ಅನರ್ಹವೆಂದು ಕಂಡುಬಂದಲ್ಲಿ ಸ್ಕ್ರ್ಯಾಪ್ ಆಗಲಿವೆ ರಾಜ್ಯದಲ್ಲಿನ 80 ಲಕ್ಷ ಖಾಸಗಿ ವಾಹನಗಳು

ದೇಶದಲ್ಲಿ ಇಂಧನ ಚಾಲಿತ ವಾಹನಗಳ ಹೆಚ್ಚಳದಿಂದ ಮಾಲಿನ್ಯ ಮಿತಿಮೀರಿದ್ದು, 15 ವರ್ಷಕ್ಕಿಂತ ಹಳೆಯ ವಾಹನಗಳ ಫಿಟ್‌ನೆಸ್ ಪರಿಶೀಲಿಸಿ ಸ್ಕ್ರ್ಯಾಪ್ ಮಾಡುವಂತೆ ಕೇಂದ್ರ ಸರ್ಕಾರ ಹೊಸ ಸ್ಕ್ರ್ಯಾಪೇಜ್ ನೀತಿಯನ್ನು ತಂದಿದೆ. ಅದರಂತೆ ಕರ್ನಾಟಕದಲ್ಲಿಯೂ ಸುಮಾರು 80 ಲಕ್ಷಕ್ಕೂ ಹೆಚ್ಚು ಹಳೆಯ ವಾಹನಗಳು ಈ ನೀತಿಯಡಿ ಸ್ಕ್ರ್ಯಾಪ್ ಆಗಲಿವೆ.

ಅನರ್ಹವೆಂದು ಕಂಡುಬಂದಲ್ಲಿ ಸ್ಕ್ರ್ಯಾಪ್ ಆಗಲಿವೆ ರಾಜ್ಯದಲ್ಲಿನ 80 ಲಕ್ಷ ಖಾಸಗಿ ವಾಹನಗಳು

ಕರ್ನಾಟಕದಲ್ಲಿನ 2.8 ಕೋಟಿ ನೋಂದಾಯಿತ ವಾಹನಗಳಲ್ಲಿ ಸುಮಾರು 80 ಲಕ್ಷಕ್ಕೂ ಹೆಚ್ಚು ವಾಹನಗಳು 15 ವರ್ಷಕ್ಕಿಂತ ಹಳೆಯದಾಗಿವೆ. ಇವುಗಳಿಂದ ಮಾಲಿನ್ಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದ್ದು, ಕರ್ನಾಟಕ ಸರ್ಕಾರವು ಅಂತಿಮವಾಗಿ ಆಗಸ್ಟ್ 2021 ರಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ವಾಹನ ಸ್ಕ್ರ್ಯಾಪೇಜ್ ನೀತಿಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ.

ಅನರ್ಹವೆಂದು ಕಂಡುಬಂದಲ್ಲಿ ಸ್ಕ್ರ್ಯಾಪ್ ಆಗಲಿವೆ ರಾಜ್ಯದಲ್ಲಿನ 80 ಲಕ್ಷ ಖಾಸಗಿ ವಾಹನಗಳು

ಸಾರಿಗೆ ಇಲಾಖೆಯ ಪ್ರಕಾರ ಬೆಂಗಳೂರು ಒಂದರಲ್ಲೇ 1 ಕೋಟಿ ವಾಹನಗಳಿದ್ದು, ಈ ವರ್ಷದ ಮಾರ್ಚ್ ವೇಳೆಗೆ 29 ಲಕ್ಷ ವಾಹನಗಳು 15 ವರ್ಷಗಳ ಮಿತಿಯನ್ನು ದಾಟಿವೆ. ಹೆಚ್ಚಿನ ಮಾಲಿನ್ಯಕಾರಕ 2-ಸ್ಟ್ರೋಕ್ ಆಟೋರಿಕ್ಷಾಗಳು ಇನ್ನೂ ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುತ್ತಿವೆ. ಇವು ತೀರಾ ಹಳೆಯ ವಾಹನಗಳಾಗಿದ್ದು, ಇವುಗಳಿಂದ ಹೊರಹೊಮ್ಮುವ ಕಾರ್ಬನ್ ಇತರ ಪ್ರಯಾಣಿಕರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

ಅನರ್ಹವೆಂದು ಕಂಡುಬಂದಲ್ಲಿ ಸ್ಕ್ರ್ಯಾಪ್ ಆಗಲಿವೆ ರಾಜ್ಯದಲ್ಲಿನ 80 ಲಕ್ಷ ಖಾಸಗಿ ವಾಹನಗಳು

ಹಾಗಾಗಿ ಕೇಂದ್ರದ ಸ್ಕ್ರ್ಯಾಪೇಜ್ ನೀತಿಯು ಹಳೆಯ ಮತ್ತು ಯೋಗ್ಯವಲ್ಲದ ವಾಹನಗಳನ್ನು ಹಂತಹಂತವಾಗಿ ನಿರ್ಮೂಲಿಸಲು ಮತ್ತು ವಾಹನದ ಸ್ಕ್ರ್ಯಾಪ್ ಅನ್ನು ಪರಿಸರ ಸ್ನೇಹಿ ರೀತಿಯಲ್ಲಿ ಮರುಬಳಕೆ ಮಾಡಲು ಯೋಜಿಸಿರುವುದಾಗಿ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಇಲಾಖೆಯು ಈ ನೀತಿಯನ್ನು ರಾಜ್ಯ ಸಚಿವ ಸಂಪುಟದ ಮುಂದೆ ಅನುಮೋದನೆಗಾಗಿ ತರಲಿದೆ.

ಅನರ್ಹವೆಂದು ಕಂಡುಬಂದಲ್ಲಿ ಸ್ಕ್ರ್ಯಾಪ್ ಆಗಲಿವೆ ರಾಜ್ಯದಲ್ಲಿನ 80 ಲಕ್ಷ ಖಾಸಗಿ ವಾಹನಗಳು

ಗುಜರಾತ್, ಬಿಹಾರ ಮತ್ತು ಅಸ್ಸಾಂ ಈ ನೀತಿಯನ್ನು ಈಗಾಗಲೇ ಜಾರಿಗೆ ತಂದಿವೆ. ಕೇಂದ್ರದ ನೀತಿಯು 20 ವರ್ಷಕ್ಕಿಂತ ಹಳೆಯ ಖಾಸಗಿ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ವಾಣಿಜ್ಯ ವಾಹನಗಳ ನೋಂದಣಿ ರದ್ದುಪಡಿಸಲು ಸೂಚಿಸಿದೆ. ಆದರೆ ಕರ್ನಾಟಕದ ನೀತಿಯು 15 ವರ್ಷಕ್ಕಿಂತ ಮೇಲ್ಪಟ್ಟ ಖಾಸಗಿ ವಾಹನಗಳನ್ನು ಪರಿಗಣಿಸಲಿದೆ ಎಂದು ಸಾರಿಗೆ ಆಯುಕ್ತ ಟಿಎಚ್‌ಎಂ ಕುಮಾರ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಅನರ್ಹವೆಂದು ಕಂಡುಬಂದಲ್ಲಿ ಸ್ಕ್ರ್ಯಾಪ್ ಆಗಲಿವೆ ರಾಜ್ಯದಲ್ಲಿನ 80 ಲಕ್ಷ ಖಾಸಗಿ ವಾಹನಗಳು

"ನಿಯಮಗಳನ್ನು ನಿಗದಿಪಡಿಸಿ ಮತ್ತು ನೀತಿಯನ್ನು ಜಾರಿಗೊಳಿಸುವುದು ಆಯಾ ರಾಜ್ಯಗಳಿಗೆ ಸಂಬಂಧಪಟ್ಟಿರುತ್ತದೆ. ಹಾಗಾಗಿ ಇಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಖಾಸಗಿ ವಾಹನಗಳನ್ನು ಸಹ ಸ್ಕ್ರ್ಯಾಪೇಜ್ ನೀತಿಗೆ ಒಳಪಡಿಸಲು ನಿರ್ಧರಿಸಲಾಗಿದೆ. ಒಮ್ಮೆ ನೀತಿಯನ್ನು ಕ್ಯಾಬಿನೆಟ್ ಮುಂದೆ ಇರಿಸಲಾಗುತ್ತದೆ, ನಂತರ ಹೊಸ ವಾಹನಗಳನ್ನು ಖರೀದಿಸುವ ವಾಹನ ಮಾಲೀಕರಿಗೆ ಮೋಟಾರು ವಾಹನ ತೆರಿಗೆ ಪ್ರೋತ್ಸಾಹದಂತಹ ವಿವರಗಳನ್ನು ನಾವು ಬಹಿರಂಗಪಡಿಸುತ್ತೇವೆ ಎಂದು ಹೇಳಿದರು.

ಅನರ್ಹವೆಂದು ಕಂಡುಬಂದಲ್ಲಿ ಸ್ಕ್ರ್ಯಾಪ್ ಆಗಲಿವೆ ರಾಜ್ಯದಲ್ಲಿನ 80 ಲಕ್ಷ ಖಾಸಗಿ ವಾಹನಗಳು

ಸಾರಿಗೆ ಅಧಿಕಾರಿಯೊಬ್ಬರ ಪ್ರಕಾರ, ಸ್ವಯಂಪ್ರೇರಣೆಯಿಂದ ತಮ್ಮ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ನೀಡುವ ಮಾಲೀಕರು ಸ್ಕ್ರ್ಯಾಪಿಂಗ್ ಪ್ರಮಾಣಪತ್ರವನ್ನು ಸಲ್ಲಿಸಿದ ನಂತರ ಹೊಸ ವಾಹನಗಳಿಗೆ ಮೋಟಾರು ವಾಹನ ತೆರಿಗೆಯಲ್ಲಿ ರಿಯಾಯಿತಿಯನ್ನು ಪಡೆಯುತ್ತಾರೆ. ಈ ಕ್ರಮವು ಅಯೋಗ್ಯ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಹಂತಹಂತವಾಗಿ ತೆಗೆದುಹಾಕುವ ಮೂಲಕ ವಾಹನ ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅನರ್ಹವೆಂದು ಕಂಡುಬಂದಲ್ಲಿ ಸ್ಕ್ರ್ಯಾಪ್ ಆಗಲಿವೆ ರಾಜ್ಯದಲ್ಲಿನ 80 ಲಕ್ಷ ಖಾಸಗಿ ವಾಹನಗಳು

ರಾಜ್ಯಾದ್ಯಂತ ವಾಹನ-ಸ್ಕ್ರಾಪಿಂಗ್ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲು ಇಲಾಖೆಯು ಭೂಮಿಯನ್ನು ಗುರುತಿಸುತ್ತದೆ. ಏಕೆಂದರೆ ಮುಂದಿನ ದಿನಗಳಲ್ಲಿ ಸ್ಕ್ರ್ಯಾಪೇಜ್ ನೀತಿಗೆ ಒಳಪಡುವ ವಾಹನಗಳ ಸಂಖ್ಯೆ ಲಕ್ಷಗಳಲ್ಲಿ ಇರುವುದರಿಂದ ಇದಕ್ಕಾಗಿ ಭಾರೀ ಸ್ಥಳದ ವ್ಯವಸ್ಥೆಯನ್ನು ಹಾಗೂ ಬೇಕಾದ ಯಂತ್ರೋಪಕರಣಗಳ ಅಗತ್ಯವಿದೆ.

ಅನರ್ಹವೆಂದು ಕಂಡುಬಂದಲ್ಲಿ ಸ್ಕ್ರ್ಯಾಪ್ ಆಗಲಿವೆ ರಾಜ್ಯದಲ್ಲಿನ 80 ಲಕ್ಷ ಖಾಸಗಿ ವಾಹನಗಳು

ಸ್ಕ್ರ್ಯಾಪೇಜ್ ನೀತಿಯು ಉದ್ಯೋಗಗಳನ್ನು ಸೃಷ್ಟಿಸಲಿದೆ

ನಿಯಮಗಳ ಪ್ರಕಾರ ನೋಂದಣಿ ಪ್ರಮಾಣಪತ್ರವು ವಾಣಿಜ್ಯ ವಾಹನಕ್ಕೆ 10 ವರ್ಷಗಳವರೆಗೆ ಮತ್ತು ಪ್ರಯಾಣಿಕ ವಾಹನಗಳಿಗೆ 15 ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಈ ಅವಧಿ ಮುಗಿದ ನಂತರ, ವಾಹನಗಳು ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕು. ಎಂಟು ವರ್ಷಗಳನ್ನು ಪೂರೈಸಿದ ನಂತರ, ಪ್ರತಿ ವರ್ಷ ವಾಹನದ ಫಿಟ್ನೆಸ್ ಅನ್ನು ಪರಿಶೀಲಿಸಬೇಕು.

ಅನರ್ಹವೆಂದು ಕಂಡುಬಂದಲ್ಲಿ ಸ್ಕ್ರ್ಯಾಪ್ ಆಗಲಿವೆ ರಾಜ್ಯದಲ್ಲಿನ 80 ಲಕ್ಷ ಖಾಸಗಿ ವಾಹನಗಳು

ಮೊದಲ ಎಂಟು ವರ್ಷಗಳಲ್ಲಿ, ವಾಹನವು ಪ್ರತಿ ಎರಡು ವರ್ಷಗಳಿಗೊಮ್ಮೆ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣವಾಗಿರಬೇಕು. 20 ವರ್ಷಕ್ಕಿಂತ ಹಳೆಯದಾದ ಖಾಸಗಿ ವಾಹನಗಳು ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲವಾದರೆ ಅಥವಾ ಅವುಗಳ ನೋಂದಣಿ ಪ್ರಮಾಣಪತ್ರವನ್ನು ನವೀಕರಿಸದಿದ್ದರೆ ಜೂನ್ 1, 2024 ರಿಂದ ನೋಂದಣಿ ರದ್ದುಗೊಳಿಸಲಾಗುತ್ತದೆ.

ಅನರ್ಹವೆಂದು ಕಂಡುಬಂದಲ್ಲಿ ಸ್ಕ್ರ್ಯಾಪ್ ಆಗಲಿವೆ ರಾಜ್ಯದಲ್ಲಿನ 80 ಲಕ್ಷ ಖಾಸಗಿ ವಾಹನಗಳು

ಹಾಗೆಯೇ 15 ವರ್ಷಕ್ಕಿಂತ ಹಳೆಯದಾದ ಭಾರೀ ವಾಣಿಜ್ಯ ವಾಹನಗಳ ನೋಂದಣಿಯನ್ನು ಏಪ್ರಿಲ್ 1, 2023 ರಿಂದ ರದ್ದುಗೊಳಿಸಲಾಗುವುದು. ಇದಕ್ಕಾಗಿ ಧೀರ್ಘ ಸಮಯ ಬೇಕಾಗಿರುವುದರಿಂದ PPP ಮಾದರಿಯಲ್ಲಿ ವಾಹನ-ಸ್ಕ್ರಾಪಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಖಾಸಗಿ ಕಂಪನಿಗಳ ಸಹಕಾರ ಪಡಿಯಲು ಕೇಂದ್ರವು ರಾಜ್ಯಗಳನ್ನು ಪ್ರೋತ್ಸಾಹಿಸುತ್ತಿದೆ.

ಅನರ್ಹವೆಂದು ಕಂಡುಬಂದಲ್ಲಿ ಸ್ಕ್ರ್ಯಾಪ್ ಆಗಲಿವೆ ರಾಜ್ಯದಲ್ಲಿನ 80 ಲಕ್ಷ ಖಾಸಗಿ ವಾಹನಗಳು

ಈ ಮೂಲಕ ಸ್ಕ್ರ್ಯಾಪೇಜ್ ನೀತಿಯು ಆಟೋಮೊಬೈಲ್ ಉದ್ಯಮದಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. "ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣವಾದ ಹಳೆಯ ವಾಹನಗಳಿಗೆ ರಸ್ತೆ ತೆರಿಗೆಯ 10-15% ಗ್ರೀನ್ ಸೆಸ್ ವಿಧಿಸಬಹುದು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Most Read Articles

Kannada
English summary
80 lakh vehicles in the state will be scrapped if found unfit
Story first published: Wednesday, September 21, 2022, 11:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X