Keerthy Suresh: ಕಡಲ ಕಿನಾರೆಯಲ್ಲಿ ಮಹೀಂದ್ರಾ ಥಾರ್ ಓಡಿಸಿ ಖುಷಿಪಟ್ಟ ನಟಿ ಕೀರ್ತಿ ಸುರೇಶ್.. ವಿಡಿಯೋ
ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ (Keerthy Suresh) ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿ, ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 'ಮಹಾನಟಿ' ಸಿನಿಮಾ ಕೀರ್ತಿಗೆ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟಿತು. 'ದಸರಾ' ಚಿತ್ರದ ಬಳಿಕ, ಅವರ ಸ್ಟಾರ್ ವ್ಯಾಲ್ಯೂ ಮತ್ತಷ್ಟು ಹೆಚ್ಚಾಯಿತು.
ನಟಿ ಕೀರ್ತಿ ಸುರೇಶ್ ತಮ್ಮ ಇನ್ಸ್ಟಾಗ್ರಾಮ್ (instagram) ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಕಡಲೆ ಕಿನಾರೆಯಲ್ಲಿ ಮಹೀಂದ್ರಾ ಥಾರ್ (Mahindra Thar) ಓಡಿಸುತ್ತಿರುವುದನ್ನು ಕಾಣಬಹುದು. ಅದಕ್ಕೆ 'ನಮ್ಮ ಚೆನ್ನೈನಲ್ಲಿ ಆಫ್ ರೋಡಿಂಗ್' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಈ ಪೋಸ್ಟ್ ಮಾಡಿ, ಕೆಲವೇ ಗಂಟೆಗಳು ಕಳೆದಿದ್ದು, 53 ಲಕ್ಷಕ್ಕೂ ಅಧಿಕ ವೀಕ್ಷಣೆ, 5 ಲಕ್ಷಕ್ಕೂ ಹೆಚ್ಚಿನ ಲೈಕ್ ಪಡೆದುಕೊಂಡಿದೆ.

ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಪ್ರತಿಯೊಬ್ಬರನ್ನು ತನ್ನತ್ತ ಸೆಳೆದಿರುವ ಮಹೀಂದ್ರಾ ಥಾರ್ ಬಗ್ಗೆ ಮಾತನಾಡುವುದಾದರೆ, ಈ ಎಸ್‌ಯುವಿ ರೂ.10.98 ಲಕ್ಷದಿಂದ ರೂ.16.94 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಮೂರು ಎಂಜಿನ್ ಆಯ್ಕೆಯನ್ನು ಹೊಂದಿದೆ. ಅವುಗಳೆಂದರೆ, 1.5-ಲೀಟರ್ ಡೀಸೆಲ್ ಎಂಜಿನ್, 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 2.2-ಲೀಟರ್ ಡೀಸೆಲ್ ಎಂಜಿನ್.
ಈ ಮಹೀಂದ್ರಾ ಥಾರ್, 6-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದ್ದು, 4WD (ಫೋರ್ ವೀಲ್ ಡ್ರೈವ್), RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ. ಆಫ್ - ರೋಡ್ ಕಾರಾಗಿರುವುದನ್ನು ಕೊಂಚ ಕಡಿಮೆ ಮೈಲೇಜ್ ನೀಡುತ್ತದೆ. 15.2 kmpl ಇಂಧನ ದಕ್ಷತೆ ಒಳಗೊಂಡಿದೆ. ಎವರೆಸ್ಟ್ ವೈಟ್, ಅಕ್ವಾಮರೀನ್, ರೆಡ್ ರೇಜ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೆ ಗ್ರಾಹಕರಿಗೆ ಲಭ್ಯವಿದೆ.

7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕ್ರೂಸ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಈ ಮಹೀಂದ್ರಾ ಥಾರ್ ಹೊಂದಿದೆ. ಸುರಕ್ಷತೆ ದೃಷ್ಟಿಯಿಂದ ಕೂಡ ಅತ್ಯುತ್ತಮವಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಹಿಲ್ ಡಿಸೆಂಟ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ರೇರ್ ಪಾರ್ಕಿಂಗ್ ಸೆನ್ಸರ್ ಒಳಗೊಂಡಂತೆ ಹಲವು ಸೇಫ್ಟಿ ಫೀಚರ್ಸ್ ಇವೆ.
ಸದ್ಯ, ಚೆನ್ನೈ ಸಮುದ್ರ ತೀರದಲ್ಲಿ ನಟಿ ಕೀರ್ತಿ ಸುರೇಶ್ ಚಲಾಯಿಸಿರುವ ಮಹೀಂದ್ರಾ ಥಾರ್, ಅವರ ಸ್ವಂತದ್ದೇ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಕೀರ್ತಿ ಕೆಲವು ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅವರ ಬಳಿಯಿರುವ ಬಿಎಂಡಬ್ಲ್ಯೂ ಎಕ್ಸ್7 (BMW X7) ರೂ.1.3 ಕೋಟಿ ಬೆಲೆಯನ್ನು ಹೊಂದಿದೆ. 3.0-ಲೀಟರ್ 6-ಸಿಲಿಂಡರ್ ಎಂಜಿನ್, ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.
ನಟಿ ಕೀರ್ತಿ ಸುರೇಶ್, ಪೋರ್ಷೆ ಕೇಯೆನ್ನೆ (Porsche Cayenne) ಕಾರಿನ ಮಾಲೀಕರೂ ಆಗಿದ್ದು, ಇದರ ಬೆಲೆ ರೂ.1 ಕೋಟಿಯಿದೆ. ಈ ಕಾರು, 3.6-ಲೀಟರ್ ವಿ6 ಎಂಜಿನ್ ಹೊಂದಿದ್ದು, 420 ಪವರ್ ಮತ್ತು 406 ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 8 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಸಿಗುತ್ತದೆ. ಮರ್ಸಿಡಿಸ್ ಬೆಂಜ್ ಸಿಎಲ್ಎ (Mercedes-Benz CLA) ಕಾರನ್ನು ಕೀರ್ತಿ ಹೊಂದಿದ್ದು, ಇದು, ರೂ.40 ಬೆಲೆಯನ್ನು ಪಡೆದಿದೆ.
ಇನ್ನು, ಕೀರ್ತಿ ಸುರೇಶ್ 2002ರಲ್ಲಿ 'ಗೀತಾಂಜಲಿ' ಚಿತ್ರದ ಮೂಲಕ ತಮ್ಮ ಸಿನಿ ಬದುಕನ್ನು ಆರಂಭಿಸಿದ್ದರು. ಮಹಾನಟಿ ಚಿತ್ರದ ಅದ್ಬುತ ನಟನೆಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ. ನೇನು ಸೈಲಜಾ, ರಿಂಗ್ ಮಾಸ್ಟರ್, ನೇನು ಲೋಕಲ್, ರೆಮೋ, ಸರ್ಕಾರ್, ಸರ್ಕಾರು ವಾರಿ ಪಾತ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications