ಲ್ಯಾಂಡ್ ರೋವರ್ ಡಿಫೆಂಡರ್‌ನಲ್ಲಿ ಸವಾರಿ ಮಾಡುತ್ತಾ ಕ್ಯಾಮರಾ ಕಣ್ಣಿಗೆ ಬಿದ್ದ ನಟ ಪ್ರಕಾಶ್ ರಾಜ್

ಐಷಾರಾಮಿ ಎಸ್‌ಯುವಿ ತಯಾರಕ ಲ್ಯಾಂಡ್ ರೋವರ್‌ನ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಅನೇಕ ವರ್ಷಗಳ ನಂತರ ಮಾರುಕಟ್ಟೆಗೆ ಮರಳಿದೆ. ಬಿಡುಗಡೆಯಾದಾಗಿನಿಂದಲೂ ಈ ಎಸ್‌ಯುವಿಯು ಜನರಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಸಾಮಾನ್ಯ ಜನರು ಮಾತ್ರವಲ್ಲ, ಸೆಲೆಬ್ರಿಟಿಗಳು ಸಹ ಈ ಎಸ್‌ಯುವಿಗೆ ಅಭಿಮಾನಿಗಳಾಗಿದ್ದಾರೆ.

ಲ್ಯಾಂಡ್ ರೋವರ್ ಡಿಫೆಂಡರ್‌ನಲ್ಲಿ ಸವಾರಿ ಮಾಡುತ್ತಾ ಕ್ಯಾಮರಾ ಕಣ್ಣಿಗೆ ಬಿದ್ದ ನಟ ಪ್ರಕಾಶ್ ರಾಜ್

ಕೆಲವರು ರಾಜಕಾರಣಿಗಳು ಸಹ ಈ ಎಸ್‌ಯುವಿಯನ್ನು ಬಳಸುತ್ತಿದ್ದಾರೆ. ಈಗ ಮತ್ತೊಬ್ಬ ಸೆಲೆಬ್ರಿಟಿ ಈ ಎಸ್‌ಯುವಿಯನ್ನು ಓಡಿಸುತ್ತಿರುವುದು ಕಂಡುಬಂದಿದೆ. ಬಾಲಿವುಡ್ ನಟ ಮತ್ತು ನಿರ್ಮಾಪಕ ಪ್ರಕಾಶ್ ರಾಜ್ ಇತ್ತೀಚೆಗೆ ಲ್ಯಾಂಡ್ ರೋವರ್ ಡಿಫೆಂಡರ್ 110 ರಲ್ಲಿ ಸವಾರಿ ಮಾಡುತ್ತಿರುವುದು ಕಂಡುಬಂದಿದೆ.

ಲ್ಯಾಂಡ್ ರೋವರ್ ಡಿಫೆಂಡರ್‌ನಲ್ಲಿ ಸವಾರಿ ಮಾಡುತ್ತಾ ಕ್ಯಾಮರಾ ಕಣ್ಣಿಗೆ ಬಿದ್ದ ನಟ ಪ್ರಕಾಶ್ ರಾಜ್

ಪ್ರಕಾಶ್ ರಾಜ್ ಲ್ಯಾಂಡ್ ರೋವರ್ ಡಿಫೆಂಡರ್ 110 ಅನ್ನು ಸವಾರಿ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗುತ್ತಿದೆ. ಅವರು ಮುಂಬೈನಲ್ಲಿ ಈ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಕಾಶ್ ರಾಜ್ ಮತ್ತು ಅವರ ತಂಡವು ನಗರವನ್ನು ಸುತ್ತುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಲ್ಯಾಂಡ್ ರೋವರ್ ಡಿಫೆಂಡರ್‌ನಲ್ಲಿ ಸವಾರಿ ಮಾಡುತ್ತಾ ಕ್ಯಾಮರಾ ಕಣ್ಣಿಗೆ ಬಿದ್ದ ನಟ ಪ್ರಕಾಶ್ ರಾಜ್

ವಿಶೇಷವೆಂದರೆ ಈ ಕಾರನ್ನು ಪ್ರಕಾಶ್ ರಾಜ್ ವಾಸಿಸುವ ತೆಲಂಗಾಣ ರಾಜ್ಯದಲ್ಲಿ ನೋಂದಾಯಿಸಲಾಗಿದೆ. ಇದರ ಓಟ್‌ಫಿಟ್‌ ಲ್ಯಾಂಡ್ ರೋವರ್ ಡಿಫೆಂಡರ್ ಮ್ಯಾಟ್ ಬ್ಲ್ಯಾಕ್ ಶೇಡ್‌ನಲ್ಲಿ ಪೂರ್ಣಗೊಂಡಿದೆ. ಗಮನಿಸಬೇಕಾದ ವಿಷಯವೆಂದರೆ ಈ ಬಣ್ಣದ ಛಾಯೆ ಕಂಪನಿಯ ಅಧಿಕೃತ ಬಣ್ಣವಲ್ಲ. ಪ್ರಕಾಶ್ ರಾಜ್ ಈ ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು ಮ್ಯಾಟ್ ಬ್ಲ್ಯಾಕ್ ಫಿನಿಶ್‌ನಲ್ಲಿ ರ್ಯಾಪ್ ಮಾಡಿದ್ದಾರೆ.

ಲ್ಯಾಂಡ್ ರೋವರ್ ಡಿಫೆಂಡರ್‌ನಲ್ಲಿ ಸವಾರಿ ಮಾಡುತ್ತಾ ಕ್ಯಾಮರಾ ಕಣ್ಣಿಗೆ ಬಿದ್ದ ನಟ ಪ್ರಕಾಶ್ ರಾಜ್

ಈ ಬಣ್ಣದೊಂದಿಗೆ ಇದು ತುಂಬಾ ಆಕ್ರಮಣಕಾರಿಯಾಗಿ ಕಾಣುತ್ತಿದೆ. ಸವಾರಿಯ ಸಮಯದಲ್ಲಿ ಪ್ರಕಾಶ್ ರಾಜ್ ಸಹ-ಡ್ರೈವರ್ ಸೀಟಿನಲ್ಲಿ ಕಾಣಿಸಿಕೊಂಡರು. ಇದು ಹೊಚ್ಚ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಅಲ್ಲ ಎಂದು ಹೇಳಲಾಗುತ್ತಿದೆ. ಪ್ರಕಾಶ್ ರಾಜ್ ಕಳೆದ ವರ್ಷ ಈ ಕಾರನ್ನು ಖರೀದಿಸಿದ್ದರು. ಅಲ್ಲದೇ ಕೋಂಡ ಕೂಲೇ ಕಾರಿನ ಬಣ್ಣವನ್ನು ಬದಲಾಯಿಸಿದ್ದಾರೆ. ಭಾರತದಲ್ಲಿ ನಿಜವಾದ ಬಣ್ಣವನ್ನು ತೆರವುಗೊಳಿಸಿ ವಿಭಿನ್ನ ಬಣ್ಣದಲ್ಲಿ ಸುತ್ತುವುದು ಕಾನೂನುಬಾಹಿರವಾಗಿದೆ.

ಲ್ಯಾಂಡ್ ರೋವರ್ ಡಿಫೆಂಡರ್‌ನಲ್ಲಿ ಸವಾರಿ ಮಾಡುತ್ತಾ ಕ್ಯಾಮರಾ ಕಣ್ಣಿಗೆ ಬಿದ್ದ ನಟ ಪ್ರಕಾಶ್ ರಾಜ್

ಲ್ಯಾಂಡ್ ರೋವರ್ ಡಿಫೆಂಡರ್‌ನ 5 ಡೋರುಗಳ ಆವೃತ್ತಿಯಾದ ಡಿಫೆಂಡರ್ 110 ಎಸ್‌ಯುವಿಯನ್ನು 2020ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಲ್ಯಾಂಡ್ ರೋವರ್ ಡಿಫೆಂಡರ್‌ನ 3 ಡೋರುಗಳ ಆವೃತ್ತಿಯಾದ ಡಿಫೆಂಡರ್ 90 ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಲಾಗಿತ್ತು.

ಲ್ಯಾಂಡ್ ರೋವರ್ ಡಿಫೆಂಡರ್‌ನಲ್ಲಿ ಸವಾರಿ ಮಾಡುತ್ತಾ ಕ್ಯಾಮರಾ ಕಣ್ಣಿಗೆ ಬಿದ್ದ ನಟ ಪ್ರಕಾಶ್ ರಾಜ್

ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು 3-ಡೋರ್ ಆವೃತ್ತಿ (ಡಿಫೆಂಡರ್ 90) ಮತ್ತು 5-ಡೋರ್ ಆವೃತ್ತಿ (ಡಿಫೆಂಡರ್ 110) ಸೇರಿದಂತೆ ಎರಡು ಬಾಡಿ ಸ್ಟೈಲ್‌ಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಡಿಫೆಂಡರ್ 90 ಎಕ್ಸ್ ಶೋರೂಂನ ಆರಂಭಿಕ ಬೆಲೆ ಭಾರತದಲ್ಲಿ 76.57 ಲಕ್ಷ ರೂ. ಇದೆ.

ಲ್ಯಾಂಡ್ ರೋವರ್ ಡಿಫೆಂಡರ್‌ನಲ್ಲಿ ಸವಾರಿ ಮಾಡುತ್ತಾ ಕ್ಯಾಮರಾ ಕಣ್ಣಿಗೆ ಬಿದ್ದ ನಟ ಪ್ರಕಾಶ್ ರಾಜ್

ಕಂಪನಿಯು ಈ ಎಸ್‌ಯುವಿಯನ್ನು 3 ಎಂಜಿನ್ ಆಯ್ಕೆಗಳೊಂದಿಗೆ ಪರಿಚಯಿಸಿದೆ. ಇವುಗಳಲ್ಲಿ ಮೊದಲನೆಯದು 2.0-ಲೀಟರ್ ಪೆಟ್ರೋಲ್ ಎಂಜಿನ್ ಆಗಿದ್ದು, ಇದು 296 ಬಿಹೆಚ್‌ಪಿ ಪವರ್ ಮತ್ತು 400 ಎನ್‌ಎಂ ಟಾರ್ಕ್ ಅನ್ನು ನೀಡುತ್ತದೆ. ಇನ್ನೊಂದು 3.0-ಲೀಟರ್ ಡೀಸೆಲ್ ಎಂಜಿನ್ ಆಗಿದ್ದು, ಇದು 296 ಬಿಹೆಚ್‌ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಅನ್ನು ಒದಗಿಸುತ್ತದೆ.

ಲ್ಯಾಂಡ್ ರೋವರ್ ಡಿಫೆಂಡರ್‌ನಲ್ಲಿ ಸವಾರಿ ಮಾಡುತ್ತಾ ಕ್ಯಾಮರಾ ಕಣ್ಣಿಗೆ ಬಿದ್ದ ನಟ ಪ್ರಕಾಶ್ ರಾಜ್

ಮೂರನೇ ಎಂಜಿನ್ ಆಯ್ಕೆಯು 3.0-ಲೀಟರ್ ಪೆಟ್ರೋಲ್ ಎಂಜಿನ್ ಆಗಿದ್ದು, ಇದು 394 ಬಿಹೆಚ್‌ಪಿ ಪವರ್ ಮತ್ತು 550 ಎನ್ಎಂ ಟಾರ್ಕ್ ಅನ್ನು ಒದಗಿಸುತ್ತದೆ. ಲ್ಯಾಂಡ್ ರೋವರ್ ಡಿಫೆಂಡರ್ 90 ತನ್ನ 5-ಡೋರ್ ಅವಳಿಗಳಾದ ಲ್ಯಾಂಡ್ ರೋವರ್ ಡಿಫೆಂಡರ್ 110 ನಂತೆ ಕಾಣುತ್ತದೆ. ಆದಾಗ್ಯೂ, ಇದು ಕೆಲವು ಸಣ್ಣ ವ್ಹೀಲ್ ಬೇಸ್‌ಗಳನ್ನು ಮತ್ತು ಕನಿಷ್ಠ ಓವರ್ ಹ್ಯಾಂಗ್‌ಗಳನ್ನು ಹೊಂದಿದೆ.

ಲ್ಯಾಂಡ್ ರೋವರ್ ಡಿಫೆಂಡರ್‌ನಲ್ಲಿ ಸವಾರಿ ಮಾಡುತ್ತಾ ಕ್ಯಾಮರಾ ಕಣ್ಣಿಗೆ ಬಿದ್ದ ನಟ ಪ್ರಕಾಶ್ ರಾಜ್

ಈ ಎಸ್‌ಯುವಿಯಲ್ಲಿ ಐದು ಜನರು ಆರಾಮವಾಗಿ ಕುಳಿತುಕೊಳ್ಳಬಹುದು. ಈ ಎಸ್‌ಯುವಿಯನ್ನು ಆರು ಸೀಟುಗಳಾಗಿ ಪರಿವರ್ತಿಸಬಹುದು. ಲ್ಯಾಂಡ್ ರೋವರ್ ಕಂಪನಿಯು ಈ ಎಸ್‌ಯುವಿಯಲ್ಲಿ 10 ಇಂಚಿನ ಪಿವಿ ಪ್ರೊ ಇನ್ಫೋಟೇನ್‌ಮೆಂಟ್ ಸಿಸ್ಟಂ ಅನ್ನು ಓವರ್ ದಿ ಏರ್ ಅಪ್ ಡೇಟ್'ಗಳ ಮೂಲಕ ನೀಡಿದೆ.

ಲ್ಯಾಂಡ್ ರೋವರ್ ಡಿಫೆಂಡರ್‌ನಲ್ಲಿ ಸವಾರಿ ಮಾಡುತ್ತಾ ಕ್ಯಾಮರಾ ಕಣ್ಣಿಗೆ ಬಿದ್ದ ನಟ ಪ್ರಕಾಶ್ ರಾಜ್

ಈ ಎಸ್‌ಯುವಿಯಲ್ಲಿ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್'ಟ್ರೂಮೆಂಟ್ ಕನ್ಸೋಲ್ ಅನ್ನು ಸಹ ನೀಡಲಾಗಿದೆ. ಈ ಇನ್ಸ್'ಟ್ರೂಮೆಂಟ್ ಕನ್ಸೋಲ್‌ನಲ್ಲಿ ಫುಲ್ ಸ್ಕ್ರೀನ್ ಮ್ಯಾಪ್, ಫೋನ್ ಹಾಗೂ ಮೀಡಿಯಾ ಫಂಕ್ಷನ್'ಗಳನ್ನು ಕಸ್ಟಮೈಸ್ ಮಾಡಬಹುದು. ಡಿಫೆಂಡರ್ 90 ಎಸ್‌ಯುವಿಯಲ್ಲಿ ಪರ್ಮನೆಂಟ್ ಆಲ್ ವ್ಹೀಲ್ ಡ್ರೈವ್ ಸಿಸ್ಟಂ, ಟೆರೈನ್ ರೆಸ್ಪಾನ್ಸ್ 2 ಸಿಸ್ಟಂಗಳನ್ನು ನೀಡಲಾಗಿದೆ. ಈ ಎಸ್‌ಯುವಿಯು ಹೊಸ ಡಬ್ಲ್ಯುಎಡಿ ಪ್ರೋಗ್ರಾಂ ಅನ್ನು ಸಹ ಹೊಂದಿದೆ.

Most Read Articles

Kannada
English summary
Actor and producer prakash raj spotted in land rover defender 110 suv
Story first published: Wednesday, March 23, 2022, 16:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X