ನಟ ಕಾರ್ತಿಕ್ ಆರ್ಯನ್‌ಗೆ ರೂ.3.72 ಕೋಟಿ ಮೌಲ್ಯದ ಕಾರ್ ಗಿಫ್ಟ್ ನೀಡಿದ ನಿರ್ಮಾಪಕ ಭೂಷಣ್ ಕುಮಾರ್

ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್ ಅವರ ಭೂಲ್ ಭುಲೈಯಾ-2 ಚಿತ್ರ ಯಶ್ವಸಿನ ಖುಷಿಯಲ್ಲಿರುವಾಗ ಭರ್ಜರಿ ಗಿಫ್ಟ್ ಸಿಕ್ಕಿದೆ. ಭೂಲ್ ಭುಲೈಯಾ-2 ಚಿತ್ರ ಯಶ್ವಸಿನ ಬಳಿಕ ನಿರ್ಮಾಪಕ ಭುಷಣ್ ಕುಮಾರ್ ಅವರು ಕಾರ್ತಿಕ್ ಆರ್ಯನ್ ಅವರಿಗೆ ಮೆಕ್ಲಾರೆನ್ ಜಿಟಿ ಐಷಾರಾಮಿ ಸ್ಪೋರ್ಟ್ಸ್ ಸೂಪರ್ ಕಾರ್ ಅನ್ನು ಗಿಫ್ಟ್ ಅನ್ನು ನೀಡಿದ್ದಾರೆ.

ನಟ ಕಾರ್ತಿಕ್ ಆರ್ಯನ್‌ಗೆ ರೂ,3.72 ಕೋಟಿ ಮೌಲ್ಯದ ಕಾರ್ ಗಿಫ್ಟ್ ನೀಡಿದ ನಿರ್ಮಾಪಕ ಭೂಷಣ್ ಕುಮಾರ್

ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್ ಅವರ ಇತ್ತೀಚಿನ ಚಿತ್ರ ಭೂಲ್ ಭುಲೈಯಾ 2 ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ವಿಯನ್ನು ಗಳಿಸಿದೆ. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಧೂಳೆಬ್ಬಿಸಿದೆ. ಭೂಲ್ ಭುಲೈಯಾ-2 ಯಶಸ್ಸಿನ ಬಳಿಕ ನಿರ್ಮಾಪಕ ಭುಷಣ್ ಕುಮಾರ್ ಹೀರೋ ಕಾರ್ತಿರ್‌ಗೆ ದುಬಾರಿ ಬೆಲೆಯ ಕಾರ್ ಅನ್ನು ಗಿಫ್ಟ್ ನೀಡಿದ್ದಾರೆ. ಇದು ಮೆಕ್ಲಾರೆನ್ ಜಿಟಿ, ಐಷಾರಾಮಿ ಸ್ಪೋರ್ಟ್ಸ್ ಕಾರ್ ಆಗಿದೆ. ವಿಶೇಷ ಎಂದರೆ ಈ ಕಾರನ್ನು ಹೊಂದಿದ ಭಾರತದ ಮೊದಲ ನಟ ಎನ್ನುವ ಹೆಗ್ಗಳಿಕೆ ಕೂಡ ಕಾರ್ತಿಕ್ ಅವರಿಗೆ ಸಲ್ಲುತ್ತದೆ.

ನಟ ಕಾರ್ತಿಕ್ ಆರ್ಯನ್‌ಗೆ ರೂ,3.72 ಕೋಟಿ ಮೌಲ್ಯದ ಕಾರ್ ಗಿಫ್ಟ್ ನೀಡಿದ ನಿರ್ಮಾಪಕ ಭೂಷಣ್ ಕುಮಾರ್

ಭೂಷಣ್ ಕುಮಾರ್ ಮತ್ತು ಕಾರ್ತಿಕ್ ಸೇರಿ ಹೊಸ ಕಾರಿನ ಮುಂದೆ ನಿಂತು ಪೋಸ್ ಕೊಟ್ಟಿದ್ದಾರೆ. ಈ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರವು ಸಖತ್ ವೈರಲ್ ಆಗಿದೆ. ಕಾರ್ತಿಕ್ ಅವರ ಈ ಹೊಸ ಕಾರು ಕ್ಲಾಸಿಕ್ ಆರೆಂಜ್ ಬಣ್ಣವನ್ನು ಹೊಂದಿದೆ. ಈ ಕಾರಿನ ವ್ಹೀಲ್ ಗಳು ಗ್ಲೋಸ್ ಬ್ಲ್ಯಾಕ್‌ ಬಣ್ಣ ಮತ್ತು ಅಜೋರ್ಸ್ ಕ್ಯಾಲಿಪರ್‌ಗಳಿವೆ.

ನಟ ಕಾರ್ತಿಕ್ ಆರ್ಯನ್‌ಗೆ ರೂ,3.72 ಕೋಟಿ ಮೌಲ್ಯದ ಕಾರ್ ಗಿಫ್ಟ್ ನೀಡಿದ ನಿರ್ಮಾಪಕ ಭೂಷಣ್ ಕುಮಾರ್

ಭಾರತದಲ್ಲಿ ಮೆಕ್ಲಾರೆನ್ ಕಾರುಗಳ ಹೆಚ್ಚುತ್ತಿರುವ ಜನಪ್ರಿಯತೆಯ ನಂತರ, ಬ್ರಿಟಿಷ್ ತಯಾರಕರು ಕಳೆದ ವರ್ಷ ಅಧಿಕೃತವಾಗಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದರು. ಮೆಕ್ಲಾರೆನ್ ಜಿಟಿ ತಯಾರಕರ ಸರಣಿಯಿಂದ ಎಂಟ್ರಿ ಮಟ್ಟದ ಲೆವೆಲ್ ಕಾರ್ ಆಗಿದೆ.

ನಟ ಕಾರ್ತಿಕ್ ಆರ್ಯನ್‌ಗೆ ರೂ,3.72 ಕೋಟಿ ಮೌಲ್ಯದ ಕಾರ್ ಗಿಫ್ಟ್ ನೀಡಿದ ನಿರ್ಮಾಪಕ ಭೂಷಣ್ ಕುಮಾರ್

ಮೆಕ್ಲಾರೆನ್ ಜಿಟಿ ಕಾರಿನ ಬೆಲೆಯು ಎಕ್ಸ್ ಶೋ ರೂಂ ಪ್ರಕಾರ ರೂ.3.72 ಕೋಟಿಯಾಗಿದೆ. ಇದು ಯಾವುದೇ ಕಸ್ಟಮೈಸೇಶನ್ ಆಯ್ಕೆಯಿಲ್ಲದೆ ಇದು ಕಾರಿನ ಮೂಲ ಬೆಲೆಯಾಗಿದೆ. ಆದರೆ ಮೆಕ್ಲಾರೆನ್ ಜಿಟಿ ಆಡ್-ಆನ್ ಪ್ಯಾಕ್ ಅನ್ನು ನೀಡುತ್ತದೆ. ಇದರ ಬೆಲೆ ರೂ.29.77 ಲಕ್ಷವಾಗಿದೆ. ಇದರಲ್ಲಿ ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್ ಕ್ಯಾಮೆರಾ, ವೆಹಿಕಲ್ ಲಿಫ್ಟ್ ಮತ್ತು ಹೆಚ್ಚಿನದನ್ನು ಹೊಂದಿರಲಿದೆ.

ನಟ ಕಾರ್ತಿಕ್ ಆರ್ಯನ್‌ಗೆ ರೂ,3.72 ಕೋಟಿ ಮೌಲ್ಯದ ಕಾರ್ ಗಿಫ್ಟ್ ನೀಡಿದ ನಿರ್ಮಾಪಕ ಭೂಷಣ್ ಕುಮಾರ್

ಇದು ಎಂಟ್ರಿ-ಲೆವೆಲ್ ಆಗಿದ್ದರೂ ಸಹ, ಮೆಕ್ಲಾರೆನ್ ಜಿಟಿ ವಿ8 ಎಂಜಿನ್ ಅನ್ನು ಪಡೆಯುತ್ತದೆ. ಮೆಕ್ಲಾರೆನ್ ಜಿಟಿ ಟ್ವಿನ್-ಟರ್ಬೋಚಾರ್ಜರ್‌ಗಳೊಂದಿಗೆ 4.0-ಲೀಟರ್ ವಿ8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್ಮಿಷನ್ ಅನ್ನು ಪಡೆಯುತ್ತದೆ.

ನಟ ಕಾರ್ತಿಕ್ ಆರ್ಯನ್‌ಗೆ ರೂ,3.72 ಕೋಟಿ ಮೌಲ್ಯದ ಕಾರ್ ಗಿಫ್ಟ್ ನೀಡಿದ ನಿರ್ಮಾಪಕ ಭೂಷಣ್ ಕುಮಾರ್

ಈ ಎಂಜಿನ್ 611 ಬಿಹೆಚ್‍ಪಿ ಪವರ್ ಮತ್ತು 630 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು 3.2 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆಯುತ್ತದೆ. ಈ ಕಾರಿನ ಟಾಪ್ ಸ್ಪೀಡ್ 326 ಕಿಮೀಗೆ ಸೀಮಿತಗೊಳಿಸಿದೆ.

ನಟ ಕಾರ್ತಿಕ್ ಆರ್ಯನ್‌ಗೆ ರೂ,3.72 ಕೋಟಿ ಮೌಲ್ಯದ ಕಾರ್ ಗಿಫ್ಟ್ ನೀಡಿದ ನಿರ್ಮಾಪಕ ಭೂಷಣ್ ಕುಮಾರ್

ಇದು ಭಾರತಕ್ಕೆ ಬಂದ ಮೊದಲ ಮೆಕ್ಲಾರೆನ್ ಜಿಟಿ. ಇದಕ್ಕೂ ಮೊದಲು ಭಾರತದ ರಸ್ತೆಗಳಲ್ಲಿ ಮೆಕ್‌ಲಾರೆನ್ 720S ಮತ್ತು 570S ಮಾತ್ರ ಕಾಣಿಸಿಕೊಂಡಿತ್ತು. ಮೆಕ್ಲಾರೆನ್ ಜಿಟಿ ಭಾರತೀಯ ಮಾರುಕಟ್ಟೆಯಲ್ಲಿ ಫೆರಾರಿ ರೋಮಾ, ಪೋರ್ಷೆ 911 ಟರ್ಬೊ ಎಸ್ ಮತ್ತು ಬೆಂಟ್ಲಿ ಕಾಂಟಿನೆಂಟಲ್ ಜಿಟಿಯಂತಹ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ನಟ ಕಾರ್ತಿಕ್ ಆರ್ಯನ್‌ಗೆ ರೂ,3.72 ಕೋಟಿ ಮೌಲ್ಯದ ಕಾರ್ ಗಿಫ್ಟ್ ನೀಡಿದ ನಿರ್ಮಾಪಕ ಭೂಷಣ್ ಕುಮಾರ್

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಈ ವರ್ಷ ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಕಳೆದ ವರ್ಷ ಖರೀದಿಸಿದ್ದರು. ಕಾರ್ತಿಕ್ ಆರ್ಯನ್‌ರವರು ಖರೀದಿಸಿರುವ ಲ್ಯಾಂಬೊರ್ಗಿನಿ ಉರುಸ್ ಎಸ್‌ಯು‌ವಿಯು ಕಪ್ಪು ಬಣ್ಣದಲ್ಲಿದ್ದು, ಆಕರ್ಷಕವಾಗಿ ಕಾಣುತ್ತದೆ. ಆಕರ್ಷಕ ವಿನ್ಯಾಸ, ಪರ್ಫಾಮೆನ್ಸ್ ಹಾಗೂ ಹೆಚ್ಚಿನ ಸ್ಪೇಸ್ ಹೊಂದಿರುವ ಕಾರಣಕ್ಕೆ ವಿಶ್ವದಾದ್ಯಂತವಿರುವ ಗ್ರಾಹಕರು ಲ್ಯಾಂಬೊರ್ಗಿನಿ ಉರುಸ್ ಎಸ್‌ಯು‌ವಿ ಖರೀದಿಗೆ ಆದ್ಯತೆ ನೀಡುತ್ತಾರೆ.

ನಟ ಕಾರ್ತಿಕ್ ಆರ್ಯನ್‌ಗೆ ರೂ,3.72 ಕೋಟಿ ಮೌಲ್ಯದ ಕಾರ್ ಗಿಫ್ಟ್ ನೀಡಿದ ನಿರ್ಮಾಪಕ ಭೂಷಣ್ ಕುಮಾರ್

ಈ ಲ್ಯಾಂಬೊರ್ಗಿನಿ ಉರುಸ್ ಕಾರಿನಲ್ಲಿ 4.0 ಲೀಟರ್, 8-ಸಿಲಿಂಡರ್ ಟ್ವಿನ್-ಟರ್ಬೊ ವಿ 8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 850 ಎನ್‌ಎಂ ಹಾಗೂ 641 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಲ್ಯಾಂಬೊರ್ಗಿನಿ ಉರುಸ್ ಎಸ್‌ಯು‌ವಿಯ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಟರ್ ಆಗಿದೆ.

ನಟ ಕಾರ್ತಿಕ್ ಆರ್ಯನ್‌ಗೆ ರೂ,3.72 ಕೋಟಿ ಮೌಲ್ಯದ ಕಾರ್ ಗಿಫ್ಟ್ ನೀಡಿದ ನಿರ್ಮಾಪಕ ಭೂಷಣ್ ಕುಮಾರ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭೂಲ್ ಭುಲೈಯಾ-2 ಚಿತ್ರ ಯಶ್ವಸಿನ ಬಳಿಕ ನಿರ್ಮಾಪಕ ಭುಷಣ್ ಕುಮಾರ್ ಅವರು ಕಾರ್ತಿಕ್ ಆರ್ಯನ್ ಅವರಿಗೆ ಭಾರತದ ಮೊದಲ ಮೆಕ್ಲಾರೆನ್ ಜಿಟಿ ಐಷಾರಾಮಿ ಸ್ಪೋರ್ಟ್ಸ್ ಸೂಪರ್ ಕಾರ್ ಅನ್ನು ಗಿಫ್ಟ್ ಅನ್ನು ನೀಡಿದ್ದಾರೆ. ಭುಲೈಯಾ-2 ಚಿತ್ರಕ್ಕೆ ಅನೀಸ್ ಬಾಜ್ಮಿ ಆಕ್ಷನ್ ಕಟ್ ಹೇಳಿದರೆ, ಚಿತ್ರದಲ್ಲಿ ಕಾರ್ತಿಕ್ ಆರ್ಯನ್‌ಗೆ ನಾಯಕಿಯಾಗಿ ಕಿಯಾರಾ ಅಡ್ವಾನಿ ಕಾಣಿಸಿಕೊಂಡಿದ್ದಾರೆ. ನಟಿ ತಬು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಭೂಲ್ ಭುಲೈಯಾ-2. ಭೂಲ್ ಭುಲೈಯಾ-2 ಸಿನಿಮಾ ಬಾಕ್ಸ್ ಆಫೀಸ್‌ ಕಲೆಕ್ಷನ್ 180 ಕೋಟಿ ರೂಪಾಯಿ ದಾಟಿದೆ

Most Read Articles

Kannada
English summary
Actor kartik aaryan gets mclaren gt car as gift from t series bhushan kumar details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X