78 ರ ವಯಸ್ಸಲ್ಲಿ ಯುವಕರಿಗೆ ಸವಾಲ್... 70 ವರ್ಷ ಹಳೆಯ ಕಾರಿನಲ್ಲಿ ಅಜ್ಜನ ಅಡ್ವೆಂಚರ್ ನೋಡಿ!

ಹೊಸ ಕಾರುಗಳಲ್ಲಿ ಈಗಿನ ತಂತ್ರಜ್ಞಾನದೊಂದಿಗೆ ಎಲ್ಲಿಗೆ ಬೇಕಾದರೂ ಹೋಗುವ ಸೌಕರ್ಯಗಳನ್ನು ಕಾರು ಬ್ರಾಂಡ್‌ಗಳು ನೀಡುತ್ತಿವೆ. ಆದರೆ ಹಳೆಯ ಕಾರುಗಳಲ್ಲಿ ಯಾವುದೇ ಮುಂದುವರಿದ ತಂತ್ರಜ್ಞಾನವಿಲ್ಲದೆ ಆಫ್‌ರೋಡಿಂಗ್ ಅಥವಾ ಎತ್ತರದ ಪ್ರದೇಶಗಳಿಗೆ ಹೋಗುವುದು ಅಷ್ಟು ಸುಲಭವಲ್ಲ. ಆದರೆ ಇತ್ತೀಚಿನ ಪೀಳಿಗೆಗೆ ಸವಾಲ್ ಹಾಕುವಂತೆ 78 ರ ವೃದ್ದರೊಬ್ಬರು ಹಳೆಯ ಕಾರಿನಲ್ಲಿ ಸಾಹಸ ಮಾಡಿ ತೋರಿಸಿದ್ದಾರೆ. ಅಲ್ಲದೆ ತಮ್ಮ ಕಾರಿನ ಬಗ್ಗೆ ಹಲವಾರು ಕಥೆಗಳು ಮತ್ತು ನೆನಪುಗಳನ್ನು ಸಹ ಹಂಚಿಕೊಂಡಿದ್ದಾರೆ. ಅಷ್ಟಕ್ಕು ಈ ವೃದ್ದ ತಮ್ಮ ಹಳೆಯ ಕಾರಿನಲ್ಲಿ ಮಾಡಿದ ಸಾಹಸವಾದ್ರು ಏನು ಗೊತ್ತಾ?

70 ವರ್ಷ ಹಳೆಯ ಫಿಯೆಟ್ 500 ಸಿ ವಿಂಟೇಜ್ ಕಾರಿನ ಮಾಲೀಕರಾದ 78 ವರ್ಷದ ಅಮರ್ಜೀತ್ ಸಿಂಗ್ ಸೋಧಿ, ವಿಶ್ವದ ಅತಿ ಎತ್ತರದ ಮೋಟಾರು ಮಾರ್ಗಗಳಾದ ಉಮ್ಲಿಂಗ್ ಲಾ ಮತ್ತು ಖರ್ದುಂಗ್ ಲಾಗೆ ಭೆಟಿ ನೀಡಿ ವಾಪಸ್ ಆಗಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಆಧುನಿಕ ಕಾರುಗಳು ಈ ಜಾಗಗಳಿಗೆ ಸುಲಭವಾಗಿ ಹೋಗಿಬರಬಹದು. ಆದರೆ ವಿಂಟೇಜ್ ಕಾರುಗಳಲ್ಲಿ ಹೋಗುವುದು ಅಷ್ಟು ಸುಲಭವಲ್ಲ.

78-year-old-grandpa-adventure-in-fiat-500c

ಭಾರತದ 78 ವರ್ಷದ ಈ ಅಜ್ಜ ತನ್ನ 70 ವರ್ಷ ಹಳೆಯ ಫಿಯೆಟ್ 500 ಸಿ ಕಾರನ್ನು ಖರ್ದುಂಗ್ ಲಾವೆರೆಗೆ ಕೊಂಡೊಯ್ದು ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಖರ್ದುಂಗ್ ಲಾ ಒಂದು ಕಾಲದಲ್ಲಿ ವಿಶ್ವದ ಅತಿ ಎತ್ತರದ ಮೋಟಾರು ರಸ್ತೆಯಾಗಿದ್ದು, ಸೋಧಿ ಅವರು ಕಾರನ್ನು ಚಂಡೀಗಢದಿಂದ ಖರ್ದುಂಗ್ ಲಾಗೆ ಮತ್ತೆ ಅಲ್ಲಿಂದ ಚಂಡೀಗಢಕ್ಕೆ ಓಡಿಸಿಕೊಂಡು ಬಂದಿದ್ದಾರೆ. ಇದಕ್ಕಾಗಿ ಬರೋಬ್ಬರಿ 15 ದಿನಗಳು ಬೇಕಾಯಿತು ಎಂದು ಸೋಧಿ ಹೇಳಿಕೊಂಡಿದ್ದಾರೆ.

ಆಶ್ಚರ್ಯಕರವಾಗಿ ಸೋಧಿ ಅವರ ಕಾರು ಪಂಕ್ಚರ್ ಕೂಡ ಆಗಿಲ್ಲ. ತಮ್ಮ ಕಾರಿನ ಬಗ್ಗೆ ಸಂಪೂರ್ಣವಾಗಿ ಅರಿತಿದ್ದ ಕಾರಣ ಯಾವುದೇ ಸಮಸ್ಯೆ ಇದ್ದರೂ ಅವರೇ ಸರಿಪಡಿಸಿಕೊಳ್ಳುತ್ತಿದ್ದರು. ಪ್ರಮುಖ ಕೆಲಸದ ಅಗತ್ಯವಿದ್ದಾಗ ಮಾತ್ರ ಮೆಕ್ಯಾನಿಕ್ ಅವಶ್ಯಕತೆ ಇರುತಿತ್ತು. ಉಳಿದಂತೆ ಈ ಪ್ರವಾಸವನ್ನು ಪ್ರಾರಂಭಿಸುವ ಮೊದಲು, ಅವರು ತಮ್ಮ ಕಾರನ್ನು ಮೆಕ್ಯಾನಿಕ್ ಬಳಿ ಕೊಂಡೊಯ್ದು ಸರ್ವಿಸ್ ಮಾಡಿಸಿದ್ದರು.

78-year-old-grandpa-adventure-in-fiat-500c

ಈ ಪ್ರಯಾಣದಲ್ಲಿ ಅವರ ಕುಟುಂಬ ಸಹ ಇತ್ತು, ಸೋಧಿ ಅವರು ಫಿಯೆಟ್ 500ಸಿ ಕಾರಿನಲ್ಲಿ ಪ್ರಯಾಣಿಸಿದರೆ ಅವರ ಮಗ ಮತ್ತು ಪತ್ನಿ ಸೇರಿದಂತೆ ಅವರ ಕುಟುಂಬವು ಹೋಂಡಾ ಸಿಆರ್-ವಿಯಲ್ಲಿ ಪ್ರಯಾಣಿಸಿದ್ದರು ಎಂದು ಸೋಧಿ ತಿಳಿಸಿದ್ದಾರೆ. ತಮ್ಮ ಕಾರುಗಳನ್ನು ಇಂತಹ ಪರ್ವತ ರಸ್ತೆಗಳಲ್ಲಿ ಕೊಂಡೊಯ್ಯುತ್ತಿರುವುದು ಇದೇ ಮೊದಲೇನಲ್ಲ, ಇತರ ಐದು ಗಿರಿಧಾಮಗಳಿಗೆ ಕೊಂಡೊಯ್ದಿದ್ದರು. ಜೊತೆಗೆ ವಿಂಟೇಜ್ ಕಾರ್ ರ್ಯಾಲಿಯ ಭಾಗವಾಗಿ ರಾಜಸ್ಥಾನಕ್ಕೂ ಭೇಟಿ ನೀಡಿದ್ದರು.

ಕಾರಿನ ವಿಶೇಷೆತಗಳು: ಫಿಯೆಟ್ 500 ಸಿ ತನ್ನ ಮೊದಲ ಕಾರು, ಇದನ್ನು ದೆಹಲಿಯ ವೈದ್ಯರೊಬ್ಬರಿಂದ ಖರೀದಿಸಿರುವುದಾಗಿ ಸೋಧಿ ಹೇಳಿದ್ದಾರೆ. ಅವರು ಹಲವು ದಶಕಗಳಿಂದ ಈ ಕಾರನ್ನು ಹೊಂದಿದ್ದು, ಇದು 50 ವರ್ಷಗಳಿಗಿಂತ ಹಳೆಯದಾಗಿರುವುದರಿಂದ ಇದನ್ನು ವಿಂಟೇಜ್ ಕಾರು ಎಂದು ವರ್ಗೀಕರಿಸಲಾಗಿದೆ. ಈ ಕಾರಿನ ಟೈರ್‌ಗಳು ಟ್ಯೂಬ್‌ಲೆಸ್ ಅಲ್ಲ. ಕಳೆದ 15 ವರ್ಷಗಳಿಂದ ಯೊಕೊಹಾಮಾ ಟೈರ್‌ಗಳನ್ನು ಹಾಕಿಸುತ್ತಿದ್ದಾರೆ.

ಈ ಫಿಯೆಟ್ ಕಾರಿನಲ್ಲಿರುವ ಸಣ್ಣ 500-ಸಿಸಿ ಎಂಜಿನ್ ವಿಶ್ವಾಸಾರ್ಹವಾಗಿದ್ದು, ಪ್ರವಾಸದ ಸಮಯದಲ್ಲಿ ಎಂದೂ ಸಮಸ್ಯೆಯನ್ನು ಉಂಟುಮಾಡಿಲ್ಲ. ಎಂಜಿನ್ ಒಮ್ಮೆಯೂ ಅತಿಯಾಗಿ ಬಿಸಿಯಾಗಿಲ್ಲ, ಎತ್ತರದ ಪ್ರದೇಶಗಳಲ್ಲಿಯೂ ಸಹ ಅವರು ಯಾವುದೇ ಸಮಸ್ಯೆಗಳನ್ನು ಎದುರಿಸಲಿಲ್ಲ ಎಂದು ಸೋಧಿ ಹೇಳಿಕೊಂಡಿದ್ದಾರೆ. 78 ರ ವಯಸ್ಸಲ್ಲೂ ಯುವಕರಂತೆ ಸಾಹಸ ಮಾಡುತ್ತಿರುವ ಈ ಅಜ್ಜನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, December 31, 2024, 13:24 [IST]
English summary
78 year old grandpa adventure in fiat 500c
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+