MINI Countryman: ಪತ್ನಿಯೊಂದಿಗೆ ಖ್ಯಾತ ನಟನಿಂದ ಪುಟ್ಟ ಐಷಾರಾಮಿ ಕಾರು ಖರೀದಿ.. ಇದರ ವಿಶೇಷತೆಗಳೇನು ಗೊತ್ತಾ?

ಬಾಲಿವುಡ್ ನಟ, ಗಾಯಕ ಹಾಗೂ ಟಿವಿ ನಿರೂಪಕರಾಗಿ ಮನೀಶ್ ಪಾಲ್ (Maniesh Paul) ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದ್ದು, ಭಾರೀ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬುಧವಾರ ತಮ್ಮ ಪತ್ನಿ ಸಂಯುಕ್ತಾರೊಂದಿಗೆ ಹೊಚ್ಚ ಹೊಸ ಪುಟ್ಟ ಐಷಾರಾಮಿ ಎಸ್‌ಯುವಿಯನ್ನು ಖರೀದಿಸಿದ್ದಾರೆ.

ಈ ಬಗ್ಗೆ ದಂಪತಿಗಳಿಬ್ಬರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, 'ನಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ' ಎಂದು ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಜೊತೆಗೆ ನೂತನ ಕಾರಿನ ಪಕ್ಕದಲ್ಲಿ ನಿಂತುಕೊಂಡು ಫೋಟೋಗಳಿಗೂ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಮನೀಶ್ ಪಾಲ್ ಹಾಗೂ ಸಂಯುಕ್ತಾ ಅವರು, ದುಬಾರಿ ಬೆಲೆಯ ಮಿನಿ ಕಂಟ್ರಿಮ್ಯಾನ್ (MINI Countryman) ಎಸ್‌ಯುವಿಯನ್ನು ಕೊಂಡುಕೊಂಡಿದ್ದಾರೆ.

Actor Maniesh Paul And His Wife Sanyukta Buys MINI Countryman Car Price Rs 48 Lakh Price

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಮಿನಿ ಕಂಟ್ರಿಮ್ಯಾನ್ ಕೇವಲ 'ಕೂಪರ್ ಎಸ್ ಜೆಸಿಡಬ್ಲ್ಯೂ ಇನ್‌ಸ್ಪೈರ್ಡ್' ರೂಪಾಂತರ (ಟ್ರಿಮ್‌) ಆಯ್ಕೆಯಲ್ಲಿ ಮಾತ್ರ ದೊರೆಯಲಿದ್ದು, ರೂ.48.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ 2.0 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ ಬಳಕೆ ಮಾಡಲಿದ್ದು, 176 ಬಿಹೆಚ್‍ಪಿ ಗರಿಷ್ಠ ಪವರ್ (ಶಕ್ತಿ) ಹಾಗೂ 280 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಕಾರು, 7 - ಸ್ಪೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಆಟೋಮೆಟಿಕ್ ಗೇರ್ ಬಾಕ್ಸ್ ಅನ್ನು ಒಳಗೊಂಡಿದೆ. ಕೇವಲ 7.5 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದ್ದು, 225 ಕೆಎಂಪಿಹೆಚ್ ಗರಿಷ್ಠ ವೇಗ (ಟಾಪ್ ಸ್ಪೀಡ್)ವನ್ನು ಹೊಂದಿದೆ. ಮೈಲೇಜ್ ವಿಚಾರಕ್ಕೆ ಬರುವುದಾದರೆ, 15.3 ಕೆಎಂಪಿಎಲ್ ಇಂಧನ ದಕ್ಷತೆಯನ್ನು ಪಡೆದಿದೆ.

Actor Maniesh Paul And His Wife Sanyukta Buys MINI Countryman Car Price Rs 48 Lakh Price

ಮಿನಿ ಕಂಟ್ರಿಮ್ಯಾನ್ ಕೂಪರ್ ಎಸ್ ಜೆಸಿಡಬ್ಲ್ಯೂ ಇನ್‌ಸ್ಪೈರ್ಡ್ ಬೆಲೆಗೆ ತಕ್ಕಂತೆ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಪ್ರಮುಖವಾಗಿ ಲೆದರ್ ಸ್ಟೀರಿಂಗ್ ವೀಲ್, ಡುಯಲ್ - ಝೋನ್ ಕ್ಲೇಮೇಟ್ ಕಂಟ್ರೋಲ್, ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, 5 - ಇಂಚಿನ ಡಿಜಿಟಲ್ ಡಿಸ್ಪ್ಲೇ, ವೈರ್‌ಲೆಸ್ ಆಪಲ್ ಕಾರ್ ಪ್ಲೇ, ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಸುರಕ್ಷತೆಗೂ ಈ ಕಾರು ಹೆಸರುವಾಸಿಯಾಗಿದ್ದು, ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಬ್ರೇಕ್ ಅಸಿಸ್ಟ್ ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾ ಒಳಗೊಂಡಂತೆ ಹಲವು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದಿದೆ. ಮಿನಿ ಕಂಟ್ರಿಮ್ಯಾನ್ ಎಸ್‌ಯುವಿಗೆ ಬಿಎಂಡಬ್ಲ್ಯೂ ಎಕ್ಸ್1, ಮರ್ಸಿಡಿಸ್ - ಬೆಂಜ್ ಜಿಎಲ್ಎ ಮತ್ತು ಆಡಿ ಕ್ಯೂ3 ಪ್ರಬಲ ಎದುರಾಳಿಯಾಗಿವೆ.

ನಟ ಮನೀಶ್ ಪಾಲ್ ಅವರು, 2022ರಲ್ಲಿ ಮರ್ಸಿಡಿಸ್ - ಬೆಂಜ್ ಜಿಎಲ್ಎಸ್ 400 ಕಾರನ್ನು ಖರೀದಿಸಿದ್ದರು. ಈ ಕಾರು ರೂ.1.65 ಕೋಟಿ ಬೆಲೆಯನ್ನು ಹೊಂದಿತ್ತು. ಪ್ರಸ್ತುತ ಮಾರಾಟದಿಂದ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಇದು AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನ ಪಡೆದಿತ್ತು. ಹಾಗೆಯೇ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, April 26, 2024, 17:15 [IST]
English summary
Actor maniesh paul and his wife sanyukta buys mini countryman car price rs 48 lakh price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+