ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದ ನಟ ಧನು‍ಷ್‌ ರೋಲ್ಸ್‌ ರಾಯ್ಸ್‌ ಕಾರು

ತಮಿಳಿನ ಖ್ಯಾತ ನಟ ಧನುಷ್ ಬಳಿ ಇರುವ ಹಲವು ಐಷಾರಾಮಿ ಕಾರುಗಳಲ್ಲಿ ರೋಲ್ಸ್ ರಾಯ್ಸ್ ಘೋಸ್ಟ್‌ ಕೂಡಾ ಒಂದು. ಆದರೆ ಈವರೆಗೆ ಅವರು ಅದನ್ನು ಬಳಸಿರುವುದು ಅತಿ ವಿರಳ. ಇದೀಗ ಮೊಟ್ಟಮೊದಲ ಬಾರಿಗೆ ತಮ್ಮ ರೋಲ್ಸ್‌ರಾಯ್ಸ್ ಕಾರು ಸಂಚರಿಸುವುದು ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದ ನಟ ಧನು‍ಷ್‌ ಅವರ ರೋಲ್ಸ್‌ ರಾಯ್ಸ್‌ ಕಾರು

ಭಾರತದಲ್ಲಿ ರೋಲ್ಸ್ ರಾಯ್ಸ್ ಐಷಾರಾಮಿ ಕಾರನ್ನು ಬಳಸುವ ಕೆಲವೇ ಕೆಲವು ನಟರಲ್ಲಿ ಧನುಷ್ ಕೂಡಾ ಒಬ್ಬರು. 2015 ರಲ್ಲಿ ಅವರು ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಿದ್ದರು. ಈ ರೋಲ್ಸ್ ರಾಯ್ಸ್ ಘೋಸ್ಟ್ ಐಷಾರಾಮಿ ಕಾರು ಮಾದರಿಯು ಭಾರತೀಯ ಉದ್ಯಮಿಗಳು ಮತ್ತು ಐಷಾರಾಮಿ ಕಾರು ಉತ್ಸಾಹಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ.

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದ ನಟ ಧನು‍ಷ್‌ ಅವರ ರೋಲ್ಸ್‌ ರಾಯ್ಸ್‌ ಕಾರು

ಧನುಷ್ ತಮ್ಮ ಐಷಾರಾಮಿ ವಾಹನದಲ್ಲಿ ಪ್ರಯಾಣ ಮಾಡುತ್ತಿರುವ ದೃಶ್ಯ ಸದ್ಯ ಕ್ಯಾಮೆರಾ ಕಣ್ಣಿಗೆ ತುಂಬಾ ಸ್ಪಷ್ಟವಾಗಿ ಸೆರೆಯಾಗಿದೆ. ಈ ಕಾರು ಧನುಷ್ ಅವರ ಬಳಕೆಯಲ್ಲಿ ಬಹಳ ದಿನಗಳಿಂದ ಇದ್ದರೂ, ಇದೇ ಮೊದಲ ಬಾರಿಗೆ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದ ನಟ ಧನು‍ಷ್‌ ಅವರ ರೋಲ್ಸ್‌ ರಾಯ್ಸ್‌ ಕಾರು

ಅಜಯ್ ಶರಣ್ ಎಂಬಾತ ಧನುಷ್ ಅವರ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಸಂಚರಿಸುವ ವೇಳೆ ಫೋಟೋಗಳನ್ನು ತೆಗೆದು ತಮ್ಮ ಇನ್‌ಸ್ಟಾ ಖಾತೆಯ ಮೂಲಕ ಕಾರಿನ ಎಲ್ಲಾ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದು ರೋಲ್ಸ್ ರಾಯ್ಸ್ ಘೋಸ್ಟ್ ಸರಣಿ 2 ಮಾದರಿಯಾಗಿದೆ. ಧನುಷ್ ಅವರಿಗೆ ಸರಿಹೊಂದುವಂತೆ ಕೆಲವು ಮಾರ್ಪಾಡುಗಳೊಂದಿಗೆ ಈ ಕಾರನ್ನು ಖರೀದಿಸಿರುವುದು ಗಮನಾರ್ಹ.

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದ ನಟ ಧನು‍ಷ್‌ ಅವರ ರೋಲ್ಸ್‌ ರಾಯ್ಸ್‌ ಕಾರು

ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಘೋಸ್ಟ್ ಕಾರು 6.6 ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ ವಿ12 ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ ಗರಿಷ್ಠ 563 bhp ಪವರ್ ಮತ್ತು 780 Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಿಂದ ಚಾಲಿತವಾಗುತ್ತದೆ.

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದ ನಟ ಧನು‍ಷ್‌ ಅವರ ರೋಲ್ಸ್‌ ರಾಯ್ಸ್‌ ಕಾರು

ನಟ ಧನುಷ್ ಬಳಿ ಇರುವ ಕಾರಿಗಿಂತಲೂ ಎರಡನೇ ತಲೆಮಾರಿನ ಆವೃತ್ತಿಯು ಇದಕ್ಕಿಂತ ಹಲವು ಪಟ್ಟು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ರೋಲ್ಸ್ ರಾಯ್ಸ್ ಈಗಾಗಲೇ ಘೋಸ್ಟ್ ಕಾರಿನ ಎರಡನೇ ತಲೆಮಾರಿನ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದ ನಟ ಧನು‍ಷ್‌ ಅವರ ರೋಲ್ಸ್‌ ರಾಯ್ಸ್‌ ಕಾರು

ಎರಡನೇ ತಲೆಮಾರಿನ ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿಯೂ ಲಭ್ಯವಿದೆ. ಸದ್ಯ ಇದರ ಬೆಲೆ ರೂ. 7 ಕೋಟಿಗೂ ಅಧಿಕವಿದೆ. ಇದು ಕೇವಲ ಎಕ್ಸ್ ಶೋ ರೂಂ ಬೆಲೆ. ಎರಡನೇ ತಲೆಮಾರಿನ ಘೋಸ್ಟ್ ಹಿಂದಿನ ಪೀಳಿಗೆಗಿಂತ ಹೆಚ್ಚಿನ ಮಾರ್ಪಾಡುಗಳು ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದ ನಟ ಧನು‍ಷ್‌ ಅವರ ರೋಲ್ಸ್‌ ರಾಯ್ಸ್‌ ಕಾರು

ಹೊಸ ಬದಲಾವಣೆಗಳ ಆಧಾರದ ಮೇಲೆ ಕಾರಿನ ಗಾತ್ರಗಳನ್ನು ಸಹ ಬದಲಾಯಿಸಲಾಗಿದೆ. ಪರಿಮಾಣದಲ್ಲಿನ ಈ ಬದಲಾವಣೆಯಿಂದಾಗಿ ಕಾರಿನ ಸಂಗ್ರಹವನ್ನು 507 ಲೀಟರ್‌ಗೆ ಹೆಚ್ಚಿಸಲಾಗಿದೆ. ಆದ್ದರಿಂದ, ಈ ಕಾರಿನಲ್ಲಿ ಅತ್ಯಂತ ಅಗತ್ಯವಾದ ವಸ್ತುಗಳನ್ನು ಸಾಗಿಸಬಹುದು. ಇದರ ಜೊತೆಗೆ ಎರಡನೇ ತಲೆಮಾರಿನ ಘೋಸ್ಟ್ ಎಂಜಿನ್ ಮತ್ತು ಸಸ್ಪೆನ್ಶನ್‌ನಲ್ಲೂ ಬದಲಾವಣೆ ಮಾಡಲಾಗಿದೆ.

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದ ನಟ ಧನು‍ಷ್‌ ಅವರ ರೋಲ್ಸ್‌ ರಾಯ್ಸ್‌ ಕಾರು

50:50 ತೂಕದ ವಿತರಣೆಯನ್ನು ಒದಗಿಸಲು ಕಾರಿನ ಎಂಜಿನ್ ಮುಂಭಾಗದ ಆಕ್ಸಲ್‌ ಅನ್ನು ಹಿಂದೆ ಇರಿಸಲಾಗಿದೆ. ಹೀಗಾಗಿ ಅದರಲ್ಲಿನ ಪ್ರಯಾಣ ಖಂಡಿತವಾಗಿಯೂ ಐಷಾರಾಮಿ ಹಡಗಿನಲ್ಲಿ ತೇಲುತ್ತಿರುವಂತಹ ಅನುಭವ ನೀಡುತ್ತದೆ. ರೋಲ್ಸ್ ರಾಯ್ಸ್ ಉತ್ಪನ್ನಗಳು ಇಂತಹ ಐಷಾರಾಮಿ ಪ್ರಯಾಣದ ಅನುಭವವನ್ನು ನೀಡುತ್ತವೆ ಎಂಬ ಕಾರಣಕ್ಕಾಗಿ ಶ್ರೀಮಂತರು ಇದಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ.

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದ ನಟ ಧನು‍ಷ್‌ ಅವರ ರೋಲ್ಸ್‌ ರಾಯ್ಸ್‌ ಕಾರು

ಈಗಾಗಲೇ ಹೇಳಿದಂತೆ ಎರಡನೇ ತಲೆಮಾರಿನ ಘೋಸ್ಟ್ ಕಾರಿನಲ್ಲಿ ಹೊಸ ಎಂಜಿನ್ ಇದ್ದು, 6.6 ಲೀಟರ್ ವಿ12 ಪೆಟ್ರೋಲ್ ಎಂಜಿನ್ ಬಳಸಲಾಗಿದೆ. ಈ ಎಂಜಿನ್ ಗರಿಷ್ಠ 571 ಪಿಎಸ್ ಪವರ್ ಮತ್ತು 850 ಎನ್ಎಂ ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಕಡಿಮೆ ಆರ್‌ಪಿಎಂನಲ್ಲಿಯೂ ಹೆಚ್ಚಿನ ಟಾರ್ಕ್ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದ ನಟ ಧನು‍ಷ್‌ ಅವರ ರೋಲ್ಸ್‌ ರಾಯ್ಸ್‌ ಕಾರು

ಎರಡನೇ ತಲೆಮಾರಿನ ಘೋಸ್ಟ್ ಕಾರಿನ ಒಟ್ಟಾರೆ ತೂಕ 2.5 ಟನ್ ಇದ್ದು, ಇದು ಕೇವಲ 4.8 ಸೆಕೆಂಡುಗಳಲ್ಲಿ 100 ಕಿಮೀ ವೇಗವನ್ನು ತಲುಪುತ್ತದೆ. ಅಲ್ಲದೆ, ಇದರ ಗರಿಷ್ಠ ವೇಗ ಗಂಟೆಗೆ 205 ಕಿಮೀ. ಈ ಸೂಪರ್ ಕಾರನ್ನು ಬಾಲಿವುಡ್ ಚಿತ್ರರಂಗದ ಹಲವು ನಟರು ಬಳಸುತ್ತಿದ್ದಾರೆ.

Most Read Articles

Kannada
English summary
Actor dhanush rolls royce ghost caught on camera very clearly
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X