ತೆಂಗಿನ ಕಾಯಿ ಒಡೆದು ಪೂಜೆ.. ಶ್ರೀಸಾಮಾನ್ಯರಂತೆ 1.35 ಲಕ್ಷ ಕೊಟ್ಟು ಹೊಸ ಇ-ಸ್ಕೂಟರ್‌ನ್ನು ಮನೆಗೆ ತಂದ ಪ್ರಖ್ಯಾತ ನಟ!
ಬಾಲಿವುಡ್ ಖ್ಯಾತ ನಟ ಅರ್ಜುನ್ ಕಪೂರ್ (Arjun Kapoor), ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದಾ ನಟಿಯಾರೊಂದಿಗೆ ಡೇಟಿಂಗ್ ಮಾಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಮಲೈಕಾ ಅರೋರಾ ಅವರೊಂದಿಗಿನ ಸಂಬಂಧ ಮುರಿದುಬಿದ್ದಿದ್ದು, ಕುಶಾ ಕಪಿಲಾ ಜೊತೆಯಲ್ಲಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಅರ್ಜುನ್ ಕಪೂರ್ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದು, ರೋಹಿತ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿರುವ ಅಜಯ್ ದೇವಗನ್ ನಟನೆಯ 'ಸಿಂಗಂ ಎಗೇನ್' ಚಿತ್ರದಲ್ಲಿ 'ವಿಲನ್' ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ದೀಪಾವಳಿಗೆ ರಿಲೀಸ್ ಆಗಲಿದೆ.
ನಟ ಅರ್ಜುನ್ ಕಪೂರ್ ಅವರ ಬಳಿ ಕೋಟಿ ಬೆಲೆಯ ಐಷಾರಾಮಿ ಕಾರುಗಳನ್ನು ತೆಗೆದುಕೊಳ್ಳುವಷ್ಟು ಹಣವಿದೆ. ಆದರೆ, ಬುಧವಾರ ಶ್ರೀಸಾಮಾನ್ಯರಂತೆ 1.35 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿರುವ ಬಿಗಾಸ್ ಆರ್‌ಯುವಿ350 ಮ್ಯಾಕ್ಸ್ (BGauss RUV 350 Max) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಖರೀದಿ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿವೆ.

ನಟ ಅರ್ಜುನ್ ಕಪೂರ್ ತಮ್ಮ ಮುಂಬೈ ನಿವಾಸದ ಎದುರು 'ಬಿಗಾಸ್ ಆರ್‌ಯುವಿ350 ಮ್ಯಾಕ್ಸ್' ಇ-ಸ್ಕೂಟರ್‌ನ್ನು ವಿತರಣೆ ಪಡೆದು, ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದರು. ಆ ಬಳಿಕ ಸಿಹಿ ಹಂಚಿ ಸಂಭ್ರಮಿಸಿ, ನೂತನ ಸ್ಕೂಟರ್‌ನ್ನು ಒಂದಷ್ಟು ದೂರ ಚಲಾಯಿಸುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ನೋಡಬಹುದು. ಅರ್ಜುನ್ ಕಪೂರ್ ಅವರ ಪರಿಸರ ಪ್ರೇಮಕ್ಕೆ ಹಲವು ನೆಟ್ಟಿಗರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಟ ಅರ್ಜುನ್ ಕಪೂರ್ ಕೊಂಡುಕೊಂಡಿರುವ ಬಿಗಾಸ್ ಆರ್‌ಯುವಿ350 ಮ್ಯಾಕ್ಸ್ (BGauss RUV 350 Max) ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ ಬಗ್ಗೆ ಹೇಳುವುದಾದರೆ, ಇದು ಕೆಲವೇ ತಿಂಗಳ ಹಿಂದೆ, ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿತ್ತು. 3 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 120 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ.

ಹೊಚ್ಚ ಹೊಸ ಬಿಗಾಸ್ ಆರ್‌ಯುವಿ350 ಮ್ಯಾಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಆಕರ್ಷಕವಾದ ವಿನ್ಯಾಸವನ್ನು (ಡಿಸೈನ್) ಹೊಂದಿದೆ. ಮುಂಭಾಗದ (ಫ್ರಂಟ್) ಹ್ಯಾಂಡಲ್‌ಬಾರ್‌ನಲ್ಲಿ ಸ್ಕ್ವೇರ್ ಹೆಡ್‌ಲೈಟ್‌ನ್ನು ಪಡೆದಿದೆ. ಫ್ಲೋರ್‌ಬೋರ್ಡ್ ಸಾಕಷ್ಟು ವಿಶಾಲವಾಗಿದೆ. ಆಸನವು (ಸೀಟ್) ಕೂಡ ವೃದ್ದುವಾಗಿದ್ದು, ಸಿಂಗಲ್ - ಪೀಸ್ ಗ್ರಾಬ್ ಹ್ಯಾಂಡಲ್‌ಗಳನ್ನು ಒಳಗೊಂಡಿದೆ.
ಈ ಬಿಗಾಸ್ ಆರ್‌ಯುವಿ350 ಮ್ಯಾಕ್ಸ್ 75 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದ್ದು, ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. 5-ಇಂಚಿನ ಟಿಎಎಫ್‌ಟಿ ಡಿಸ್ಪ್ಲೇಯನ್ನು ಒಳಗೊಂಡಿದೆ. ಇದರಲ್ಲಿ ಕಾಲ್ ನೋಟಿಫಿಕೇಶನ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ರೈಡಿಂಗ್ & ಚಾರ್ಜಿಂಗ್ ಅಂಕಿಅಂಶಗಳನ್ನು ವೀಕ್ಷಿಸಬಹುದು. ಚಾರ್ಜಿಂಗ್ ಪೋರ್ಟ್ ಹಾಗೂ ಪವರ್‌ಟ್ರೇನ್ ಆನ್/ಆಫ್ ಸ್ವಿಚ್ ಕೂಡ ಹೊಂದಿದೆ.

ನೂತನ ಎಲೆಕ್ಟ್ರಿಕ್ ಸ್ಕೂಟರ್, 1,335 ಎಂಎಂ ವೀಲ್‌ಬೇಸ್ (ಚಕ್ರಗಳ ನಡುವಿನ ಅಂತರ) ಮತ್ತು 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ (ನೆಲದ ಎತ್ತರ) ಹೊಂದಿದೆ. ಸೀಟ್ ಹೈಟ್ (ಆಸನ ಎತ್ತರ) 785 ಎಂಎಂ ಇದೆ. 16-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications