ಈ ರಾಜಕುಮಾರನ ಬಳಿಯಿರುವ ಕಾರುಗಳು ಯಾವುದು?: ಟ್ರಾವಂಕೂರ್ ಆದಿತ್ಯ ವರ್ಮರ ಜೊತೆ ಮಾತು-ಕಥೆ!
ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಆದರೆ ಒಂದು ವೇಳೆ ಭಾರತದಲ್ಲಿ ಇಂದಿಗೂ ರಾಜಾಡಳಿತ ಇದ್ದಿದ್ದರೆ ಆಯಾ ರಾಜ್ಯಕ್ಕೆ ತಕ್ಕಂತೆ ರಾಜರು ತಮ್ಮ ಅಡಳಿತವನ್ನು ನಡೆಸುತ್ತಿದ್ದರು. ಕರ್ನಾಟಕದ ಕುರಿತು ನೊಡುವುದಾದರೆ ಮೈಸೂರಿನ ರಾಜಕುಮಾರ ಯದುವೀರ್ ಅವರು ನಮ್ಮ ರಾಜ್ಯವನ್ನು ಆಳುತ್ತಿದ್ದರು, ಮತ್ತು ನಾವೆಲ್ಲರೂ ಅವರ ಪ್ರಜೆಗಳಾಗಿರುತ್ತಿದ್ದೆವು.
ನಾವಿಂದು ಅದೇ ರೀತಿಯ ಮತ್ತೊಂದು ರಾಜಕುಮಾರನ ಬಳಿ ಮಾತುಕಥೆ ನಡೆಸಿದ ಪುಟ್ಟ ವಿಡಿಯೋ ನಿಮ್ಮ ಮುಂದೆ ಇಡುತ್ತಿದ್ದೇವೆ. ನಾವು ಕೆಲವು ದಿನಗಳ ಹಿಂದೆಯಷ್ಟೇ ಕೇರಳದ ಟ್ರಾವಂಕೂರ್‌ನ ರಾಜಮನೆತನದ ಆದಿತ್ಯ ವರ್ಮ (Prince Adithya Varma) ಅವರನ್ನು ಭೇಟಿಯಾಗಿ ಅವರ ಜೊತೆ ಒಂದಿಷ್ಟು ಹೊತ್ತು ಸಮಯವನ್ನು ಕಳೆದಿದ್ದೆವು.

ಈ ಸಂಧರ್ಭದಲ್ಲಿ ನಾವು ಅವರ ವಾಹನಗಳ ಕುರಿತಾಗಿಯೂ ಮಾತನಾಡಿದ್ದೆವು. ಪಕ್ಕಾ ಆಫ್‌ರೋಡ್ ಪ್ರೀಯರಾಗಿರುವ ರಾಜಕುಮಾರ ಆದಿತ್ಯ ವರ್ಮಾ, ತಮ್ಮ ಅರಮನೆಯಲ್ಲಿ ಸಾಕಷ್ಟು ವಾಹನಗಳ ಕಲೆಕ್ಷನ್ ಅನ್ನು ಸಹ ಇಟ್ಟುಕೊಂಡಿದ್ದಾರೆ. ಹಳೆಯ ಕಾಲದ ಅಂಬಾಸಿಡರ್ ಕಾರಿನಿಂದ ಹಿಡಿದು, ಆಡಿ ಕಂಪನಿಯ ಕಾರಿನವರೆಗೆ ಕಲೆಕ್ಷನ್ ಅನ್ನು ಇಟ್ಟುಕೊಂಡಿದ್ದಾರೆ.
ರಾಜಕುಮಾರ ಆದಿತ್ಯ ವರ್ಮಾ ಅವರ ಬಳಿ ಸಂವಾದ ನಡೆಸುತ್ತಿದ್ದಾಗ, ಇಂದಿನ ಹಲವಾರು ವಾಹನ ಬೆಳವಣಿಗೆಗಳು, ಸಂಚಾರಿ ನಿಯಮಗಳ ಕುರಿತಾಗಿಯು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ವಾಹನ ಮಾಡಿಫಿಕೇಷನ್ ಕುರಿತಾಗಿ ಕೇಳಿದಾಗ 'ವಾಹನದ ರೂಪವೇ ಬದಲಾಗುವಂತಹ ಮಾಡಿಫಿಕೇಷನ್‌ಗೆ ನಾನೂ ಸಹ ವಿರುದ್ದ. ಅಗತ್ಯಕ್ಕೆ ಬೇಕಾದ ಮಾರ್ಪಾಡುಗಳನ್ನು ಮಾತ್ರ ಮಾಡುವುದು ಒಳ್ಳೆಯದು' ಎಂದು ಹೇಳಿದ್ದರು.
ಇಂದಿಗೂ ಮೈಸೂರು ರಾಜ ವಂಶದ ಜೊತೆ ಒಳ್ಳೆಯ ಒಡನಾಟವನ್ನು ಇಟ್ಟುಕೊಂಡಿರುವ ಟ್ರಾವಂಕೂರ್ ರಾಜಮನೆತನದ ರಾಜಕುಮಾರ, ಸ್ವಲ್ಪ ಸ್ವಲ್ಪ ಕನ್ನಡ ಗೊತ್ತು ಎಂದು ಹೇಳಿದ್ದು, ಅಲ್ಲಿದ್ದವರ ನಗುವಿಗೆ ಕಾರಣವಾಯಿತು. ಟ್ರಾವಂಕೂರ್ ರಾಜಕುಮಾರನ ಜೊತೆ ಸಂವಾದ ನಡೆಸಲು ಸಾಧ್ಯವಾಗಿದ್ದು ಒಂದು ರೀತಿಯ ಅದೃಷ್ಟವೇ ಸರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications