ಮಗನ ಕ್ರೇಜ್‌ಗೆ ತಕ್ಕಂತೆ ದುಬಾರಿ ಇವಿ ಖರೀದಿಸಿದ ಪ್ಯಾನ್ ಇಂಡಿಯಾ ಸ್ಟಾರ್ ನಟನ ತಂದೆ!

ನಟ ಅಲ್ಲು ಅರ್ಜುನ್ (Allu arjun) ಕೇವಲ ತೆಲುಗು ಮಾತ್ರವಲ್ಲ ದೇಶಾದ್ಯಂತ ಗುರ್ತಿಸಿಕೊಂಡಿದ್ದಾರೆ. ಅವರ ಪುಷ್ಪ ಚಿತ್ರದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಜನಪ್ರಿಯತೆ ಗಳಿಸಿದ್ದಾರೆ. ಅವರ ತಂದೆ ಅಲ್ಲು ಅರವಿಂದ್ ತೆಲುಗಿನಲ್ಲಿ ದೊಡ್ಡ ನಿರ್ಮಾಪಕರಾಗಿದ್ದು, ಈಗ ಮಗನ ಕ್ರೇಜ್‌ಗೆ ತಕ್ಕಂತೆ ಹೊಸ ಎಲೆಕ್ಟ್ರಿಕ್ ಕಾರು ಖರೀದಿಸಿದ್ದಾರೆ.

ಅಲ್ಲು ಅರವಿಂದ್ ದಶಕಗಳಿಂದ ತೆಲುಗು ಸಿನಿಮಾ ರಂಗದಲ್ಲಿ ಉನ್ನತ ನಿರ್ಮಾಪಕರಾಗಿದ್ದಾರೆ. ತಮ್ಮ ಸ್ವಂತ ಬ್ಯಾನರ್ ಗೀತಾ ಆರ್ಟ್ಸ್ ಮೂಲಕ, ಅದೆಷ್ಟೋ ಹಿಟ್ ಮತ್ತು ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಇದು ಹೀಗಿದ್ದರೇ ಮಗ 'ಅಲ್ಲು ಅರ್ಜುನ್' ಅವರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಾ ತಂದೆಗೆ ತಕ್ಕ ಮಗ ಎನಿಸಿಕೊಂಡಿದ್ದಾರೆ. ಇವರ ಪುಷ್ಪಾ-2 ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಿನಿಮಾ ಇದೇ ಆಗಸ್ಟ್ 15 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಬಿಡುಗಡೆಗೂ ಮುನ್ನವೇ ಸಿನಿಮಾ ಬಹುಕೋಟಿ ಪ್ರೀ ರಿಲೀಸ್ ಬಿಸಿನೆಸ್ ಮಾಡಿದೆ. ಮಗನ ಈ ಯಶಸ್ಸಿನ ಖುಷಿಯಲ್ಲಿ ತಂದೆ ಐಷಾರಾಮಿ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ.

actor-allu-arjun-father-allu-aravind-buys-bmw-i7-electric-car

ಬಿಎಂಡಬ್ಲ್ಯು ಐ7 ಇವಿ ಖರೀದಿ: ನಿರ್ಮಾಪಕ ಅಲ್ಲು ಅರವಿಂದ್ ಅತ್ಯಾಧುನಿಕ ಸೌಲಭ್ಯಗಳು ಮತ್ತು ಐಷಾರಾಮಿ ವೈಶಿಷ್ಟ್ಯಗಳೊಂದಿಗೆ ಬಿಎಂಡಬ್ಲ್ಯು ಐ7 ಇವಿ (BMW i7 EV) ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ ಮೊದಲ ಟಾಲಿವುಡ್ ಸೆಲೆಬ್ರಿಟಿಯಾಗಿದ್ದಾರೆ. ಇತ್ತೀಚೆಗೆ ಬಿಎಂಡಬ್ಲ್ಯು ಶೋರೂಂ ಸಿಬ್ಬಂದಿ, ಅಲ್ಲು ಅರವಿಂದ್ ಅವರ ಮನೆಗೆ ತೆರಳಿ ಕಾರನ್ನು ಹಸ್ತಾಂತರಿಸಿದೆ.

ಮೊದಲ ಟಾಲಿವುಡ್ ಸೆಲೆಬ್ರಿಟಿ: ಇಲ್ಲಿಯವರೆಗೆ ಟಾಲಿವುಡ್‌ನಲ್ಲಿ ಬಿಎಂಡಬ್ಲ್ಯು ಐ7 ಇವಿ ಕಾರು ಯಾರೂ ಖರೀದಿಸಿಲ್ಲ. ಬಾಲಿವುಡ್‌ನಲ್ಲಿ ಅಜಯ್ ದೇವಗನ್ ರಂತಹ ಸ್ಟಾರ್‌ಗಳು ಈ ಕಾರನ್ನು ಹೊಂದಿದ್ದಾರೆ. ವರದಿಗಳ ಪ್ರಕಾರ, ತಮಿಳು ನಟ ತಲಪತಿ ವಿಜಯ್ ಇತ್ತೀಚೆಗೆ ದಕ್ಷಿಣದಲ್ಲಿ ಈ ಕಾರನ್ನು ಖರೀದಿಸಿದ್ದಾರೆ. ಟಾಲಿವುಡ್‌ನಲ್ಲಿ ಈ ಐಷಾರಾಮಿ ಬಿಎಂಡಬ್ಲ್ಯೂ ಕಾರನ್ನು ಹೊಂದಿರುವ ಮೊದಲ ವ್ಯಕ್ತಿ ಅಲ್ಲು ಅರವಿಂದ್ ಎಂದು ವರದಿಯಾಗಿದೆ.

actor-allu-arjun-father-allu-aravind-buys-bmw-i7-electric-car

ಬಿಎಂಡಬ್ಲ್ಯು ಐ7 ಇವಿ ಫೀಚರ್ಸ್: ಈ ಕಾರು 14.9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 31.3-ಇಂಚಿನ ಸಿನಿಮಾ ಸ್ಕ್ರೀನ್ ಅನ್ನು ಹೊಂದಿದೆ. ಹಿಂಭಾಗದ ಬಾಗಿಲುಗಳು ಸಹ ಟಚ್‌ಸ್ಕ್ರೀನ್‌ಗಳನ್ನು ಹೊಂದಿದ್ದು, ಇವೆಲ್ಲವೂ ವಾಹನ ಬಳಕೆದಾರರಿಗೆ ತುಂಬಾ ಅನುಕೂಲಕರವಾಗಿರುತ್ತವೆ. ಈ ಎಲೆಕ್ಟ್ರಿಕ್ ಕಾರು 101.7-ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಒಮ್ಮೆ ಚಾರ್ಜ್ ಮಾಡಿದರೆ 591 ಕಿ.ಮೀ ನಿಂದ 625 ಕಿ.ಮೀ ರೇಂಜ್ ನೀಡುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 239 ಕಿ.ಮೀ ಇದ್ದು, 100 ಕಿಮೀ ವೇಗವನ್ನು ಕೇವಲ 4.7-ಸೆಕೆಂಡ್‌ಗಳಲ್ಲಿ ತಲುಪಬಲ್ಲದು. ಇದರ ಮೋಟಾರ್‌ಗಳು 644 Bhp ಪವರ್ ಮತ್ತು 745 Nm ಟಾರ್ಕ್ ಉತ್ಪಾದಿಸುತ್ತವೆ.

ಶೋರೂಂನಿಂದ ಬಿಎಂಡಬ್ಲ್ಯು ಐ7 ಇವಿ ಸೆಡಾನ್ ಅನ್ನು ಅಲ್ಲು ಅರವಿಂದ್ ಅವರ ಮನೆಗೆ ಕೊಂಡೊಯ್ಯುವ ವೀಡಿಯೊವನ್ನು ಕಂಪನಿಯು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಕಾರು ಎಲ್ಲಾ ಐಷಾರಾಮಿ ಸೌಲಭ್ಯಗಳೊಂದಿಗೆ ಸ್ಟೈಲಿಶ್ ಆಗಿ ಕಾಣುತ್ತಿದ್ದು, ಈ ಕಾರಿನ ವೈಶಿಷ್ಟ್ಯಗಳನ್ನು ತಿಳಿದರೆ ಖಂಡಿತ, ನೀವು ಆಶ್ಚರ್ಯಚಕಿತರಾಗುವಿರಿ.

ಬೆಲೆ: BMW i7 ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ ರೂ. 1.95 ಕೋಟಿ (ಎಕ್ಸ್ ಶೋ ರೂಂ). ಅಲ್ಲು ಅರವಿಂದ್ ಖರೀದಿಸಿರುವ ಕಾರಿನ ಬೆಲೆಯು ಆನ್‌ರೋಡ್‌ ಪ್ರಕಾರ ರೂ. 2.50 ಕೋಟಿಗೂ ಹೆಚ್ಚು. ಇದು xDrive60 ಎಂಬ ಒಂದೇ ರೂಪಾಂತರದಲ್ಲಿ ಲಭ್ಯವಿದೆ. ಆದರೆ ಆಧುನಿಕ ಕಾರು ಬಳಕೆದಾರರು ಬಯಸುವ ಎಲ್ಲಾ ವೈಶಿಷ್ಟ್ಯಗಳನ್ನು ಇದು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, April 29, 2024, 11:47 [IST]
English summary
Actor allu arjun father allu aravind buys new bmw i7 electric car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+