ಹೆಂಡತಿಗೆ ಊಹಿಸಿದ ಉಡುಗೊರೆ: ಗಂಡನನ್ನು ಮುದ್ದಾಡಿದ ಫೇಮಸ್ ನಟಿ!

ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಡೂಪ್‌ಗಳು ಇಲ್ಲದೇ ನಿಜವಾದ ಸ್ಟಂಟ್‌ ಮಾಡುವ ಕೆಲವೇ ನಟರಲ್ಲಿ ತಮಿಳು ಚಿತ್ರರಂಗದ ಅಜಿತ್ (Actor Ajith Kumar) ಕೂಡ ಒಬ್ಬರು. ಇವರ ಪತ್ನಿ ಕೂಡ ಬಾಲನಟಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದವರು, ನಟಿ ಶಾಲಿನಿ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಅಜಿತ್ ಕುಮಾರ್ ಅವರೊಂದಿಗೆ ಅಮರ್‌ಕಲಂ ಚಿತ್ರದಲ್ಲಿ ನಟಿಸಿದಾಗ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರು. ಏಪ್ರಿಲ್ 24, 2000 ರಂದು ವಿವಾಹವಾಗಿ ಎರಡು ಮುದ್ದಾದ ಮಕ್ಕಳೊಂದಿಗೆ ಸಂತಸದ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಪತ್ನಿ ಶಾಲಿನಿ (Actress Shalini) ಹುಟ್ಟುಹಬ್ಬಕ್ಕೆ ಅಜಿತ್ ದುಬಾರಿ ಉಡುಗೊರೆ ಕೊಟ್ಟಿದ್ದಾರೆ.

ಹೌದು ಕಳೆದ ಗುರುವಾರ ಶಾಲಿನಿ ಅವರು ದುಬಾರಿ ಲೆಕ್ಸಸ್ ಕಾರಿನ ಪಕ್ಕದಲ್ಲಿ ಪೋಸ್ ನೀಡಿದ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ತುಸು ಆಳವಾಗಿ ವಿಚಾರಿಸಿ ನೋಡಿದಾಗ, ನಟ ಅಜಿತ್ ಕುಮಾರ್ ತಮ್ಮ ಪತ್ನಿ ಶಾಲಿನಿ ಅವರ 44ನೇ ಹುಟ್ಟುಹಬ್ಬದಂದು ಐಷಾರಾಮಿ ಲೆಕ್ಸಸ್ ಆರ್ಎಕ್ಸ್ ಹೈಬ್ರಿಡ್ ಎಸ್‌ಯುವಿ (Lexus RX hybrid SUV) ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬುದು ಗೊತ್ತಾಗಿದೆ.

actor-ajith-kumar-gifts-lexus-rx-hybrid-suv-to-wife-shalini

ಲೆಕ್ಸಸ್ ಹೊಸ ಆರ್ಎಕ್ಸ್ ಹೈಬ್ರಿಡ್ ಎಸ್‌ಯುವಿ ಬೆಲೆಯು ಭಾರತದಲ್ಲಿ 95.80 ಲಕ್ಷ ರೂ.(ಎಕ್ಸ್ ಶೋರೂಂ) ಗಳಿಂದ ಪ್ರಾರಂಭವಾಗುತ್ತದೆ. ಇದರಲ್ಲಿ ಟಾಪ್‌ ವೇರಿಯೆಂಟ್ ಬೆಲೆಯು 1.18 ಕೋಟಿ ರೂ.ಗಳವರೆಗೆ (ಎಕ್ಸ್ ಶೋರೂಂ) ಇದೆ. ಇದರಲ್ಲಿ ನಟ ಅಜಿತ್ ಕುಮಾರ್ ಪತ್ನಿ ಶಾಲಿನಿಗೆ ಟಾಪ್ ವೇರಿಯೆಂಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕಾರಿನ ವಿಶೇಷತೆಗಳು: ಹೆಡ್ಸ್-ಅಪ್ ಡಿಸ್ಪ್ಲೇ, 14 ಇಂಚಿನ ಟಚ್ಸ್ಕ್ರೀನ್, ವೈರ್‌ಲೆಸ್ ಚಾರ್ಜರ್, ವೈರ್‌ಲೆಸ್ ಆಪಲ್ ಕಾರ್ಪ್ಲೇ - ಆಂಡ್ರಾಯ್ಡ್ ಆಟೋ ಮತ್ತು ಪನೋರಮಿಕ್ ಸನ್‌ರೂಫ್ ಹೊಂದಿದೆ. ಲೆಕ್ಸಸ್ ಬ್ಲಾಕ್, ಡಾರ್ಕ್ ಸೆಪಿಯಾ ಮತ್ತು ಸೋಲಿಸ್ ವೈಟ್ ಎಂಬ ಮೂರು ಒಳಾಂಗಣ ಬಣ್ಣಗಳ ಆಯ್ಕೆಯನ್ನು ನೀಡುತ್ತದೆ. ಸುಮಿ ವುಡ್‌ರೈನ್ ಮತ್ತು ಮೀಡಿಯಂ ಬ್ಯಾಂಬೂ ಬ್ರೌನ್ ಎಂಬ ಎರಡು ಟ್ರಿಮ್ ಆಯ್ಕೆಗಳನ್ನು ಒಳಗೊಂಡಿದೆ.

actor-ajith-kumar-gifts-lexus-rx-hybrid-suv-to-wife-shalini

ಎರಡು ಪವರ್ ಟ್ರೇನ್ ಆಯ್ಕೆಯೊಂದಿಗೆ ಬರುವ ಈ ಕಾರು, 2.5-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟರ್ ಸಂಯೋಜನೆಯಲ್ಲಿ 250 ಬಿಹೆಚ್ ಪವರ್ ಮತ್ತು 242 ಎನ್ಎಂ ಟಾರ್ಕ್ ಹೊರಹಾಕುತ್ತದೆ. ಈ ಮೂಲಕ 0-100 ಕಿ.ಮೀ ವೇಗವನ್ನು 7.9 ಸೆಕೆಂಡುಗಳಲ್ಲಿ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

ಆರ್‌ಎಕ್ಸ್ 500 ಹೆಚ್ ಎಫ್-ಸ್ಪೋರ್ಟ್+ ವೇರಿಯೆಂಟ್ 2.4-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಜೊತೆಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ ಹೊಂದಿದೆ. ಇದು 371 ಬಿಹೆಚ್ ಪವರ್ ಮತ್ತು 460 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಆಲ್ ವೀಲ್ ಡ್ರೈವ್ ಹೊಂದಿದ್ದು, 0-100 ಕಿ.ಮೀ ವೇಗವನ್ನು 6.2 ಸೆಕೆಂಡುಗಳಲ್ಲಿ ಕ್ರಮಿಸಬಲ್ಲದು. ಹಾಗೆಯೇ 210 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

ವಾಹನ ಪ್ರೇಮಿ ಅಜಿತ್ ಕುಮಾರ್: ಅಜಿತ್ ಕುಮಾರ್ ಅವರು ಅಡ್ವೆಂಚರ್ ಮತ್ತು ಹೈ-ಪರ್ಫಾಮೆನ್ಸ್ ವಾಹನಗಳನ್ನು ಹೊಂದಿದ್ದಾರೆ. BMW S1000RR, ಎಪ್ರಿಲಿಯಾ ಕ್ಯಾಪೊನಾರ್ಡ್ 1200, BMW K1300 S, ಕವಾಸಕಿ ನಿಂಜಾ ZX 14R, ಫೆರಾರಿ 458 ಇಟಾಲಿಯಾ, BMW 740 ಲೀ. ಮತ್ತು ಹೋಂಡಾ ಡೀಲ್ V6 ಎಂಬ ಅಪರೂಪದ ವಾಹನಗಳ ಕಲೆಕ್ಷನ್ ಅನ್ನು ಹೊಂದಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, November 22, 2024, 13:46 [IST]
English summary
Actor ajith kumar gifts lexus rx hybrid suv to wife shalini
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+