ಭವಿಷ್ಯದ ಅಮೆರಿಕ ಅಧ್ಯಕ್ಷರಿಗೆ ಹೈ ಟೆಕ್ ಸೆಕ್ಯೂರಿಟಿ

By Nagaraja

ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿರುವಂತೆಯೇ ತೆರೆಮರೆಯಲ್ಲಿ ನೂತನ ಏರ್ ಫೋರ್ಸ್ ಒನ್ ವಿಮಾನದ ತಯಾರಿಯು ಜೋರಾಗಿ ನಡೆಯುತ್ತಿದೆ. ಸುರಕ್ಷತೆಯ ದೃಷ್ಟಿಕೋನದಲ್ಲಿ ಕಾಲ ಕಾಲಕ್ಕೆ ಏರ್ ಫೋರ್ಸ್ ವಿಮಾನವನ್ನು ಬದಲಾಯಿಸುತ್ತಾ ಬಂದಿರುವ ಅಮೆರಿಕ ಈಗ ಬಿಡ್ ಸ್ವೀಕರಿಸಲು ಆರಂಭಿಸಿದೆ.

ಈ ಸಂಬಂಧ ವಿಶ್ವದ ಪ್ರಖ್ಯಾತ ಬೋಯಿಂಗ್ ಸಂಸ್ಥೆಗೆ ವಿನ್ಯಾಸ ಪ್ರಸ್ತಾಪಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ನೂತನ ಏರ್ ಫೋರ್ಸ್ ವಿಮಾನವು 2024 ವೇಳೆಯಾಗುವಾಗ ಅಮೆರಿಕ ಅಧ್ಯಕ್ಷರಿಗೆ ಗರಿಷ್ಠ ಭದ್ರತಾ ವಲಯವನ್ನು ರೂಪಿಸಲಿದೆ.

ಭವಿಷ್ಯದ ಅಮೆರಿಕ ಅಧ್ಯಕ್ಷರಿಗೆ ಹೈ ಟೆಕ್ ಸೆಕ್ಯೂರಿಟಿ

ನೂತನ ಅಮೆರಿಕ ಅಧ್ಯಕ್ಷೀಯ ವಿಮಾನಕ್ಕಾಗಿ ಏರ್ ಫೋರ್ಸ್ ಒನ್ ಅಂತರ್ಜಾಲದಲ್ಲಿ ಬಿಡ್ ಆರಂಭಇಸಿದೆ. ಅಲ್ಲದೆ ಪ್ರಾರಂಭಿಕ ವಿನ್ಯಾಸ ಚಟುವಟಿಕೆಗಳನ್ನು ಆರಂಭಿಸುವಂತೆಯೂ ಬೋಯಿಂಗ್ ಗೆ ಸೂಚಿಸಿದೆ.

ಭವಿಷ್ಯದ ಅಮೆರಿಕ ಅಧ್ಯಕ್ಷರಿಗೆ ಹೈ ಟೆಕ್ ಸೆಕ್ಯೂರಿಟಿ

2015 ವರ್ಷಾರಂಭದಲ್ಲಿ ಬೋಯಿಂಗ್ 747-8 ತಳಹದಿಯಲ್ಲಿ ನೂತನ ಏರ್ ಫೋರ್ಸ್ ಒನ್ ವಿಮಾನ ನಿರ್ಮಿಸುವುದಾಗಿ ಘೋಷಿಸಿತ್ತು. ಅಂದರೆ ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ 2024ರ ವೇಳೆಯಾಗುವಾಗ ನೂತನ ವಿಮಾನ ಸಿದ್ಧಗೊಳ್ಳಲಿದೆ.

ಭವಿಷ್ಯದ ಅಮೆರಿಕ ಅಧ್ಯಕ್ಷರಿಗೆ ಹೈ ಟೆಕ್ ಸೆಕ್ಯೂರಿಟಿ

ಬೋಯಿಂಗ್ 747-8 ಸಂಸ್ಥೆಯಿಂದ ಬಿಡುಗಡೆಗೊಂಡಿರುವ ಅತ್ಯಾಧುನಿಕ 747 ಮಾದರಿಯಾಗಿದೆ. ಏರ್ ಫೋರ್ಸ್ ಒನ್ ಸಹ ಇಂತಹದೊಂದು ಶಕ್ತಿಶಾಲಿ ವಿಮಾನದ ಹುಡುಕಾಟದಲ್ಲಿದೆ.

ಭವಿಷ್ಯದ ಅಮೆರಿಕ ಅಧ್ಯಕ್ಷರಿಗೆ ಹೈ ಟೆಕ್ ಸೆಕ್ಯೂರಿಟಿ

ನಿರ್ಮಾಣ ವೆಚ್ಚವನ್ನು ಗಣನೀಯವಾಗಿ ಕಡಿತ ಮಾಡುವ ಮೂಲಕ ಕಾರ್ಯ ದಕ್ಷತೆಯನ್ನು ಹೆಚ್ಚಿಸುವ ಇರಾದೆಯೂ ಇದೆ. ಇದರಲ್ಲಿ ನಿರ್ವಹಣಾ ವೆಚ್ಚ, ಸಂವಹನ ಉಪಕರಣಗಳು ಇತ್ಯಾದಿ ವ್ಯವಸ್ಥೆಗಳ ವೆಚ್ಚವು ಸೇರಿರಲಿದೆ.

ಭವಿಷ್ಯದ ಅಮೆರಿಕ ಅಧ್ಯಕ್ಷರಿಗೆ ಹೈ ಟೆಕ್ ಸೆಕ್ಯೂರಿಟಿ

ಮೂರನೇ ತಲೆಮಾರಿನ ಬೋಯಿಂಗ್ ವಿಮಾನವಾಗಿರುವ ಬೋಯಿಂಗ್ 747-8, ಅಗಲವಾದ ದೇಹ ಹಾಗೂ ಬೃಹತ್ತಾದ ರೆಕ್ಕೆಗಳನ್ನು ಪಡೆದಿದೆ. ಅಲ್ಲದೆ 2011ರಲ್ಲಿ ಸೇವೆ ಆರಂಭಗೊಂಡಿತ್ತು.

ಭವಿಷ್ಯದ ಅಮೆರಿಕ ಅಧ್ಯಕ್ಷರಿಗೆ ಹೈ ಟೆಕ್ ಸೆಕ್ಯೂರಿಟಿ

ಗಮನಾರ್ಹ ಮಾರ್ಪಾಡುಗಳೊಂದಿಗೆ ವಿನ್ಯಾಸ ಮಾಡಲಾಗುವ ಏರ್ ಫೋರ್ಸ್ ಒನ್ ವಿಮಾನವು ಕೇವಲ ಅಮೆರಿಕ ಅಧ್ಯಕ್ಷರ ಪಯಣಕ್ಕೆ ಮಾತ್ರ ಸೀಮಿತವಲ್ಲ. ಇದು ಅಮೆರಿಕ ಅಧ್ಯಕ್ಷರ ಸುಸಜ್ಜಿತ ಕಚೇರಿ ಪ್ರದೇಶವಾಗಿದ್ದು, ಆಧುನಿಕ ದೂರಸಂಪರ್ಕ ವ್ಯವಸ್ಥೆಯನ್ನು ಹೊಂದಿರುತ್ತದೆ. ಇದು ಪರಮಾಣು ಸ್ಪೋಟಗೊಂಡರೂ ಸಂಪರ್ಕ ಕಡಿತವಾಗದಂತೆ ನೋಡಿಕೊಳ್ಳುತ್ತದೆ.

ಭವಿಷ್ಯದ ಅಮೆರಿಕ ಅಧ್ಯಕ್ಷರಿಗೆ ಹೈ ಟೆಕ್ ಸೆಕ್ಯೂರಿಟಿ

ಏರ್ ಫೋರ್ಸ್ ಒನ್ ಜಗತ್ತಿನ ಆಕಾಶದಲ್ಲೂ ಅತ್ಯಂತ ಸುರಕ್ಷಿತ ಭದ್ರತಾ ವಲಯವನ್ನು ಏರ್ಪಡಿಸುತ್ತದೆ. ಇದು ಅಮೆರಿಕ ಅಧ್ಯಕ್ಷರು ಜಗತ್ತಿನಾದ್ಯಂತ ಸಂಚರಿಸಲು ನೆರವಾಗುತ್ತದೆ.

ಭವಿಷ್ಯದ ಅಮೆರಿಕ ಅಧ್ಯಕ್ಷರಿಗೆ ಹೈ ಟೆಕ್ ಸೆಕ್ಯೂರಿಟಿ

ಏರ್ ಫೋರ್ಸ್ ವಿಮಾನದಲ್ಲಿ ಸುಸಜ್ಜಿತ ವೈದ್ಯಕೀಯ ನೆರವನ್ನು ನೀಡಲಾಗುತ್ತದೆ. ಇನ್ನು ಇಡೀ ದೇಶವನ್ನೇ ಉದ್ದೇಶಿಸಿ ಮಾತನಾಡಬಹುದಾಗಿದೆ.

ಭವಿಷ್ಯದ ಅಮೆರಿಕ ಅಧ್ಯಕ್ಷರಿಗೆ ಹೈ ಟೆಕ್ ಸೆಕ್ಯೂರಿಟಿ

ಡೈರಕ್ಟರ್ ಇನ್ಫ್ರಾರೆಡ್ ಕೌಂಟರ್ ಮೆಷರ್ (ಡಿಐಆರ್‌ಸಿಎಂ) ರಕ್ಷಣಾ ವ್ಯವಸ್ಥೆಯನ್ನು ಇದರಲ್ಲಿ ಆಳವಡಿಸಲಾಗಿದೆ. ಇದು ಮಿಸೈಲ್ ದಾಳಿಯನ್ನೇ ಎದುರಿಸುವಷ್ಟು ಶಕ್ತವಾಗಿದೆ.

ಭವಿಷ್ಯದ ಅಮೆರಿಕ ಅಧ್ಯಕ್ಷರಿಗೆ ಹೈ ಟೆಕ್ ಸೆಕ್ಯೂರಿಟಿ

ಇದರಲ್ಲಿ ಮಿಸೈಲ್ ದಾಳಿ ವೇಳೆ ವಿಭಿನ್ನ ಜಾಮಿಂಗ್ ಹಾಗೂ ದಿಕ್ಕು ತಪ್ಪಿಸುವ ಕ್ರಮಾವಳಿಗಳನ್ನು ಅನುಸರಿಸಲಾಗಿದೆ. ಒಟ್ಟಿನಲ್ಲಿ ಅಮೆರಿಕ ಅಧ್ಯಕ್ಷರ ಭದ್ರತೆಗಾಗಿ ಕೋಟಿ ಗಟ್ಟಲೆ ರುಪಾಯಿಗಳನ್ನು ಖರ್ಚು ಮಾಡಲಾಗುತ್ತದೆ.

Most Read Articles

Kannada
English summary
A new Air Force One is on the way
Story first published: Wednesday, August 10, 2016, 11:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X