ನಟ ಮಹೇಶ್ ಬಾಬುಗೆ ಒಲಿದ ಅದೃಷ್ಟ... ಮನೆಗೆ ಬಂತು 5.4 ಕೋಟಿ ರೂ. ಐಷಾರಾಮಿ Range Rover
ತೆಲುಗು ಸಿನಿಮಾ ರಂಗದಲ್ಲಿ ತಮ್ಮದೇ ವಿಭಿನ್ನ ನಟನೆಯಿಂದ ಗುರ್ತಿಸಿಕೊಂಡಿರುವ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮನೆಗೆ ಹೊಸ ರೇಂಜ್ ರೋವರ್ (Range Rover) ಡೆಲಿವರಿಯಾಗಿದೆ. ಇದು ಎಲ್ಲಾ ರೇಂಜ್ ರೋವರ್‌ಗಳಂತಲ್ಲದೇ ವಿಭಿನ್ನ ಗೋಲ್ಡ್ ಬಣ್ಣದೊಂದಿಗೆ ಬರುವ ವಿರಳ ಮಾದರಿಯಾಗಿದೆ. ಇದರ ಬೆಲೆ ಬರೋಬ್ಬರಿ 5.4 ಕೋಟಿ ರೂ.
ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಹೊಸ ಗೋಲ್ಡ್ ಬಣ್ಣದ ರೇಂಜ್ ರೋವರ್ ಎಸ್‌ವಿಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ನಟ ಇತ್ತೀಚೆಗೆ ಈ ಕ್ಲಾಸಿ ಲುಕಿಂಗ್ ಕಾರನ್ನು ಖರೀದಿಸಿದ್ದಾರೆ. ಈ ಇತ್ತೀಚಿನ ಖರೀದಿಯೊಂದಿಗೆ, ಮಹೇಶ್ ಹೈದರಾಬಾದ್‌ನಲ್ಲಿ ಗೋಲ್ಡ್ ಬಣ್ಣದ ರೇಂಜ್ ರೋವರ್ ಹೊಂದಿರುವ ಏಕೈಕ ವ್ಯಕ್ತಿಯಾಗಿದ್ದಾರೆ.

ತೆಲಂಗಾಣ ರಾಜ್ಯದ ರಾಜಧಾನಿಯಾದ ಹೈದರಾಬಾದ್ ಟಾಲಿವುಡ್ ಸ್ಟಾರ್ ನಟರ ನಗರವಾಗಿದೆ. ಬಹುತೇಕ ಸೆಲೆಬ್ರಿಟಿಗಳು ಇದೇ ನಗರದಲ್ಲಿ ವಾಸಿಸುತ್ತಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ನಟರಾದ ಪ್ರಭಾಸ್, ರಾಮ್ ಚರಣ್, ಜೂ. ಎನ್‌ಟಿರ್‌ನಂತಹ ನಟರು ಸೇರಿದಂತೆ ಚಿರಂಜೀವಿ, ಬಾಲಕೃಷ್ಣ ನಂತಹ ದೊಡ್ಡ ನಟರು ಕೂಡ ಇಲ್ಲೇ ಕಾಣಸಿಗುತ್ತಾರೆ. ಹಾಗೆಯೇ ದೇಶದ ದೊಡ್ಡ ಉದ್ಯಮಿಗಳು ಕೂಡ ಇಲ್ಲಿ ವಾಸವಾಗಿದ್ದಾರೆ.
ಇವೆರೆಲ್ಲರ ನಡುವೆ ಹೈದರಾಬಾದ್‌ನಲ್ಲಿ ಮೊದಲ ರೋಸ್ ಗೋಲ್ಡ್ ರೇಂಜ್ ರೋವರ್ ಬಣ್ಣದ ಎಸ್‌ಯುವಿಯನ್ನು ಡೆಲಿವರಿ ಪಡೆದ ನಟರಾಗಿ ಗುರ್ತಿಸಿಕೊಂಡಿದ್ದಾರೆ. ಇದು ಮಹೇಶ್ ಬಾಬು ಅವರ ಕಾರು ಸಂಗ್ರಹಣೆಯಲ್ಲಿ ಅತ್ಯಂತ ದುಬಾರಿ ಕಾರು ಕೂಡ ಹೌದು. ಅದರ ಗಮನ ಸೆಳೆಯುವ ಗೋಲ್ಡ್ ಬಣ್ಣ ಮತ್ತು ದುಬಾರಿ ಬೆಲೆಯೊಂದಿಗೆ ಸಿನಿಮಾ ರಂಗದವರ ಗಮನ ಸೆಳೆಯುವುದು ಖಚಿತವಾಗಿದೆ.

ಮಹೇಶ್ ಬಾಬು ಮಾತ್ರವಲ್ಲದೇ ಜನಪ್ರಿಯ ನಟರಾದ ಚಿರಂಜೀವಿ, ಎನ್‌ಟಿಆರ್, ಅಲ್ಲು ಅರ್ಜುನ್, ಬಾಲಕೃಷ್ಣ ಹೀಗೆ ಹಲವರು ರೇಂಜ್ ರೋವರ್ ಹೊಂದಿದ್ದಾರೆ. ಆದ್ರೆ ಹೈದ್ರಾಬಾದ್‌ನಲ್ಲಿ ರೋಸ್ ಗೋಲ್ಡ್ ಹೊಂದಿರುವ ಏಕೈಕ ವ್ಯಕ್ತಿ ಮಹೇಶ್ ಬಾಬು ಆಗಿರುವುದು ಅವರ ಅದೃಷ್ಟವಾಗಿದೆ. ಈ ಕಾರು ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ನಟರಿಗೆ ಸಖತ್ ಪ್ರಿಯವಾದ ಎಸ್‌ಯುವಿಯಾಗಿದೆ.
ಮಹೇಶ್ ಬಾಬು ಪ್ರಸ್ತುತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರೊಂದಿಗೆ ಗುಂಟೂರ್ ಕಾರಂ ಎಂಬ ಮುಂಬರುವ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಮೊದಲ ನಟಿಯಾಗಿ ಶ್ರೀಲೀಲ ಅವರು ಕನ್ಫರ್ಮ್ ಆಗಿ ಈಗಾಗಲೇ ಬಹುತೇಕ ಶೂಟಿಂಗ್ ಕೂಡ ಮುಗಿದಿದೆ. ಎರಡನೇ ನಟಿಯಾಗಿ ಪೂಜಾ ಹೆಗ್ಡೆ ಅವರನ್ನು ಅಂದುಕೊಳ್ಳಲಾಗಿತ್ತಾದ್ರೂ ಈಗ ಅವರನ್ನು ಕೈಬಿಡಲಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ, ನಟಿ ಪೂಜಾ ಹೆಗ್ಡೆಯನ್ನು ಈ ಸಿನಿಮಾದಿಂದ ಹೊರಗಿಟ್ಟು ಹೊಸ ನಾಯಕಿ ಮೀಕಾಕ್ಷಿ ಚೌದರಿ ಅವರನ್ನು ಸಿನಿಮಾಗೆ ತೆಗೆದುಕೊಳ್ಳಲು ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. ಇನ್ನು ಶ್ರೀಲೀಲಾ ಅಭಿನಯದ ಹಲವಾರು ಭಾಗಗಳನ್ನು ಮರುಹೊಂದಿಸುವಂತೆ ಮತ್ತು ಚಿತ್ರಕಥೆಯಲ್ಲಿ ಥ್ರಿಲ್ ಇಲ್ಲದ ಕಾರಣ ಸಾಹಸ ಸಂಯೋಜಕರನ್ನು ಸಹ ಬದಲಾಯಿಸುವಂತೆ ವಿನಂತಿಸಿರುವುದಾಗಿ ಈ ಹಿಂದೆ ವರದಿಯಾಗಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








