ಐಷಾರಾಮಿ Mini Cooper S ಕನ್ವರ್ಟಿಬಲ್ ಕಾರು ಖರೀದಿಸಿದ ಖ್ಯಾತ ನಟ

ಕಾರು ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ರಂಗದವರಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚಾಗೇ ಇರುತ್ತೆ. ಅದೇ ರೀತಿ ಮಲಯಾಳಂ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ಮಾಪಕ ಜೊಜು ಜಾರ್ಜ್ ಅವರು ಕೂಡ ಹೆಚ್ಚು ಕಾರುಗಳ ಬಗ್ಗೆ ಕ್ರೇಜ್ ಹೊಂದಿದ್ದಾರೆ.

ಐಷಾರಾಮಿ Mini Cooper S ಕನ್ವರ್ಟಿಬಲ್ ಕಾರು ಖರೀದಿಸಿದ ಖ್ಯಾತ ನಟ

ಕಳೆದ ವರ್ಷ ನಟ ಜೊಜು ಜಾರ್ಜ್ ಅವರು ಲ್ಯಾಂಡ್ ರೋವರ್‌ನ ಲೆಜೆಂಡರಿ ಡಿಫೆಂಡರ್ ಮತ್ತು ಟ್ರಯಂಫ್‌ನ ಸ್ಟ್ರೀಟ್ ಟ್ರಿಪಲ್ ಆರ್ ಮಾದರಿಗಳನ್ನು ಖರೀದಿಸಿದ್ದರು. ಇದೀಗ ನಟ ಜೊಜು ಜಾರ್ಜ್ ಅವರು ಈಗ ಮಿನಿ ಕೂಪರ್‌ನ ಜೆಸ್ಟಿ ಯೆಲ್ಲೋ ಮಿನಿ ಕೂಪರ್ ಎಸ್ ಕನ್ವರ್ಟಿಬಲ್ ಮಾದರಿಯನ್ನು ಖರೀದಿಸಿದ್ದಾರೆ. ಈ ಐಷಾರಾಮಿ ಕಾರಿನ ಆನ್ ರೋಡ್ ಬೆಲೆ ಸುಮಾರು ರೂ.59 ಲಕ್ಷವಾಗಿದೆ. ಈ ಚಿಕ್ಕ ವಾಹನವು ಶೂನ್ಯದಿಂದ 100 ಕಿ.ಮೀ ವೇಗವನ್ನು ತಲುಪಲು ಕೇವಲ 7.1 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.

ಐಷಾರಾಮಿ Mini Cooper S ಕನ್ವರ್ಟಿಬಲ್ ಕಾರು ಖರೀದಿಸಿದ ಖ್ಯಾತ ನಟ

ನಟ ಜೊಜು ಜಾರ್ಜ್ ಅವರ ಪತ್ನಿ ಅಬಾ ಅವರ ಹೆಸರಿನಲ್ಲಿ ವಾಹನವನ್ನು ಖರೀದಿಸಲಾಗಿದೆ. ಈ ಹೊಸ ಕಾರು KL 64 K 7700 ಸಂಖ್ಯೆಯ ನಂಬರ್ ಅನ್ನು ಹೊಂದಿದೆ. ಈ ಕಾರಿನ ವಿತರಣೆಯನ್ನು ನಟನ ಪತ್ನಿ ಮತ್ತು ಮಕ್ಕಳು ಪಡೆಯುವ ಚಿತ್ರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ.

ಐಷಾರಾಮಿ Mini Cooper S ಕನ್ವರ್ಟಿಬಲ್ ಕಾರು ಖರೀದಿಸಿದ ಖ್ಯಾತ ನಟ

ಈ ಜನಪ್ರಿಯ ನಟ ಜೊಜು ಜಾರ್ಜ್ ಅವರ ಬಳಿ ಹಲವಾರು ದುಬಾರಿ ಮತ್ತು ಐಷಾರಾಮಿ ವಾಹನಗಳ ಕಲೆಕ್ಷನ್ ಅನ್ನು ಹೊಂದಿದ್ದಾರೆ. ಸದ್ಯ ಜೊಜು ಜಾರ್ಜ್ 'ಪೀಸ್' ಎಂಬ ಮಲಯಾಳಂ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಐಷಾರಾಮಿ Mini Cooper S ಕನ್ವರ್ಟಿಬಲ್ ಕಾರು ಖರೀದಿಸಿದ ಖ್ಯಾತ ನಟ

ನಟ ಜೊಜು ಜಾರ್ಜ್ ಅವರು ಕೊಚ್ಚಿಯ ಮಿನಿ ಡೀಲರ್‌ಶಿಪ್ ಇವಿಎಂ ಆಟೋಕ್ರಾಫ್ಟ್‌ನಿಂದ ಮಿನಿ ಕೂಪರ್ ಎಸ್ ಕನ್ವರ್ಟಿಬಲ್ ಮಾದರಿಯನ್ನು ಖರೀದಿಸಲಾಗಿದೆ. ಈ ಮಿನಿ ಕೂಪರ್ ಎಸ್ ಕನ್ವರ್ಟಿಬಲ್ ಕಾರಿನ ಬಗ್ಗೆ ಹೇಳುವುದಾದರೆ. ಇದರಲ್ಲಿ 1998 ಸಿಸಿ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 192 ಬಿಹೆಚ್‍ಪಿ ಪವರ್ ಮತ್ತು 280 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

ಐಷಾರಾಮಿ Mini Cooper S ಕನ್ವರ್ಟಿಬಲ್ ಕಾರು ಖರೀದಿಸಿದ ಖ್ಯಾತ ನಟ

ಚಲನಚಿತ್ರ ತಾರೆಗಳ ನಡುವೆ ಮಿನಿ ವಾಹನಗಳು ಬಹಳ ಜನಪ್ರಿಯವಾಗಿವೆ. ಮಿನಿಯ ವಿವಿಧ ಮಾದರಿಗಳು ಕಳೆದ ಕೆಲವು ಸೀಸನ್‌ಗಳಿಂದ ಸುದ್ದಿಯಲ್ಲಿವೆ. ಮಿನಿ ಕೂಪರ್ ಎಸ್ ಕನ್ವರ್ಟಿಬಲ್ ವಿಭಿನ್ನ ಬಣ್ಣವನ್ನು ಹೊರತುಪಡಿಸಿ ಸಾಮಾನ್ಯ ಮಿನಿ ವಾಹನಗಳ ವಿನ್ಯಾಸದಲ್ಲಿ ಬರುತ್ತದೆ.

ಐಷಾರಾಮಿ Mini Cooper S ಕನ್ವರ್ಟಿಬಲ್ ಕಾರು ಖರೀದಿಸಿದ ಖ್ಯಾತ ನಟ

ಈ ಕಾರು ಐಲ್ಯಾಂಡ್ ಬ್ಲೂ, ರೂಫ್‌ಟಾಪ್ ಗ್ರೇ, ಬ್ರಿಟಿಷ್ ರೇಸಿಂಗ್ ಗ್ರೀನ್, ಚಿಲ್ಲಿ ರೆಡ್, ಮಿಡ್‌ನೈಟ್ ಬ್ಲ್ಯಾಕ್, ಮೂನ್‌ವಾಕ್ ಗ್ರೇ, ಪೆಪ್ಪರ್ ವೈಟ್, ವೈಟ್ ಸಿಲ್ವರ್, ಎನಿಗ್ಮ್ಯಾಟಿಕ್ ಬ್ಲ್ಯಾಕ್, ಜೆಸ್ಟ್ ಯೆಲ್ಲೋ ಮತ್ತು ರೆಬೆಲ್ ಸೇರಿದಂತೆ 11 ಬಣ್ಣದ ಆಯ್ಕೆಗಳಲ್ಲಿ ಕಂಪನಿಯು ಪ್ರತಿ ಹೊಸ ಕನ್ವರ್ಟಿಬಲ್ ಮಾದರಿಯನ್ನು ಮಾರಾಟ ಮಾಡಲಾಗುತ್ತಿದೆ.

ಐಷಾರಾಮಿ Mini Cooper S ಕನ್ವರ್ಟಿಬಲ್ ಕಾರು ಖರೀದಿಸಿದ ಖ್ಯಾತ ನಟ

ಮಿನಿ ಕೂಪರ್ ಎಸ್ ಕನ್ವರ್ಟಿಬಲ್ ಕಾರು ಮುಂಭಾಗದ ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಫಾಂಗ್ ಲ್ಯಾಂಪ್ ಗಳು ಮತ್ತು LED ಸೈಡ್ ಇಂಡಿಕೇಟರ್‌ಗಳೊಂದಿಗೆ ಹೊಸ ಬಾಹ್ಯ ವಿನ್ಯಾಸಗಳನ್ನು ನೋಡಬಹುದು. ಈ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ.

ಐಷಾರಾಮಿ Mini Cooper S ಕನ್ವರ್ಟಿಬಲ್ ಕಾರು ಖರೀದಿಸಿದ ಖ್ಯಾತ ನಟ

ಈ ಕಾರಿನ ಸಣ್ಣ ಓವರ್‌ಹ್ಯಾಂಗ್‌ಗಳು ಮತ್ತು ಬಾಹ್ಯರೇಖೆಯ ವ್ಹೀಲ್ ಅರ್ಚಾರ್ ಅನ್ನು ಸಹ ಹೊಂದಿದೆ. ಇತರ ವೈಶಿಷ್ಟ್ಯಗಳಲ್ಲಿ ಹಿಂಬದಿಯ ಬೆಳಕಿನ ಗ್ರಾಫಿಕ್ಸ್‌ನಲ್ಲಿ ಯೂನಿಯನ್ ಜ್ಯಾಕ್ ವಿನ್ಯಾಸ, ಹಿಂಭಾಗದ ಏಪ್ರನ್, ಹೊಸ ಲಂಬವಾಗಿ ಅಳವಡಿಸಲಾದ ಏರ್ ಇನ್‌ಟೇಕ್‌ಗಳು ಮತ್ತು ಸೇರಿಸಲಾದ ಏರೋಡೈನಾಮಿಕ್ಸ್ ಸೇರಿವೆ.

ಐಷಾರಾಮಿ Mini Cooper S ಕನ್ವರ್ಟಿಬಲ್ ಕಾರು ಖರೀದಿಸಿದ ಖ್ಯಾತ ನಟ

ಈ ಕಾರಿನ ಳಭಾಗಕ್ಕೆ ಬಂದಾಗ ಇದು ಹೆಚ್ಚು ಪ್ರೀಮಿಯಂ ಎಂದು ಹೇಳಬೇಕು. ಇದು ಎರಡು ರೀತಿಯ ಥೀಮ್ ಗಳನ್ನು ಒಳಗೊಂಡಿದೆ. ಈ ಕಾರಿನಲ್ಲಿ ಇನ್ ಟ್ರೂಮೆಂಟ್ ಪ್ಯಾನೆಲ್ ಮೇಲ್ಮೈ ಮತ್ತು ಬಾಗಿಲಿನ ಮೇಲೆ ಎಲಿಪ್ಟಿಕಲ್ ರಿಂಗ್ ಅನ್ನು ಚೆಕ್ಕರ್ ವಿನ್ಯಾಸದಲ್ಲಿ ಮತ್ತು ಅಲ್ಯೂಮಿನಿಯಂನಲ್ಲಿ ಮಿನಿ ಆಂತರಿಕ ಮೇಲ್ಮೈಯನ್ನು ನೀಡುತ್ತದೆ.

ಐಷಾರಾಮಿ Mini Cooper S ಕನ್ವರ್ಟಿಬಲ್ ಕಾರು ಖರೀದಿಸಿದ ಖ್ಯಾತ ನಟ

ಮಿನಿ ಕನ್ವರ್ಟಿಬಲ್‌ನ ಒಳಭಾಗವು ಬ್ಲ್ಯಾಕ್ ಪರ್ಲ್ ಲೈಟ್ ಚೆಕರ್ಡ್ ಮತ್ತು ಬ್ಲ್ಯಾಕ್ ಪರ್ಲ್ ಕಾರ್ಬನ್ ಬ್ಲ್ಯಾಕ್ ಅಪ್ಹೋಲ್ಸ್ಟರಿ ಆಯ್ಕೆಗಳಲ್ಲಿ ಬಟ್ಟೆ /ಲೆದರ್ ಸಂಯೋಜನೆಯಲ್ಲಿ ಲಭ್ಯವಿದೆ. ಸೀಟ್ ಮೇಲ್ಮೈಗಳು 100% ಮರುಬಳಕೆ ಮಾಡಬಹುದಾದ ವಸ್ತುಗಳಿಂದ ಮಾಡಲ್ಪಟ್ಟಿದೆ, ಆದರೆ ಖರೀದಿದಾರರಿಗೆ ಕಾರ್ಬನ್ ಬ್ಲ್ಯಾಕ್ ಮಿನಿ ಯುವರ್ಸ್ ಲೆದರ್ ಲೌಂಜ್, ಕಾರ್ಬನ್ ಬ್ಲ್ಯಾಕ್ ಲೆದರ್ ಕ್ರಾಸ್ ಪಂಚ್, ಸ್ಯಾಟಲೈಟ್ ಗ್ರೇ ಲೆದರ್ ಚೆಸ್ಟರ್ ಮತ್ತು ಡೈನಾಮಿಕಾದಲ್ಲಿ ಜೆಸಿಡಬ್ಲ್ಯೂ ಸ್ಪೋರ್ಟ್ಸ್ ಸೀಟ್‌ಗಳನ್ನು ನೀಡಲಾಗುತ್ತದೆ.

ಐಷಾರಾಮಿ Mini Cooper S ಕನ್ವರ್ಟಿಬಲ್ ಕಾರು ಖರೀದಿಸಿದ ಖ್ಯಾತ ನಟ

ಈ ಕಾರಿನಲ್ಲಿ ಇನ್ಫೋಟೈನ್‌ಮೆಂಟ್ ಮತ್ತು ಕನೆಕ್ಟಿವಿಟಿ ವೈಶಿಷ್ಟ್ಯಗಳು 8.8 ಇಂಚಿನ ಟಚ್‌ಸ್ಕ್ರೀನ್ ಡಿಸ್ ಪ್ಲೇ, ಕಂಪನಿಯು ಆಡಿಯೋ ಕಂಟ್ರೋಲ್ ಯೂನಿಟ್, ಹಝರ್ಡ್ ಲೈಟ್ ಫಂಕ್ಷನ್ ಬಟನ್‌ಗಳು ಮತ್ತು ಡ್ರೈವಿಂಗ್ ಅಸಿಸ್ಟ್ ಫೀಚರ್ಸ್ ಗಳನ್ನು ಹೊಂದಿವೆ.

ಐಷಾರಾಮಿ Mini Cooper S ಕನ್ವರ್ಟಿಬಲ್ ಕಾರು ಖರೀದಿಸಿದ ಖ್ಯಾತ ನಟ

ಇದರೊಂದಿಗೆ ಮಿನಿ ವೈರ್ಡ್ ಪ್ಯಾಕೇಜ್ ಸ್ಟ್ಯಾಂಡರ್ಡ್ ನ್ಯಾವಿಗೇಷನ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್, ಬ್ಲೂಟೂತ್ ಮೊಬೈಲ್ ಮತ್ತು ಮಲ್ಟಿಫಂಕ್ಷನ್ ಡಿಸ್ಪ್ಲೇಯೊಂದಿಗೆ ಬರುತ್ತದೆ. Apple CarPlay, Mini Radio ವಿಷುಯಲ್ ಬೂಸ್ಟ್ + ನ್ಯಾವಿಗೇಷನ್, ಮತ್ತು ಹಾರ್ಮೋನ್ ಕಾರ್ಡನ್ ಹೈ-ಫೈ ಸ್ಪೀಕರ್ ಸಿಸ್ಟಮ್ ಸಹ ಅದರ ಆನ್-ಬೋರ್ಡ್ ತಂತ್ರಜ್ಞಾನದ ಭಾಗವಾಗಿದೆ.

Most Read Articles

Kannada
English summary
Actor joju george bought new zesty yellow mini cooper s convertible details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X