ಲ್ಯಾಂಡ್ ರೋವರ್ ಡಿಫೆಂಡರ್ ಆಫ್ ರೋಡ್ ಎಸ್‌ಯುವಿ ಖರೀದಿಸಿದ ನಟ ಆಯುಷ್ ಶರ್ಮಾ

ಸಿನಿಮಾ ಕಲಾವಿದರು ಅವರ ಪಾತ್ರಗಳ ಅಭಿನಯದ ಜೊತೆ ಜೊತೆಗೆ ಲೈಫ್ ಸ್ಟೈಲ್ ಮೂಲಕವೂ ಆಗಾಗ ಸುದ್ದಿಯಲ್ಲಿರುವುದು ಹೊಸ ವಿಚಾರವಲ್ಲ. ಇದೀಗ ಲವ್ ಯಾತ್ರಿ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ನಟ ಆಯುಶ್ ಶರ್ಮಾ ಕೂಡಾ ಐಷಾರಾಮಿ ಆಫ್ ರೋಡ್ ಕಾರು ಮಾದರಿಯೊಂದನ್ನು ಖರೀದಿಸುವ ಮೂಲಕ ಬಾಲಿವುಡ್ ನಟರ ಗಮನಸೆಳೆದಿದ್ದಾರೆ.

ಲ್ಯಾಂಡ್ ರೋವರ್ ಡಿಫೆಂಡರ್ ಆಫ್ ರೋಡ್ ಎಸ್‌ಯುವಿ ಖರೀದಿಸಿದ ನಟ ಆಯುಷ್ ಶರ್ಮಾ

ಹೌದು, ಲ್ಯಾಂಡ್ ರೋವರ್ ನಿರ್ಮಾಣದ ಡಿಫೆಂಡರ್ ಆಫ್ ರೋಡ್ ಎಸ್‌ಯುವಿ ಕಾರು ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದು, ಹೊಸ ಕಾರು ಬಿಡುಗಡೆಯಾದ ಆರಂಭದಲ್ಲೇ ನಟ ಆಯುಶ್ ಶರ್ಮಾ ಕೂಡಾ ಮಾಲೀಕತ್ವ ಪಡೆದುಕೊಂಡಿದ್ದಾರೆ. ಮುಂಬೈನಲ್ಲಿ ಹೊಸ ಕಾರಿನ ವಿತರಣೆಯನ್ನು ಪಡೆದುಕೊಂಡಿರುವ ನಟ ಆಯುಶ್ ಶರ್ಮಾ ಬಾಲಿವುಡ್ ನಟರಲ್ಲೇ ಮೊದಲ ಬಾರಿಗೆ ಹೊಸ ಡಿಫೆಂಡರ್ ಕಾರು ಖರೀದಿಸಿದ ಮೊದಲ ನಟ ಎನ್ನಲಾಗಿದ್ದು, ಬಾಲಿವುಡ್ ಚಿತ್ರರಂಗದಲ್ಲಿ ಹಲವಾರು ನಟ-ನಟಿಯರು ತಮ್ಮದೆ ಆದ ಅಭಿರುಚಿಗೆ ತಕ್ಕಂತೆ ವಿವಿಧ ವಾಹನ ಮಾದರಿಗಳ ಕಲೆಕ್ಷನ್ ಹೊಂದಿದ್ದಾರೆ.

ಲ್ಯಾಂಡ್ ರೋವರ್ ಡಿಫೆಂಡರ್ ಆಫ್ ರೋಡ್ ಎಸ್‌ಯುವಿ ಖರೀದಿಸಿದ ನಟ ಆಯುಷ್ ಶರ್ಮಾ

ಇದೀಗ ನಟ ಆಯುಶ್ ಶರ್ಮಾ ಕೂಡಾ ವಿವಿಧ ಬ್ರಾಂಡ್‌ಗಳ ಹಲವು ಐಷಾರಾಮಿಗಳ ಜೊತೆಗೆ ಆಫ್ ರೋಡ್ ಚಾಲನೆಗಾಗಿಯೇ ವಿಶೇಷ ವೈಶಿಷ್ಟ್ಯತೆಗಳನ್ನು ಹೊಂದಿರುವ ಲ್ಯಾಂಡ್ ರೋವಲ್ ಡಿಫೆಂಡರ್ ಖರೀದಿಸಿದ್ದು, ಈ ಕಾರು ಭಾರತದಲ್ಲಿ ಎಕ್ಸ್‌ಶೋರೂಂ ದರದಂತೆ ಆರಂಭಿಕವಾಗಿ ರೂ. 73.98 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.79.94 ಲಕ್ಷ ಬೆಲೆ ಹೊಂದಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಆಫ್ ರೋಡ್ ಎಸ್‌ಯುವಿ ಖರೀದಿಸಿದ ನಟ ಆಯುಷ್ ಶರ್ಮಾ

ಡಿಫೆಂಡರ್ ಆಫ್-ರೋಡ್ ಕಾರು ಮಾದರಿಯು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರೀ ಜನಪ್ರಿಯತೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಡಿಫೆಂಡರ್ 90(3 ಡೋರ್) ಹಾಗೂ ಡಿಫೆಂಡರ್ 110(5 ಡೋರ್) ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಆಫ್ ರೋಡ್ ಎಸ್‌ಯುವಿ ಖರೀದಿಸಿದ ನಟ ಆಯುಷ್ ಶರ್ಮಾ

ಲ್ಯಾಂಡ್ ರೋವರ್ ಡಿಫೆಂಡರ್ ಹೊಸ ಕಾರು ಮಾದರಿಯು ಡಿ7ಎಕ್ಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಮೊನೊಕೊಕ್ ಚಾಸಿಸ್ ಅನ್ನು ಹೊಂದಿದೆ. ಬೇಸ್, ಎಸ್, ಎಸ್ಇ, ಹೆಚ್ಎಸ್ಇ ಮತ್ತು ಫಸ್ಟ್ ಎಡಿಷನ್ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದ್ದು, ಹೊಸ ಕಾರು ಭಾರತಕ್ಕೆ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮಾದರಿಯಲ್ಲಿ ಮಾರಾಟಗೊಳ್ಳುತ್ತಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಆಫ್ ರೋಡ್ ಎಸ್‌ಯುವಿ ಖರೀದಿಸಿದ ನಟ ಆಯುಷ್ ಶರ್ಮಾ

ಈ ಎಸ್‌ಯುವಿಯು ವಿಶಾಲವಾದ ಕ್ಯಾಬಿನ್, ದೊಡ್ಡದಾದ ಪನೋರಾಮಿಕ್ ಸನ್‌ರೂಫ್, ಸೈಡ್ ಆಲ್ಪೈನ್ ಲೈಟ್ ವಿಂಡೋಗಳನ್ನು ಹೊಂದಿದೆ. ಡಿಫೆಂಡರ್ ಎಸ್‌ಯುವಿ ಮೂರು ರೀತಿಯ ಇಂಟಿರಿಯರ್ ಬಣ್ಣಗಳನ್ನು ಹೊಂದಿದೆ. ಪ್ಯಾಂಗಿಯಾ ಗ್ರೀನ್ ಬಣ್ಣವು ಕಪ್ಪಾದ ಇಂಟಿರಿಯರ್ ಹೊಂದಿದ್ದರೆ, ಮತ್ತೊಂದು ಲೈಟ್ ಕ್ರೀಮ್ ಬಣ್ಣದ ಇಂಟಿರಿಯರ್ ಅನ್ನು ಹೊಂದಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಆಫ್ ರೋಡ್ ಎಸ್‌ಯುವಿ ಖರೀದಿಸಿದ ನಟ ಆಯುಷ್ ಶರ್ಮಾ

ಎಕ್ಸ್‌ಟಿರಿಯರ್ ನಲ್ಲಿ 360 ಡಿಗ್ರಿಯ ಆರು ಕ್ಯಾಮೆರಾ, ಸೆನ್ಸಾರ್ ಗಳಿವೆ. ಐಆರ್ ವಿಎಂ ಹಿಂದೆ ಒಂದು ಕ್ಯಾಮೆರಾ ಇದ್ದು, ಈ ಕ್ಯಾಮರಾ ಆಕ್ಟೀವ್ ಲೇನ್ ಅಸಿಸ್ಟ್ ಹಾಗೂ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಆಗಿ ಕಾರ್ಯ ನಿರ್ವಹಿಸಿದರೆ, ಐಆರ್ ವಿಎಂನಲ್ಲಿ (ಸ್ವಿಚ್ ಮೂಲಕ) ವೀಡಿಯೊವನ್ನು ಪ್ರದರ್ಶಿಸುವ ಶಾರ್ಕ್-ಫಿನ್ ಆಂಟೆನಾದಲ್ಲಿಯೂ ಕ್ಯಾಮೆರಾ ನೀಡಲಾಗಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಆಫ್ ರೋಡ್ ಎಸ್‌ಯುವಿ ಖರೀದಿಸಿದ ನಟ ಆಯುಷ್ ಶರ್ಮಾ

ಈ ಎಸ್‌ಯುವಿಯು ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಹೊಂದಿರುವ 10 ಇಂಚಿನ ಇನ್ಫೋಟೇನ್ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಲೆದರ್ ವ್ರಾಪ್ ಸ್ಟೀಯರಿಂಗ್ ವ್ಹೀಲ್, ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, 3 ಡಿ ಮೆರಿಡಿಯನ್ ಸರೌಂಡ್ ಸೌಂಡ್ ಸಿಸ್ಟಮ್, ಆ ಸ್ಟ್ರೀಮ್ ಕ್ರಾಸಿಂಗ್‌ಗಳಿಗಾಗಿ ವೇಡ್-ಸೆನ್ಸಿಂಗ್ ಹಾಗೂ ಡ್ರೈವರ್ ಕಂಡಿಷನ್ ಮಾನಿಟರಿಂಗ್ ಫೀಚರ್ ಗಳನ್ನು ಹೊಂದಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಆಫ್ ರೋಡ್ ಎಸ್‌ಯುವಿ ಖರೀದಿಸಿದ ನಟ ಆಯುಷ್ ಶರ್ಮಾ

ಇನ್ನು ಲ್ಯಾಂಡ್ ರೋವರ್ ಡಿಫೆಂಡರ್ ಕಾರು 5,018-ಎಂಎಂ ಉದ್ದ, 2,105-ಎಂಎಂ ಅಗಲ ಮತ್ತು 1,967-ಎಂಎಂ ಎತ್ತರವನ್ನು ಹೊಂದಿದ್ದು, ಈ ಎಸ್‍ಯುವಿಯು 3,022 ಎಂಎಂ ವ್ಹೀಲ್ ಬೇಸ್‌ನೊಂದಿಗೆ 218-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ. ಈ ಮೂಲಕ ಆಫ್ ರೋಡ್ ಕೌಶಲ್ಯತೆಯಲ್ಲಿ ಎದುರಾಳಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ಹೊಸ ಕಾರು ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣ ಒದಗಿಸುವಲ್ಲಿ ಯಶಸ್ವಿಯಾಗಿದೆ.

Source: Carandbike

More from DriveSpark

Article Published On: Thursday, November 19, 2020, 18:33 [IST]
English summary
Land Rover Defender First Unit Delivered To Actor Ayush Sharma. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+