ವಿಡಿಯೋ ನೋಡಿ ಪಡ್ಡೆಗಳ ತಲೆ ತಿರುಗಿತು.. ಪ್ರಖ್ಯಾತ ಕಾರಿನಲ್ಲಿ ಬಂದು ಎಕ್ಸ್‌ಪೋಸಿಂಗ್‌ ಪೋಸ್ ಕೊಟ್ಟ ನಟಿ!

ಬಾಲಿವುಡ್ ನಟಿ ಕಂಗನಾ ಶರ್ಮಾ (Kangana Sharma), ಕೆಲ ದಿನಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ. ಆಕೆಯ ಎಕ್ಸ್‌ಪೋಸಿಂಗ್‌ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಹಲ್‌ಚಲ್ ಸೃಷ್ಟಿಸಿದ್ದು, ಪಡ್ಡೆಗಳ ತಲೆ ತಿರುಗುವಂತೆ ಮಾಡುತ್ತಿದೆ. 'ಗ್ರೇಟ್ ಗ್ರ್ಯಾಂಡ್ ಮಸ್ತಿ' ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟ ಕಂಗನಾ, ತೂ ಸೂರಜ್ ಮೇನ್ ಸಾಂಜ್ ಪಿಯಾಜಿ ಹಾಗೂ ದಿ ಕಪಿಲ್ ಶರ್ಮಾ ಶೋನಲ್ಲಿ ಕೂಡ ಮಿಂಚಿದ್ದರು.

ಇತ್ತೀಚೆಗೆ, ಮುಂಬೈನಲ್ಲಿ ನಟಿ ಕಂಗನಾ ಶರ್ಮಾ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಯುಟ್ಯೂಬ್‌ನಲ್ಲಿ ಹರಿದಾಡುತ್ತಿದೆ. ನಟಿ ಕಂಗನಾ, 'ಮಹೀಂದ್ರಾ ಎಕ್ಸ್‌ಯುವಿ700' ಎಸ್‌ಯುವಿಯಿಂದ ಹೊರಬರುತ್ತಿರುವುದು.. ಜೊತೆಗೆ ಆಕರ್ಷಕ ಕಪ್ಪು ಬಣ್ಣದ ಉಡುಗೆಯಲ್ಲಿರುವ ಆಕೆ ಪಾಪರಾಜಿಗಳ ಕ್ಯಾಮೆರಾಗಳಿಗೆ ಫುಲ್ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಆದರೆ, ಈ ಕಾರು ಕಂಗನಾರ ಒಡೆತನಕ್ಕೆ ಸೇರಿದೆ ಎಂಬುದನ್ನು ಖಚಿತಪಡಿಸಲು ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ.

Actor Kangana Sharma Spotted Mahindra XUV700 Details

ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ವಿಶೇಷತೆಗಳೇನು ಗೊತ್ತಾ?

ಈ ಎಸ್‌ಯುವಿ, ಕನಿಷ್ಠ ರೂ.13.99 ಲಕ್ಷ ಹಾಗೂ ಗರಿಷ್ಠ ರೂ.25.74 ಲಕ್ಷ (ಎಕ್ಸ್-ಶೋರೂಂ - ನವದೆಹಲಿ) ಬೆಲೆಯನ್ನು ಒಳಗೊಂಡಿದೆ. ಎಂಎಕ್ಸ್, ಎಎಕ್ಸ್3, ಎಎಕ್ಸ್5 ಮತ್ತು ಎಎಕ್ಸ್7 ಸೇರಿದಂತೆ ಹಲವು ರೂಪಾಂತರಗಳನ್ನು (ವೇರಿಯೆಂಟ್) ಆಯ್ಕೆಯನ್ನು ಪಡೆದಿದೆ. ಜೊತೆಗೆ ವಿವಿಧ ಆಕರ್ಷಕ ಬಣ್ಣಗಳೊಂದಿಗೂ ದೊರೆಯುತ್ತದೆ.

ನೂತನ ಮಹೀಂದ್ರಾ ಎಕ್ಸ್‌ಯುವಿ700 ಕಾರು ಎರಡು ಪವರ್‌ಟ್ರೇನ್‌ಗಳನ್ನು ಪಡೆದಿದೆ. ಇದರ 2-ಲೀ. ಪೆಟ್ರೋಲ್ ಎಂಜಿನ್, 200 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 380 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 2.2-ಲೀ. ಡೀಸೆಲ್ ಎಂಜಿನ್ 185 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 450 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.

Actor Kangana Sharma Spotted Mahindra XUV700 Details

ಈ ಕಾರು, ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೂ ಖರೀದಿಗೆ ದೊರೆಯುತ್ತದೆ. ಬರೋಬ್ಬರಿ 17 ಕೆಎಂಪಿಎಲ್‌ವರೆಗೂ ಮೈಲೇಜ್ ಮೈಲೇಜ್ ನೀಡಬಲ್ಲದು. ಎಫ್‌ಡಬ್ಲ್ಯೂಡಿ (ಫ್ರಂಟ್ ವೀಲ್ ಡ್ರೈವ್) & ಎಡಬ್ಲ್ಯೂಡಿ (ಆಲ್ ವೀಲ್ ಡ್ರೈವ್) ಟೆಕ್ನಾಲಜಿಯನ್ನು ತನ್ನದಾಗಿಸಿಕೊಂಡಿದೆ.

ಹೊಸ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ 5, 6 ಹಾಗೂ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿಯೂ ಲಭ್ಯವಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣ ಮಾಡಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 240 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

Actor Kangana Sharma Spotted Mahindra XUV700 Details

ನೂತನ ಎಸ್‌ಯುವಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.25-ಇಂಚು), ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ (10.25-ಇಂಚು), 12-ಸ್ಪೀಕರ್‌ ಆಡಿಯೊ ಸಿಸ್ಟಮ್, ಸನ್‌ರೂಫ್ ಮತ್ತು ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 7-ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 29, 2025, 17:08 [IST]
English summary
Actor kangana sharma spotted mahindra xuv700 details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+