80ನೇ ವಯಸ್ಸಿನಲ್ಲೂ ಹೋಂಡಾ ಗೋಲ್ಡ್ ವಿಂಗ್ ಬೈಕ್ ಇವರಿಗೆ ಅಚ್ಚು ಮೆಚ್ಚು

By Manoj Bk

ಈ ಹಿಂದೆ ಲಕ್ಷಾಂತರ ಕಿ.ಮೀ ಚಲಿಸಿದ್ದ ಟೊಯೊಟಾ ಕಾರುಗಳ ಬಗ್ಗೆ ವರದಿಯಾಗಿತ್ತು. ಈ ಬಾರಿ ವಿಭಿನ್ನವಾದ ವ್ಯಕ್ತಿಯೊಬ್ಬರ ಬಗ್ಗೆ ವರದಿಯಾಗಿದೆ. ಈ ಘಟನೆಯಲ್ಲಿ 80 ವರ್ಷದ ವ್ಯಕ್ತಿಯೊಬ್ಬರು ತಮ್ಮ ಹೋಂಡಾ ಗೋಲ್ಡ್ ವಿಂಗ್ ಬೈಕ್ ಮೂಲಕ 10 ಲಕ್ಷಕ್ಕೂ ಹೆಚ್ಚು ಕಿ.ಮೀ ಸಂಚರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಯೂಟ್ಯೂಬ್ ಚಾನೆಲ್'ನಲ್ಲಿ ಅಪ್ ಲೋಡ್ ಮಾಡಲಾಗಿದೆ.

80ನೇ ವಯಸ್ಸಿನಲ್ಲೂ ಹೋಂಡಾ ಗೋಲ್ಡ್ ವಿಂಗ್ ಬೈಕ್ ಇವರಿಗೆ ಅಚ್ಚು ಮೆಚ್ಚು

ಈ ವೀಡಿಯೊವನ್ನು ಕೆಂಟನ್ ಕ್ಲೂಸ್ ಎಂಬುವವರು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಬೈಕಿನ ಮಾಲೀಕರನ್ನು ಹಾಗೂ ಹೋಂಡಾ ಗೋಲ್ಡ್ ವಿಂಗ್ ಬೈಕ್ ಅನ್ನು ಕಾಣಬಹುದು. ಬೈಕಿನ ಸ್ಪೀಡೋ ಮೀಟರ್ ತೋರಿಸುವ ಮೂಲಕ ವೀಡಿಯೊ ಆರಂಭವಾಗುತ್ತದೆ. ಈ ಸ್ಪೀಡೋ ಮೀಟರ್, ಬೈಕ್ 6,58,258 ಮೈಲಿ ಚಲಿಸಿದೆ ಎಂಬುದನ್ನು ಪ್ರದರ್ಶಿಸುತ್ತದೆ.

80ನೇ ವಯಸ್ಸಿನಲ್ಲೂ ಹೋಂಡಾ ಗೋಲ್ಡ್ ವಿಂಗ್ ಬೈಕ್ ಇವರಿಗೆ ಅಚ್ಚು ಮೆಚ್ಚು

ಅಂದರೆ ಈ ಬೈಕ್ 10,59,363 ಕಿ.ಮೀ ಚಲಿಸಿರುವುದನ್ನು ಕಾಣಬಹುದು. ಅಂದ ಹಾಗೆ ಈ ಗೋಲ್ಡ್ ವಿಂಗ್‌ನ ಮಾಲೀಕರು ಫಿಲ್ ಸ್ಟೈನರ್. ಅವರಿಗೆ ಈಗ 80 ವರ್ಷ ವಯಸ್ಸು. ಇಷ್ಟು ದೂರ ಚಲಿಸಿರುವ ಗೋಲ್ಡ್ ವಿಂಗ್ ಬೈಕ್ ಇನ್ನೂ ಮೂಲ ಎಂಜಿನ್ ಅನ್ನು ಹೊಂದಿದೆ. ತಮ್ಮ ಬೈಕುಗಳು ಮಿಲಿಯನ್ ಮೈಲುಗಳಷ್ಟು ಕ್ರಮಿಸುವುದಾಗಿ ಹೇಳಿಕೊಳ್ಳುವ ಅನೇಕ ಜನರಿದ್ದಾರೆ.

80ನೇ ವಯಸ್ಸಿನಲ್ಲೂ ಹೋಂಡಾ ಗೋಲ್ಡ್ ವಿಂಗ್ ಬೈಕ್ ಇವರಿಗೆ ಅಚ್ಚು ಮೆಚ್ಚು

ಆದರೆ ಅವರ ಬೈಕುಗಳಲ್ಲಿ ಮೂರನೇ ಅಥವಾ ನಾಲ್ಕನೇ ಎಂಜಿನ್‌ ಅಳವಡಿಸಲಾಗಿರುತ್ತದೆ. ಆದರೆ ಫಿಲ್ ಇನ್ನೂ ಕಾರ್ಖಾನೆಯಿಂದ ಬಂದ ಮೂಲ ಎಂಜಿನ್‌ ಅನ್ನು ಚಾಲನೆ ಮಾಡುತ್ತಿದ್ದಾರೆ. ಫಿಲ್ ತಮ್ಮ ಬೈಕ್ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾನೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ವೀಡಿಯೊವನ್ನು ಚಿತ್ರೀಕರಿಸಿದಾಗ ಫಿಲ್ ಓಹಿಯೋದಲ್ಲಿ ನೆಲೆಗೊಂಡಿರುವ ವರ್ಕ್ ಶಾಪ್ ನಲ್ಲಿ ಬೈಕಿನ ಕ್ಲಚ್ ಬದಲಾಯಿಸುತ್ತಿದ್ದರು.

80ನೇ ವಯಸ್ಸಿನಲ್ಲೂ ಹೋಂಡಾ ಗೋಲ್ಡ್ ವಿಂಗ್ ಬೈಕ್ ಇವರಿಗೆ ಅಚ್ಚು ಮೆಚ್ಚು

ಅವರು 2014ರ ಡಿಸೆಂಬರ್ 17ರಂದು ಈ ಗೋಲ್ಡ್ ವಿಂಗ್ ಬೈಕ್ ಅನ್ನು ಖರೀದಿಸಿದರು ಎಂದು ಅವರು ಹೇಳುತ್ತಾರೆ. ಈ ಬೈಕ್ ಈಗ 7 ವರ್ಷ ಹಳೆಯದು. ಮೊದಲ ವರ್ಷ ಫಿಲ್ ಈ ಬೈಕಿನಲ್ಲಿ 1,00,000 ಮೈಲಿ ಪ್ರಯಾಣಿಸಿದ್ದರು. ಅಂದರೆ ಸುಮಾರು 1.60 ಲಕ್ಷ ಕಿ.ಮೀ ಸಂಚರಿಸಿದ್ದರು. ಎರಡನೇ, ಮೂರನೇ, ನಾಲ್ಕನೇ ಹಾಗೂ ಐದನೇ ವರ್ಷಗಳಲ್ಲಿ ಅವರು ತಲಾ 1,00,000 ಮೈಲುಗಳಷ್ಟು ಪ್ರಯಾಣಿಸಿದರು.

80ನೇ ವಯಸ್ಸಿನಲ್ಲೂ ಹೋಂಡಾ ಗೋಲ್ಡ್ ವಿಂಗ್ ಬೈಕ್ ಇವರಿಗೆ ಅಚ್ಚು ಮೆಚ್ಚು

5 ವರ್ಷಗಳ ಕೊನೆಗೆ ಅವರು 5,00,000 ಮೈಲಿ ಅಂದರೆ 8.04 ಲಕ್ಷ ಕಿ.ಮೀ ಪ್ರಯಾಣಿಸಿದ್ದರು. ಆರನೇ ವರ್ಷ ಅವರು 85,000 ಮೈಲುಗಳನ್ನು ಅಂದರೆ 1.36 ಲಕ್ಷ ಕಿ.ಮೀ ಪ್ರಯಾಣಿಸಿದ್ದರು. ಫಿಲ್ ಅವರು ಈ ಗೋಲ್ಡ್ ವಿಂಗ್‌ ಬೈಕಿನಲ್ಲಿ 7,00,000 ಮೈಲಿ ಪೂರ್ಣಗೊಳಿಸಲು ಬಯಸಿದ್ದಾರೆ. ಏಕೆಂದರೆ ಈ ಬೈಕ್ ಇನ್ನೂ ವಾರಂಟಿಯಲ್ಲಿದೆ. ನಂತರ ಅವರು ಹೊಸ ಗೋಲ್ಡ್ ವಿಂಗ್ ಬೈಕ್ ಅನ್ನು ಖರೀದಿಸಲು ಬಯಸಿದ್ದಾರೆ.

80ನೇ ವಯಸ್ಸಿನಲ್ಲೂ ಹೋಂಡಾ ಗೋಲ್ಡ್ ವಿಂಗ್ ಬೈಕ್ ಇವರಿಗೆ ಅಚ್ಚು ಮೆಚ್ಚು

ಈಗ ಈ ಬೈಕ್ 6 ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಮಾರಾಟವಾಗುತ್ತಿದೆ. 2014 ಗೋಲ್ಡ್ ವಿಂಗ್ 5 ಸ್ಪೀಡ್ ಗೇರ್‌ಬಾಕ್ಸ್‌ ಹೊಂದಿದೆ. ಸ್ವತಃ ಗೇರ್ ಬದಲಾಯಿಸಲು ಇಷ್ಟಪಡುವ ಅವರು ಕೆಲವು ಸಮಸ್ಯೆಗಳಿವೆ ಎಂಬ ಕಾರಣಕ್ಕೆ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ನಿಂದ ದೂರವಿರಲು ಬಯಸಿದ್ದಾರೆ. ಆದ್ದರಿಂದ, ಅವರು ಹೊಸ 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ಬೈಕ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.

80ನೇ ವಯಸ್ಸಿನಲ್ಲೂ ಹೋಂಡಾ ಗೋಲ್ಡ್ ವಿಂಗ್ ಬೈಕ್ ಇವರಿಗೆ ಅಚ್ಚು ಮೆಚ್ಚು

ಈ ಬೈಕಿನಲ್ಲಿರುವ ಕ್ಲಚ್ ಹೋಂಡಾ ಕಂಪನಿಯ ವಾರಂಟಿಗೆ ಸೇರಿಲ್ಲ. ಈ ಕಾರಣಕ್ಕೆ ಅವರು ಬೈಕ್ ಅನ್ನು ವರ್ಕ್ ಶಾಪ್ ನಲ್ಲಿ ರಿಪೇರಿ ಮಾಡಿಸುತ್ತಿದ್ದಾರೆ. ಈ ಬೈಕಿನಲ್ಲಿರುವ ಫ್ಯೂಯಲ್ ಪಂಪ್ ಸೋರಿಕೆಯಾಗಿದ್ದು ಅದನ್ನು ಸಹ ಬದಲಾಯಿಸಬೇಕಾಗಿದೆ. ಇದನ್ನು ಎರಡನೇ ಬಾರಿ ಬದಲಿಸಲಾಗುತ್ತಿದೆ. ಇನ್ನು ಅವರು ಪ್ರತಿ ವರ್ಷ ಆ್ಯಂಟಿ ಫ್ರೀಜ್ ಅನ್ನು ಬದಲಾಯಿಸುತ್ತಾರೆ.

ಜೊತೆಗೆ ಪ್ರತಿ ವರ್ಷವೂ ಬೈಕಿನ ವಾಲ್ವ್ ಗಳನ್ನು ಪರಿಶೀಲಿಸುತ್ತಾರೆ. ಪ್ರತಿ 1,00,000 ಮೈಲುಗಳ ನಂತರ ಅವರು ಈ ಬೈಕಿನಲ್ಲಿರುವ ಸ್ಪಾರ್ಕ್ ಪ್ಲಗ್‌ ಹಾಗೂ ಏರ್ ಫಿಲ್ಟರ್ ಗಳನ್ನು ಬದಲಾಯಿಸುತ್ತಿದ್ದಾರೆ. ಅಂದ ಹಾಗೆ ಫಿಲ್ ಮತ್ತೊಂದು ಗೋಲ್ಡ್ ವಿಂಗ್ ಬೈಕ್ ಅನ್ನು ಹೊಂದಿದ್ದಾರೆ. ಈ ಬೈಕ್ 2002ರ ಮಾದರಿಯಾಗಿದೆ. ಈ ಬೈಕ್ 5,52,063 ಮೈಲಿ ಅಂದರೆ 8.88 ಲಕ್ಷ ಕಿ.ಮೀ ಕ್ರಮಿಸಿದೆ.

80ನೇ ವಯಸ್ಸಿನಲ್ಲೂ ಹೋಂಡಾ ಗೋಲ್ಡ್ ವಿಂಗ್ ಬೈಕ್ ಇವರಿಗೆ ಅಚ್ಚು ಮೆಚ್ಚು

ಅವರು 2014 ರಲ್ಲಿ ಈಗ ಇರುವ ಗೋಲ್ಡ್ ವಿಂಗ್ ಬೈಕ್ ಅನ್ನು ಖರೀದಿಸಿದರು. ಎಂಟು ವರ್ಷಗಳ ನಂತರವೂ ಅವರು ಈ ಬೈಕ್ ಅನ್ನು ಹೊಸತರಂತೆ ನೋಡಿಕೊಳ್ಳುತ್ತಿದ್ದಾರೆ. ಕಾರ್ಖಾನೆಯಿಂದ ಬಂದ ಅದರ ಮೂಲ ಎಂಜಿನ್‌ನಲ್ಲಿಯೇ ಈ ಬೈಕ್ ಚಾಲನೆಯಲ್ಲಿರುವುದು ಇದಕ್ಕೆ ಸಾಕ್ಷಿಯಾಗಿದೆ. ಫಿಲ್ ಅವರು ತಮ್ಮ ಗ್ಯಾರೇಜ್‌ನಲ್ಲಿ ಎರಡು ಬೈಕುಗಳನ್ನು ಹೊಂದಲು ಇಷ್ಟಪಡುತ್ತಾರೆ.

80ನೇ ವಯಸ್ಸಿನಲ್ಲೂ ಹೋಂಡಾ ಗೋಲ್ಡ್ ವಿಂಗ್ ಬೈಕ್ ಇವರಿಗೆ ಅಚ್ಚು ಮೆಚ್ಚು

ಆಸ್ಟ್ರಿಯಾದ ವಿಯೆನ್ನಾ ಮೂಲದವರಾದ ಒಟ್ಟೊಕಾರ್ ಜೆ ಎಂಬುವವರು ಕಳೆದ 50 ವರ್ಷಗಳಿಂದ ಪೋರ್ಷೆ ಕಾರುಗಳನ್ನು ಖರೀದಿಸಿ ಚಾಲನೆ ಮಾಡುತ್ತಿದ್ದಾರೆ. ಅವರಿಗೂ ಸಹ 80 ವರ್ಷ ವಯಸ್ಸು. ಇತ್ತೀಚಿಗೆ ಅವರು ತಮ್ಮ 80ನೇ ಪೋರ್ಷೆ ಕಾರನ್ನು ಖರೀದಿಸಿದ್ದಾರೆ. ಅವರ ಮನೆಯಲ್ಲಿರುವ ಕಾರು ಗ್ಯಾರೇಜ್'ನಲ್ಲಿ ಪೋರ್ಷೆ ಕಂಪನಿಯ ಕಾರುಗಳೇ ತುಂಬಿವೆ. ಪೋರ್ಷೆ ಕಾರು ಅಭಿಮಾನಿಗಳ ಪಟ್ಟಿಯಲ್ಲಿ ಅವರಿಗೆ ಖಂಡಿತವಾಗಿಯೂ ವಿಶೇಷವಾದ ಸ್ಥಾನ ಸಿಗುತ್ತದೆ.

80ನೇ ವಯಸ್ಸಿನಲ್ಲೂ ಹೋಂಡಾ ಗೋಲ್ಡ್ ವಿಂಗ್ ಬೈಕ್ ಇವರಿಗೆ ಅಚ್ಚು ಮೆಚ್ಚು

ಪೋರ್ಷೆ ಕಾರುಗಳನ್ನು ಪಾರ್ಕ್ ಮಾಡುವುದಕ್ಕಾಗಿಯೇ ಅವರು ಪ್ರತ್ಯೇಕ ಕಟ್ಟಡವನ್ನು ನಿರ್ಮಿಸಿದ್ದಾರೆ. 80ನೇ ವಯಸ್ಸಿನಲ್ಲಿ ಹಲವರು ಕಾರುಗಳ ಜೊತೆಗೆನ ಹಳೆಯ ನೆನಪುಗಳನ್ನು ಮೆಲುಕು ಹಾಕಿದರೆ, ಒಟ್ಟೊಕಾರ್ ಜೆ ರವರು ಮಾತ್ರ ಪೋರ್ಷೆ ಕಾರುಗಳನ್ನು ಖರೀದಿಸಿ ಚಾಲನೆ ಮಾಡುತ್ತಿದ್ದಾರೆ.

ಚಿತ್ರ ಕೃಪೆ: ವಿಂಗ್ ವರ್ಲ್ಡ್ ಮ್ಯಾಗ್

Most Read Articles

Kannada
English summary
80 year old man covers 10 lakh kms on honda goldwing superbike details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X