ಸತತ 8 ಗಂಟೆಗಳ ಕಾಲ ಕಾರಿನಲ್ಲಿ ಬಿಟ್ಟು ಹೋದ ತಂದೆ... ಉಸಿರುಗಟ್ಟಿ ಜೀವಬಿಟ್ಟ ಕಂದಮ್ಮ

ಸಾಮಾನ್ಯವಾಗಿ ಮಕ್ಕಳನ್ನು ಕಾರಿನಲ್ಲಿ ಒಂಟಿಯಾಗಿ ಬಿಟ್ಟು ಹೋಗವುದು ತುಂಬಾ ಅಪಾಯಕಾರಿ, ಏಕೆಂದರೆ ಮಕ್ಕಳಿಗೆ ತಿಳಿಯದೇ ಏನಾದರೊಂದು ಕೀಟಲೇ ಮಾಡಿ ಅಪಘಾತಕ್ಕೆ ಕಾರಣವಾಗಬಹುದು. ಇನ್ನೂ ಕೆಲ ಸಂದರ್ಭಗಳಲ್ಲಿ ಉಸಿರಾಟ ತೊಂದರೆಯಿರುವ ಮಕ್ಕಳಿಗೆ ಗಾಳಿಯಾಡದೇ ಪ್ರಾಣಾಪಾಯಕ್ಕೂ ಕಾರಣವಾಗಬಹುದು. ಇಂತಹದೇ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.

ಕಾರಿನಲ್ಲಿ ಒಂಟಿಯಾಗಿದ್ದ 2 ವರ್ಷದ ಮಗು ದುರದೃಷ್ಟವಶಾತ್ ಸಾವನ್ನಪ್ಪಿದೆ. ಅಮೆರಿಕಾದ ಅಲಬಾಮಾದ ಅಟ್ಮೋರ್ ಎಂಬಲ್ಲಿ ಈ ದುರಂತ ನಡೆದಿದೆ. ಈ ಘಟನೆ ಫೆಬ್ರವರಿ 27 ರಂದು ನಡೆದಿದೆ ಎನ್ನಲಾಗಿದೆ. ಈ ಹಿಂದೆಯೂ ಅಮೆರಿಕಾದಲ್ಲಿ ಮಕ್ಕಳು ಮತ್ತು ಪ್ರಾಣಿಗಳ ಸಾವಿನ ಘಟನೆಗಳು ನಡೆದಿವೆ. ಇದನ್ನು ತಡಗಟ್ಟಲು ಮಕ್ಕಳು ಮತ್ತು ಸಾಕುಪ್ರಾಣಿಗಳನ್ನು ಕಾರಿನಲ್ಲಿ ಒಂಟಿಯಾಗಿ ಬಿಟ್ಟು ಹೋಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ.

ಸತತ 8 ಗಂಟೆಗಳ ಕಾಲ ಕಾರಿನಲ್ಲಿ ಬಿಟ್ಟು ಹೋದ ತಂದೆ... ಉಸಿರುಗಟ್ಟಿ ಜೀವಬಿಟ್ಟ ಕಂದಮ್ಮ

ಆದರೂ ಇದೀಗ ಈ ದಾರುಣ ಘಟನೆ ನಡೆದಿರುವುದು ಅಲ್ಲಿನ ಜನರ ಬೇಜವಾಬ್ದಾರಿಯನ್ನು ತೋರುತ್ತದೆ. ಇದೀಗ ಸಾವಿಗೆ ಕಾರಣವಾದ ತಂದೆಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ, ಇದರೆ ಹಿಂದೆ ವಿವಿಧ ಕಾರಣಗಳೂ ಇವೆ. ಮಗುವಿನ ತಂದೆ ಸುಮಾರು ಎಂಟು ಗಂಟೆಗಳ ಕಾಲ ಕಾರಿನಲ್ಲಿ ಮಗುವನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದಾರೆ. ಮಕ್ಕಳನ್ನು ಡೇ- ಕೇರ್ ಸೆಂಟರ್‌ಗೆ ಬಿಡುವ ಬದಲು ನಿರಾತಂಕವಾಗಿ ಕಾರಿನಲ್ಲಿಯೇ ಬಿಟ್ಟಿದ್ದಾರೆ. ಇದು ಶಿಶು ಮರಣಕ್ಕೆ ಪ್ರಮುಖ ಕಾರಣವಾಗಿದೆ.

ತೀವ್ರ ಉಸಿರುಗಟ್ಟುವಿಕೆ ಮತ್ತು ಶಾಖಕ್ಕೆ ತುತ್ತಾದ ಮಗು ಕಾರಿನೊಳಗೆ ಸಾವನ್ನಪ್ಪಿದೆ. ಈ ಘಟನೆ ಅಮೆರಿಕನ್ನರಲ್ಲಿ ಬೇಸರ ಮೂಡಿಸಿದೆ. ಈ ರೀತಿಯ ಸಾವು ಅತ್ಯಂತ ಹಿಂಸೆಯ ಸಾವು ಎಂದು ಹೇಳಲಾಗುತ್ತದೆ. ಆದುದರಿಂದಲೇ ಮಗುವಿನ ತಂದೆಗೆ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಲಾಗಿದೆ. ನಮ್ಮಲ್ಲಿ ಹಲವರು ಬಿಸಿಲಿನಲ್ಲಿ ನಿಲ್ಲಿಸಿದ ಕಾರಿನಲ್ಲಿ ಹೋಗುವುದಕ್ಕೇ ಇಷ್ಟಪಡುವುದಿಲ್ಲ. ಅಂತಹದರಲ್ಲಿ ತಂದೆ ಮಗುವನ್ನು ಹೀಗೆ ಗಂಟೆಗಟ್ಟಲೆ ಬಿಟ್ಟು ಹೋಗಿರುವುದು ನಿಜಕ್ಕೂ ಹಲವರನ್ನು ಬೆಚ್ಚಿ ಬೀಳಿಸಿದೆ.

ಸತತ 8 ಗಂಟೆಗಳ ಕಾಲ ಕಾರಿನಲ್ಲಿ ಬಿಟ್ಟು ಹೋದ ತಂದೆ... ಉಸಿರುಗಟ್ಟಿ ಜೀವಬಿಟ್ಟ ಕಂದಮ್ಮ

ಮಗು ಸಾಯುವ ಮುನ್ನ ಕಾರಿನ ಒಳಗಿನ ತಾಪಮಾನ 123 ಡಿಗ್ರಿ ಮೀರಿರಬಹುದು ಎಂದು ಹೇಳಲಾಗಿದೆ. ಕಾರಿನೊಳಗಿನ ಉಷ್ಣತೆಯು ಹೊರಗಿರುವಕ್ಕಿಂತ ಹಲವು ಪಟ್ಟು ಹೆಚ್ಚಾಗಿರುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಅದಕ್ಕಾಗಿಯೇ ಬೇಸಿಗೆಯಲ್ಲಿ ಮಬ್ಬಾದ ಪ್ರದೇಶದಲ್ಲಿ ಅಥವಾ ಸೂರ್ಯನ ನೆರಳು ಇರುವ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಲು ಸಲಹೆ ನೀಡಲಾಗುತ್ತದೆ. ಮಗುವಿನ ಸಾವಿನ ದಿನ, ಘಟನೆ ನಡೆದ ಪ್ರದೇಶದಲ್ಲಿ ತಾಪಮಾನ ಕೂಡ ಕಡಿಮೆಯೇ ಇತ್ತು ಎನ್ನಲಾಗಿದೆ.

ಆದರೆ ಕಾರನ್ನು ಈ ತಾಪಮಾನದಲ್ಲಿ ಸುಮಾರು ಒಂದು ಗಂಟೆ ನಿಲ್ಲಿಸಿದರೆ, ಕಾರಿನೊಳಗಿನ ತಾಪಮಾನವು ಎರಡು ಪಟ್ಟು ಹೆಚ್ಚಾಗುತ್ತದೆ. ನಿರಂತರವಾಗಿ ಈ ತಾಪಮಾನಕ್ಕೆ ಒಡ್ಡಿಕೊಂಡರೆ ಜೀವಕೋಶಗಳು ಮೊದಲು ಬಳಲುತ್ತವೆ. ಇದರ ನಂತರ ದೇಹದ ಪ್ರತಿಯೊಂದು ಪ್ರಮುಖ ಅಂಗವು ವಿಫಲಗೊಳ್ಳಲು ಪ್ರಾರಂಭಿಸುತ್ತದೆ. ಇದರ ನಂತರ ಅತ್ಯಂತ ವೇಗವಾಗಿ ಜೀವಕ್ಕೆ ಹಾನಿಯಾಗುತ್ತದೆ. ಅಮೆರಿಕದಲ್ಲಿ 2 ವರ್ಷದ ಮಗು ಕೂಡ ಇದೇ ರೀತಿಯ ಪರಿಸ್ಥಿತಿ ಎದುರಿಸಿರುತ್ತದೆ ಎಂದು ನಾವು ಊಹಿಸಬಹುದು.

ಸತತ 8 ಗಂಟೆಗಳ ಕಾಲ ಕಾರಿನಲ್ಲಿ ಬಿಟ್ಟು ಹೋದ ತಂದೆ... ಉಸಿರುಗಟ್ಟಿ ಜೀವಬಿಟ್ಟ ಕಂದಮ್ಮ

ಅಮೇರಿಕಾದಲ್ಲಿ ಪ್ರತಿ ವರ್ಷ 30 ಕ್ಕೂ ಹೆಚ್ಚು ಮಕ್ಕಳು ಬಿಸಿ ಕಾರುಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂಬ ವಾದವಿದೆ. ಪೋಷಕರ ಗಮನ ಕೊರತೆ ಮತ್ತು ಉದಾಸೀನತೆಯಿಂದಾಗಿ ಇಂತಹ ಸಾವುಗಳು ದೇಶದಲ್ಲಿ ಹೆಚ್ಚುತ್ತಿದೆ. 1990 ರಿಂದ, ಬಿಸಿ ಕಾರುಗಳಿಂದ 1,052 ಮಕ್ಕಳು ಸಾವನ್ನಪ್ಪಿದ್ದಾರೆ. ಅಲ್ಲದೆ ಬಿಸಿ ಕಾರುಗಳ ಅಡ್ಡಪರಿಣಾಮಗಳಿಂದ 7,300 ಶಿಶುಗಳು ಮತ್ತು ಮಕ್ಕಳಿಗೆ ಗಂಭೀರವಾದ ಗಾಯಗಳಾಗಿವೆ ಎಂದು ವರದಿ ಹೇಳಿದೆ. ಇಂತಹ ಸಾವುಗಳನ್ನು 'ಹಾಟ್ ಕಾರ್ ಡೆತ್ಸ್' ಎಂದು ಕರೆಯಲಾಗುತ್ತದೆ.

ಇಂತಹ ಘಟನೆಗಳು ಬಹಳ ಅಪರೂಪ, ಅದರಲ್ಲೂ ಬೇಸಿಗೆ ಕಾಲದಲ್ಲಿ ಮಾತ್ರ ಇಂತಹ ಘಟನೆಗಳು ಹೆಚ್ಚು ನಡೆಯುತ್ತವೆ. ಆದರೆ, ನಾವು ನೋಡುತ್ತಿರುವ ಈ ಘಟನೆ ನಡೆದಿರುವುದು ಫೆಬ್ರವರಿ ತಿಂಗಳಿನಲ್ಲಿ. ಹೀಗಾಗಿ ಈ ಹಾಟ್ ಕಾರ್ ಸಾವು ಭಾರೀ ಸಂಚಲನ ಮೂಡಿಸಿದೆ. ಯಾವುದೇ ಸಮಯದಲ್ಲಿ ಮಕ್ಕಳನ್ನು ಕಾರಿನಲ್ಲಿ ಒಂಟಿಯಾಗಿ ಬಿಡಬಾರದು ಎಂಬ ಎಚ್ಚರಿಕೆಯನ್ನು ನೀಡುತ್ತಿದೆ. ವರದಿಗಳ ಪ್ರಕಾರ 1998 ರಲ್ಲಿ ಕೊನೆಯದಾಗಿ ಇಂತಹ ಘಟನೆ ಸಂಭವಿಸಿದೆ.

Article Published On: Friday, March 3, 2023, 19:20 [IST]
English summary
A child who was in the car for 8 hours died of suffocation
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+