ಬರೋಬ್ಬರಿ 47 ಕೋಟಿ ರೂ. ಹೆಲಿಕಾಪ್ಟರ್ ದೇವಸ್ಥಾನಕ್ಕೆ ಕೊಂಡೊಯ್ದು ಪೂಜೆ ನೆರವೇರಿಸಿದ ಉದ್ಯಮಿ

ಸಾಮಾನ್ಯವಾಗಿ ಜನರು ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸಿ ದೇವಾಲಯಕ್ಕೆ ಪೂಜೆಗೆಂದು ಕೊಂಡೊಯ್ಯುತ್ತಾರೆ. ಆದರೆ ಉದ್ಯಮಿಯೊಬ್ಬರು ಬರೋಬ್ಬರಿ 47 ಕೋಟಿ ರೂ. ಹೆಲಿಕಾಪ್ಟರ್ ಖರೀದಿಸಿ ವಾಹನ ಪೂಜೆಗೆಂದು ದೇವಾಯಕ್ಕೆ ಕೊಂಡೊಯ್ದು ಸುದ್ದಿಯಾಗಿದ್ದಾರೆ. ಈ ಮೂಲಕ ಭಾರತೀಯ ಸಾಂಪ್ರದಾಯವನ್ನು ಮೆರೆದು, ಹಲವರಿಗೆ ಮಾದರಿಯಾಗಿದ್ದಾರೆ.

ಪ್ರತಿಮಾ ಗ್ರೂಪ್‌ನ ಮಾಲೀಕ ಬೋಯಿನಪಲ್ಲಿ ಶ್ರೀನಿವಾಸ್ ರಾವ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಏರ್‌ಬಸ್ ACH-135 ರಲ್ಲಿ ಹೈದರಾಬಾದ್‌ನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಯಾದಾದ್ರಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ವಿಶೇಷ ಪೂಜೆಗಾಗಿ ತೆರಳಿದರು. ಮೂವರು ಪೂಜಾರಿಗಳ ಮಾರ್ಗದರ್ಶನದಲ್ಲಿ ಕುಟುಂಬವು ಹೆಲಿಕಾಪ್ಟರ್‌ನ ಮುಂದೆ ವಿವಿಧ ಧಾರ್ಮಿಕ ಕ್ರಿಯೆಗಳನ್ನು ನಡೆಸಿತು. ಇದರ ಬೆಲೆ $ 5.7 (47 ಕೋಟಿ ರೂ.) ಮಿಲಿಯನ್ ಎಂದು ಹೇಳಲಾಗುತ್ತಿದೆ.

ಬರೋಬ್ಬರಿ 47 ಕೋಟಿ ರೂ. ಹೆಲಿಕಾಪ್ಟರ್ ದೇವಸ್ಥಾನಕ್ಕೆ ಕೊಂಡೊಯ್ದು ಪೂಜೆ ನೆರವೇರಿಸಿದ ಉದ್ಯಮಿ

ಸದ್ಯ ಹೆಲಿಕಾಪ್ಟರ್‌ನೊಂದಿಗಿನ 'ವಾಹನ ಪೂಜೆ'ಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ವಿಡಿಯೋದಲ್ಲಿ ಶ್ರೀನಿವಾಸ್ ರಾವ್ ಅವರ ಸಂಬಂಧಿ ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಕೂಡ ಉಪಸ್ಥಿತರಿದ್ದರು. ನಂತರ ಅವರು ಯಾದಾದ್ರಿ ಬೆಟ್ಟದ ಸುತ್ತಲೂ ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸಿದರು. ಪ್ರತಿಮಾ ಗ್ರೂಪ್ ಮೂಲಸೌಕರ್ಯ, ಇಂಧನ, ಉತ್ಪಾದನೆ, ಟೆಲಿಕಾಂ ಕ್ಷೇತ್ರಗಳಲ್ಲಿ ಅಸ್ತಿತ್ವವನ್ನು ಹೊಂದಿದೆ. ಜೊತೆಗೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳನ್ನು ಸಹ ಹೊಂದಿದೆ.

ಹೈದರಾಬಾದ್‌ನ ರಿಚಿ ರಿಚ್. ಪ್ರತಿಮಾ ಗ್ರೂಪ್ ಮಾಲೀಕ ಬೋಯಿನಪಲ್ಲಿ ಶ್ರೀನಿವಾಸ್ ರಾವ್ ಅವರು ಏರ್‌ಬಸ್ ಎಸಿಎಚ್ 135 ಖರೀದಿಸಿ ಯಾದಾದ್ರಿಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ 'ವಾಹನ' ಪೂಜೆಗಾಗಿ ಕೊಂಡೊಯ್ದರು. ಐಷಾರಾಮಿ ಹೆಲಿಕಾಪ್ಟರ್‌ನ ಬೆಲೆ $ 5. 7M ಎಂದು ಟ್ವಿಟ್ಟರ್‌ನಲ್ಲಿ ಪತ್ರಕರ್ತರೊಬ್ಬರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಉದ್ಯಮಿಯ ಸಂಸ್ಕೃತಿ, ಸಂಪ್ರದಾಯವನ್ನು ನಟ್ಟಿಗರು ಮೆಚ್ಚಿದ್ದಾರೆ.

ಇಂತಹ ದುಬಾರಿ ವಾಹನಗಳಿಗೆ ಪೂಜಾ ವಿದಿ ವಿಧಾನಗಳು ಈ ಹಿಂದೆಯೂ ನಡೆದಿರುವುದು ಹಲವು ಬಾರಿ ಸುದ್ದಿಯಾಗಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ಬಹುಕೋಟಿ ಬೆಲೆಯ ಲ್ಯಾಂಬೋರ್ಘಿನಿ ಕಾರಿಗೆ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಪೂಜೆ ನೆರವೇರಿಸಲಾಗಿತ್ತು. ಈ ಲಂಬೊರ್ಗಿನಿ ಹುರಾಕನ್ ಎಡಬ್ಲ್ಯೂಡಿ ಬೆಂಗಳೂರಿನಲ್ಲಿ ಸುಮಾರು 4.5 ಕೋಟಿ ರೂ., ಎಕ್ಸ್ ಶೋರೂಂ ಬೆಲೆಯಿದ್ದು, ಆನ್‌ ರೋಡ್‌ ಬೆಲೆಯು ಸುಮಾರು 4.8 ಕೋಟಿ ರೂ. ಆಗಬಹುದು. ಭಾರತದಲ್ಲಿ ವಾಹನದ ದೀರ್ಘಾಯುಷ್ಯಕ್ಕಾಗಿ ಇಂತಹ ಆಚರಣೆಗಳನ್ನು ಮಾಡಲಾಗುತ್ತದೆ.

ನಮ್ಮ ಭಾರತದಲ್ಲಿ ಪ್ರತಿಯೊಬ್ಬರು ಕೂಡ ಹೊಸ ವಾಹನ ಖರೀದಿಸಿದರೆ ಪೂಜೆ ಮಾಡಿಸುವುದು ಸರ್ವೇ ಸಾಮಾನ್ಯ. ಇದನ್ನು ವಾಸ್ತವವಾಗಿ ವಾಹನ ಪೂಜೆ ಅಂತಲೇ ಕರೆಯಲಾಗುತ್ತದೆ. ವಾಹನಗಳ ಮೇಲೆ ಇದೇ ರೀತಿಯ ಆಚರಣೆಗಳನ್ನು ಮಾಡುವ ಹಲವರು ಸೆಲಿಬ್ರಿಟಿಗಳನ್ನು ನೋಡಬಹುದು. ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ಅವರಿಂದ ಹಿಡಿದು ಚಿಕ್ಕಣನವರೆಗೂ ಪ್ರತಿಯೊಬ್ಬರು ಎಷ್ಟೇ ಐಷಾರಾಮಿ ಕಾರನ್ನು ಕೊಂಡರೂ ಪೂಜೆ ಮಾತ್ರ ಕಡ್ಡಾಯವಾಗಿರುತ್ತದೆ. ಇನ್ನು ಇತ್ತೀಚೆಗಷ್ಟೆ ಬಾಲಿವುಡ್‌ನ ಕರಣ್ ಜೋಹರ್, ಕಾರ್ತಿಕ್ ಆರ್ಯನ್ ಕೂಡ ತಮ್ಮ ಹೊಸ ಸೂಪರ್‌ ಕಾರುಗಳಿಗೆ ಪೂಜೆ ನೆರವೇರಿಸಿದ್ದರು.

ಹೀಗೆ ಭಾರತವು ಸನಾತನ ಧರ್ಮವನ್ನು ಅನಾದಿ ಕಾಲದಿಂದಲೂ ಪಾಲಿಸಿಕೊಂಡು ಬರುತ್ತಿರುವುದರಿಂದ ದೇಶದಲ್ಲಿನ ಶ್ರೀಮಂತರು ಕೂಡ ನಮ್ಮ ಸಂಸ್ಕೃತಿಯನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ದೇಶದ ಅತಿದೊಡ್ಡ ಉದ್ಯಮಿ ಹಾಗೂ ರಿಲಯನ್ಸ್ ಸಮೂಹ ಸಂಸ್ಥೆಗಳ ಮಾಲೀಕ ಅನಿಲ್ ಅಂಬಾನಿ ಕೂಡ ತಮ್ಮ ಕಾರುಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವುದನ್ನು ನಾವು ಹಲವು ಬಾರಿ ನೋಡಿದ್ದೆವು. ಅಲ್ಲದೇ ಇತ್ತೀಚೆಗೆ ತಮ್ಮ ಮನೆಯಲ್ಲಿ ಗಣೇಶ ಹಬ್ಬ ನಡೆದಾಗಿ ಗಣೇಶನ ವಿಸರ್ಜನೆಗಾಗಿ ವಿಶ್ವದ ದುಬಾರಿ ಕಾರಾದ ರೋಲ್ಸ್ ರಾಯ್ಸ್‌ ಬಳಸಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Friday, December 16, 2022, 12:04 [IST]
English summary
A businessman who did puja by taking a helicopter to the temple
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+