ಪಠಾಣ್ ಚಿತ್ರದ ಯಶಸ್ಸಿನ ಬಳಿಕ ಸುಜುಕಿ ಹಯಾಬುಸಾ ಬೈಕ್ ಖರೀದಿಸಿದ ನಟ ಜಾನ್ ಅಬ್ರಹಾಂ

ಬಾಲಿವುಡ್ ಜನಪ್ರಿಯ ನಟ ಜಾನ್ ಅಬ್ರಹಾಂ ಕೇವಲ ಸಿನಿಪ್ರಿಯರಲ್ಲದೇ ಕಾರು ಮತ್ತು ಬೈಕುಗಳ ಪ್ರಿಯರಾಗಿದ್ದು, ಅವರ ಬಳಿ ಹಲವಾರು ದುಬಾರಿ ಬೆಲೆಯ ಐಷಾರಾಮಿ ಕಾರುಗಳು ಮತ್ತು ಸೂಪರ್ ಬೈಕುಗಳ ಕಲೆಕ್ಷನ್ ಅನ್ನು ಹೊಂದಿದ್ದಾರೆ. ಭಾರತದ ಜನಪ್ರಿಯ ನಟರಲ್ಲಿ ಒಬ್ಬರಾದ ಜಾನ್‌ ಅಬ್ರಹಾಂ ಓರ್ವ ಯಶಸ್ವಿ ಬಾಲಿವುಡ್‌ ನಟ,

ನಟ ಜಾನ್ ಅಬ್ರಹಾಂ ನಿರ್ಮಾಪಕ ಅಂತೆಯೇ ಮಾಡೆಲ್‌ ಕೂಡ ಆಗಿದ್ದಾರೆ. ಸೌಂದರ್ಯದ ಮೂಲಕ ಮಾತ್ರವಲ್ಲದೇ ತನ್ನ ಬಾಡಿ ಪ್ರದರ್ಶನದ ಮೂಲಕ ಕೂಡ ಬಾಲಿವುಡ್‌ನಲ್ಲಿ ಮಿಂಚಿದ ತಾರೆ ಜಾನ್‌ ಅಬ್ರಹಾಂ ಬಾಲಿವುಡ್‌ನ ಶ್ರೀಮಂತ ನಟರಲ್ಲಿ ಒಬ್ಬರು. ಇವರಿಗೆ ಕೇವಲ ಸಿನಿಮಾದ ಮೇಲೆ ವ್ಯಾಮೋಹ ಮಾತ್ರವಲ್ಲದೇ ಕಾರು, ಬೈಕು ಇತ್ಯಾದಿ ವಾಹನಗಳನ್ನು ಕಲೆ ಹಾಕುವುದರಲ್ಲೂ ಕೂಡ ಅಪಾರ ಆಸಕ್ತಿಯನ್ನು ಹೊಂದಿದ್ದಾರೆ. ಇದರಿಂದ ಇವರು ಹೊಸ ಐಷಾರಾಮಿ ಕಾರು ಮತ್ತು ಬೈಕ್ ಗಳನ್ನು ಖರೀದಿಸುತ್ತಾರೆ.

ಸುಜುಕಿ ಹಯಾಬುಸಾ ಬೈಕ್ ಖರೀದಿಸಿದ ನಟ ಜಾನ್ ಅಬ್ರಹಾಂ

ಬಾಲಿವುಡ್ ಜನಪ್ರಿಯ ನಟ ಜಾನ್ ಅಬ್ರಹಾಂ "ಪಠಾನ್" ಚಿತ್ರದ ಯಶಸ್ಸಿನ ನಂತರ 2023ರ ಸುಜುಕಿ ಹಯಾಬುಸಾ ಬೈಕ್ ಖರೀದಿಸಿದ್ದಾರೆ. ಜಾನ್ ಅಬ್ರಹಾಂ ಅವರ ಧೂಮ್" ಚಿತ್ರದ ಬಳಿಕ ಸುಜುಕಿ ಹಯಾಬುಸಾ ಬೈಕ್ ಹೆಚ್ಚು ಜನಪ್ರಿಯತೆಗಳಿಸಿತು. ಜಾನ್ ಅಬ್ರಹಾಂ ಸಿನಿಮಾದಲ್ಲಿ ತಮ್ಮದೇ ಬೈಕ್ ಬಳಸಿದ್ದಾರೆ ಎನ್ನಲಾಗಿದೆ. ವರ್ಷಗಳು ಕಳೆದಂತೆ ಅವರು ಹಯಬುಸಾವನ್ನು ನವೀಕರಿಸುತ್ತಲೇ ಇದ್ದರು ಮತ್ತು ಈ ವರ್ಷ ಇತ್ತೀಚಿನ ಮಾದರಿಯನ್ನು ಖರೀದಿಸಿದ್ದಾರೆ. 2023ರ ಸುಜುಕಿ ಹಯಾಬುಸಾ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆಯಾಗಬೇಕಿದೆ. 2023ರ ಬೈಕ್ ಹೊಸ ಬಣ್ಣದ ಆಯ್ಕೆಗಳನ್ನು ಒಳಗೊಂಡಿದೆ.

ಸುಜುಕಿ ಹಯಾಬುಸಾ ಬೈಕ್ ಸಾಂಪ್ರದಾಯಿಕ ಶೈಲಿಯನ್ನು ಉಳಿಸಿಕೊಂಡಿದೆ. ಒಟ್ಟಾರೆ ಸಿಲೂಯೆಟ್ ಅನ್ನು ಒಂದೇ ರೀತಿ ಇರಿಸಲಾಗಿದ್ದರೂ, ಈ ಹಯಾಬುಸಾ ಸೂಪರ್ ಬೈಕ್ ಹೆಚ್ಚು ಅಗ್ರೇಸಿವ್ ವಿನ್ಯಾಸದೊಂದಿಗೆ ಅಗ್ರೇಸಿವ್ ಲೈನ್ ಗಳು ಮತ್ತು ಹೊಸ ಫಾಸಿಕದೊಂದಿಗೆ ಆಕರ್ಷಕವಾಗಿದೆ. ಈ ಸುಜುಕಿ ಹಯಾಬುಸಾ ಸೂಪರ್ ಬೈಕ್ ಎಲ್ಇಡಿ ಲೈಟ್ ಗಳನ್ನು ಹೊಂದಿವೆ. ಇದು ಹೆಡ್ ಲ್ಯಾಂಪ್ ಮತ್ತು ಟೈಲ್ ಗಳನ್ನು ಒಳಗೊಂಡಿದೆ. ಮುಂಭಾಗದಲ್ಲಿ ಇಂಡಿಕೇಟರ್ ಸ್ಥಾನ ಲೈಟ್ ಗಳೊಂದಿಗೆ ಸಂಯೋಜಿಸಲಾಗಿದೆ,

ಈ ಸುಜುಕಿ ಹಯಾಬುಸಾ ಬೈಕ್ ಮುಂಭಾಗದ ಏರ್ ಟೆಕ್ ಹೊರಭಾಗದಲ್ಲಿ ಇರಿಸಲಾಗಿದ್ದು, ದೊಡ್ಡ ಡ್ಯುಯಲ್ ಕ್ರೋಮ್-ಲೇಪಿತ ಎಕ್ಸಾಸ್ಟ್ ಪೈಪ್ಸ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಎಲೆಕ್ಟ್ರಾನಿಕ್ ರೈಡರ್ ಅಸಿಸ್ಟ್ ಅನ್ನು ಹೊಂದಿದ್ದು, ಇದರಲ್ಲಿ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಹೊಸ ಟಿಎಫ್‌ಟಿ ಡಿಸ್ ಪ್ಲೇಯನ್ನು ಕೂಡ ನೀಡಲಾಗಿದೆ. ಇದು ಹೊಸ ಸ್ವಿಚ್‌ಗಿಯರ್ ಜೊತೆಗೆ ರೈಡರಿಗೆ ವಿವಿಧ ರೈಡರ್ ಅಸಿಸ್ಟ್ ಆಯ್ಕೆಗಳ ನಡುವೆ ನ್ಯಾವಿಗೇಟ್ ಅನ್ನು ಹೊಂದಿದೆ.

ಇನ್ನು ಹೊಸ ಸುಜುಕಿ ಹಯಾಬುಸಾದಲ್ಲಿ ಕೆಲವು ಸ್ಟ್ಯಾಂಡರ್ಡ್ ಎಲೆಕ್ಟ್ರಾನಿಕ್ ಏಡ್ಸ್, ಮೂರು ಪವರ್ ಮೋಡ್‌ಗಳು, ಲಾಂಚ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಕೂಡ ಹೊಂದಿವೆ. ಇದರೊಂದಿಗೆ ಕಾರ್ನರಿಂಗ್ ಎಬಿಎಸ್, ಹಿಲ್-ಹೋಲ್ಡ್ ಕಂಟ್ರೋಲ್, ಆಕ್ಟಿವ್ ಸ್ಪೀಡ್ ಲಿಮಿಟರ್, ಲೋ ಆರ್ಪಿಎಂ ಅಸಿಸ್ಟ್, ಕಂಬೈನ್ಡ್ ಬ್ರೇಕ್ ಸಿಸ್ಟಂ, ಹೊಸ ಸಿಕ್ಸ್-ಆಕ್ಸಿಸ್ ಐಎಂಯು ಮತ್ತು ಸ್ವಿಚ್ ಮಾಡಬಹುದಾದ ಟ್ರ್ಯಾಕ್ಷನ್ ಕಂಟ್ರೋಲ್ ನಂತ ವಿವಿಧ ಫೀಚರ್ಸ್ ಗಳನ್ನು ಒಳಗೊಂಡಿವೆ.

ಈ ಹಯಾಬುಸಾ ಸೂಫರ್ ಬೈಕಿನಲ್ಲಿ 1340 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9,700 ಆರ್‌ಪಿಎಂನಲ್ಲಿ 187.7 ಬಿಹೆಚ್‌ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಮತ್ತು ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್‌ನೊಂದಿಗೆ ಜೋಡಿಸಲಾಗಿದೆ. ಕಂಪನಿಯ ಪ್ರಕಾರ, ಈ ಹೊಸ ಹಯಾಬುಸಾ ಸೂಪರ್‌ಬೈಕ್ ಕೇವಲ 3.2 ಸೆಕೆಂಡುಗಳಲ್ಲಿ 0 ದಿಂದ 100 ಕಿ,ವೀ ವೇಗವನ್ನು ಪಡೆದುಕೊಳ್ಳುತ್ತದ.

ಇನ್ನು ಸುಜುಕಿ ಹಯಾಬುಸಾದ ಬೈಕ್ 299 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ಬೈಕ್ 265 ಕೆಜಿ ತೂಕವನ್ನು ಹೊಂದಿದ್ದು, ಈ ಸೂಪರ್ ಬೈಕ್ 20 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸುಜುಕಿ ಹಯಾಬುಸಾ ಬೈಕ್ ಗ್ಲೋಸ್ ಸ್ಪಾರ್ಕ್ಲಿ ಬ್ಲ್ಯಾಕ್/ಕ್ಯಾಂಡಿ ಬರ್ನ್ಟ್ ಗೋಲ್ಡ್, ಮೆಟಾಲಿಕ್ ಮ್ಯಾಟ್ ಸ್ವೋರ್ಡ್ ಸಿಲ್ವರ್/ಕ್ಯಾಂಡಿ ಡೇರಿಂಗ್ ರೆಡ್ ಮತ್ತು ಪರ್ಲ್ ಬ್ರಿಲಿಯಂಟ್ ವೈಟ್/ಮೆಟಾಲಿಕ್ ಮ್ಯಾಟ್ ಸ್ಟೆಲ್ಲಾರ್ ಬ್ಲೂ ಎಂಬ ಬಣ್ಣಗಳ ಆಯ್ಕೆಯನ್ನು ಹೊಂದಿವೆ.

More from DriveSpark

Article Published On: Wednesday, February 15, 2023, 8:30 [IST]
English summary
Actor john abraham adds 2023 suzuki hayabusa to his garage details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+