18ರ ಹರೆಯದ ಯುವಕರೂ ನಾಚುವಂತೆ ಬೈಕ್ ಸವಾರಿ ಮಾಡಿದ 86ರ ಹರೆಯದ ಯುವಕ..!

ಈ ಶೀರ್ಷಿಕೆಯನ್ನು ನೋಡಿದ ನಂತರ ಹಲವರು ಗೊಂದಲಕ್ಕೊಳಗಾಗಬಹುದು. 86 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು 18 ವರ್ಷದ ಯುವಕರೂ ನಾಚುವಂತೆ ಬೈಕ್ ಚಾಲನೆ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಅವರನ್ನು ಯುವಕರು ಎಂದು ಕರೆಯಲಾಗಿದೆ.

18ರ ಹರೆಯದ ಯುವಕರೂ ನಾಚುವಂತೆ ಬೈಕ್ ಸವಾರಿ ಮಾಡಿದ 86ರ ಹರೆಯದ ಯುವಕ..!

ಈ ಸಾಹಸಗಳನ್ನು ಮಾಡುತ್ತಿರುವವರು ವಿಶ್ವ ಖ್ಯಾತ ರೇಸರ್, ಸ್ಯಾಮಿ ಮಿಲ್ಲರ್ ಎಂದೇ ಖ್ಯಾತರಾಗಿರುವ ಸ್ಯಾಮುಯಲ್ ಹ್ಯಾಮಿಲ್ಟನ್ ಮಿಲ್ಲರ್. ಉತ್ತರ ಐರ್ಲೆಂಡ್‌ನ ಮೂಲದವರಾದ ಇವರು ವಿವಿಧ ಮೋಟಾರ್‌ಸೈಕಲ್ ರೇಸ್‌ಗಳಲ್ಲಿ ಭಾಗವಹಿಸಿ ಗೆದ್ದಿದ್ದಾರೆ. 1955ರಿಂದ 1958ರವರೆಗೆ ಇವರ ಖ್ಯಾತಿ ಉತ್ತುಂಗಕ್ಕೇರಿತ್ತು.

18ರ ಹರೆಯದ ಯುವಕರೂ ನಾಚುವಂತೆ ಬೈಕ್ ಸವಾರಿ ಮಾಡಿದ 86ರ ಹರೆಯದ ಯುವಕ..!

ಈ ಇಳಿ ವಯಸ್ಸಿನಲ್ಲಿಯೂ ಸ್ಯಾಮಿ ಮಿಲ್ಲರ್‌ರವರು ಮೋಟರ್‌ಸೈಕಲ್‌ಗಳ ಬಗ್ಗೆ ಉತ್ಸಾಹವನ್ನು ಹೊಂದಿದ್ದಾರೆ. ಸ್ಯಾಮಿ ಮಿಲ್ಲರ್ ಮೋಟರ್‌ಸೈಕಲ್ ಮ್ಯೂಸಿಯಂ ಎಂಬ ಯೂಟ್ಯೂಬ್ ಚಾನೆಲ್ ಸ್ಯಾಮಿರವರು ಬೈಕ್‌ನಲ್ಲಿ ಸಾಹಸ ಮಾಡುತ್ತಿರುವ ವೀಡಿಯೊವನ್ನು ಬಿಡುಗಡೆಗೊಳಿಸಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

18ರ ಹರೆಯದ ಯುವಕರೂ ನಾಚುವಂತೆ ಬೈಕ್ ಸವಾರಿ ಮಾಡಿದ 86ರ ಹರೆಯದ ಯುವಕ..!

ಈ ವೀಡಿಯೊದಲ್ಲಿ 86 ವರ್ಷದ ಸ್ಯಾಮಿ ಮಿಲ್ಲರ್‌ರವರು ಬಂಡೆಗಳು ಹಾಗೂ ಕಲ್ಲುಗಳ ಮೇಲೆ ಹೆಚ್ಚು ಪವರ್ ಹೊಂದಿರುವ ಪಿಎಸ್ಎ ಸಿ15 ಬೈಕ್ ಚಾಲನೆ ಮಾಡುವುದನ್ನು ಕಾಣಬಹುದು. ಈ ವೀಡಿಯೊ ಕೇವಲ ಒಂದು ಉದಾಹರಣೆ ಮಾತ್ರ ಎಂದು ಅವರು ಹೇಳಿದ್ದಾರೆ. ಈ ರೀತಿಯ ಅನೇಕ ಸಾಹಸಗಳಲ್ಲಿ ಹಿಂದೆ ಪಾಲ್ಗೊಂಡಿದ್ದಾಗಿ ಅವರು ಹೇಳಿದ್ದಾರೆ.

18ರ ಹರೆಯದ ಯುವಕರೂ ನಾಚುವಂತೆ ಬೈಕ್ ಸವಾರಿ ಮಾಡಿದ 86ರ ಹರೆಯದ ಯುವಕ..!

ಸ್ಯಾಮಿ ಮಿಲ್ಲರ್‌ರವರ ಸ್ನೇಹಿತರು ಈ ಬಗ್ಗೆ ಮಾತನಾಡಿ, ಮಿಲ್ಲರ್‌ರವರು ಕೆಲವೊಮ್ಮೆ ಇದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಮೋಟರ್ ಸೈಕಲ್‌ಗಳೊಂದಿಗೆ ನಗರದಾದ್ಯಂತ ಏಕಾಂಗಿಯಾಗಿ ಸುತ್ತಾಡುತ್ತಾರೆ ಎಂದು ಹೇಳಿದ್ದಾರೆ. 18 ವರ್ಷ ವಯಸ್ಸಿನವರು ಸಹ ನಾಚುವಂತೆ ಸುತ್ತಾಡುತ್ತಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

18ರ ಹರೆಯದ ಯುವಕರೂ ನಾಚುವಂತೆ ಬೈಕ್ ಸವಾರಿ ಮಾಡಿದ 86ರ ಹರೆಯದ ಯುವಕ..!

ಈಗ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿರುವುದು ಕೇವಲ ಒಂದು ಚಿಕ್ಕ ತುಣುಕು ಎಂದು ಅವರು ಹೇಳಿದ್ದಾರೆ. ಸ್ಯಾಮಿ ಮಿಲ್ಲರ್‌ರವರು ಟ್ರೇಲ್ಸ್ ರೈಡಿಂಗ್‌ನಲ್ಲಿ ಜನಪ್ರಿಯರಾಗಿದ್ದಾರೆ. ಈ ರೈಡಿಂಗ್‌ನಲ್ಲಿ ಅವರು 1,300ಕ್ಕೂ ಪಂದ್ಯಗಳನ್ನು ಗೆದ್ದಿದ್ದಾರೆ. ಅವರನ್ನು ನಿಪುಣ ರೋಡ್ ರೇಸರ್ ಎಂದೂ ಸಹ ಕರೆಯಲಾಗುತ್ತದೆ.

18ರ ಹರೆಯದ ಯುವಕರೂ ನಾಚುವಂತೆ ಬೈಕ್ ಸವಾರಿ ಮಾಡಿದ 86ರ ಹರೆಯದ ಯುವಕ..!

ಮುಖ್ಯವಾಗಿ ನಾರ್ಥ್ ವೆಸ್ಟ್ 200 ಹಾಗೂ ಐಲ್ ಆಫ್ ಮ್ಯಾನ್ ಡಿಟಿ ಏರಿಯಲ್‌ನಲ್ಲಿ ಅವರು ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ. ಬೈಕ್ ರೇಸಿಂಗ್‌ನಲ್ಲಿ ಮಾತ್ರವಲ್ಲದೆ ಶೆರ್ಪಾ ಟಿ ವಾಹನದ ತಯಾರಿಕೆಯಲ್ಲೂ ಪ್ರಮುಖ ಪಾತ್ರವಹಿಸಿದ್ದಾರೆ. ರಾಲಿ ರೇಸಿಂಗ್‌ಗಳಿಗಾಗಿ ಈ ಮೋಟರ್‌ಸೈಕಲ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗುತ್ತದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸ್ಯಾಮಿ ಮಿಲ್ಲರ್ ಮೋಟರ್‌ಸೈಕಲ್ ಮ್ಯೂಸಿಯಂ, ಯುವಕರಿಗೆ ಸ್ಫೂರ್ತಿ ನೀಡಲು ಈ ವೀಡಿಯೊವನ್ನು ಅಪ್‌ಲೋಡ್ ಮಾಡಿದೆ. ವೀಡಿಯೊದಲ್ಲಿ ಮಾತನಾಡಿರುವ ಸ್ಯಾಮಿ ಮಿಲ್ಲರ್‌ರವರು ಪ್ರತಿ ದಿನ ಹತ್ತು ನಿಮಿಷ ಚಾಲನೆ ಮಾಡಿ ಫಿಟ್ ಆಗಲು ಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

18ರ ಹರೆಯದ ಯುವಕರೂ ನಾಚುವಂತೆ ಬೈಕ್ ಸವಾರಿ ಮಾಡಿದ 86ರ ಹರೆಯದ ಯುವಕ..!

ಅವರ ಮಾತುಗಳು ಹಾಗೂ ಕಾರ್ಯಗಳು ಯುವಜನರಿಗೆ ಸ್ಫೂರ್ತಿ ನೀಡುತ್ತವೆ. ಒಂದು ನಿರ್ದಿಷ್ಟ ವಯಸ್ಸಿನ ನಂತರ ಎಲ್ಲ ಮುಗಿಯಿತು ಎಂದು ಹಲವರು ಭಾವಿಸುತ್ತಾರೆ. ಆದರೆ ಸ್ಯಾಮಿ ಮಿಲ್ಲರ್‌ರವರು ಎಲ್ಲರಿಗೂ ಸ್ಪೂರ್ತಿ ನೀಡುತ್ತಾರೆ. ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.

ಚಿತ್ರಕೃಪೆ: ಸ್ಯಾಮಿ ಮಿಲ್ಲರ್ ಮೋಟಾರ್‌ಸೈಕಲ್ ಮ್ಯೂಸಿಯಂ / ಯೂಟ್ಯೂಬ್

Article Published On: Friday, April 24, 2020, 15:38 [IST]
English summary
86 year old man rides bike like a 18 year old. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+