ಸೂಪರ್ ಸ್ಟಾರ್ ರಜಿನಿಕಾಂತ್ ಮಾಜಿ ಅಳಿಯನ ಮನೆ ಸೇರಿತು 1.8 ಕೋಟಿಯ ಐಷಾರಾಮಿ ಬಿಎಂಡಬ್ಲ್ಯು
ತಮಿಳು ನಟ ಧನುಷ್ ಅವರು 1.78 (ಎಕ್ಸ್ ಶೋರೂಂ) ಕೋಟಿ ರೂ. ಮೌಲ್ಯದ BMW 7-ಸಿರೀಸ್ ಐಷಾರಾಮಿ ಸೆಡಾನ್ ಅನ್ನು ಖರೀದಿಸಿದ್ದಾರೆ. ಧನುಷ್ ಅವರ BMW ಕಾರಿನ ಇತ್ತೀಚಿನ ವೀಡಿಯೊವು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ನಟ ತಮ್ಮ ಹೊಸ ಕಾರಿನಲ್ಲಿ ಪ್ರಯಾಣಿಸುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
BMW 7-ಸಿರೀಸ್ ಭಾರತೀಯ ಸೆಲೆಬ್ರಿಟಿಗಳಲ್ಲಿ ಹೆಚ್ಚು ಜನಪ್ರಿಯವಾದ ಐಷಾರಾಮಿ ಸೆಡಾನ್ ಆಗಿದೆ. ಅನೇಕ ಜನಪ್ರಿಯ ಉದ್ಯಮಿಗಳು ಕೂಡ ಈ ಐಷಾರಾಮಿ ಸೆಡಾನ್‌ನ ಹಿಂದಿನ ಪೀಳಿಗೆಯ (Old Gen) ಮಾದರಿಗಳನ್ನು ಬಳಸುತಿದ್ದಾರೆ. ಇದೀಗ ಬಂದಿರುವ ಹೊಸ ಸೆಡಾನ್‌ನ ಪ್ರಸ್ತುತ ಪೀಳಿಗೆಯು (New Gen) ICE ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಲಭ್ಯವಿದೆ.

ಇನ್ನು ಧನುಷ್ ಅವರ ಹೊಸ BMW 7-ಸಿರೀಸ್ ಸೆಡಾನ್ ವಿಷಯಕ್ಕೆ ಬಂದರೆ, ಆಕ್ಸೈಡ್ ಗ್ರೇ ಮೆಟಾಲಿಕ್ ಬಣ್ಣದ ಕಾರನ್ನು ಖರೀದಿಸಿದ್ದಾರೆ. ವೀಡಿಯೊದಲ್ಲಿ, ಧನುಷ್ ಅವರ ಹೊಚ್ಚಹೊಸ BMW 7-ಸರಣಿಯು ವಸತಿ ಪ್ರದೇಶದಲ್ಲಿ ಕಿರಿದಾದ ರಸ್ತೆಗಳ ಮೂಲಕ ಹೋಗುವಾಗ ಸೆರೆಹಿಡಿಯಲಾಗಿದೆ. ನಟ ಧನುಷ್ ಹಿಂಬದಿ ಸೀಟಿನಲ್ಲಿ ಕುಳಿತಿರುವುದನ್ನು ಕಾಣಬಹುದು.
ವೀಡಿಯೊದಲ್ಲಿ ಕಾಣುವ 7-ಸರಣಿಯು ನವೀಕರಿಸಿದ 2023ರ ಮಾದರಿಯಾಗಿದ್ದು, ಮುಂಭಾಗದಲ್ಲಿ ದೊಡ್ಡ ಕಿಡ್ನಿ ಗ್ರಿಲ್ ಅನ್ನು ಎಲ್ಇಡಿ ಬಾರ್‌ಗಳೊಂದಿಗೆ ನೀಡಲಾಗಿದೆ. ಹೆಡ್‌ಲ್ಯಾಂಪ್ ಒಂದು ಸ್ಪ್ಲಿಟ್ ಯೂನಿಟ್ ಆಗಿದ್ದು, ಕಾರು ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, LED ಲ್ಯಾಂಪ್‌ಗಳು, 19 ಇಂಚಿನ ಅಲಾಯ್ ವೀಲ್‌ಗಳು ಮತ್ತು ಇತರ ನವೀಕರಣಗಳನ್ನು ಹೊಂದಿದೆ.

ಇಂಟೀರಿಯರ್ ವಿಷಯಕ್ಕೆ ಬಂದರೆ BMW 7 ಸಿರೀಸ್ ನಲ್ಲಿ ದೊಡ್ಡ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ನೋಡಬಹುದಾಗಿದ್ದು, ಇದು ಇತ್ತೀಚಿನ ಹೊಸ BMW ಗಳಲ್ಲಿ ಸಾಮಾನ್ಯ ವೈಶಿಷ್ಟ್ಯವಾಗಿದೆ. ಇನ್ನು 12.3 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 14.9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಅನ್ನು ಒಳಗೊಂಡಿದೆ.
ಉಳಿದಂತೆ ರೂಫ್ ಮೌಂಟೆಡ್ 31.3 ಇಂಚಿನ 8K ಸಿನಿಮಾ ಸ್ಕ್ರೀನ್, ಹಿಂಭಾಗದ ಡೋರ್ ಪ್ಯಾಡ್‌ಗಳಲ್ಲಿ 5.5 ಇಂಚಿನ ಟಚ್‌ಸ್ಕ್ರೀನ್‌ಗಳು, ಸನ್‌ರೂಫ್, ಲೆದರ್ ಅಪ್ಹೋಲ್‌ಸ್ಟರಿ ಜೊತೆಗೆ ಪವರ್ ಅಡ್ಜಸ್ಟಬಲ್ ಸೀಟ್‌ಗಳು, ಆಂಬಿಯೆಂಟ್ ಲೈಟಿಂಗ್ ಮತ್ತು ಹಲವಾರು ಇತರ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು ಸಾಕಷ್ಟು ಪ್ರೀಮಿಯಂ ಆಗಿ ಕಾಣುತ್ತದೆ.

ವೀಡಿಯೊದಲ್ಲಿ ಕಾಣಿಸಿಕೊಂಡಿರುವ 7-ಸರಣಿಯು 740i M ಸ್ಪೋರ್ಟ್ ವೇರಿಯೆಂಟ್ ಆಗಿದ್ದು, ಇದರ ಬೆಲೆ ರೂ 1.78 ಕೋಟಿ, ಎಕ್ಸ್ ಶೋ ರೂಂ. ಈ ಆವೃತ್ತಿಯು 3.0-ಲೀಟರ್, ಇನ್-ಲೈನ್ ಆರು-ಸಿಲಿಂಡರ್, ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್‌ನಿಂದ 375 Bhp ಮತ್ತು 520 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಹೆಚ್ಚುವರಿಯಾಗಿ, ಈ ಐಷಾರಾಮಿ ಸೆಡಾನ್‌ನಲ್ಲಿನ ಎಂಜಿನ್ ಮೈಲ್ಡ್ ಹೈಬ್ರಿಡ್ ಸಿಸ್ಟಮ್ ಮತ್ತು 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಪ್ರಮಾಣಿತವಾಗಿ ಜೋಡಿಸಲಾಗಿದೆ. ಅದರ ಗಾತ್ರದ ಹೊರತಾಗಿಯೂ, ಕಾರು ಕೇವಲ 5.4 ಸೆಕೆಂಡುಗಳಲ್ಲಿ 100 kmph ವೇಗವನ್ನು ತಲುಪುತ್ತದೆ, ಜೊತೆಗೆ 250 kmph ಗರಿಷ್ಟ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications