ತಂದೆಯ ಕಷ್ಟ ಕಾಲದಲ್ಲಿ ಅದೃಷ್ಟ ದೇವತೆಯಾದ ಮಗಳಿಗೆ ಕಾರು ಗಿಫ್ಟ್
ತಮಿಳು ಸಿನಿಮಾ ರಂಗದಲ್ಲಿ ಹಲವರು ಹಾಸ್ಯ ನಟರಿದ್ದರೂ ತಮ್ಮದೇ ಆದ ವಿಭಿನ್ನ ನಟನೆಯ ಮೂಲಕ ಸಿನಿ ಪ್ರಿಯರಲ್ಲಿ ಜನಪ್ರಿಯತೆ ಪಡೆದವರು 'ಕೊಟ್ಟಾಚಿ'. ಇತ್ತೀಚೆಗೆ ಈ ಹಾಸ್ಯ ನಟ ತಮ್ಮ ಮಗಳಿಗೆ ಕಿಯಾ ಕಾರನ್ನು ಉಡುಗೊರೆಯಾಗಿ ನೀಡಿ ಅಚ್ಚರಿಗೊಳಿಸಿದ್ದಾರೆ. ಈ ಕುರಿತ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಹಾಸ್ಯ ನಟ ಕೊಟ್ಟಾಚಿ, ನಟ ವಿವೇಕ್ ಅವರ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿ, ಜನರು ಮರೆಯಲಾಗದ ಹಾಸ್ಯ ದೃಶ್ಯಗಳಲ್ಲಿ ನಟಿಸಿ ಉತ್ತಮ ಹೆಸರನ್ನು ಗಳಿಸಿದ್ದಾರೆ. ಸದ್ಯ ಅವರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿವೆ, ಆದ್ರೆ ಇದೇ ಸಮಯದಲ್ಲಿ ಅವರ ಮಗಳು ಮನಸ್ವಿಗೆ ಸಿನಿಮಾಗಳಲ್ಲಿ ಉತ್ತಮ ಅವಕಾಶಗಳು ಸಿಗುತ್ತಿವೆ. ಒಟ್ಟಾರೆ ತಂದೆಗೆ ಅವಕಾಶಗಳು ಸಿಗದೇ ದುಃಖಿಸುವ ಸಂದರ್ಭದಲ್ಲಿ ಅವರ ಜಾಗದಲ್ಲಿ ಮಗಳು ಮುಂದುವರಿಯುತ್ತಿರುವುದು ನಟ ಕೊಟ್ಟಾಚಿಗೆ ನೆಮ್ಮದಿ ತಂದುಕೊಟ್ಟಿದೆ. ಇದೇ ಖುಷಿಗೆ ಮಗಳಿಗೆ ದುಬಾರಿ ಗಿಫ್ಟ್ ಕೊಟ್ಟಿರಬಹುದು ಎಂದು ಹೇಳಲಾಗುತ್ತಿದೆ.

ಕೊಟ್ಟಾಚಿ ಮಗಳು ಮನಸ್ವಿ ಬಾಲ ಕಲಾವಿದೆಯಾಗಿ ಅನೇಕ ಪ್ರಮುಖ ನಟರೊಂದಿಗೆ ನಟಿಸುವ ಮೂಲಕ ಜನರಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ನಟಿ ನಯನತಾರಾ ಅವರೊಂದಿಗೆ ಇಮೈಕ್ಕಾ ನೊಡಿಗಲ್ ಸಿನಿಮಾದಲ್ಲಿ ನಟಿಸಿ ಮಿಂಚಿದ್ದರು. ಈ ಸಿನಿಮಾದಲ್ಲಿ ಬಾಲ ನಟಿಯಾಗಿ ಎಲ್ಲರ ಗಮನಸೆಳೆದು ಮನೆಮಾತಾಗಿದ್ದರು. ಆ ಬಳಿಕ ಈ ಪುಟ್ಟ ಬಾಲಕಿ ಹಾಸ್ಯನಟ ಕೊಟ್ಟಾಚಿಯ ಮಗಳೆಂದು ತಿಳಿದು ಅನೇಕರು ಆಶ್ಚರ್ಯಚಕಿತರಾಗಿದ್ದರು.
ಈ ಸಿನಿಮಾ ನಂತರ ಮನಸ್ವಿಗೆ ಸಾಲು ಸಾಲು ಸಿನಿಮಾ ಆಫರ್‌ಗಳು ಹುಡುಕಿ ಬಂದಿದ್ದು, ದರ್ಬಾರ್, ಚಿತ್ರೈ ಸೇವ್ವನಂ, ಮ್ಯಾನ್, ಡಿಡಿ ರಿಟರ್ನ್ಸ್ ಮತ್ತು ಚಂದ್ರಮುಖಿ 2 ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಸದ್ಯ ಬಿಸಿಯಾಗಿಬಿಟ್ಟಿದ್ದಾರೆ. ಒಂದು ಕಾಲದಲ್ಲಿ ಮಿಂಚಿ ಸದ್ಯ ಸಿನಿಮಾಗಳಿಲ್ಲದೇ ಪರದಾಡುತ್ತಿರುವ ತಂದೆಗೆ ಮಗಳ ಈ ಜನಪ್ರಿಯತೆ ಎಲ್ಲಿಲ್ಲದ ಸಂತೋಷ ತಂದುಕೊಟ್ಟಿದೆ.

ಕಿಯಾ ಕಾರು ಗಿಫ್ಟ್: ಇತ್ತೀಚೆಗಷ್ಟೇ ಮನಸ್ವಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಮನಸ್ವಿ ಅವರ ತಂದೆ ನಟ ಕೊಟ್ಟಾಚಿ ಕಿಯಾ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಮಗಳು ಬಹಳ ದಿನಗಳಿಂದ ತಮ್ಮದೇ ಆದ ಕಾರನ್ನು ಖರೀದಿಸಲು ಬಯಸಿದ್ದರು. ಈ ಬಯಕೆಯನ್ನು ಆಗಾಗ್ಗೆ ತಮ್ಮ ತಂದೆಗೆ ಹೇಳಿಕೊಂಡಿದ್ದರಂತೆ. ಇದನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಮಗಳ ಹುಟ್ಟುಹಬ್ಬಕ್ಕೆ ಕಿಯಾ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಮೂಲಗಳ ಪ್ರಕಾರ ನಟ ಕೊಟ್ಟಾಚಿ ಕಿಯಾ 'ಸಾನೆಟ್' ಕಾರನ್ನು ಖರೀದಿಸಿದ್ದಾರೆ. ಈ ಕಾರು ಕಿಯಾದಿಂದ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದ್ದು, ಕಿಯಾ ಸಾನೆಟ್ ಪ್ರಸ್ತುತ 23 ರೂಪಾಂತರಗಳಲ್ಲಿ ಲಭ್ಯವಿದೆ.
ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 7.99 ಲಕ್ಷದಿಂದ ಆರಂಭವಾಗಿ ರೂ. 15.69 ಲಕ್ಷದವರೆಗೆ ಇದೆ. ವರದಿಗಳ ಪ್ರಕಾರ, ನಟ ಕೊಟ್ಟಾಚಿ ಖರೀದಿಸಿದ ಕಾರಿನ ಮೌಲ್ಯ 13 ಲಕ್ಷ ರೂ. ಇದ್ದು, ಯಾವ ವೇರಿಯೆಂಟ್ ಖರೀದಿಸಿದ್ದಾರೆ ಎಂಬುದು ತಿಳಿದುಬಂದಿಲ್ಲ. ಆದರೆ ಈ ಬೆಲೆಯ ರೇಂಜ್‌ನಲ್ಲಿ HTK ಡೀಸೆಲ್ ಮತ್ತು HTX ಪೆಟ್ರೋಲ್ ವೇರಿಯೆಂಟ್‌ಗಳು ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ.

ಎರಡೂ ಕಾರುಗಳಲ್ಲಿ ಕೆಲವು ವೈಶಿಷ್ಟ್ಯಗಳು ಮಾತ್ರ ಬದಲಾಗುವುದರಿಂದ ನಿಖರವಾದ ವೇರಿಯೆಂಟ್ ಅನ್ನು ಊಹಿಸುವುದು ಕಷ್ಟ. ಈ ಕಾರು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿದ್ದು, 5 ಸೀಟರ್ ಕಾರಾಗಿದೆ. ಕಿಯಾ ಸಾನೆಟ್ ಒಂದು ಡೀಸೆಲ್ ಎಂಜಿನ್ ಮತ್ತು ಮೂರು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








