ವಿಕ್ರಮ್ ಸಿನಿಮಾ ನಿರ್ದೇಶಕ ಲೋಕೇಶ್‌ಗೆ ದುಬಾರಿ ಉಡುಗೊರೆ ನೀಡಿದ ನಟ ಕಮಲ್ ಹಾಸನ್

ಇತ್ತೀಚೆಗೆ ರೀಲೀಸ್ ಆಗಿ ಭಾರೀ ಸದ್ದು ಮಾಡುತ್ತಿರುವ ಬಹು ಭಾಷಾ ನಟ ಕಮಲ್ ಹಾಸನ್ ನಟನೆಯ ಪ್ಯಾನ್‌ ಇಂಡಿಯಾ ಸಿನಿಮ 'ವಿಕ್ರಮ್'ಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಫ್ಯಾನ್ಸ್‌ಗೆ ಇಂತಹ ಅದ್ದೂರಿ ಸಿನಿಮಾವನ್ನು ಕೊಟ್ಟ ನಿರ್ದೇಶಕ ಲೋಕೇಶ್ ಕನಗರಾಜ್ ಹಾಗೂ ಸಹಾಯಕ ನಿರ್ದೇಶಕರಿಗೆ ಕಮಲ್ ಹಾಸನ್ ದುಬಾರಿ ಉಡುಗೊರೆ ನೀಡಿದ್ದಾರೆ.

ವಿಕ್ರಮ್ ಸಿನಿಮಾ ನಿರ್ದೇಶಕ ಲೋಕೇಶ್‌ಗೆ ದುಬಾರಿ ಉಡುಗೊರೆ ನೀಡಿದ ನಟ ಕಮಲ್ ಹಾಸನ್

ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಭಾರತೀಯ ಸಿನಿಮಾರಂಗದ ಪ್ರಮುಖರು ನಿರ್ದೇಶಕ ಹಾಗೂ ತಾರಾಗಣವನ್ನು ಪ್ರಶಂಸಿಸುತ್ತಿದ್ದಾರೆ. ಸಿನಿಮಾವನ್ನು ಅದ್ಬುತವಾಗಿ ನಿರ್ದೇಶಿಸಿರುವ ಡೈರಕ್ಷನ್ ಡಿಪಾರ್ಟ್‌ಮೆಂಟ್ ಅನ್ನು ಕಮಲ್ ಹಾಸನ್ ಅವರು ಹಾಡಿ ಹೋಗಳುತ್ತಿದ್ದು, ಇದೀಗ ನಿರ್ದೇಶಕ ಲೋಕೇಶ್ ಕನಗರಾಜ್ ಅವರಿಗೆ ದುಬಾರಿ ಲೆಕ್ಸಸ್ ಕಾರು ಮತ್ತು ಸಹಾಯಕ ನಿರ್ದೇಶಕರಿಗೆ ಟಿವಿಎಸ್ ಅಪಾಚೆ ಆರ್ ಟಿಆರ್ 160 ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ವಿಕ್ರಮ್ ಸಿನಿಮಾ ನಿರ್ದೇಶಕ ಲೋಕೇಶ್‌ಗೆ ದುಬಾರಿ ಉಡುಗೊರೆ ನೀಡಿದ ನಟ ಕಮಲ್ ಹಾಸನ್

ಚಿತ್ರದಲ್ಲಿ 13 ಮಂದಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ನಟ ಕಮಲ್ ಹಾಸನ್ ಅವರೆಲ್ಲರಿಗೂ ಅಪಾಚೆ ಆರ್‌ಟಿಆರ್ 160 ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮಾಹಿತಿಯನ್ನು ದೃಢೀಕರಿಸುವ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ವಿಕ್ರಮ್ ಸಿನಿಮಾ ನಿರ್ದೇಶಕ ಲೋಕೇಶ್‌ಗೆ ದುಬಾರಿ ಉಡುಗೊರೆ ನೀಡಿದ ನಟ ಕಮಲ್ ಹಾಸನ್

ವಿಶೇಷವಾಗಿ ನಟ ಕಮಲ್ ಹಾಸನ್ ಅವರು ಐಷಾರಾಮಿ ಕಾರಿನ ಕೀ ಅನ್ನು ನಿರ್ದೇಶಕ ಲೋಕೇಶ್ ಕನಗರಾಜ್ ಅವರಿಗೆ ಹಸ್ತಾಂತರಿಸುವ ಚಿತ್ರಗಳು ವೈರಲ್ ಆಗುತ್ತಿವೆ. ಚಿತ್ರದ ಯಶಸ್ಸನ್ನು ಸಂಭ್ರಮಿಸುವ ಸಲುವಾಗಿ ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕರಿಗೆ ಸರ್ಪ್ರೈಸ್‌ ಆಗಿ ಈ ಉಡುಗೊರೆಗಳನ್ನು ನೀಡಲಾಗಿದೆ.

ವಿಕ್ರಮ್ ಸಿನಿಮಾ ನಿರ್ದೇಶಕ ಲೋಕೇಶ್‌ಗೆ ದುಬಾರಿ ಉಡುಗೊರೆ ನೀಡಿದ ನಟ ಕಮಲ್ ಹಾಸನ್

ವಿಕ್ರಮ್ ಚಿತ್ರವು ಮೊದಲ ದಿನವೇ 32 ಕೋಟಿ ರೂ.ಗಳನ್ನು ಸಂಗ್ರಹಿಸಿತು. ಇದು ಭಾರತೀಯ ಬಾಕ್ಸ್‌ ಆಫೀಸ್ ಅಂಕಿಅಂಶಗಳಾಗಿದ್ದು, ವರಲ್ಡ್ ವೈಡ್ ಇದು 45.65 ಕೋಟಿ ರೂ.ಗಳನ್ನು ಗಳಿಸಿದೆ. ಚಿತ್ರ ಬಿಡುಗಡೆಯಾಗಿ ಇಂದಿಗೆ ಐದು ದಿನಗಳು ಕಳೆದಿವೆ. ಆದರೂ ಚಿತ್ರಮಂದಿರಗಳು ಇನ್ನೂ ಯಶಸ್ವಿಯಾಗಿ ಸಿನಿಮಾವನ್ನು ಪ್ರದರ್ಶಿಸುತ್ತಿವೆ. ಮೂಲಗಳ ಪ್ರಕಾರ ಇದುವರೆಗೆ ಸಿನಿಮಾ 120 ಕೋಟಿ ರೂ.ಗಳಿಗೂ ಹೆಚ್ಚು ಸಂಗ್ರಹಿಸಿದೆ.

ವಿಕ್ರಮ್ ಸಿನಿಮಾ ನಿರ್ದೇಶಕ ಲೋಕೇಶ್‌ಗೆ ದುಬಾರಿ ಉಡುಗೊರೆ ನೀಡಿದ ನಟ ಕಮಲ್ ಹಾಸನ್

ಕಮಲ್ ಹಾಸನ್ ಅವರ ವಿಕ್ರಮ್ ಸಿನಿಮಾ ಭಾರೀ ಯಶಸ್ಸು ಕಂಡಿರುವ ಹಿನ್ನಿಲೆಯಲ್ಲಿ ನಿರ್ದೇಶಕ ಲೋಕೇಶ್ ಕನಗರಾಜ್ ಅವರಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ಉಡುಗೊರೆಯಾಗಿ ನೀಡಲಾದ ಕಾರು ಮಾದರಿಯ ಬಗ್ಗೆ ಯಾವುದೇ ನಿಖರವಾದ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.

ವಿಕ್ರಮ್ ಸಿನಿಮಾ ನಿರ್ದೇಶಕ ಲೋಕೇಶ್‌ಗೆ ದುಬಾರಿ ಉಡುಗೊರೆ ನೀಡಿದ ನಟ ಕಮಲ್ ಹಾಸನ್

ಕೆಲವು ಮೂಲಗಳ ಪ್ರಕಾರ, ನಟ ಕಮಲ್ ಹಾಸನ್ ಅವರು ಲೆಕ್ಸಸ್ ಇಎಸ್ 300 ಎಚ್ ಮಾದರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಈ ಐಷಾರಾಮಿ ಕಾರು ಭಾರತದಲ್ಲಿ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಟಾಪ್ ಎಂಡ್ ಮಾಡಲ್ ಅನ್ನು ಕಮಲ್ ಅವರು ಉಡುಗೊರೆಯಾಗಿ ನೀಡಿರಬಹುದು ಎನ್ನಲಾಗಿದೆ.

ವಿಕ್ರಮ್ ಸಿನಿಮಾ ನಿರ್ದೇಶಕ ಲೋಕೇಶ್‌ಗೆ ದುಬಾರಿ ಉಡುಗೊರೆ ನೀಡಿದ ನಟ ಕಮಲ್ ಹಾಸನ್

ಇಎಸ್ 300ಎಚ್ ಐಷಾರಾಮಿ ಹೈ-ಎಂಡ್ ಆಯ್ಕೆಯಾಗಿರುವುದರಿಂದ, ಇದು ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿರುವ ಕಾರಣ ಬೆಲೆಯೂ ಸ್ವಲ್ಪ ಹೆಚ್ಚಾಗಿದೆ. ಈ ಐಷಾರಾಮಿ ಕಾರು ಗರಿಷ್ಠ 65.60 ಲಕ್ಷ ರೂ.ಗೆ ಮಾರಾಟಕ್ಕೆ ಲಭ್ಯವಿದೆ. ಇದು ಎಕ್ಸ್ ಶೋರೂಂನ ಬೆಲೆ ಮಾತ್ರ.

ವಿಕ್ರಮ್ ಸಿನಿಮಾ ನಿರ್ದೇಶಕ ಲೋಕೇಶ್‌ಗೆ ದುಬಾರಿ ಉಡುಗೊರೆ ನೀಡಿದ ನಟ ಕಮಲ್ ಹಾಸನ್

ಈ ಕಾರು 2.5-ಲೀಟರ್, ಡೈರೆಕ್ಟ್ ಇಂಜೆಕ್ಷನ್ ಮೋಟರ್ ಅನ್ನು ಬಳಸುತ್ತದೆ. ಇದಲ್ಲದೆ, ಸೆಲ್ಫ್ ಚಾರ್ಜಿಂಗ್ ಗಾಗಿ ಹೈಬ್ರಿಡ್ ಸೌಲಭ್ಯವೂ ಇದೆ. ಆದ್ದರಿಂದ, ಕಾರು ಎಲೆಕ್ಟ್ರಿಕ್ ಮೋಟರ್ ಅನ್ನು ಸಹ ಹೊಂದಿದೆ. ಈ ಎರಡು ಸಹಯೋಗದಲ್ಲಿ ಕಾರು 214 ಹಾರ್ಸ್‌ ಪವರ್ ಸಾಮರ್ಥ್ಯದಲ್ಲಿ ಚಲಿಸುವಂತೆ ಮಾಡುತ್ತದೆ.

ವಿಕ್ರಮ್ ಸಿನಿಮಾ ನಿರ್ದೇಶಕ ಲೋಕೇಶ್‌ಗೆ ದುಬಾರಿ ಉಡುಗೊರೆ ನೀಡಿದ ನಟ ಕಮಲ್ ಹಾಸನ್

ಈ ಮಾದರಿಯು 22.6 ಕಿ.ಮೀ ಮೈಲೇಜ್ ನೀಡುತ್ತದೆ. 2,487 ಸಿಸಿ 4 ಸಿಲಿಂಡರ್ ಇನ್-ಲೈನ್ ಮೋಟಾರ್ ಅನ್ನು ಇಎಸ್300ಎಚ್ ಐಷಾರಾಮಿ ರೂಪಾಂತರದಲ್ಲಿ ಬಳಸಲಾಗುತ್ತದೆ. ಈ ಮೋಟಾರ್ 5,700 ಆರ್ ಪಿಎಂನಲ್ಲಿ ಗರಿಷ್ಠ 131 ಕಿಲೋವ್ಯಾಟ್ ಮತ್ತು 5,200 ಆರ್ ಪಿಎಂನಲ್ಲಿ 221 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಬಲ್ಲದು.

ವಿಕ್ರಮ್ ಸಿನಿಮಾ ನಿರ್ದೇಶಕ ಲೋಕೇಶ್‌ಗೆ ದುಬಾರಿ ಉಡುಗೊರೆ ನೀಡಿದ ನಟ ಕಮಲ್ ಹಾಸನ್

ಪರ್ಮನೆಂಟ್ ಮ್ಯಾಗ್ನೆಟ್ ಎಲೆಕ್ಟ್ರಿಕ್ ಮೋಟಾರ್ ಗರಿಷ್ಠ 88 ಕಿಲೋವ್ಯಾಟ್ ಮತ್ತು 202 ಎನ್ಎಂ ಪವರ್ ನೀಡುತ್ತದೆ. 244.8 ವಿ ಬ್ಯಾಟರಿ ಪ್ಯಾಕ್ ಈ ಎಲೆಕ್ಟ್ರಿಕ್ ಮೋಟಾರ್ ಪವರ್ ಅನ್ನು ಹೊಂದಿದೆ. 160 ಕಿಲೋವ್ಯಾಟ್ ವರೆಗೆ ವಿದ್ಯುತ್ ಒದಗಿಸುತ್ತದೆ. ಈ ಕಾರು ಸಾಕಷ್ಟು ಐಷಾರಾಮಿ ಒಳಾಂಗಣವನ್ನು ಸಹ ಹೊಂದಿದೆ.

ವಿಕ್ರಮ್ ಸಿನಿಮಾ ನಿರ್ದೇಶಕ ಲೋಕೇಶ್‌ಗೆ ದುಬಾರಿ ಉಡುಗೊರೆ ನೀಡಿದ ನಟ ಕಮಲ್ ಹಾಸನ್

ಸೆಮಿ-ಆನಿಮೇಟೆಡ್ ಲೆದರ್ ಸೀಟ್‌ಗಳು, 14 ವಿಭಿನ್ನ ರೀತಿಯ ಹೊಂದಾಣಿಕೆಯೊಂದಿಗೆ ಡ್ರೈವರ್ ಸೀಟ್, ಮುಂಭಾಗದಲ್ಲಿ ವೆಂಟಿಲೇಟ್ ಮತ್ತು ಶಾಖ, 7-ಇಂಚಿನ ಟಿಎಫ್‌ಟಿ ಸ್ಕ್ರೀನ್ ಮತ್ತು ಎಲ್ಇಡಿ ಆಂಬಿಯೆಂಟ್ ಲೈಟ್ ಇತರ ವೈಶಿಷ್ಟ್ಯಗಳಲ್ಲಿ ಸೇರಿವೆ.

ವಿಕ್ರಮ್ ಸಿನಿಮಾ ನಿರ್ದೇಶಕ ಲೋಕೇಶ್‌ಗೆ ದುಬಾರಿ ಉಡುಗೊರೆ ನೀಡಿದ ನಟ ಕಮಲ್ ಹಾಸನ್

ಇದಲ್ಲದೆ, ಕ್ರೂಸ್ ಕಂಟ್ರೋಲ್, ಪ್ಯಾಡಲ್ ಶಿಫ್ಟ್, ಎಲೆಕ್ಟ್ರಿಕ್ ಟಿಲ್ಟ್ನೊಂದಿಗೆ ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ವೈರ್ಲೆಸ್ ಚಾರ್ಜರ್, ಹೆಡ್ಸ್ ಅಪ್ ಸ್ಕ್ರೀನ್, ರೇನ್ ಸೆನ್ಸಿಂಗ್ ವೈಪರ್, ಆಟೋಮ್ಯಾಟಿಕ್ 3 ಜೋನ್ ಏರ್ ಕಂಡೀಷನರ್, ಮುಂಭಾಗ ಮತ್ತು ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸರ್, ಸ್ಮಾರ್ಟ್ ಫೋನ್ ಸಂಪರ್ಕ ಮತ್ತು ಸ್ಮಾರ್ಟ್ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

Most Read Articles

Kannada
English summary
Actor Kamal Haasan gives an expensive gift to Vikram director Lokesh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X