ಕಾರ್ತಿಕ್ ಮಹೇಶ್‌ಗೆ ಸಿಕ್ತು ಬಿಗ್‌ಬಾಸ್ ಕಾರು.. ತೆಂಗಿನಕಾಯಿ ಒಡೆದು ಪೂಜೆ.. 8 ಲಕ್ಷ ಆರಂಭಿಕ ಬೆಲೆ, 5 ಸೀಟರ್!

ಬಿಗ್‌ಬಾಸ್ (BiggBoss) ಕನ್ನಡ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್ (Karthik Mahesh), ಶೋನಲ್ಲಿ ಗೆದಿದ್ದ ಹೊಚ್ಚ ಹೊಸ ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಎಸ್‌ಯುವಿಯನ್ನು 7 ತಿಂಗಳ ಬಳಿಕ ವಿತರಣೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, 'ಅಂತು ಇಂತು ಬಂತು ಬಿಗ್‌ಬಾಸ್ ಕಾರು' ಎಂಬ ಶೀರ್ಷಿಕೆ ನೀಡಿದ್ದಾರೆ. ಸದ್ಯ ಈ ಪೋಸ್ಟ್ 40 ಸಾವಿರಕ್ಕೂ ಅಧಿಕ ಲೈಕ್ ಪಡೆದುಕೊಂಡಿದೆ. ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಬಿಗ್‌ಬಾಸ್ ಕನ್ನಡ ಸೀಸನ್ 10ರ ವಿಜೇತರಿಗೆ ರೂ.50 ಲಕ್ಷ ನಗದು, ಟ್ರೋಫಿ ಹಾಗೂ ನೂತನ ಕಾರನ್ನು ಬಹುಮಾನವಾಗಿ ನೀಡುವುದಾಗಿ ಆಯೋಜಕರು ಘೋಷಿಸಿದ್ದರು. ಅದರಂತೆ ಕಾರ್ತಿಕ್ ಮಹೇಶ್‌ಗೆ ಹೊಸ ಮಾರುತಿ ಸುಜುಕಿ ಬ್ರೆಝಾ ಎಸ್‌ಯುವಿಯನ್ನು ಹಸ್ತಾಂತರಿಸಲಾಗಿದೆ. ಅವರು ಖುಷಿಯಿಂದ ಈ ಕಾರನ್ನು ವಿತರಣೆ ಪಡೆದಿದ್ದು, ಪೂಜೆ ಸಲ್ಲಿಸುವ ಮೂಲಕ ನೂತನ ಅತಿಥಿಯನ್ನು ಮನೆಗೆ ಬರಮಾಡಿಕೊಂಡಿದ್ದಾರೆ.

Actor Karthik Mahesh wins Bigg Boss Kannada 10 Receives Brezza Car

ಕಾರ್ತಿಕ್ ಮಹೇಶ್ ನಟನೆ ಹಾಗೂ ಮಾಡಲಿಂಗ್ ಕ್ಷೇತ್ರಗಳೆರಡರಲ್ಲೂ ಗುರುತಿಸಿಕೊಂಡಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಯ ಧಾರಾವಾಹಿಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯ 'ಚಂದ್ರು' ಪಾತ್ರ ಕಾರ್ತಿಕ್‌ಗೆ ಹೆಚ್ಚು ಜನಮನ್ನಣೆ ತಂದುಕೊಟ್ಟಿತ್ತು. ಆ ಬಳಿಕ ಅಂತರಪಟ ಧಾರವಾಹಿಯಲ್ಲಿ 'ರವಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ರಾಮರಸ ಸಿನಿಮಾದಲ್ಲಿ ನಾಯಕನಟನಾಗಿ ನಟಿಸುತ್ತಿದ್ದಾರೆ.

ಈ ಬಗ್ಗೆ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ಕಾರ್ತಿಕ್ ಮಹೇಶ್ ಅವರು, 'ಹೊಸ ಮಾರುತಿ ಸುಜುಕಿ ಬ್ರೆಝಾ ಎಸ್‌ಯುವಿಯನ್ನು ಬುಕ್ಕಿಂಗ್ ಮಾಡಿದ ಮೇಲೆ ವಿತರಣೆಯಾಗಲು 6 ರಿಂದ 7 ತಿಂಗಳು ಸಮಯಾವಕಾಶ ಬೇಕಾಗುತ್ತದೆ. ನನಗೆ ಬಹುಮಾನವಾಗಿ ದೊರೆತಿದ್ದ ಈ ಕಾರು 1 ತಿಂಗಳ ಹಿಂದೆಯೇ ಡೀಲರ್‌ಶಿಪ್‌ಗೆ ಬಂದಿತ್ತು. ನಾನು ಇಂದು ಡೆಲಿವರಿ ತೆಗೆದುಕೊಳ್ಳುತ್ತಿದ್ದೇನೆ' ಎಂದು ಹೇಳಿದ್ದಾರೆ.

Actor Karthik Mahesh wins Bigg Boss Kannada 10 Receives Brezza Car

ಕಾರ್ತಿಕ್ ಮಹೇಶ್‌ಗೆ ಮಾರುತಿ ಸುಜುಕಿ ಬ್ರೆಝಾ ಎಸ್‌ಯುವಿಯ ಯಾವ ರೂಪಾಂತರ (ವೇರಿಯೆಂಟ್) ಬಹುಮಾನವಾಗಿ ಲಭ್ಯವಾಗಿದೆ ಎಂಬುದರ ಕುರಿತಂತೆ ಸ್ಪಷ್ಟವಾದ ಮಾಹಿತಿಯಿಲ್ಲ. ದೇಶೀಯವಾಗಿ ಖರೀದಿಗೆ ಸಿಗುವ ನೂತನ ಬ್ರೆಝಾ ಕಾರು ರೂ.8.34 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಈ ಮಾರುತಿ ಸುಜುಕಿ ಬ್ರೆಝಾ ಎಸ್‌ಯುವಿ ಎಲ್ಎಕ್ಸ್ಐ ಹಾಗೂ ವಿಎಕ್ಸ್ಐ ಸೇರಿದಂತೆ ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ಸಿಜ್ಲಿಂಗ್ ರೆಡ್, ಬ್ರೇವ್ ಖಾಖಿ, ಪರ್ಲ್ ಮಿಡ್ನೈಟ್ ಬ್ಲಾಕ್, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಪರ್ಲ್ ಆರ್ಕ್ಟಿಕ್ ವೈಟ್ ಒಳಗೊಂಡಂತೆ ಹಲವು ಬಣ್ಣಗಳನ್ನು ಹೊಂದಿದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣಿಸಬಹುದು.

ನೂತನ ಕಾರು 1.5-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 17.38 ರಿಂದ 25.51 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಜೊತೆಗೆ ಎಫ್‌ಡಬ್ಲ್ಯೂಡಿ (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.

ಬ್ರೆಝಾ ಎಸ್‌ಯುವಿಯು 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 4-ಸ್ಪೀಕರ್ ಸೌಂಡ್ ಸಿಸ್ಟಮ್, ಸಿಂಗಲ್ ಪೇನ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲು 6-ಏರ್‌ಬ್ಯಾಗ್‌, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, August 29, 2024, 10:31 [IST]
English summary
Actor karthik mahesh wins bigg boss kannada 10 receives brezza car
Read more on celebrity car india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+