಲಿ ಮಧ್ಯ ವಯಸ್ಕರು, ವೃದ್ದರು, ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರೂ ಇದ್ದರು ಎಂದು ತಿಳಿದು ಬಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, July 8, 2023, 17:50 [IST]
English summary
75 trapped tourists rescued in high stakes cable car mission
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+