ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ತಾಯಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ 'ದಿ ರಾಕ್‌'

ಮಾಜಿ ಡಬ್ಲ್ಯುಡಬ್ಲ್ಯುಇ ಕುಸ್ತಿಪಟು 'ದಿ ರಾಕ್‌' ಎಂದೇ ಜನಪ್ರಿಯರಾದ ಡ್ವೇನ್‌ ಜಾನ್ಸನ್‌ ಹಾಲಿವುಡ್‌ ಸಿನಿಮಾ ರಂಗದ ಅತ್ಯಂತ ಜನಪ್ರಿಯ ಹಾಗೂ ಅತ್ಯಂತ ದುಬಾರಿ ನಟ. ಇವರು ಇತ್ತೀಚೆಗೆ ತಮ್ಮ ತಾಯಿಗೆ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಹೊಸ ಐಷಾರಾಮಿ ಕಾರನ್ನು ಗಿಫ್ಟ್ ನೀಡಿದ್ದಾರೆ.

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ತಾಯಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ 'ದಿ ರಾಕ್‌'

ನಟ ಡ್ವೇನ್‌ ಜಾನ್ಸನ್‌ ಸೋಷಿಯಲ್ ಮೀಡಿಯಾದಲ್ಲಿ ತನ್ನ ಐಷಾರಾಮಿ ಕಾರನ್ನು ಗಿಫ್ಟ್ ನೀಡಿಯುವ ವಿಶೇಷ ಕ್ಷಣದ ವೀಡಿಯೊ ಮತ್ತು ಇನ್ನೂ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ತನ್ನ ಮಗನಿಂದ ಈ ಅದ್ಭುತ ಉಡುಗೊರೆಯನ್ನು ಸ್ವೀಕರಿಸಿದ ನಂತರ ಅವರ ತಾಯಿಯ ಅಗಾಧ ಸಂತೋಷವನ್ನು ನೋಡಬಹುದು. ನಟ ಡ್ವೇನ್‌ ಜಾನ್ಸನ್‌ ತಮ್ಮ ತಾಯಿಗೆ ಗಿಫ್ಟ್ ನೀಡಿದ ಕಾರು 2022ರ ಕ್ಯಾಡಿಲಾಕ್ XT6 ಪ್ರೀಮಿಯಂ ಐಷಾರಾಮಿ ಮಾದರಿಯಾಗಿದೆ, ಈ 2022ರ ಕ್ಯಾಡಿಲಾಕ್ XT6 ಪ್ರೀಮಿಯಂ ಮಾದರಿಯ ಬೆಲೆಯು ತೆರಿಗೆಗಳ ಮೊದಲು ಸುಮಾರು $55,000 ಆಗಿದೆ,

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ತಾಯಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ 'ದಿ ರಾಕ್‌'

ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, ಡ್ವೇನ್ ಜಾನ್ಸನ್, ಕ್ರಿಸ್‌ಮಸ್ ಹಬ್ಬದಲ್ಲಿ ನನ್ನ ತಾಯಿಗೆ ಹೊಸ ಕಾರು ನೋಡಿ ಸರ್ಪೈಸ್ ಆದರು. ಸಂತೋಷದಿಂದ ಕಣ್ಣೀರು ಹಾಕಿದರು .ನಂತರ ಅವರ ಮೊಮ್ಮಕ್ಕಳು ಅವರನ್ನು ಕಾರಿನೊಳಗೆ ಕರೆದುಕೊಂಡು ಹೋದರು. ನಾನು ತುಂಬಾ ಕೃತಜ್ಞನಾಗಿದ್ದೇನೆ, ನಾವು ನಿನ್ನನ್ನು ಪ್ರೀತಿಸುತ್ತೇವೆ. ಎಂದು ಬರೆದುಕೊಂಡಿದ್ದಾರೆ.

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ತಾಯಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ 'ದಿ ರಾಕ್‌'

2022ರ ಕ್ಯಾಡಿಲಾಕ್ XT6 ಪ್ರೀಮಿಯಂ ಐಷಾರಾಮಿ ರೂಪಾಂತರವು ಫ್ರಂಟ್ ವೀಲ್ ಡ್ರೈವ್ (FWD) ಎಸ್‍ಯುವಿಯಾಗಿದೆ. ಇದರಲ್ಲಿ 3.6-ಲೀಟರ್ ವಿ6 ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6600 ಆರ್‌ಪಿಎಂನಲ್ಲಿ 306 ಬಿಹೆಚ್‍ಪಿ ಪವರ್ ಮತ್ತು 5000 ಆರ್‌ಪಿಎಂನಲ್ಲಿ 367 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸ್ಟ್ಯಾಂಡರ್ಡ್‌ನಂತೆ ಜೋಡಿಸಲಾಗಿದೆ.

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ತಾಯಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ 'ದಿ ರಾಕ್‌'

ಫಾಸ್ಟ್‌ ಅಂಡ್‌ ಫ್ಯೂರಿಯಸ್‌ 'ದಿ ಹಾಬ್ಸ್‌ ಅಂಡ್‌ ಶಾ' ಸಿನಿಮಾ ಸಲುವಾಗಿ ದಾಖಲೆಯ ರೂ.700 ಕೋಟಿಗೂ ಹೆಚ್ಚಿನ ಮೊತ್ತದ ಸಂಭಾವನೆ ಪಡೆದಿದ್ದ ಡ್ವೇನ್‌ ಜಾನ್ಸನ್‌, ಸದ್ಯ ಹಾಲಿವುಡ್‌ನಲ್ಲಿನ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದಾರೆ. ಅಷ್ಟೇ ಅಲ್ಲದೆ ಬಹು ಬೇಡಿಕೆಯ ನಟ. ಯಾವುದೇ ಅಡ್ವೆಂಚರ್ ಸಿನಿಮಾ ಸೆಟ್‌ ಏರುತ್ತಿದೆ ಎಂದರೆ 'ದಿ ರಾಕ್‌' ಮೊದಲ ಆಯ್ಕೆಯ ನಟನಾಗುವಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ.

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ತಾಯಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ 'ದಿ ರಾಕ್‌'

ಮೆಗಾ-ಹಿಟ್ ರೆಡ್ ನೋಟಿಸ್‌ನಲ್ಲಿ ವಂಡರ್ ವುಮೆನ್ ನಟ ಗಾಲ್ ಗಡೋಟ್ ಮತ್ತು ಡೆಡ್‌ಪೂಲ್ ನಟ ರಿಯಾನ್ ರೆನಾಲ್ಡ್ಸ್ ಅವರೊಂದಿಗೆ ಕಾಣಿಸಿಕೊಂಡರು. ಹೀಸ್ಟ್ ಚಲನಚಿತ್ರವು ನೆಟ್‌ಫ್ಲಿಕ್ಸ್ ಇತಿಹಾಸದಲ್ಲಿ ಅತಿ ಹೆಚ್ಚು ವೀಕ್ಷಿಸಿದ ಚಿತ್ರಗಳಲ್ಲಿ ನಂ.1 ಆಯಿತು. ಮುಂಬರುವ ಡಿಸಿ ಮುಂಬರುವ DC ಕಾಮಿಕ್ಸ್-ಆಧಾರಿತ ಸೂಪರ್‌ಹೀರೋ ಚಲನಚಿತ್ರ ಬ್ಲ್ಯಾಕ್ ಆಡಮ್‌ನಲ್ಲಿ ಜಾನ್ಸನ್ ಮುಂದಿನ ಬಾರಿ ಕಾಣಿಸಿಕೊಳ್ಳಲಿದ್ದಾರೆ,

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ತಾಯಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ 'ದಿ ರಾಕ್‌'

ಇನ್ನು ಇತ್ತೀಚೆಗೆ ನಟ ಡ್ವೇನ್‌ ಜಾನ್ಸನ್‌ ತಮ್ಮ ಬಳಿಯಿದ್ದ ಆಸ್ಕರ್ ರೋಡ್ರಿಗಸ್‌ ಎಂಬುವವರಿಗೆ ತಮ್ಮ ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಆಸ್ಕರ್ ರೋಡ್ರಿಗಸ್‌, ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ತಾಯಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ 'ದಿ ರಾಕ್‌'

ನಟ ಡ್ವೇನ್‌ ಜಾನ್ಸನ್‌ ರಾಷ್ಟ್ರಕ್ಕೆ ಆಸ್ಕರ್ ರೋಡ್ರಿಗಸ್‌ ಅವರು ನೀಡಿರುವ ಸೇವೆಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಜೊತೆಗೆ ಅವರಿಗೆ ತಮ್ಮ ವೈಯಕ್ತಿಕ ಫೋರ್ಡ್ F-150 ಪಿಕ್-ಅಪ್ ಟ್ರಕ್ ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ತಾಯಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ 'ದಿ ರಾಕ್‌'

ಡ್ವೇನ್ ಅವರ ಹೊಸ ಚಿತ್ರ ದಿ ರೆಡ್ ನೋಟಿಸ್ ಸಿನಿಮಾದ ವಿಶೇಷ ಪ್ರದರ್ಶನದ ಸಂದರ್ಭದಲ್ಲಿ ಈ ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಡ್ವೇನ್‌ರವರಿಂದ ಈ ಟ್ರಕ್ ಅನ್ನು ಸ್ವೀಕರಿಸಿದ ನಂತರ ಆಸ್ಕರ್ ರೋಡ್ರಿಗಸ್‌ ಭಾವುಕರಾದರು. ಫೋರ್ಡ್ ಕಂಪನಿಯ ಸಿಇಒ, ಜಿಮ್ ಫಾರ್ಲೆ ಕೂಡ ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಶೇರ್ ಮಾಡಿದ್ದಾರೆ.

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ತಾಯಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ 'ದಿ ರಾಕ್‌'

ಕಳೆದ 44 ವರ್ಷಗಳಲ್ಲಿ ಫೋರ್ಡ್ ಕಂಪನಿಯ F-150 ಅಮೇರಿಕಾದಲ್ಲಿ ಹೆಚ್ಚು ಮಾರಾಟವಾದ ಪಿಕ್ ಅಪ್ ಟ್ರಕ್ ಆಗಿದೆ ಎಂಬುದು ವಿಶೇಷ. ಫೋರ್ಡ್ ಕಂಪನಿಯು ಎಫ್-150 ಪಿಕ್ ಅಪ್ ಅನ್ನು - ರೆಗ್ಯುಲಾ ಪಿಕ್-ಅಪ್, ಸೂಪರ್‌ಕ್ರೂ ಹಾಗೂ ಸೂಪರ್‌ಕ್ಯಾಬ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡುತ್ತದೆ. ಈ ಪಿಕ್ ಅಪ್ ಟ್ರಕ್ ಅನ್ನು ವಿವಿಧ ಗಾತ್ರಗಳಲ್ಲಿಯೂ ಮಾರಾಟ ಮಾಡಲಾಗುತ್ತಿದೆ,

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ತಾಯಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ 'ದಿ ರಾಕ್‌'

ಅಂದ ಹಾಗೆ ಡ್ವೇನ್'ರವರು ಈ ರೀತಿ ಉಡುಗೊರೆ ನೀಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಇಂತಹ ವಸ್ತುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಅವರು ಜನರ ಮೇಲೆ ಪ್ರೀತಿ ವ್ಯಕ್ತಪಡಿಸುತ್ತಾರೆ. ಇನ್ನು 2018ರಲ್ಲಿ ಡ್ವೇನ್ ತಮ್ಮ ತಾಯಿಗೆ ಕ್ರಿಸ್ಮಸ್ ಹಬ್ಬದ ಉಡುಗೊರೆಯಾಗಿ ಮನೆಯೊಂದನ್ನು ನೀಡಿದ್ದರು. ರಾಕ್ ಎಸ್ಪೆರಾನ್ಜಾರವರಿಗೆ ಫೋರ್ಡ್ ಎಡ್ಜ್ ಅನ್ನು ಉಡುಗೊರೆಯಾಗಿ ನೀಡಿದ್ದರು.

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ತಾಯಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ 'ದಿ ರಾಕ್‌'

ಅವರ ಚಿಕ್ಕಪ್ಪ ಟೊಂಗಾ ಸಹ ಡಬ್ಲ್ಯುಡಬ್ಲ್ಯುಇ ಕುಸ್ತಿಪಟು ಆಗಿದ್ದರು. ಅವರ ಚಿಕ್ಕಪ್ಪ ಡ್ವೇನ್ ರವರ ವೃತ್ತಿಜೀವನವನ್ನು ಆರಂಭಿಸಲು ನೆರವಾಗಿದ್ದರು. ಈ ಕಾರಣಕ್ಕೆ ಅವರಿಗೆ ಧನ್ಯವಾದ ಸಲ್ಲಿಸುವ ಸಲುವಾಗಿ ಕ್ರಿಸ್ಮಸ್ ಉಡುಗೊರೆಯಾಗಿ ಫೋರ್ಡ್ ಎಫ್-150 ಕಾರ್ ಅನ್ನು ಅವರಿಗೂ ಸಹ ಉಡುಗೊರೆಯಾಗಿ ನೀಡಿದ್ದರು.

Most Read Articles

Kannada
English summary
Actor dwayne johnson gifts cadillac xt6 suv as a christmas to his mother details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X