ಇವರ ಮಗಳಾ ಈ ಸುರಸುಂದರಿ? ಸಿನಿಮಾದಲ್ಲಿ ನಟಿಸಿದ್ರೆ ಈಗಿನ ನಟಿಯರಿಗೆ ನಿದ್ದೆ ಬರಲ್ಲಾ!

ವಿಶ್ವದ ಇನ್ಯಾವುದೇ ಸೆಲೆಬ್ರಿಟಿಗಳಿಗೆ ಸಿಗದ ಅಭಿಮಾನ ಭಾರತೀಯ ನಟ, ನಟಿಯರಿಗೆ ಸಿಗುತ್ತದೆ. ಅಭಿಮಾನ ನಟರ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ ಎಂದಾಕ್ಷಣ ಅಭಿಮಾನಿಗಳು ಹಬ್ಬದ ವಾತಾವರಣ ಸೃಷ್ಟಿಸಿಬಿಡುತ್ತಾರೆ. ಹಾಗಯೇ ಭಾರತದಲ್ಲಿ ಸೆಲೆಬ್ರಿಟಿಗಳು ಖರೀದಿಸುವ ಕಾರುಗಳ ಬಗ್ಗೆ ತಿಳುದುಕೊಳ್ಳುವುದು ಎಂದರೆ ಅವರ ಅಭಿಮಾನಿಗಳಿಗೆ ಏನೋ ಕುತೂಹಲ. ಇತ್ತೀಚೆಗೆ ಬಾಲಿವುಡ್ ಪ್ರಮುಖ ನಟರೊಬ್ಬರ ಮಗಳು ಹೊಸ ಬಿಎಂಡಬ್ಲ್ಯು ಕಾರು ಖರೀದಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅಪ್ಪನನ್ನು ನೋಡಲು ಆಸ್ಪತ್ರೆಗೆ ಬಂದಾಗ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

ಅಂದಹಾಗೆ ಬಾಲಿವುಡ್ ಪ್ರಮುಖ ನಟ ಗೋವಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇತ್ತೀಚೆಗೆ ಅವರ ಲೈಸೆನ್ಸ್ ಹೊಂದಿರುವ ರಿವಾಲ್ವರ್ ಮಿಸ್‌ಫೈರ್ ಆಗಿ ಕಾಲಿಗೆ ಗುಂಡು ತಗುಲಿರುವುದಾಗಿ ಅವರು ಪೊಲೀಸರಿಗೆ ಹೇಳಿಕೊಂಡಿದ್ದಾರೆ. ಗೋವಿಂದ ರಾಜಕಾರಣಿಯೂ ಆಗಿರುವ ಕಾರಣ ಸದ್ಯ ಈ ಸುದ್ದಿ ದೇಶವೆಲ್ಲ ಹರಡಿದೆ. ಪ್ರಸ್ತುತ ಅವರು ಮುಂಬೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

actor-govinda-daughter-tina-ahuja-buys-bmw-i5-m60-xdrive

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆಯನ್ನು ಕಾಣಲು ಮಗಳು ಹಾಗೂ ಕಾಸ್ಟ್ಯುಮ್ ಡಿಸೈನರ್ ಆಗಿರುವ ಟೀನಾ ಅಹುಜಾ ಆಸ್ಪತ್ರೆಗೆ ಭೇಟಿ ನೀಡುವಾಗ ಕ್ಯಾಮರಾಗೆ ಬಿದ್ದಿದ್ದಾರೆ. ಈ ವೇಳೆ ಅವರು ದುಬಾರಿ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಕಾರಿನಲ್ಲಿ ಬಂದಿದ್ದರು. ಟೀನಾ ಅಹುಜಾ ಬಿಎಂಡಬ್ಲ್ಯು ಐ5 ಕಾರನ್ನು ಖರೀದಿಸಿದ್ದಾರೆ. ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಈ ಕಾರಿನ ಬೆಲೆಯು ರೂ.1.25 ಕೋಟಿಗಳಾಗಿದೆ.

ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಸಖತ್ ವೈರಲ್ ಆಗಿದೆ. ಏಕೆಂದರೆ ಎಲ್ಲಾ ಸೆಲೆಬ್ರಿಟಿಗಳ ಮಕ್ಕಳಂತಲ್ಲದೆ ಗೋಂವಿದ ಮಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಅಪರೂಪಕ್ಕೆ ಕಾಣಿಸಿಕೊಂಡ ಈ ಯುವತಿಯು ಈಗ ವೈರಲ್ ಆಗಿದ್ದಾರೆ. ಅದರಲ್ಲೂ ದುಬಾರಿ ಒಂದು ಕೋಟಿಯ ಕಾರಿನಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿಗೊಳಿಸಿದೆ.

actor-govinda-daughter-tina-ahuja-buys-bmw-i5-m60-xdrive

ಈ ವೈರಲ್ ವಿಡಿಯೋವನ್ನು ನೋಡಿದ ನೆಟ್ಟಿಗರು ಯಾವುದೇ ಹೀರೋಯಿನ್‌ಗೆ ಕಮ್ಮಿಯಿಲ್ಲ. ಈಕೆ ಸಿನಿಮಾದಲ್ಲಿ ನಟಿಸಿದರೆ ಈಗಿನ ನಟಿಯರಿಗೆ ನಿದ್ದೆ ಬರಲ್ಲಾ ಎಂದು ಕಮೆಂಟ್ ಹಾಕುತ್ತಿದ್ದಾರೆ. ತಂದೆಯಂತೆ ಆರಂಭದಲ್ಲಿ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಟೀನಾ ಅಹುಜಾ, ಸದ್ಯ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ತಮ್ಮ ಕಾಸ್ಟ್ಯುಮ್ ಡಿಸೈನ್ ಕೆಲಸವನ್ನು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಟೀನಾ ಅಹುಜಾ ಕಾರಿನ ವಿಶೇಷತೆಗಳು: ಈ ಕಾರು ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ M60 xDrive ಎಂಬ ಕೇವಲ ಒಂದು ವೇರಿಯೆಂಟ್‌ನಲ್ಲಿ ಲಭ್ಯವಿದೆ. ಇದನ್ನು ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದರೆ 516 ಕಿ.ಮೀವರೆಗೆ ಓಡಿಸಬಹುದು. ಇದು ತುಂಬಾ ದುಬಾರಿ ಎಲೆಕ್ಟ್ರಿಕ್ ಕಾರಾಗಿರುವುದರಿಂದ, ಇದರಲ್ಲಿ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ಇದರಲ್ಲಿ ಪನೋರಮಿಕ್ ಸನ್ ರೂಫ್, ವೆಂಟಿಲೇಟೆಡ್ ಸೀಟುಗಳು, 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 14.9-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, ಫೋರ್-ಝೋನ್ ಕ್ಲೈಮೆಟ್ ಕಂಟ್ರೋಲ್, ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು ವೈರ್ ಲೆಸ್ ಫೋನ್ ಚಾರ್ಜರ್ ಸೇರಿದಂತೆ ಐಷಾರಾಮಿ ಫೀಚರ್‌ಗಳನ್ನು ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, October 4, 2024, 13:16 [IST]
English summary
Actor govinda daughter tina ahuja buys bmw i5 m60 xdrive
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+