ಐಎಎಸ್ ಆಸೆ.. ಆದ್ರೆ ಆಗಿದ್ದು ಖ್ಯಾತ ಹ್ಯಾಸ ನಟ: ಇಂದು 1.64 ಕೋಟಿಯ ರೇಂಜ್ ರೋವರ್ ಸ್ಪೋರ್ಟ್ ಕಾರು ಖರೀದಿ

ದಸರಾ ಹಬ್ಬ ಬಂದರೆ ಸಾಕು ಬಾಲಿವುಡ್ ಸೆಲೆಬ್ರಿಟಿಗಳು ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ನಟಿ ಶ್ರದ್ಧಾ ಕಪೂರ್ ಲಂಬೋರ್ಗಿನಿ ಹ್ಯುರಾಕನ್, ನಟಿ ಪೂಜಾ ಹೆಗ್ಡೆ ಹೊಚ್ಚ ಹೊಸ ರೇಂಜ್ ರೋವರ್ ಎಸ್‌ಯುವಿಯನ್ನು ಕೊಂಡುಕೊಂಡಿದ್ದಾರೆ.

ಆ ಸಾಲಿಗೆ ಖ್ಯಾತ ಹಾಸ್ಯ ನಟ ಅನುಭವ್ ಸಿಂಗ್ ಬಸ್ಸಿ (Anubhav Singh Bassi) ಕೂಡ ಸೇರ್ಪಡೆಯಾಗಿದ್ದು, ನೂತನ ರೇಂಜ್ ರೋವರ್ ಸ್ಪೋರ್ಟ್ (Range Rover Sport) ಐಷಾರಾಮಿ ಎಸ್‌ಯುವಿಯನ್ನು ತಮ್ಮ ಮನೆಗೆ ತಂದಿದ್ದಾರೆ. ಈ ಕಾರು, ರೂ.1.64 ಕೋಟಿಯಿಂದ 1.84 ಕೋಟಿ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಐಎಎಸ್ ಆಸೆ.. ಆದ್ರೆ ಆಗಿದ್ದು ಖ್ಯಾತ ಹ್ಯಾಸ ನಟ: ಇಂದು 1.64 ಕೋಟಿಯ ರೇಂಜ್ ರೋವರ್ ಸ್ಪೋರ್ಟ್ ಕಾರು ಖರೀದಿ

ಈ ಬಗ್ಗೆ ನಟ ಅನುಭವ್ ಸಿಂಗ್ ಬಸ್ಸಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸ್ವತಃ ಪೋಸ್ಟ್ ಮಾಡಿದ್ದು, ಹೊಸ ರೇಂಜ್ ರೋವರ್ ಸ್ಪೋರ್ಟ್‌ ಕಾರಿನ ಪಕ್ಕದಲ್ಲಿ ನಿಂತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. 'ಎಲ್ಲರಿಗೂ ಪ್ರೀತಿಯ ಧನ್ಯವಾದಗಳು. ದೀಪಾವಳಿಯ ಶುಭಾಶಯಗಳು' ಎಂದು ಬರೆದಿದ್ದಾರೆ. ನೂತನ ಕಾರು ಕೊಂಡುಕೊಂಡಿರುವುದಕ್ಕೆ ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ವಿಶ್ ಮಾಡಿದ್ದಾರೆ.

ಹಾಸ್ಯನಟ ಅನುಭವ್ ಸಿಂಗ್ ಬಸ್ಸಿ, ಖರೀದಿಸಿರುವ ರೇಂಜ್ ರೋವರ್ ಸ್ಪೋರ್ಟ್ ಸ್ಯಾಂಟೋರಿನಿ ಬ್ಲ್ಯಾಕ್ ಬಣ್ಣದ ಆಯ್ಕೆಯನ್ನು ಹೊಂದಿದೆ. ಈ ಕಾರು, 3.0 - ಲೀಟರ್ 6 - ಸಿಲಿಂಡರ್ ಮೈಲ್ಡ್ - ಹೈಬ್ರಿಡ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರೆಯಲಿದ್ದು, 345 PS ಗರಿಷ್ಠ ಪವರ್ ಹಾಗೂ 700 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ ಒಳಗೊಂಡಿದೆ.

ಐಎಎಸ್ ಆಸೆ.. ಆದ್ರೆ ಆಗಿದ್ದು ಖ್ಯಾತ ಹ್ಯಾಸ ನಟ: ಇಂದು 1.64 ಕೋಟಿಯ ರೇಂಜ್ ರೋವರ್ ಸ್ಪೋರ್ಟ್ ಕಾರು ಖರೀದಿ

ಫೋರ್ ವೀಲ್ ಡ್ರೈವ್ ತಂತ್ರಜ್ಞಾನವನ್ನು ಪಡೆದಿರುವ ಈ ಕಾರು, ಬೆಲೆಗೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ, 13.1 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 13.7 - ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಹಾಗೂ ರೇರ್ ಸೀಟ್ಸ್, ಫೋರ್ ಜೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಸುರಕ್ಷತೆಯ ದೃಷ್ಟಿಯಿಂದ ಕೂಡ ರೇಂಜ್ ರೋವರ್ ಸ್ಪೋರ್ಟ್ ಅತ್ಯುತ್ತಮವಾಗಿದೆ. ಇದು, ಏರ್ ಬಾಗ್ಸ್, 3D ಸರೌಂಡ್ ಕ್ಯಾಮೆರಾ, ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ ADAS (ಸುಧಾರಿತ ಚಾಲಕ ಸಹಾಯಕ ವ್ಯವಸ್ಥೆ) ಸಿಸ್ಟಮ್‌ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಈ ಕಾರಿಗೆ ಬಿಎಂಡಬ್ಲ್ಯೂ ಎಕ್ಸ್5, ಪೋರ್ಷೆ ಸೇರಿದಂತೆ ವಿವಿಧ ಕಾರುಗಳು ಪ್ರತಿಸ್ಪರ್ಧಿಯಾಗಿವೆ.

ಐಎಎಸ್ ಆಸೆ.. ಆದ್ರೆ ಆಗಿದ್ದು ಖ್ಯಾತ ಹ್ಯಾಸ ನಟ: ಇಂದು 1.64 ಕೋಟಿಯ ರೇಂಜ್ ರೋವರ್ ಸ್ಪೋರ್ಟ್ ಕಾರು ಖರೀದಿ

ಇನ್ನು, ಉತ್ತರ ಪ್ರದೇಶದ ಪರೀಕ್ಷಿತಗಢದವರಾದ ಅನುಭವ್ ಸಿಂಗ್ ಬಸ್ಸಿ ಸ್ಟಾಂಡ್‌ಅಪ್‌ ಕಾಮಿಡಿಯನ್‌, ಯೂಟ್ಯೂಬರ್‌ ಹಾಗೂ ಜನಪ್ರಿಯ ಹಾಸ್ಯನಟ. 2015ರಲ್ಲಿ ಲಕ್ನೋದ ಡಾ.ರಾಮ್ ಮನೋಹರ್ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಿಂದ ಬಿಎ ಎಲ್‌ಎಲ್‌ಬಿ ಪದವಿ ಪಡೆದು, ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸುತ್ತಾರೆ. ಆದರೆ, ಕಾಮಿಡಿಯನ್‌ ಆಗಬೇಕೆಂಬ ಮಹದಾಸೆಯಿಂದ ಈ ಕಾಮಿಡಿಯನ್‌ ವೃತ್ತಿಯನ್ನು ಆರಿಸಿಕೊಳುತ್ತಾರೆ. ಒಂದೆರಡು ಬಾಲಿವುಡ್ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, October 27, 2023, 12:15 [IST]
English summary
Actor anubhav singh bassi buys rs 1 64 crore worth range rover sport car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+