ತಲೆಯ ಮೇಲೆ ಬಸ್‌ ಏರಿದರೂ ಪ್ರಾಣಾಪಾಯದಿಂದ ಪಾರದ ಯುವಕ: ವಿಡಿಯೋ ನೋಡಿ...

ಇತ್ತೀಚೆಗೆ ರಸ್ತೆಯಲ್ಲಿ ಸವಾರಿ ಮಾಡುತ್ತಿದ್ದ ಬೈಕ್ ಸವಾರನೊಬ್ಬ ಸ್ಕಿಡ್ ಆಗಿ ಬಿದ್ದಿದ್ದು, ಆತನ ತಲೆಯ ಮೇಲೆ ಬಸ್‌ ಏರಿದೆ. ಆದರೂ ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಪಾಯದಿಂದ ಪಾರಾಗಿದ್ದಾನೆ. ಈ ಕುರಿತ ವಿಡಿಯೋವನ್ನು ಹಂಚಿಕೊಂಡಿರುವ ಬೆಂಗಳೂರು ಪೊಲೀಸರು ಹೆಲ್ಮೆಟ್‌ಗಳ ಮಹತ್ವದ ಕುರಿತು ಸಂದೇಶವನ್ನು ಹಂಚಿಕೊಂಡಿದ್ದಾರೆ.

ತಲೆಯ ಮೇಲೆ ಬಸ್‌ ಏರಿದರೂ ಪ್ರಾಣಾಪಾಯದಿಂದ ಪಾರದ ಯುವಕ: ವಿಡಿಯೋ ನೋಡಿ...

ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಬೆಂಗಳೂರು ಪೊಲೀಸರು ಸವಾರಿ ಮಾಡುವಾಗ ಗಟ್ಟಿಮುಟ್ಟಾದ ಮತ್ತು ಉತ್ತಮ ಗುಣಮಟ್ಟದ ಹೆಲ್ಮೆಟ್‌ಗಳನ್ನು ಧರಿಸುವುದರ ಮಹತ್ವವನ್ನು ಒತ್ತಿಹೇಳಿದ್ದಾರೆ. ವೀಡಿಯೊದಲ್ಲಿ, ಬಸ್‌ ತಿರುವಿನಲ್ಲಿ ತುಸು ವೇಗವಾಗಿ ಬಂದಿದ್ದು, ಎದರು ಬಂದ ಬಸ್‌ ಅನ್ನು ಕಂಡ ಕೂಡಲೇ ಬೈಕ್ ಸವಾರನಿಗೆ ಗಾಬರಿಯಾಗಿದೆ.

ಈ ವೇಳೆ ಬ್ರೇಕ್ ಹಾಕಲಾಯಿತಾದರೂ ಆತನಿದ್ದ ವೇಗಕ್ಕೆ ಎಗರಿ ಮಗುಚಿ ಬಸ್‌ ಅಡಿಗೆ ಬಿದ್ದಿದ್ದಾನೆ. ಈ ವೇಳೆ ಬಸ್‌ನ ಹಿಂಬದಿಯ ಟೈರ್‌ಗೆ ತಲೆ ಸಿಕ್ಕಿಕೊಂಡಿದೆ. ಆದರೆ, ಉತ್ತಮ ಗುಣಮಟ್ಟದ ಹೆಲ್ಮೆಟ್‌ ಧರಿಸಿದ್ದರಿಂದ ತಲೆಯ ಮೇಲೆ ಟೈರ್‌ಗಳ ಪ್ರಭಾವ ಕಡಿಮೆಯಿದ್ದ ಕಾರಣ ಆತನ ತಲೆಗೆ ಯಾವುದೇ ಹಾನಿಯಾಗಿಲ್ಲ. ವೀಡಿಯೊ ನೋಡಲು ಭಯಾನಕವಾಗಿದ್ದು, ಘಟನೆಯ ಬಳಿಕ ವ್ಯಕ್ತಿ ಜೀವಂತವಾಗಿರುವುದು ಎಲ್ಲರನ್ನು ಆಶ್ಚರ್ಯಗೊಳಿಸಿದೆ.

ತಲೆಯ ಮೇಲೆ ಬಸ್‌ ಏರಿದರೂ ಪ್ರಾಣಾಪಾಯದಿಂದ ಪಾರದ ಯುವಕ: ವಿಡಿಯೋ ನೋಡಿ...

ವಿಡಿಯೋ ವೈರಲ್

ಅಪಘಾತದ ವಿಡಿಯೋವನ್ನು ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. "ಉತ್ತಮ ಗುಣಮಟ್ಟದ ISI ಮಾರ್ಕ್ ಹೆಲ್ಮೆಟ್ ಜೀವ ಉಳಿಸುತ್ತದೆ (sic)" ಎಂಬ ಶೀರ್ಷಿಕೆ ನೀಡಿದ್ದಾರೆ. ಈ ವೀಡಿಯೋ ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸಿ ಸವಾರಿ ಮಾಡಲು ಎಚ್ಚರಿಸುತ್ತದೆ.

ತಲೆಯ ಮೇಲೆ ಬಸ್‌ ಏರಿದರೂ ಪ್ರಾಣಾಪಾಯದಿಂದ ಪಾರದ ಯುವಕ: ವಿಡಿಯೋ ನೋಡಿ...

ಸ್ಥಳೀಯ ಮಾಧ್ಯಮಗಳ ಪ್ರಕಾರ, ರಿಯೊ ಡಿ ಜನೈರೊದ ಬೆಲ್ಫೋರ್ಡ್ ರೋಕ್ಸೊದಲ್ಲಿ ಸೋಮವಾರ ಈ ಘಟನೆ ನಡೆದಿದೆ. ವಿಡಿಯೋದಲ್ಲಿನ ಯುವಕನನ್ನು ಅಲೆಕ್ಸ್ ಎಂದು ಗುರುತಿಸಲಾಗಿದೆ. ಈತ ಅಪಘಾತದಿಂದ ಹೆಚ್ಚಾಗಿ ಹಾನಿಗೊಳಗಾಗಿಲ್ಲ. ತಮ್ಮ ಕುಟುಂಬಕ್ಕೆ ಬ್ರೆಡ್ ಖರೀದಿಸಲು ಬೇಕರಿಯೊಂದಕ್ಕೆ ಹೋಗುತ್ತಿದ್ದಾಗ ತಿರುವಿನಲ್ಲಿ ಬಸ್ ಬರುವುದನ್ನು ಕಂಡು ಗಾಬರಿಗೊಂಡು ಬೈಕ್ ನಿಲ್ಲಿಸಲು ಯತ್ನಿಸುವ ಪ್ರಯತ್ನದಲ್ಲಿ ಬಸ್ ಕೆಳಗೆ ಬಿದ್ದಿದ್ದಾನೆ ಎಂದು ವರದಿ ಮಾಡಿವೆ.

ತಲೆಯ ಮೇಲೆ ಬಸ್‌ ಏರಿದರೂ ಪ್ರಾಣಾಪಾಯದಿಂದ ಪಾರದ ಯುವಕ: ವಿಡಿಯೋ ನೋಡಿ...

ಅಪಘಾತದ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ

ರಸ್ತೆಯಲ್ಲಿರುವ ಅನೇಕರು ಸುರಕ್ಷತಾ ನಿಯಮಗಳನ್ನು ನಿರ್ಲಕ್ಷಿಸುತ್ತಾರೆ. ಇತರರ ಜೀವಕ್ಕೆ ಅಪಾಯವನ್ನುಂಟುಮಾಡುತ್ತಾರೆ ಎಂದು ವೀಡಿಯೊವನ್ನು ನೋಡಿದ ನೆಟ್ಟಿಗರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕ್ಲಿಪ್‌ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಒಬ್ಬರು, "ಇದನ್ನು ನಾವು ದೇವರ ಅನುಗ್ರಹ (sic) ಎಂದು ಬರೆದಿದ್ದಾರೆ.

ತಲೆಯ ಮೇಲೆ ಬಸ್‌ ಏರಿದರೂ ಪ್ರಾಣಾಪಾಯದಿಂದ ಪಾರದ ಯುವಕ: ವಿಡಿಯೋ ನೋಡಿ...

ಈ ಭೀಕರ ಅಪಘಾತದ ವೀಡಿಯೋದ ಪೋಸ್ಟ್ 30,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಹಲವಾರು ಲೈಕ್ ಮತ್ತು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರ (ಬಿಟಿಪಿ) ಅಂಕಿಅಂಶಗಳ ಪ್ರಕಾರ, ಜೂನ್ ವರೆಗೆ ಈ ವರ್ಷ ವರದಿಯಾದ 1,843 ಅಪಘಾತಗಳಲ್ಲಿ 365 ಮಾರಣಾಂತಿಕ ಅಪಘಾತಗಳು ದಾಖಲಾಗಿವೆ.

ತಲೆಯ ಮೇಲೆ ಬಸ್‌ ಏರಿದರೂ ಪ್ರಾಣಾಪಾಯದಿಂದ ಪಾರದ ಯುವಕ: ವಿಡಿಯೋ ನೋಡಿ...

ಪ್ಯಾರಾಚ್ಯೂಟ್ ಬಳಸಿ ಜೀವ ಉಳಿಸಿಕೊಂಡ ಪೈಲಟ್

ಬೆಲ್ಜಿಯನ್‌ನ ಪೈಲಟ್ ಒಬ್ಬರು ಇತ್ತೀಚೆಗೆ ವಿಮಾನ ಅಪಘಾತದಿಂದ ಬದುಕುಳಿದ್ದಾರೆ, ಟೂ ಸೀಟರ್‌ನ ಸಣ್ಣ ವಿಮಾನದಲ್ಲಿ ಹಾರಾಟ ನಡೆಸುವ ವೇಳೆ ಇದ್ದಕ್ಕಿದ್ದಂತೆ ತುರ್ತು ಪರಿಸ್ಥಿತಿ ಎದುರಾಗಿದ್ದು, ಪ್ಯಾರಾಚ್ಯೂಟ್ ಸಹಾಯದಿಂದ ವಿಮಾನ ಸಮೇತ ಇಲ್ಲಿನ ಬ್ರೂಗ್ಸ್‌ನ ಸಿಂಟ್-ಆಂಡ್ರೀಸ್ ಎಂಬ ರಸ್ತೆಯಲ್ಲಿ ಲ್ಯಾಂಡ್ ಆಗಿದ್ದಾರೆ.

ತಲೆಯ ಮೇಲೆ ಬಸ್‌ ಏರಿದರೂ ಪ್ರಾಣಾಪಾಯದಿಂದ ಪಾರದ ಯುವಕ: ವಿಡಿಯೋ ನೋಡಿ...

ಈ ಅಪಘಾತದ ದೃಷ್ಯಗಳನ್ನು ವೈರಲ್ ಹಾಗ್ ಚಿತ್ರೀಕರಿಸಿದೆ. ವಿಡಿಯೋದಲ್ಲಿ ವಿಮಾನದ ಎಂಜಿನ್ ಆಫ್‌ ಆಗಿ ನೇರವಾಗಿ ಭೂಮಿಯ ಕಡೆಗೆ ಬರುವುದನ್ನು ಕಾಣಬಹುದು. ಪ್ಯಾರಾಚ್ಯೂಟ್‌ನ ಅಡಿಯಲ್ಲಿ ಸಣ್ಣ ವಿಮಾನವು ನೇತಾಡುತ್ತಾ ಗಾಳಿಯಲ್ಲಿ ಅಕ್ಕಪಕ್ಕಕ್ಕೆ ತೂಗಾಡುತ್ತಿದೆ.

ತಲೆಯ ಮೇಲೆ ಬಸ್‌ ಏರಿದರೂ ಪ್ರಾಣಾಪಾಯದಿಂದ ಪಾರದ ಯುವಕ: ವಿಡಿಯೋ ನೋಡಿ...

ವಿಮಾನವು ಮೊದಲಿಗೆ ನಿಧಾನವಾಗಿ ಭೂಮಿಯತ್ತ ಬರುತ್ತಿರುವಂತೆ ಕಂಡುಬಂದರೂ, ನಂತರ ಅದು ನೆಲವನ್ನು ಸಮೀಪಿಸುತ್ತಿದ್ದಂತೆ ವೇಗದಿಂದ ಕೆಳಗಿಳಿಯುವುದು ಕಂಡುಬರುತ್ತದೆ. ವೀಡಿಯೊದ ಕೊನೆಯಲ್ಲಿ, ಬ್ರೂಗ್ಸ್‌ನ ಸಿಂಟ್-ಆಂಡ್ರೀಸ್‌ನಲ್ಲಿನ ರಸ್ತೆಯ ಬದಿಯಲ್ಲಿ ವಿಮಾನವು ಮೊದಲು ಪ್ರೊಪೆಲ್ಲರ್ ಅನ್ನು ಇಳಿಸಿದಾಗ ಜೋರಾಗಿ ಕ್ರ್ಯಾಶ್ ಆಗಿರುವ ಶಬ್ದ ಕೇಳುತ್ತದೆ.

ತಲೆಯ ಮೇಲೆ ಬಸ್‌ ಏರಿದರೂ ಪ್ರಾಣಾಪಾಯದಿಂದ ಪಾರದ ಯುವಕ: ವಿಡಿಯೋ ನೋಡಿ...

ವಿಚಿತ್ರವೇನೆಂದರೆ ಆಕಾಶಕ್ಕೆ ಹಾರುವಾಗ ಮೇಲ್ಮುಕವಾಗಿ ಹೇಗೆ ಹಾರುತ್ತದೆಯೋ ಇಳಿಯುವಾಗ ಕೂಡ ಇಳಿಮುಕವಾಗಿ ಬಂದು ತನ್ನ ಮೂಗನ್ನು ನೆಲಕ್ಕೆ ಡಿಕ್ಕಿ ಹೊಡೆದಿದೆ. ಎರಡು ಆಸನಗಳ ಈ ವಿಮಾನವು ಆ ಪ್ರದೇಶದಲ್ಲಿನ ರಸ್ತೆಗಳನ್ನು ಸೂಚಿಸುವ ಬೋರ್ಡ್ ಮತ್ತು ಬೇಲಿಗೆ ಹಾನಿಯನ್ನುಂಟುಮಾಡಿದೆ.

ತಲೆಯ ಮೇಲೆ ಬಸ್‌ ಏರಿದರೂ ಪ್ರಾಣಾಪಾಯದಿಂದ ಪಾರದ ಯುವಕ: ವಿಡಿಯೋ ನೋಡಿ...

ಪೈಲಟ್‌ ಲ್ಯಾಂಡ್‌ ಆದ ಬಳಿಕ ಸಣ್ಣ ಪುಟ್ಟ ಗಾಯಗಳೊಂದಿಗೆ ಹೊರಬಂದಿದ್ದಾರೆ. ಸದ್ಯ ಪೈಲೆಟ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಂದು ಬ್ರೂಗ್ಸ್ ಪೊಲೀಸರು ತಿಳಿಸಿದ್ದಾರೆ. ಪೈಲಟ್ ಅನುಭವಿ ಫ್ಲೈಯರ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ಯಾರಾಚ್ಯೂಟ್ ಉಡಾವಣೆ ಮಾಡುವ ವಿಮಾನದ ಬ್ಯಾಲಿಸ್ಟಿಕ್ ರಿಕವರಿ ಸಿಸ್ಟಮ್ (ಬಿಆರ್‌ಎಸ್) ನಿಂದ ಪೈಲೆಟ್ ಯಾವುದೇ ಹೆಚ್ಚಿನ ಗಾಯಗಳಾಗದೇ ಜೀವಂತ ಹೊರಬಂದಿದ್ದಾರೆ.

ತಲೆಯ ಮೇಲೆ ಬಸ್‌ ಏರಿದರೂ ಪ್ರಾಣಾಪಾಯದಿಂದ ಪಾರದ ಯುವಕ: ವಿಡಿಯೋ ನೋಡಿ...

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಇತ್ತೀಚಿನ ದಿನಗಳಲ್ಲಿ ಹೆಲ್ಮೆಟ್ ಧರಿಸದೆ ಓಡಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪೊಲೀಸರು ಹಲವು ಕ್ರಮಗಳನ್ನು ತೆಗೆದುಕೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದೀಗ ಪೊಲೀಸರು ಹಂಚಿಕೊಂಡಿರುವ ವಿಡಿಯೋವು ಹೆಲ್ಮೆಟ್ ನಮ್ಮ ಜೀವ ಉಳಿಸುವಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ತಿಳಿಸುತ್ತದೆ. ಇನ್ನಾದರು ಪ್ರತಿಯೊಬ್ಬರೂ ಹೆಲ್ಮೆಟ್ ಬಳಸುತ್ತಾರೆಯೇ ಎಂಬುದನ್ನು ಕಾದುನೋಡಬೇಕು.

Most Read Articles

Kannada
English summary
A young man who got caught under the wheel of a bus escaped with his life video viral
Story first published: Thursday, July 21, 2022, 18:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X