ಗೋಲ್ಡನ್ ಸ್ಟಾರ್ ಗಣೇಶ್ ಖರೀದಿಸಿದ ವಿಮಾನದಂತೆ ಸೌಕರ್ಯವಿರುವ ಕಾರಿನ ವಿಶೇಷತೆಗಳು

ಸ್ಯಾಂಡಲ್‌ವುಡ್‌ನ ಗೋಲ್ಡನ್ ಸ್ಟಾರ್ ಗಣೇಶ್ (Ganesh) ಅವರು ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕೆಲವೇ ವರ್ಷಗಳಲ್ಲಿ ಸೂಪರ್ ಸ್ಟಾರ್ ಆಗಿ ಹೆಸರು ಸಂಪಾದನೆ ಮಾಡಿದ್ದ ನಟ ಗಣೇಶ್, ಭಾರಿ ಗೆಲುವಿನ ನಡುವೆ ಸೋಲುಗಳನ್ನ ಕೂಡ ಕಂಡಿದ್ದಾರೆ. ಇತ್ತೀಚೆಗೆ ತೆರೆಕಂಡ ಕೃಷ್ಣಂ ಪ್ರಣಯ ಸಖಿ (Krishnam Pranaya Sakhi) ಸಿನಿಮಾ ಸೂಪರ್ ಹಿಟ್ ಆಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾ ವರ್ಷಗಳ ಬಳಿಕ ಅಂತೂ ಇಂತೂ ಸೂಪರ್ ಹಿಟ್ ಆಯ್ತು. ಈ ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲಿಯೇ ಇದೀಗ ನಟ ದುಬಾರಿ ಬೆಲೆಯ ಕಾರನ್ನು ಖರೀದಿಸಿದ್ದಾರೆ.

ಸಿನಿಮಾ ಸ್ಟಾರ್​​ಗಳು, ನಟ, ನಟಿಯರು ಸಿನಿಮಾಗಳು ಸಕ್ಸಸ್ ಆದಾಗ ಲಕ್ಷುರಿ ಕಾರು ಖರೀದಿಸೋದು ಕಾಮನ್. ಗೋಲ್ಡನ್ ಸ್ಟಾರ್ ಗಣೇಶ್ ಅವರು ಕೂಡ ಐಷಾರಾಮಿ ರೇಂಜ್ ರೋವರ್ HSE (Range Rover HSE) ಎಸ್‍ಯುವಿಯನ್ನು ಖರೀದಿಸಿದ್ದಾರೆ. ಫ್ಯಾಮಿಲಿ ಸಮೇತ ಗೋಲ್ಡನ್ ಸ್ಟಾರ್ ಅವರು ಶೋರೂಂಗೆ ತೆರಳಿ ಹೊಸ ಐಷಾರಾಮಿ ಕಾರನ್ನು ವಿತರಣೆ ಪಡೆದುಕೊಳ್ಳುತ್ತಿರುವ ಚಿತ್ರ ಮತ್ತು ವೀಡಿಯೋಗಳು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Ganesh Range Rover

ಗೋಲ್ಡನ್ ಸ್ಟಾರ್ ನಟ ಗಣೇಶ್ ಅವರು ತಮ್ಮ ಹೊಸ ಕಾರಿನಲ್ಲಿ ಪತ್ನಿ, ಮಕ್ಕಳ ಜೊತೆ ರೌಂಡ್ ಹಾಕಿದ್ದಾರೆ. ಈ ಐಷಾರಾಮಿ ಕಾರಿನ ಬೆಲೆ ಎಷ್ಟು ಮತ್ತು ಈ ಕಾರಿನ ವಿಶೇಷತೆಗಳ ಬಗ್ಗೆ ಕೆಲವರು ಇಂಟರ್‌ನೆಟ್‌ನಲ್ಲಿ ಹುಡುಕಾಡುತ್ತಿದ್ದಾರೆ. ನಟ ಗಣೇಶ್ ಅವರು ಖರೀದಿಸಿದ ರೇಂಜ್ ರೋವರ್ HSE ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದರ ಬೆಲೆಯು ಸುಮಾರು ರೂ.2.36 ಕೋಟಿ ಆಗಿದೆ.

ಎಂಜಿನ್: ರೇಂಜ್ ರೋವರ್ HSE ಎಸ್‍ಯುವಿಯಲ್ಲಿ 3-ಲೀಟರ್ ಡೀಸೆಲ್ ಹೊಸ ಮೈಲ್ಡ್ ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 346 bhp ಮತ್ತು 700Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್‍ಯುವಿಯು 6.3 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಎಸ್‍ಯುವಿಯು 234 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

Ganesh Range Rover

ಫೀಚರ್ಸ್: ಈ ಲಕ್ಷುರಿ ಎಸ್‍ಯುವಿಯಲ್ಲಿ ಇಂಟಿರಿಯರ್ ನಲ್ಲಿ 13.7-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನು ಸೆಂಟರ್ ಕನ್ಸೋಲ್ ದೊಡ್ಡ 13.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಹ್ಯಾಪ್ಟಿಕ್ ಪ್ರತಿಕ್ರಿಯೆಯೊಂದಿಗೆ ಹೊಂದಿದೆ. ಇನ್ನು ಹಿಂಭಾಗದಲ್ಲಿ ಪ್ರಯಾಣಿಕರು ದೊಡ್ಡ ಮನರಂಜನಾ ಡಿಸ್ ಪ್ಲೇಯನ್ನು ಪಡೆಯುತ್ತಾರೆ. ಅದನ್ನು ಮುಂಭಾಗದ ಸೀಟ್‌ಬ್ಯಾಕ್‌ಗಳಿಗೆ ಜೋಡಿಸಲಾಗಿದೆ.

ಇನ್ನು ಎಕ್ಸಿಕ್ಯುಟಿವ್ ಕ್ಲಾಸ್ ಹಿಂಬದಿಯ ಸೀಟುಗಳೊಂದಿಗೆ, ಸೆಂಟರ್ ಆರ್ಮ್‌ರೆಸ್ಟ್‌ನಲ್ಲಿ ಟಚ್‌ಸ್ಕ್ರೀನ್ ಕೂಡ ಇದೆ, ಇದರೊಂದಿಗೆ ನ್ಯೂ ಜನರೇಷನ್ ರೇಂಜ್ ರೋವರ್ ಮೆರಿಡಿಯನ್ ಸಿಗ್ನೇಚರ್ ಸೌಂಡ್ ಸಿಸ್ಟಂ ಅನ್ನು ಸಹ ಪಡೆಯುತ್ತದೆ. ಈ ರೇಂಜ್ ರೋವರ್ HSE ಎಸ್‍ಯುವಿಯು 5052 ಮಿ.ಮೀ ಉದ್ದ, 2209 ಮಿ.ಮೀ ಅಗಲ, 1870 ಮಿ.ಮೀ ಎತ್ತರ ಹಾಗೂ 2997 ಮಿಮೀ ವ್ಹೀಲ್ ಬೇಸ್ ಅನ್ನು ಹೊಂದಿದೆ.

ರೇಂಜ್ ರೋವರ್ ಕ್ಯಾಬಿನ್‌ನಲ್ಲಿ ಹೆಚ್ಚು ಸಮರ್ಥನೀಯ ಐಷಾರಾಮಿ ವಸ್ತುಗಳನ್ನು ಬಳಸುತ್ತದೆ.ಹೊಸ ರೇಂಜ್ ರೋವರ್ ಎಸ್‍ಯುವಿಯು ಹೊಸ ಐದು-ಲಿಂಕ್ ಹಿಂಬದಿಯ ಆಕ್ಸಲ್‌ನೊಂದಿಗೆ ಅಡಾಪ್ಟಿವ್ ಏರ್ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಇದು ನ್ಯಾವಿಗೇಷನ್ ಸಿಸ್ಟಂ ಅನ್ನು ಮುಂದಿನ ರಸ್ತೆಗೆ ಅನುಗುಣವಾಗಿ ಹೊಂದಿಸಲು ಬಳಸುತ್ತದೆ. ಈ ರೀತಿ ಹಲವಾರು ಫೀಚರ್ಸ್ ಗಳನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, November 2, 2024, 18:30 [IST]
English summary
Actor ganesh new range rover hse suv top things
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+