Lamborghini ಕಾರಿಗಾಗಿ ರೂ.17 ಲಕ್ಷ ನೀಡಿ ಫ್ಯಾನ್ಸಿ ನಂಬರ್​ ಪಡೆದ ನಟ ಜೂ.ಎನ್‌ಟಿಆರ್‌

ಕಾರು ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ಸೆಲಬ್ರಿಟಿಗಳಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚಾಗೇ ಇರುತ್ತೆ. ಮಾರುಕಟ್ಟೆಗೆ ಲಗ್ಗೆ ಇಟ್ಟ ಐಷಾರಾಮಿ ಕಾರುಗಳನ್ನು ಖರೀದಿಸುವುದು ಸಿನಿಮಾ ಸೆಲಬ್ರಿಟಿಗಳಿಗೆ ಒಂದು ಟ್ರೆಂಡ್ ಆಗಿದೆ.

Lamborghini ಕಾರಿಗಾಗಿ ರೂ.17 ಲಕ್ಷ ನೀಡಿ ಫ್ಯಾನ್ಸಿ ನಂಬರ್​ ಪಡೆದ ನಟ ಜ್ಯೂ.ಎನ್​ಟಿಆರ್​

ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಜನಪ್ರಿಯ ಜೂನಿಯರ್ ಎನ್‌ಟಿಆರ್ ಅವಾರು ಹೆಚ್ಚು ಕಾರು ಕ್ರೇಜ್ ಹೊಂದಿದ್ದು, ಇವರ ಬಳಿ ಹಲವಾರು ಐಷಾರಾಮಿ ಮತ್ತು ದುಬಾರಿ ಕಾರುಗಳಿವೆ. ಇತ್ತೀಚೆಗೆ ಈ ಖ್ಯಾತ ನಟ ಎನ್‌ಟಿಆರ್ ಹೊಸ ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ (Lamborghini Urus Graphite Capsule) ಎಡಿಷನ್ ಅನ್ನು ಖರೀದಿಸಿದ್ದಾರೆ, ಈ ಐಷಾರಾಮಿ ಕಾರನ್ನು ಖರೀದಿಸಿದ ಮೊದಲ ಭಾರತೀಯ ಜೂನಿಯರ್ ಎನ್​ಟಿಆರ್ ಆಗಿದ್ದಾರೆ. ಈ ಐಷಾರಾಮಿಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,3.15 ಕೋಟಿಯಾಗಿದೆ. ಸ್ಟ್ಯಾಂಡರ್ಡ್ ಉರುಸ್ ಮಾದರಿಗಿಂತ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಡಿಷನ್ ಹೆಚ್ಚು ಪ್ರೀಮಿಯಂ ಆಗಿದೆ

Lamborghini ಕಾರಿಗಾಗಿ ರೂ.17 ಲಕ್ಷ ನೀಡಿ ಫ್ಯಾನ್ಸಿ ನಂಬರ್​ ಪಡೆದ ನಟ ಜ್ಯೂ.ಎನ್​ಟಿಆರ್​

ನಟ ಜೂನಿಯರ್ ಎನ್‌ಟಿಆರ್ ಈ ಐಷಾರಾಮಿ ಕಾರನ್ನು ಖರೀದಿಸಿದಾಗ ದೇಶದ್ಯಾಂತ ಸುದ್ದಿಯಾಗಿದ್ದರು. ಇದೀಗ ಇಷ್ಟೊಂದು ದುಬಾರಿ ಮೊತ್ತ ನೀಡಿ ಕಾರು ಖರೀದಿ ಮಾಡಿರುವ ಎನ್‌ಟಿಆರ್‌ ಫ್ಯಾನ್ಸಿ ನಂಬರ್ ಅನ್ನು ದುಬಾರಿ ಮೊತ್ತ ನೀಡಿ ಪಡೆದು ಮತ್ತೊಮ್ಮೆ ಸುದ್ದಿಯಾಗಿದ್ದಾರೆ,

Lamborghini ಕಾರಿಗಾಗಿ ರೂ.17 ಲಕ್ಷ ನೀಡಿ ಫ್ಯಾನ್ಸಿ ನಂಬರ್​ ಪಡೆದ ನಟ ಜ್ಯೂ.ಎನ್​ಟಿಆರ್​

ದುಬಾರಿ ಕಾರನ್ನು ಖರೀದಿಸಿದ ಉದ್ಯಮಗಳು ಅಥವಾ ಸೆಲಬ್ರಿಟಿಗಳು ಫ್ಯಾನ್ಸಿ ನಂಬರ್ ಅನ್ನು ಪಡೆಯಲು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಕೆಲವರು ಲಕ್ಕಿ ನಂಬರ್​ ಆಧಾರದ ಮೇಲೆ ನಂಬರ್​ ಪ್ಲೇಟ್​ ಆಯ್ಕೆ ಮಾಡುತ್ತಾರೆ. ಇದಕ್ಕಾಗಿ ಲಕ್ಷಾಂತರ ಹಣವನು ಖರ್ಚು ಮಾಡುತ್ತಾರೆ. ಜ್ಯೂ.ಎನ್​ಟಿಆರ್ ತಮ್ಮ ಲ್ಯಾಂಬೋರ್ಗಿನಿ ಉರುಸ್​ ಕಾರಿಗೆ TS09 FS 9999 ನಂಬರ್​ ಪಡೆದಿದ್ದಾರೆ.

Lamborghini ಕಾರಿಗಾಗಿ ರೂ.17 ಲಕ್ಷ ನೀಡಿ ಫ್ಯಾನ್ಸಿ ನಂಬರ್​ ಪಡೆದ ನಟ ಜ್ಯೂ.ಎನ್​ಟಿಆರ್​

ಈ ನಂಬರ್ ಗಾಗಿ ಜ್ಯೂ.ಎನ್​ಟಿಆರ್ರೋಬ್ಬರಿ ರೂ.17 ಲಕ್ಷ ವ್ಯಯ ಮಾಡಿದ್ದಾರೆ. ಅವರು ಕೊಟ್ಟ ಮೊತ್ತ ಕೇಳಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಇನ್ನು ಹಿಂದಿಯ ಕೌನ್ ಬನೇಗಾ ಕರೋಡ್ ಪತಿ ಶೋನ ತೆಲುಗು ಅವತರಣಿಕೆ 'ಎವರು ಮೀಲೊ ಕೋಟಿಶ್ವರುಲು' ಶೋವನ್ನು ಸದ್ಯ ಎನ್‌ಟಿಆರ್ ನಡೆಸಿಕೊಡುತ್ತಿದ್ದಾರೆ.

Lamborghini ಕಾರಿಗಾಗಿ ರೂ.17 ಲಕ್ಷ ನೀಡಿ ಫ್ಯಾನ್ಸಿ ನಂಬರ್​ ಪಡೆದ ನಟ ಜ್ಯೂ.ಎನ್​ಟಿಆರ್​

ಜನತಾ ಗ್ಯಾರೇಜ್ ಖ್ಯಾತಿಯ ನಟ ಜೂನಿಯರ್ ಎನ್​ಟಿಆರ್ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಈ ನಟ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಹೊಸ ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಪರ್ಲ್ ಕ್ಯಾಪ್ಸುಲ್ ಎಡಿಷನ್ ಅನ್ನು ಖರೀದಿಸಿದ್ದಾರೆ.

Lamborghini ಕಾರಿಗಾಗಿ ರೂ.17 ಲಕ್ಷ ನೀಡಿ ಫ್ಯಾನ್ಸಿ ನಂಬರ್​ ಪಡೆದ ನಟ ಜ್ಯೂ.ಎನ್​ಟಿಆರ್​

ಲ್ಯಾಂಬೋರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಡಿಷನ್ ಅತ್ಯಾಧುನಿಕ ವಿನ್ಯಾಸ ಹೊಂದಿರುವ ವೇಗದ ಎಸ್‍ಯುವಿಗಳಲ್ಲಿ ಒಂದಾಗಿದೆ. ಇದು ಎರಡು-ಟೋನ್ ಕಲರ್ ಸ್ಕೀಮ್‌ನಲ್ಲಿ ಲಭ್ಯವಿರುವ ಮೊದಲೇ ಕಾನ್ಫಿಗರ್ ಮಾಡಿದ ಎಸ್‌ಯುವಿಯಾಗಿದೆ. ಗ್ರ್ಯಾಫೈಟ್ ಆವೃತ್ತಿಯ ಕ್ಯಾಬಿನ್ ಒಳಗೆ ಡಾರ್ಕ್ ಆನೋಡೈಸ್ಡ್ ಅಲ್ಯೂಮಿನಿಯಂ ಮತ್ತು ಮ್ಯಾಟ್ ಫಿನಿಶ್ ಕಾರ್ಬನ್ ಫೈಬರ್‌ ಅನ್ನು ಒಳಗೊಂಡಿದೆ.

Lamborghini ಕಾರಿಗಾಗಿ ರೂ.17 ಲಕ್ಷ ನೀಡಿ ಫ್ಯಾನ್ಸಿ ನಂಬರ್​ ಪಡೆದ ನಟ ಜ್ಯೂ.ಎನ್​ಟಿಆರ್​

ಈ ಲ್ಯಾಂಬೋರ್ಗಿನಿ ಉರುಸ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಅಲ್ಲದೇ ಈ ಲ್ಯಾಂಬೋರ್ಗಿನಿ ಉರುಸ್ ಕಂಪನಿಯ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಅದರಲ್ಲಿಯು ಭಾರತದಲ್ಲಿಯೂ ಗಮನಾರ್ಹ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.

Lamborghini ಕಾರಿಗಾಗಿ ರೂ.17 ಲಕ್ಷ ನೀಡಿ ಫ್ಯಾನ್ಸಿ ನಂಬರ್​ ಪಡೆದ ನಟ ಜ್ಯೂ.ಎನ್​ಟಿಆರ್​

ಕಂಪನಿಯು 2018ರಲ್ಲಿ ಉರುಸ್ ಎಸ್‌ಯುವಿ ಉತ್ಪಾದನೆಯನ್ನು ಮೊದಲ ಬಾರಿಗೆ ಆರಂಭಿಸಿತು. ಅಂದಿನಿಂದ ಈ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ. ಉರುಸ್ ಕಾರಿನಲ್ಲಿ 4.0 ಲೀಟರಿನ 8-ಸಿಲಿಂಡರ್ ಟ್ವಿನ್-ಟರ್ಬೊ ವಿ 8 ಎಂಜಿನ್ ಅಳವಡಿಸಲಾಗಿದೆ.

Lamborghini ಕಾರಿಗಾಗಿ ರೂ.17 ಲಕ್ಷ ನೀಡಿ ಫ್ಯಾನ್ಸಿ ನಂಬರ್​ ಪಡೆದ ನಟ ಜ್ಯೂ.ಎನ್​ಟಿಆರ್​

ಈ ಎಂಜಿನ್ 641 ಬಿಹೆಚ್‌ಪಿ ಪವರ್ ಹಾಗೂ 850 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಉರುಸ್ ಎಸ್‍ಯುವಿಯು ಲ್ಯಾಂಬೋರ್ಗಿನಿ ಕಂಪನಿಯ ಅತ್ಯಂತ ಶಕ್ತಿಶಾಲಿ ಕಾರುಗಳಲ್ಲಿ ಒಂದು. ಈ ಕಾರು ಕೇವಲ 3.6 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

Lamborghini ಕಾರಿಗಾಗಿ ರೂ.17 ಲಕ್ಷ ನೀಡಿ ಫ್ಯಾನ್ಸಿ ನಂಬರ್​ ಪಡೆದ ನಟ ಜ್ಯೂ.ಎನ್​ಟಿಆರ್​

ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ. ಭಾರತದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್, ಉದ್ಯಮಿ ಮುಖೇಶ್ ಅಂಬಾನಿ ಸೇರಿದಂತೆ ಹಲವಾರು ಗಣ್ಯರು ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಹೊಂದಿದ್ದಾರೆ. ಇದೀಗ ಈ ಸಾಲಿಗೆ Jr NTR ಕೂಡ ಸೇರಿದ್ದಾರೆ. ಆದರೆ ಜೂನಿಯರ್ ಎನ್‌ಟಿಆರ್ ಹೆಚ್ಚು ಪ್ರೀಮಿಯಂ ಆದ ಲ್ಯಾಂಬೋರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಡಿಷನ್ ಅನ್ನು ಹೊಂದಿದ್ದಾರೆ.

Lamborghini ಕಾರಿಗಾಗಿ ರೂ.17 ಲಕ್ಷ ನೀಡಿ ಫ್ಯಾನ್ಸಿ ನಂಬರ್​ ಪಡೆದ ನಟ ಜ್ಯೂ.ಎನ್​ಟಿಆರ್​

ಲ್ಯಾಂಬೋರ್ಗಿನಿ ಉರುಸ್ ಫೋಕ್ಸ್‌ವ್ಯಾಗನ್ ಗ್ರೂಪ್‌ನ ಎಂಎಲ್‌ಬಿ ಇವೊ ಪ್ಲಾಟ್‌ಫಾರಂ ಅನ್ನು ಆಧರಿಸಿದೆ. ಲ್ಯಾಂಬೋರ್ಗಿನಿ ಉರುಸ್ ಕಾರು ಸ್ಲಿಮ್ ಆಗಿರುವ ಎಲ್‌ಇಡಿ ಹೆಡ್‌ಲೈಟ್ ಹಾಗೂ ಟೇಲ್ ಲೈಟ್‌ಗಳನ್ನು ಹೊಂದಿದೆ. ಈ ಕಾರಿನ ವಿನ್ಯಾಸವು ಲ್ಯಾಂಬೊರ್ಗಿನಿ ಹುರಾಕನ್ ಸೂಪರ್ ಕಾರ್ ನಿಂದ ಸ್ಫೂರ್ತಿ ಪಡೆದಿದೆ. ಲ್ಯಾಂಬೊರ್ಗಿನಿ ಉರುಸ್ ಕಾರಿನಲ್ಲಿ 21 ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.

Lamborghini ಕಾರಿಗಾಗಿ ರೂ.17 ಲಕ್ಷ ನೀಡಿ ಫ್ಯಾನ್ಸಿ ನಂಬರ್​ ಪಡೆದ ನಟ ಜ್ಯೂ.ಎನ್​ಟಿಆರ್​

ರಸ್ತೆಯಲ್ಲಿ ಸಾಗುವಾಗ ತನ್ನತ್ತ ಜನರನ್ನು ಸೆಳೆಯುವ ಸಾಮರ್ಥ್ಯ ಹೊಂದಿರುವ ಲ್ಯಾಂಬೋರ್ಗಿನಿ ಉರುಸ್ ಚಿಕ್ಕ ಒವರ್‍‍ಹ್ಯಾಂಗ್‍‍ಗಳನ್ನು ಹೊಂದಿರುವ ಕೂಪೆ ಸಿಲೋಟ್, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹಾಗೂ ದೊಡ್ಡ ಗಾತ್ರದ ಬಂಪರ್‍‍ಗಳನ್ನು ಹೊಂದಿದೆ.ಈ ಲ್ಯಾಂಬೋರ್ಗಿನಿ ಉರುಸ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ಕಾರುಗಳಲ್ಲಿ ಒಂದಾಗಿದೆ.

Article Published On: Thursday, September 23, 2021, 19:50 [IST]
English summary
Actor jr ntr buys fancy number worth rs 17 lakh details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+