Just In
- 1 hr ago
'ವಂದೇ ಮೆಟ್ರೋ' ಬರುತ್ತೆ: ಪ್ರಧಾನಿ ಮೋದಿ ಸರ್ಕಾರದಿಂದ ಘೋಷಣೆ.. ಇಲ್ಲಿದೆ ವಿಶೇಷ ಮಾಹಿತಿ
- 13 hrs ago
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- 13 hrs ago
2030 ರ ವೇಳೆಗೆ EV ವಾಹನ ಮಾರಾಟ 1 ಕೋಟಿ ಯೂನಿಟ್ಗಳನ್ನು ಮುಟ್ಟಲಿದೆ: ಆರ್ಥಿಕ ಸಮೀಕ್ಷೆ
- 16 hrs ago
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
Don't Miss!
- Movies
ಪತಿ ವಿರುದ್ಧ ರಾಖಿ ಆರೋಪ, ಪತಿಯ ಅಕ್ರಮ ಸಂಬಂಧ ಬಯಲಿಗೆಳೆಯುವ ಶಪಥ!
- News
ಫೆಬ್ರವರಿ 24 ರಿಂದ ಮೂರು ದಿನ ಕಲ್ಯಾಣ ಕರ್ನಾಟಕ ಉತ್ಸವ
- Finance
Matsya Sampada: ಪಿಎಂ ಮತ್ಸ್ಯ ಸಂಪದದಡಿ ಹೊಸ ಯೋಜನೆ ಜಾರಿ, ಸಂಪೂರ್ಣ ಮಾಹಿತಿ
- Sports
ರಣಜಿ ಟ್ರೋಫಿ: ಉತ್ತರಾಖಂಡ್ ವಿರುದ್ಧ ಗೆಲುವಿನ ಸನಿಹದಲ್ಲಿ ಕರ್ನಾಟಕ: Live ಸ್ಕೋರ್
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ದಿಢೀರ್ ಇಳಿಕೆ; ಭಾರೀ ಉಳಿತಾಯ ಪಕ್ಕಾ!
- Lifestyle
Horoscope Today 3 Feb 2023: ಶುಕ್ರವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐಷಾರಾಮಿ ಮಿನಿ ಕಂಟ್ರಿಮ್ಯಾನ್ ಕಾರು ಖರೀದಿಸಿದ ಜನಪ್ರಿಯ ನಟ
ಫಹಾದ್ ಫಾಸಿಲ್ ಸದ್ಯ ಸೌತ್ ಇಂಡಿಯಾ ಸಿನಿಮಾಗಳಲ್ಲಿ ಮಿಂಚುತ್ತಿರುವ ಜನಪ್ರಿಯ ನಟ. ಸಾಧಾರಣ ಪ್ರಾದೇಶಿಕ ಸಿನಿಮಾ ನಾಯಕನಾಗಿ ಅಭಿಯನ ರಂಗಕ್ಕೆ ಕಾಲಿಟ್ಟ ಫಹಾದ್'ಗೆ ಈಗ ಕಾಲಿವುಡ್, ಟಾಲಿವುಡ್ ಸೇರಿದಂತೆ ಎಲ್ಲೆಡೆಯಿಂದ ಉತ್ತಮ ಆಫರ್ಗಳು ಬರುತ್ತಿವೆ.

ಈ ಜನಪ್ರಿಯ ನಟ ಫಹಾದ್ ಫಾಸಿಲ್ ಅವರು ಇತ್ತೀಚೆಗೆ ಹೊಚ್ಚಹೊಸ ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಖರೀದಿಸಿದ್ದಾರೆ. ಇದೀಗ ನಟ ಫಹಾದ್ ಫಾಸಿಲ್ ಅವರು ಹೊಸ ಮಿನಿ ಕಂಟ್ರಿಮ್ಯಾನ್ ಜೆಸಿಡಬ್ಲ್ಯೂ ಕಾರನ್ನು ಖರೀದಿಸಿದ್ದಾರೆ. ಹೊಸ ವಾಹನವು ಕೊಚ್ಚಿಯ ಮಿನಿ ಡೀಲರ್ ನಿಂದ ಈ ಮಿನಿ ಕಂಟ್ರಿಮ್ಯಾನ್ ಜೆಸಿಡಬ್ಲ್ಯೂ ಕಾರನ್ನು ಖರೀದಿಸಿದ್ದಾರೆ. ಈ ಮಿನಿ ಕಂಟ್ರಿಮ್ಯಾನ್ ಜೆಸಿಡಬ್ಲ್ಯೂ ಕಾರು ಮಿನಿಯ ಅತ್ಯಂತ ಪವರ್ ಫುಲ್ ಕಾರುಗಳಲ್ಲಿ ಒಂದಾಗಿದೆ.

ಹೊಸ ಮಿನಿ ಕಂಟ್ರಿಮ್ಯಾನ್ ಎಸ್‌ಎವಿ (ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್) ಎಂದು ಕರೆಯಲಾಗುತ್ತದೆ. ಈ ಮಿಮಿನಿ ಕಂಟ್ರಿಮ್ಯಾನ್ ನಿ ಕಂಟ್ರಿಮ್ಯಾನ್ ಕೂಪರ್ ಎಸ್ ಮತ್ತು ಕಂಟ್ರಿಮ್ಯಾನ್ ಕೂಪರ್ ಎಸ್ ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ಎಂಬ ವೆರಿಯೆಂಟ್ ಗಳಲ್ಲಿ ಲಭ್ಯವಿರುತ್ತದೆ.

ಮಿನಿ ಕಂಟ್ರಿಮ್ಯಾನ್ ಒಂದೇ ರೀತಿಯ ವಿನ್ಯಾಸ ಮತ್ತು ಸಿಲೂಯೆಟ್ ಅನ್ನು ಸಾಗಿಸುವುದರ ಜೊತೆಗೆ ಹಲವಾರು ರಿಫ್ರೆಶ್ ಸ್ಟೈಲಿಂಗ್ ನವೀಕರಣಗಳನ್ನು ಕಳೆದ ವರ್ಷ ಪಡೆದುಕೊಂಡಿತು. ಕಂಟ್ರಿಮ್ಯಾನ್‌ನಲ್ಲಿನ ಹೊಸ ಸ್ಟೈಲಿಂಗ್ ವೈಶಿಷ್ಟ್ಯಗಳು ಯೂನಿಯನ್ ಜ್ಯಾಕ್ ವಿನ್ಯಾಸದೊಂದಿಗೆ ನವೀಕರಿಸಿದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳು, ಹೊಸ ರೇಡಿಯೇಟರ್ ಗ್ರಿಲ್ ಮತ್ತು ವ್ಯತಿರಿಕ್ತ ರೂಫ್ ಅನ್ನು ಒಳಗೊಂಡಿವೆ.

ಈ ಮಿನಿ ಕೂಪರ್ ಎಸ್ ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ವೆರಿಯೆಂಟ್ ನಲ್ಲಿ 18 ಇಂಚಿನ ಅಲಾಯ್ ವ್ಹೀಲ್ ಗಳು ರನ್-ಫ್ಲಾಟ್ ಟೈರ್ ಮತ್ತು ಹೆಚ್ಚುವರಿ ಏರೋಡೈನಾಮಿಕ್ ಅನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿದೆ. ಈ ಮಿನಿ ಕಂಟ್ರಿಮ್ಯಾನ್ ಕೂಪರ್ ಎಸ್ ಮಾದರಿಯಲ್ಲಿ ಒಳಭಾಗದಲ್ಲಿ ಕಾರ್ಬನ್ ಬ್ಲ್ಯಾಕ್ ಲೆಥೆರೆಟ್ ಅಪ್ಹೋಲ್ಸ್ಟರಿಯೊಂದಿಗೆ ಬರುತ್ತದೆ,

ಆದರೆ ಸರಣಿಯಲ್ಲಿ ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ಟ್ರಿಮ್ ಸಿಲ್ವರ್ ಟ್ರಿಮ್ ಜೊತೆಗೆ ಪ್ರೀಮಿಯಂ ಲೆದರ್ ಯ್ಕೆಯನ್ನು ಒಳಗೊಂಡಿದೆ. ಮಿನಿ ಕಂಟ್ರಿಮ್ಯಾನ್ ಕಾರಿನಲ್ಲಿ ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ರ್ಮನ್ ಕಾರ್ಡನ್ ಆಡಿಯೊ ಸಿಸ್ಟಂ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹೆಡ್ಸ್-ಅಪ್ ಡಿಸ್ ಪ್ಲೇ, ಆಂಬಿಯೆಂಟ್ ಲೈಟಿಂಗ್ ಮತ್ತು ಇನ್ನೂ ಹಲವು ಫೀಚರ್ ಗಳನ್ನು ಒಳಗೊಂಡಿವೆ.

ಮಿನಿ ಕಂಟ್ರಿಮ್ಯಾನ್ ಎರಡೂ ವೆರಿಯೆಂಟ್ ಗಳಲ್ಲಿ ಒಂದೇ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 189 ಬಿಹೆಚ್‍ಪಿ ಪವರ್ ಮತ್ತು 280 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ವೆರಿಯೆಂಘ್ ಪ್ಯಾಡಲ್ ಶಿಫ್ಟರ್ ಅನ್ನು ಹೊಂದಿರುತ್ತದೆ.

ಹೊಸ ಮಿನಿ ಕಂಟ್ರಿಮ್ಯಾನ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಮಿನಿ ಕಂಟ್ರಿಮ್ಯಾನ್ ಹಲವಾರು ಫೀಚರ್ ಗಳು ಮತ್ತು ಹಲವಾರು ತಂತ್ರಜ್ಙಾನಗಳನ್ನು ಹೊಂದಿದೆ. ಇದು ತನ್ನ ವಿಭಾಗದಲ್ಲಿ ಅತ್ಯಂತ ಆಕರ್ಷಕ ಆಯ್ಕೆಯಾಗಿದೆ.

ಇನ್ನು ಲ್ಯಾಂಬೊರ್ಗಿನಿ ಉರುಸ್ ಎಸ್‍ಯುವಿಯಲ್ಲಿ ಇತ್ತೀಚೆಗೆ ರಸ್ತೆಗಳಲ್ಲಿ ಕಾಣಿಸಿಕೊಂಡಿದೆ.ನಟ ಫಹಾದ್ ಫಾಸಿಲ್ ಗ್ರಿಗಿಯೊ ಕೆರೆಸ್ ಶೇಡ್ ಮಾದರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಲ್ಯಾಂಬೊರ್ಗಿನಿ ಉರುಸ್ ಎಸ್‍ಯುವಿ ಮಾದರಿಯು ಹಲವು ಸೆಲಬ್ರಿಟಿಗಳ ಮೆಚ್ಚಿನ ಆಯ್ಕೆಯಾಗಿದೆ. ನಟ ಫಹಾದ್ ಅವರು ಹೆಚ್ಚು ಕಾರು ಕ್ರೇಜ್ ಅನ್ನು ಹೊಂದಿದ್ದಾರೆ. ಇವರು ಪೈಥಾನ್ ಗ್ರೀನ್ ಪೋರ್ಷೆ 911 ಕ್ಯಾರೆರಾ ಎಸ್ ಮತ್ತು ಐಷಾರಾಮಿ ಟೊಯೊಟಾ ವೆಲ್‌ಫೈರ್ ಕಾರನ್ನು ಹೊಂದಿದ್ದಾರೆ.

ನಟ ಫಹಾದ್ ಫಾಸಿಲ್ ಬಗ್ಗೆ ಹೇಳುವುದಾದರೆ, ಇವರು ಚಾಕ್ಲೆಟ್ ಹೀರೋ ಆಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ಫಹಾದ್ ಸಿನಿಮಾಗಳು ತಕ್ಕಮಟ್ಟಿಗೆ ಹಿಟ್ ಆದರೂ ನಟನ ಈಗಿನ ಸಿನಿಮಾ ಪ್ರಸಿದ್ಧಿಗೆ ಹೋಲಿಸಿದರೆ ಹಿಂದಿನ ಸಿನಿಮಾಗಳು ಏನೇನು ಆಗಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಫಹಾದ್ಗೆ ಅತ್ಯುತ್ತಮ ಸಿನಿಮಾ ಆಫರ್ಗಳು ಬರುತ್ತಿವೆ. ಬಹಳ ಸ್ಪೆಷಲ್ ಎನ್ನುವ ಪಾತ್ರಗಳನ್ನು ಮಾಡಿ ನಟ ಈಗ ಸೌತ್ ಮತ್ತು ನಾರ್ತ್ ನಲ್ಲಿಯೂ ಪ್ರಸಿದ್ಧಿ ಗಳಿಸುತ್ತಿದ್ದಾರೆ. ತೆಲುಗಿನ ಪುಷ್ಪ ಸಿನಿಮಾ ಹಾಗೂ ಕಾಲಿವುಡ್ನ ವಿಕ್ರಮ್ ಸಿನಿಮಾದಲ್ಲಂತೂ ಫಹಾದ್ ನಟನೆಗೆ ಸಾಟಿಯೇ ಇಲ್ಲ.

ಮೊದಲು ಬೆಂಗಳೂರು ಡೇಸ್ ಸಿನಿಮಾ ಬರುವ ತನಕ ಬಹಳಷ್ಟು ಜನರಿಗೆ ಫಹಾದ್ ಪರಿಚಯವೇ ಇರಲಿಲ್ಲ. ಆದರೆ ಆ ಸಿನಿಮಾದಿಂದ ನಟನ ಎರಡನೇ ಇನ್ನಿಂಗ್ಸ್ ಶುರುವಾಯಿತು. ನಂತರದಲ್ಲಿ ಜೋಜಿ, ಕುಂಬಳಂಗಿ ನೈಟ್ಸ್, ಸಿ ಯೂ ಸೂನ್, ತೊಂಡಿಮುದಲುಂ ದೃಕ್ಷಾಕ್ಷಿಯುಂ ಸೇರಿ ಹಲವು ಸಿನಿಮಾಗಳ ಮೂಲಕ ಫಹಾದ್ ಹೆಚ್ಚಿನ ಜನಪ್ರಿಯತೆ ಗಳಿಸಿದರು. ನಂತರದಲ್ಲಿ ನಟನಿಗೆ ಪುಷ್ಪಾ, ವಿಕ್ರಮ್ನಂತಹ ದೊಡ್ಡ ದೊಡ್ಡ ಪ್ರಾಜೆಕ್ಟ್ಗಳು ಲಭಿಸಿದವು.

ನಟ ಇತ್ತೀಚೆಗೆ ಖರಿದಿಸಿದ ಲ್ಯಾಂಬೊರ್ಗಿನಿ ಉರುಸ್ ಬಗ್ಗೆ ಹೇಳುವುದಾದರೆ, ಇದು ಲ್ಯಾಂಬೊರ್ಗಿನಿ ಸರಣಿಯ ಮೊದಲ ಎಸ್‍ಯುವಿಯಾಗಿದೆ. ಮಾಡೆಲ್ ಸೂಪರ್ ಎಸ್‌ಯುವಿ ಮಾರುಕಟ್ಟೆಗೆ ಬರುವ ಅತ್ಯಂತ ವೇಗದ ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳಲ್ಲಿ ಒಂದಾಗಿದೆ. ಲಂಬೋರ್ಗಿನಿಯ ಮೊದಲ ಉರುಸ್ ಮಾದರಿ ಉರುಸ್ ಅನ್ನು 2018 ರ ಜನವರಿಯಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಲಾಗುವುದು.