Innova: ಇನ್ನೋವಾ ಗತ್ತು... 9 ವರ್ಷ ಹಳೆಯ ಕಾರಿಗೆ ಮರುಜೀವ... ಮದಗಜದಂತೆ ಮಿಂಚಿದ MPV!
ಕಾರುಗಳನ್ನು ಮಾಡಿಫೈಗೊಳಿಸುವುದು ಒಂದು ಕಲೆ, ಸಾಮಾನ್ಯ ಕಾರುಗಳಿಗೆ ಆಕರ್ಷಕ ಲುಕ್ ನೀಡಿ ರಸ್ತೆಯಲ್ಲಿ ಪ್ರತಿಯೊಬ್ಬರ ಗಮನ ಸೆಳೆಯುವಂತೆ ಮಾಡುವುದು ಅಷ್ಟು ಸುಲಭವಲ್ಲ. ಇದಕ್ಕೆ ಅನುಭವ ಬೇಕು, ಕಾರುಗಳ ಬಗ್ಗೆ ತಿಳಿದಿರಬೇಕು ಎಲ್ಲಕ್ಕಿಂತ ಹೆಚ್ಚಾಗಿ ಕಾರು ಉತ್ಸಾಹಿಯಾಗಿರಬೇಕು. ಆಗ ಮಾತ್ರ ಸಾಮಾನ್ಯ ಕಾರುಗಳಿಗೆ ಮರುಜೀವ ನೀಡಲು ಸಾಧ್ಯವಾಗುತ್ತದೆ. ಇತ್ತೀಚೆಗೆ 9 ವರ್ಷ ಹಳೆಯ ಟೊಯೊಟಾ ಇನ್ನೋವಾವನ್ನು ಆಲ್ಫಾರ್ಡ್ ಕಿಟ್ ಬಳಸಿ ಸಂಪೂರ್ಣವಾಗಿ ಮಾಡಿಫೈಗೊಳಿಸಲಾಗಿದೆ. ಸದ್ಯ ಈ ಕಾರು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
'ಟೊಯೋಟಾ ಇನ್ನೋವಾ' (Toyota Innova) ಕಾರು ಮಾರುಕಟ್ಟೆಗೆ ಎಂಟ್ರಿಕೊಟ್ಟು ಒಂದು ದಶಕದ ಮೇಲಾಗಿದೆ. ಜಪಾನ್ ಬ್ರಾಂಡ್‌ನಿಂದ ಹೊರಬಂದ ಈ ಅದ್ಬುತ ಕಾರಿಗೆ ಇಂದಿಗೂ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿಲ್ಲ. ಇನ್ನೋವಾದಲ್ಲಿ 5 ಲಕ್ಷ ಕಿ.ಮೀ.ಗಿಂತ ಹೆಚ್ಚು ಓಡಿಸಿ ಇಂದಿಗೂ ಉತ್ತಮವಾಗಿ ಮೇಂಟೇನ್ ಮಾಡಿರುವ ಅನೇಕ ಮಂದಿ ಇನ್ನೋವಾ ಮಾಲೀಕರನ್ನು ಇಂದಿಗು ನಾವು ನೋಡಬಹುದು.

ಕಾರುಗಳು ಹಳೆಯದಾದಂತೆ ಅವುಗಳನ್ನು ಮಾರಾಟ ಮಾಡುವುದು ಸಾಮಾನ್ಯವಾಗಿ ನೋಡುತ್ತಿರುತ್ತೇವೆ. ಆದರೆ ಪಕ್ಕಾ.. ಕಾರು ಉತ್ಸಾಹಿಗಳು ತಮ್ಮ ಹಳೆಯ ಕಾರುಗಳನ್ನು ತುಂಬಾ ಪ್ರೀತಿಸುತ್ತಾರೆ, ಅವನ್ನು ಮಾರಾಟ ಮಾಡುವ ಬದಲು ಇತ್ತೀಚಿನ ಟ್ರೆಂಡ್‌ಗೆ ಅನುಗುಣವಾಗಿ ಮಾಡಿಫೈಗೊಳಿಸುತ್ತಾರೆ. ಇಲ್ಲಿಯೂ ಮಾಲೀಕರೊಬ್ಬರು ತಮ್ಮ 9 ವರ್ಷ ಹಳೆಯ ಇನ್ನೋವಾ ಕಾರನ್ನು ಮಾಡಿಫೈಗೊಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಹಳೆಯ ಇನ್ನೋವಾಗೆ ಆಲ್ಫಾರ್ಡ್ ಕಿಟ್: ಸಂಪೂರ್ಣ ಪೇಂಟ್ ಕೆಲಸಕ್ಕಾಗಿ ಇಡೀ ವಾಹನವನ್ನು ಹೊರಗಿನಿಂದ ಬೇರ್ಪಡಿಸಿ ನಂತರ, ಕಾರ್ ಶಾಪ್ ಮೆಕ್ಯಾನಿಕ್‌ಗಳು ಆಲ್ಫಾರ್ಡ್ ಕಿಟ್ ಅನ್ನು ಅಳವಡಿಸಿದ್ದಾರೆ. ಇದರಲ್ಲಿ ಕ್ರೋಮ್ ಗ್ರಿಲ್ ನೊಂದಿಗೆ ಸಂಪೂರ್ಣವಾಗಿ ಹೊಸ ಬಂಪರ್, ಹೊಸ ಹೆಡ್ ಲ್ಯಾಂಪ್ ಗಳು ಮತ್ತು ಕ್ರೋಮ್ ಡಿಸೈನ್‌ಗಳು ಹಾಗೂ ಹೊಸ ಫಾಗ್ ಲ್ಯಾಂಪ್ ಗಳನ್ನು ಅಳವಡಿಸಿದ್ದಾರೆ.

ಹಿಂಭಾಗದಲ್ಲಿ ಹೊಸ ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಆಲ್ಫಾರ್ಡ್ ಕಿಟ್‌ನ ಭಾಗವನ್ನು ಒಳಗೊಂಡಿದೆ. ಬದಿಗಳಲ್ಲಿ, ಕಾರು ಹೊಸ ಅಲಾಯ್ ವೀಲ್ ಗಳನ್ನು ಹೊಂದಿದ್ದು, ಸಾಮಾನ್ಯ 15 - ಇಂಚುಗಳಿಗೆ ಹೋಲಿಸಿದರೆ 16 - ಇಂಚಿನ ಅಲಾಯ್ ಗಳನ್ನು ನೋಡಬಹುದು. ಮರ್ಸಿಡಿಸ್ ಮೇಬ್ಯಾಕ್ ನಲ್ಲಿ ಕಾಣುವ ಅದೇ ಬಣ್ಣವನ್ನು ಇಲ್ಲಿಯೂ ಬಳಸಿದ್ದಾರೆ. ಇದು ಎಂಪಿವಿಯ ಪ್ರೀಮಿಯಂ ನೋಟವನ್ನು ಮತ್ತಷ್ಟು ಹೆಚ್ಚಿಸಿದೆ.
ಇಂಟೀರಿಯರ್ ವಿಷಯಕ್ಕೆ ಬಂದರೆ ತಿಳಿ ಬಣ್ಣದ ಥೀಮ್‌ನಲ್ಲಿ ಸಂಯೋಜಿತ ಲೆದರ್, ಆಂಬಿಯೆಂಟ್ ಲೈಟಿಂಗ್, ಜಿಆರ್ - ಥೀಮ್ ಸ್ಟೀರಿಂಗ್ ವೀಲ್ ಸೆರಿದಂತೆ ಹೆಚ್ಚಿನ ಆಕರ್ಷಕ ಫೀಚರ್‌ಗಳನ್ನು ಒಳಗೊಂಡಿದೆ. ಇಲ್ಲಿ ಮುಖ್ಯವಾಗಿ ಕಾರು ಮಾಲೀಕರಿಗೆ ತಮ್ಮ ವಾಹನದ ಮೇಲಿನ ಪ್ರೀತಿ ಹಾಗೂ ಮಾಡಿಫೈಗೊಳಿಸಿರುವವರ ಉತ್ಸಾವು ಕಾರಿಗೆ ಈ ಆಕರ್ಷಕ ಲುಕ್ ಬರಲು ಪ್ರಮುಖ ಕಾರಣಗಳಾಗಿವೆ.

ನಮ್ಮ ದೇಶದಲ್ಲಿ ಕಾರ್ ಮಾಡಿಫಿಕೇಷನ್ ಎಂಬುದು ಕಾನೂನುಬಾಹಿರ. ಹಾಗಾಗಿ ಇಂತಹ ವಿಷಯಗಳ ಬಗ್ಗೆ ನಿಮ್ಮ ಸ್ಥಳೀಯ ಆರ್‌ಟಿಒದಿಂದ ಮುಂಚಿತವಾಗಿ ಒಪ್ಪಿಗೆ ಪಡೆದಿರಬೇಕು. ಜವಾಬ್ದಾರಿಯುತ ಕಾರು ಮಾಲೀಕರು ಎಲ್ಲಾ ಸಂಚಾರ ಕಾನೂನುಗಳನ್ನು ಅನುಸರಿಸುತ್ತಾರೆ. ನಮ್ಮ ಕಾರು ಉತ್ಸಾಹಿ ಓದುಗರಿಗು ನಾವು ಇದನ್ನೇ ಹೇಳಲು ಬಯಸುತ್ತೇವೆ. ಹಾಗೆಯೇ ಈ ಹೊಸ ಮಾಡಿಫಿಕೇಷನ್ ಹೇಗಿದೆ ಎಂಬುದನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications