ಅಬ್ಬಾ!! ಡೊನಾಲ್ಡ್ ಟ್ರಂಪ್ ಮುಟ್ಟಿದೆಲ್ಲಾ ಚಿನ್ನ ಆಗ್ತಿದೆ

Written By:

ಅಮೆರಿಕದ ಪ್ರಭಾವಿ ಉದ್ಯಮಿ ಹಾಗೂ 2016ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು, 45ನೇ ಅಧ್ಯಕ್ಷರಾಗಿ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಜಗತ್ತಿನ ಪ್ರಬಾವಿ ವ್ಯಕ್ತಿ ಡೊನಾಲ್ಡ್ ಟ್ರಂಪ್ ಈಗ ಮುಟ್ಟಿದೆಲ್ಲಾ ಚಿನ್ನವಾಗುತ್ತಿರುವ ಕಾಲ ಎನ್ನಬಹುದು.

To Follow DriveSpark On Facebook, Click The Like Button
ಅಬ್ಬಾ!! ಡೊನಾಲ್ಡ್ ಟ್ರಂಪ್ ಮುಟ್ಟಿದೆಲ್ಲಾ ಚಿನ್ನ ಆಗ್ತಿದೆ

ಡೊನಾಲ್ಡ್ ಟ್ರಂಪ್ ತಾವು ಉಪಯೋಗಿಸುತ್ತಿದ್ದ ವಸ್ತುಗಳಿಗೂ ಕೂಡ ಸುಗ್ಗಿ ಕಾಲ ಬಂದಿದೆ ಎಂದರೆ ಅತಿಶಯೋಕ್ತಿ ಅಲ್ಲ. ಹೌದು, ತಾವು ಉದ್ಯಮಿಯಾಗಿದ್ದ ಸಂದರ್ಭದಲ್ಲಿ ಕೊಂಡ ಕ್ಯಾಡಿಲಾಕ್ ಕಾರು ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಹಿಂದೆಯೇ ತಮ್ಮ ಮತ್ತೊಂದು ಕಾರು ಫೆರಾರಿ ಕಾರಿಗೆ ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗಿದೆ.

ಅಬ್ಬಾ!! ಡೊನಾಲ್ಡ್ ಟ್ರಂಪ್ ಮುಟ್ಟಿದೆಲ್ಲಾ ಚಿನ್ನ ಆಗ್ತಿದೆ

ಪ್ರಪಂಚಕ್ಕೆ ದೊಡ್ಡಣ್ಣ ಆಗಿರುವ ಡೊನಾಲ್ಡ್ ಟ್ರಂಪ್ 2007 ರಲ್ಲಿ ಕಾರನ್ನು ಖರೀದಿ ಮಾಡಿದ್ದರು ಎನ್ನಲಾದ ಫೆರಾರಿ ಎಫ್430 ಕಾರು ಸದ್ಯ ಸುದ್ದಿಯಲ್ಲಿದೆ.

ಅಬ್ಬಾ!! ಡೊನಾಲ್ಡ್ ಟ್ರಂಪ್ ಮುಟ್ಟಿದೆಲ್ಲಾ ಚಿನ್ನ ಆಗ್ತಿದೆ

2007ರಲ್ಲಿ ಫೆರಾರಿ ಎಫ್430 ಖರೀದಿ ಮಾಡಿದ್ದ ಟ್ರಂಪ್ ತದನಂತರ ಹೆಚ್ಚು ಕಡಿಮೆ 4 ವರ್ಷ ತಮ್ಮ ಬಳಿ ಇಟ್ಟುಕೊಂಡು, 2011ರಲ್ಲಿ ಮತ್ತೊಬ್ಬರಿಗೆ ಮಾರಿದ್ದರು.

ಅಬ್ಬಾ!! ಡೊನಾಲ್ಡ್ ಟ್ರಂಪ್ ಮುಟ್ಟಿದೆಲ್ಲಾ ಚಿನ್ನ ಆಗ್ತಿದೆ

ಕೇವಲ 2,400 ಮೈಲಿಗಳು (3,862 ಕಿ.ಮೀ) ಓಡಿರುವ ಕಾರನ್ನು ಎರಡನೇ ಮಾಲೀಕ ಡೊನಾಲ್ಡ್ ಟ್ರಂಪ್ ಹೆಸರಿನ ಮೇಲೆ ಹರಾಜು ಹಾಕಿ ದುಡ್ಡು ಮಾಡಲು ಯೋಚಿಸಿದ್ದಾನೆ ಎನ್ನಲಾಗಿದೆ.

ಅಬ್ಬಾ!! ಡೊನಾಲ್ಡ್ ಟ್ರಂಪ್ ಮುಟ್ಟಿದೆಲ್ಲಾ ಚಿನ್ನ ಆಗ್ತಿದೆ

ಹರಾಜುಗೊಳ್ಳಲಿರುವ ಫೆರಾರಿ ಎಫ್430 ಬೆಲೆ ಕೇಳಿದ್ರೆ ಖಂಡಿತ ನಿಮಗೆ ಖಂಡಿತ ಆಘಾತ ಆಗ್ಬಹುದು. ಈ ಕಾರಿನ ಹಾರಾಜು ಮೊತ್ತ $350,000 (Rs 2.32 ಕೋಟಿ) ಎಂದು ಅಂದಾಜು ಮಾಡಲಾಗಿದೆ. 2011ರಲ್ಲಿ ಈ ಕಾರನ್ನು ಮಾಡಿದ್ದ ಡೊನಾಲ್ಡ್ ಟ್ರಂಪ್, ನಂತರ ರೋಲ್ಸ್ ರಾಯ್ಸ್ ಖರೀದಿಸಿದ್ದರು.

ಅಬ್ಬಾ!! ಡೊನಾಲ್ಡ್ ಟ್ರಂಪ್ ಮುಟ್ಟಿದೆಲ್ಲಾ ಚಿನ್ನ ಆಗ್ತಿದೆ

ಎರಡನೇ ಮಾಲೀಕರು ಈ ಕಾರನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಂಡು ಬಂದಿದ್ದರು ಮತ್ತು ಎಲ್ಲಿಯೂ ಕಾರಿಗೆ ಹಾನಿಯಾಗದೆ ಇರುವ ರೀತಿಯಲ್ಲಿ ಮುಂಜಾಗ್ರತೆ ತೆಗೆದುಕೊಂಡಿದ್ದರು ಎಂದು ಹರಾಜು ಕಂಪನಿ ತಿಳಿಸಿದೆ.

ಅಬ್ಬಾ!! ಡೊನಾಲ್ಡ್ ಟ್ರಂಪ್ ಮುಟ್ಟಿದೆಲ್ಲಾ ಚಿನ್ನ ಆಗ್ತಿದೆ

ಕಾರಿನ ಕಾಗದ ಪತ್ರ, ಟೂಲ್ ಕಿಟ್, ಕಾರಿನ ಕವರ್, ಈ ಹಿಂದಿನ ಸರ್ವಿಸ್ ಬಗ್ಗೆ ದಾಖಲೆಗಳ ಸಮೇತ ಮುಂದಿನ ತಿಂಗಳು ಏಪ್ರಿಲ್ 1ಕ್ಕೆ ಹರಾಜು ಹಾಕಲಾಗುತ್ತದ್ದು, ಇಷ್ಟ ಇರುವವರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಹರಾಜು ಪ್ರಕ್ರಿಯೆ ನೆಡೆಸುವ ಕಂಪನಿ ತಿಳಿಸಿದೆ.

ಫೆರಾರಿ ಕಂಪನಿಯ ಮತ್ತೊಂದು ಕಾರು ಫೆರಾರಿ 812 ಸೂಪರ್ ಫಾಸ್ಟ್ ಕಾರಿನ ಚಿತ್ರಗಳನ್ನು ನೋಡಿ.

English summary
Trump held on to the vehicle until 2011 and then sold and ended up in possession of the current vendor.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark