ಬಹುಕೋಟಿ ಕಾರಿನಲ್ಲಿ ಡ್ರೈವಿಂಗ್ ಕಲೀತಿದ್ದಾರೆ ದಕ್ಷಿಣ ಭಾರತದ ಖ್ಯಾತ ನಟನ ಮಗ: ಯಾರೀತ?

ನಟ, ನಟಿಯರ ಮಕ್ಕಳಿಗೇನು ಬಿಡಿ ದುಬಾರಿ ಕಾರುಗಳು, ಐಷಾರಾಮಿ ಜೀವನ ಇರುತ್ತೆ. ಅವರು ಹುಟ್ಟುತ್ತಲೇ ಗೋಲ್ಡ್ ಸ್ಪೂನ್ ಹಿಡಿದು ಬೆಳೆಯುತ್ತಾರೆ ಎಂದು ಪ್ರತಿಯೊಬ್ಬರು ಭಾವಿಸುತ್ತಾರೆ. ಹೌದು ಇದು ನಿಜ, ಆದ್ರೆ ನಟ ಮಾಧವನ್ ಅವರ ಮಗ ಹಾಗಲ್ಲ. ಕ್ರಿಡಾ ವಿಭಾಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ತಾವು ಗುರ್ತಿಸಿಕೊಂಡಿದ್ದಾರೆ.

ಹೆಚ್ಚಿನ ನಟರು ತಮ್ಮ ಮಕ್ಕಳನ್ನು ತಮ್ಮದೇ ರಂಗದಲ್ಲಿ ವಾರಸುದಾರರನ್ನಾಗಿ ಬೆಳೆಸುವವರ ನಡುವೆ ಖ್ಯಾತ ನಟ ಮಾಧವನ್ ಅವರು ಮಗ ವೇದಾಂತ್ ಮಾಧವನ್ ಅವರನ್ನು ಮಗನ ಇಷ್ಟದಂತೆ ಬೆಳೆಸಿದ್ದಾರೆ. ಈಗಿನ ಕಾಲದಲ್ಲಿ ಪೋಷಕರು ಎಷ್ಟೇ ಹೆಸರು ಮಾಡಿದ್ರೂ ಮಕ್ಕಳು ಅವರಂತೆ ಬೆಳೆಯಬೇಕಾದರೆ ಟ್ಯಾಲೆಂಟ್ ಕೂಡ ಮುಖ್ಯ, ಇಲ್ಲದಿದ್ದರೇ ಜನರು ಖ್ಯಾರೆ ಎನ್ನುವುದಿಲ್ಲ. ಇದಕ್ಕೆ ಚಿತ್ರರಂಗದಲ್ಲೇ ಹಲವು ಉದಾಹರಣೆಗಳಿವೆ.

actor-madhavan-son-porsche-car-learning

ಸದ್ಯ ವೇದಾಂತ್ ಮಾಧವನ್ ಕ್ರೀಡಾ ರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಈಜು ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ವೇದಾಂತ್ ಮಾಧವನ್ ಅವರು ಇತ್ತೀಚೆಗೆ ದುಬಾರಿ ಕಾರೊಂದನ್ನು ಓಡಿಸುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಅವರು ಕಾರು ಕಲಿಯುತ್ತಿರುವುದನ್ನು ನೋಡಬಹುದು.

ವೇದಾಂತ್ ಮಾಧವನ್ ಅವರು ಕಲಿಯುತ್ತಿದ್ದ ಕಾರು ದುಬಾರಿ ಬೆಲೆಯ ಪೋರ್ಷೆ ಕಯೆನ್ನೆ SUV ಆಗಿದೆ. ದುಬೈನ ಗಲಾದರಿ ಮೋಟಾರ್ ಡ್ರೈವಿಂಗ್ ಸೆಂಟರ್ ಈ ವಿಡಿಯೋವನ್ನು ಹಂಚಿಕೊಂಡಿದೆ. ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವ ವೀಡಿಯೊದಲ್ಲಿ, ವೇದಾಂತ್ ಸಹ-ಪ್ರಯಾಣಿಕರ ಬದಿಯಲ್ಲಿ ತನಗೆ ಹೇಳಿಕೊಡುವವರೊಂದಿಗೆ ಚಾಲಕನ ಸೀಟಿನಲ್ಲಿ ಕುಳಿತಿರುವುದನ್ನು ಕಾಣಬಹುದು.

actor-madhavan-son-porsche-car-learning

"ಹಾಯ್, ನಾನು ವೇದಾಂತ್ ಮಾಧವನ್, ಇಂದು ನಾನು ಗಲದರಿ ಮೋಟಾರ್ ಡ್ರೈವಿಂಗ್ ಸೆಂಟರ್‌ನಲ್ಲಿದ್ದೇನೆ. ನನ್ನ ಥಿಯರಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ, ಈಗ ನಾನು ಹೇಗೆ ಚಾಲನೆ ಮಾಡಬೇಕೆಂದು ಕಲಿಯಲು ನನ್ನ ಅದ್ಭುತ ಇನ್‌ಸ್ಟ್ರಕ್ಟರ್‌ನೊಂದಿಗೆ ಇದ್ದೇನೆ. ನಾನು ಈ ಅದ್ಭುತ ಪೋರ್ಷೆ ಓಡಿಸುತ್ತಿದ್ದೇನೆ. ನನ್ನ ಪರವಾನಗಿ ಪಡೆಯಲು ಕಾತುರದಿಂದಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಈ ವಿಡಿಯೋ ನೋಡಿದ ಹಲವರು ಅಚ್ಚರಿಗೊಂಡಿದ್ದಾರೆ, ಜನರು ಭಾರತದಲ್ಲಿ ಹಳೆಯ ಮಾರುತಿ 800 ನಲ್ಲಿ ಕಲಿತಿದ್ದಾರೆ' ಈತ ನೋಡಿದ್ರೆ ದುಬಾರಿ ಕಾರಿನಲ್ಲಿ ಕಲೀತಿದ್ದಾನೆ ಎಂದು ಪ್ರತಿಕ್ರಿಯಿಸಿದ್ದಾರೆ. ಭಾರತದಲ್ಲಿ, ಹೆಚ್ಚಿನ ಡ್ರೈವಿಂಗ್ ಸ್ಕೂಲ್‌ಗಳು ತಮ್ಮ ವಿದ್ಯಾರ್ಥಿಗಳಿಗೆ ಮಾರುತಿ 800, ಆಲ್ಟೊ, ವ್ಯಾಗನ್ಆರ್, ಸ್ವಿಫ್ಟ್ ಅಥವಾ ಡಿಜೈರ್‌ನಂತಹ ಅಗ್ಗದ ಕಾರುಗಳನ್ನು ನೀಡುತ್ತವೆ.

ಡ್ರೈವಿಂಗ್ ಸ್ಕೂಲ್‌ಗಳಲ್ಲಿ ನಾವು ದುಬಾರಿ ಕಾರುಗಳನ್ನು ನೋಡುವುದು ತೀರಾ ಅಪರೂಪ. ಇನ್ನು ಮತ್ತೊಂದು ಗುಂಪಿನ ಜನರು ವೇದಾಂತ್ ಸಾಧನೆಗಳನ್ನು ಹೊಗಳಿ ಶ್ಲಾಘಿಸಿದ್ದಾರೆ. ಅವರವರ ಯೊಗ್ಯತೆಗೆ ತಕ್ಕಂತೆ ಅವರಿದ್ದಾರೆ ಎಂಬುದನ್ನು ನಾವು ಇಲ್ಲಿ ತಿಳಿಯಬೇಕು., ಬಡವರಾಗಲಿ, ಶ್ರೀಮಂತರಾಗಲಿ ಪ್ರತಿಯೊಬ್ಬರು ಅವರ ಪೋಷಕರಿಂದಲೇ ಬೆಳೆದು ದೊಡ್ಡವರಾಗುತ್ತಾರೆ.

ಈ ನಡುವೆ ನಾವು ನಮ್ಮ ವಿದ್ಯಾಭ್ಯಾಸದಿಂದಲೋ ಅಥವಾ ನಮ್ಮ ಟ್ಯಾಲೆಂಟ್‌ನಿಂದಲೋ ಸಾಮಾಜದಲ್ಲಿ ಗುರ್ತಿಸಿಕೊಳ್ಳಬೇಕು. ಇನ್ನು ದುಬಾರಿ ಕಾರುಗಳು ಅಥವಾ ಐಷಾರಾಮಿ ಜೀವನ ಎಂಬುದು ಅವರ ಸಂಪಾದನೆ ಮೇಲೆ ಅವಲಂಭಿತವಾಗಿರುತ್ತದೆ. ಅವರು ದುಡಿದ ಹಣದಲ್ಲಿ ಅವರು ಐಷಾರಾಮಿ ಜೀವನ ಮಾಡುತ್ತಾರೆ. ಕೆಟ್ಟ ಕಮೆಂಟ್‌ಗಳನ್ನು ಮಾಡುವುದು ಬೇಡ ಎಂಬುದು ನಮ್ಮ ಅಭಿಪ್ರಾಯ.

ವೇದಾಂತ್ ಮಾಧವನ್ 17 ವರ್ಷ ವಯಸ್ಸಿಗೆ ಹಲವಾರು ಈಜು ಚಾಂಪಿಯನ್‌ಶಿಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಮಲೇಷ್ಯಾ ಇನ್ವಿಟೇಶನಲ್ ಏಜ್ ಗ್ರೂಪ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಪದಕಗಳನ್ನು ಗೆದ್ದಿದ್ದಾರೆ. ಐದು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಧಕ್ಕಿಸಿಕೊಂಡಿದ್ದಾರೆ. 2023 ರ ಖೇಲೋ ಇಂಡಿಯಾ ಪಂದ್ಯಾವಳಿಯಲ್ಲಿ ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ವರ್ಷ 800 ಮೀಟರ್ ಡ್ಯಾನಿಶ್ ಓಪನ್ ಪುರುಷರ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ವೇದಾಂತ್ ಚಿನ್ನದ ಪದಕ ಗೆದ್ದಿದ್ದರು.

ಇನ್ನು ನಟ ಆರ್.ಮಾಧವನ್ ಭಾರತೀಯ ಚಲನಚಿತ್ರೋದ್ಯಮದಲ್ಲಿ ಜನಪ್ರಿಯ ನಟ, ಹಲವಾರು ಗಮನಾರ್ಹ ಚಲನಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಯಮಹಾ ವಿ-ಮ್ಯಾಕ್ಸ್, ಬಿಎಂಡಬ್ಲ್ಯು ಕೆ1200 ಜಿಟಿಎಲ್, ಡುಕಾಟಿ ಡಯಾವೆಲ್, ಇಂಡಿಯನ್ ರೋಡ್‌ಮಾಸ್ಟರ್‌ ಸೇರಿದಂತೆ ದುಬಾರಿ ಕಾರುಗಳು ಮತ್ತು ಬೈಕ್ ‌ಗಳ ಸಂಗ್ರಹವನ್ನು ಹೊಂದಿದ್ದಾರೆ.

More from DriveSpark

Article Published On: Friday, August 4, 2023, 18:32 [IST]
English summary
Actor madhavan son porsche car learning
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+