ಬಹುಭಾಷಾ ನಟನ ಹೊಸ ಖರೀದಿ: ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಇಷ್ಟಪಡುವ ಏಕೈಕ ಎಸ್‌ಯುವಿ!

ದೇಶದ ಅತ್ಯಂತ ಜನಪ್ರಿಯ ಬಹುಭಾಷಾ ನಟರಲ್ಲಿ ಒಬ್ಬರಾದ ಪಂಕಜ್ ತ್ರಿಪಾಠಿ, ತಮ್ಮ ನೈಜ ಮತ್ತು ಸರಳ ಜೀವನಶೈಲೆಗೆ ಹೆಸರುವಾಸಿಯಾಗಿದ್ದಾರೆ. ದೇಶಾದ್ಯಂತ ಸದ್ದು ಮಾಡಿದ್ದ ಜನಪ್ರಿಯ ವೆಬ್‌ಸಿರೀಸ್ ಮಿರ್ಜಾಪುರ್‌ನಲ್ಲಿ ಕಲೀನ್ ಭೈಯಾ ಪಾತ್ರದಲ್ಲಿ ಎಲ್ಲರನ್ನು ಮೆಚ್ಚಿಸಿದ್ದರು. ದೊಡ್ಡ ನಟನಾದರೂ ತುಂಬಾ ಸಿಂಪಲ್‌ ಜೀವನ ನಡೆಸುತ್ತಾರೆ, ಇತ್ತೀಚೆಗೆ ತಮ್ಮ ಹೊಸ ವಾಹನಗಳ ಆಯ್ಕೆಗಳಿಂದ ಗಮನ ಸೆಳೆದಿದ್ದಾರೆ. ಸೆಲೆಬ್ರಿಟಿಗಳು ಬಿಎಂಡಬ್ಲ್ಯು, ರೇಂಜ್ ರೋವರ್, ಮರ್ಸಿಡಿಸ್ ಬೆಂಝ್‌ನಂತಹ ಐಷಾರಾಮಿ ಕಾರುಗಳನ್ನು ಖರೀದಿಸಿದರೆ ಇವರು ಟೊಯೊಟಾ ಫಾರ್ಚೂನರ್ ಅನ್ನು ಇಷ್ಟಪಟ್ಟು ಖರೀದಿಸಿದ್ದಾರೆ.

ಪಂಕಜ್ ತ್ರಿಪಾಠಿ ಟೊಯೊಟಾ ಫಾರ್ಚೂನರ್ ಖರೀದಿಸುವ ಮೊದಲು, ಟಾಟಾ ನೆಕ್ಸಾನ್ ಇವಿಯ ಮಾಲೀಕರಾಗಿದ್ದರು. ಅವರು ತಮ್ಮ ನೀಲಿ ಬಣ್ಣದ ಪ್ರಿ-ಫೇಸ್ ಲಿಫ್ಟ್ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯೊಂದಿಗೆ ಈ ಹಿಂದೆ ಹಲವು ಬಾರಿ ಕಾಣಿಸಿಕೊಂಡಿದ್ದರು. ಈ ಇವಿ, 465 ಕಿ.ಮೀ ಡ್ರೈವಿಂಗ್ ರೇಂಜ್ ನೀಡುವುದರಿಂದ ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದೆ.

actor-pankaj-tripathi-upgrades-to-toyota-fortuner-from-tata-nexon-ev

ಹೊಸ ಟೊಯೊಟಾ ಫಾರ್ಚೂನರ್: ಪಂಕಜ್ ತ್ರಿಪಾಠಿ ತಮ್ಮ ಹೊಸ ಟೊಯೊಟಾ ಫಾರ್ಚೂನರ್‌ನೊಂದಿಗೆ ಪಾಪರಾಜಿಗಳಿಗೆ ಕಾಣಿಸಿಕೊಂಡಿರುವ ವೀಡಿಯೊ ವೈರಲ್ ಆಗಿದೆ. ಅವರು ಕಚೇರಿಯಿಂದ ಹೊರಬಂದು ಪಾರ್ಕ್ ಮಾಡಿರುವ ವೈಟ್ ಫಾರ್ಚೂನರ್ ಬಳಿ ಹೋಗುವ ದೃಶ್ಯಗಳನ್ನು ನೋಡಬಹದು. ಪಾಪರಾಜಿಗಳನ್ನು ನೋಡಿ, ವಿನಮ್ರವಾಗಿ ನಮಸ್ಕಾರ ಮಾಡುವುದು ಅವರ ವ್ಯಕ್ತಿತ್ವವನ್ನು ಮತ್ತಷ್ಟು ಹತ್ತಿರದಿಂದ ತೋರಿಸುತ್ತದೆ.

ಟೊಯೊಟಾ ಫಾರ್ಚೂನರ್ ವಿಶೇಷತೆಗಳು: ಪಂಕಜ್ ತ್ರಿಪಾಠಿ ಬಳಸುತ್ತಿರುವ ಫಾರ್ಚೂನರ್ ಮಾದರಿಯು ವಿಶಿಷ್ಟ ಪರ್ಲ್ ವೈಟ್ ಬಣ್ಣದಲ್ಲಿದ್ದು, ವಿನ್ಯಾಸದ ಸರಳತೆಯನ್ನು ಪ್ರತಿನಿಧಿಸುತ್ತದೆ. ಇದು ಪವರ್‌ಫುಲ್ 2.8 ಲೀಟರ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದೆ. ಇದು 201 ಬಿಎಚ್ ಪವರ್ ಮತ್ತು 500 ಎನ್‌ಎಮ್ ಟಾರ್ಕ್ ಉತ್ಪಾದಿಸುತ್ತದೆ. ಮ್ಯಾನುಯಲ್ ಗೇರ್‌ಬಾಕ್ಸ್ ಜೊತೆಗೆ ಆಪ್ಷನಲ್ ಆಟೋಮ್ಯಾಟಿಕ್ ಆಯ್ಕೆಯನ್ನು ಒಳಗೊಂಡಿದೆ.

actor-pankaj-tripathi-upgrades-to-toyota-fortuner-from-tata-nexon-ev

ಇದು ಫಾರ್ಚೂನರ್‌ನ ಸ್ಟ್ಯಾಂಡರ್ಡ್ 4 ಎಕ್ಸ್ 2 ರೂಪಾಂತರವಾಗಿದೆ. ಫಾರ್ಚೂನರ್ ನಮಗೆಲ್ಲರಿಗೂ ತಿಳಿದಿರುವಂತೆ ರಸ್ತೆ ಉಪಸ್ಥಿತಿಗೆ ಹೆಸರುವಾಸಿಯಾಗಿದೆ. ಮೇಲೆ ಹೇಳಿದಂತೆ, ಟೊಯೊಟಾ ಫಾರ್ಚೂನರ್ ಹೊರತಾಗಿ, ನೀಲಿ ಟಾಟಾ ನೆಕ್ಸಾನ್ ಇವಿಯಲ್ಲಿ ತನ್ನ ಒಟಿಟಿ ಸರಣಿಯ ಪ್ರಚಾರವನ್ನು ಸಹ ಮಾಡಿದ್ದರು. ಇಷ್ಟು ಸಿಂಪಲ್ ಕಾರಿನಲ್ಲಿ ಪ್ರಚಾರ ಮಾಡಿದ್ದರ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು.

ನಟ ಪಂಕಜ್ ತ್ರಿಪಾಠಿ ತಮ್ಮ ಜೀವನಶೈಲೆಯೊಂದಿಗೆ ಭಿನ್ನತೆಯನ್ನು ತೋರಿಸುತ್ತಿದ್ದಾರೆ. ಬಿಎಂಡಬ್ಲ್ಯೂ ಮತ್ತು ಮರ್ಸಿಡಿಸ್‌ಗಳೊಂದಿಗೆ ಓಡಾಡುವ ಬಾಲಿವುಡ್ ಸೆಲೆಬ್ರಿಟಿಗಳ ಪೈಕಿ, ಅವರು ಟೊಯೊಟಾ ಫಾರ್ಚೂನರ್ ಮತ್ತು ಟಾಟಾ ನೆಕ್ಸಾನ್ ಇವಿಯನ್ನು ಆಯ್ಕೆ ಮಾಡಿಕೊಂಡಿರುವುದು ಅವರ ಸರಳತೆಯನ್ನು ತೋರಿಸುತ್ತದೆ. ಜೊತೆಗೆ ಉಳಿದವರಿಗಿಂತ ವಿಭಿನ್ನವಾಗಿ ಯೋಚಿಸುವ ಅವರ ಮನೋಭಾವನೆಯನ್ನು ತೋರಿಸುತ್ತದೆ.

ಟೊಯೊಟಾ ಫಾರ್ಚೂನರ್ ಭಾರತದಲ್ಲಿ ಅತ್ಯಂತ ಜನಪ್ರಿಯ ಎಸ್‌ಯುವಿಯಾಗಿದ್ದು, ಹಲವರು ನಟರ ಆರಂಭಿಕ ದಿನಗಳ ಎಸ್‌ಯುವಿ ಆಗಿತ್ತು. ಹಲವರು ಜನಪ್ರಿಯ ಸೆಲೆಬ್ರಿಟಿಗಳು ಇಂದಿಗೂ ಈ ಎಸ್‌ಯುವಿಯನ್ನು ಬಳಸುತ್ತಿದ್ದಾರೆ. ಆದರೆ ಈ ಕಾರಿನೊಂದಿಗೆ ಕಾಣಿಸಿಕೊಳ್ಳುವುದು ತುಂಬಾ ಕಡಿಮೆ. ಈ ಎಸ್‌ಯುವಿಯನ್ನು ಹೊಂದಿರುವ ಪ್ರಸಿದ್ಧ ವ್ಯಕ್ತಿಯಾಗಿದ್ದರೂ ಎಲ್ಲಾ ಸಮಯದಲ್ಲು ಪಂಕಜ್ ತ್ರಿಪಾಠಿ ಟೊಯೊಟಾ ಫಾರ್ಚೂನರ್ ಅನ್ನು ಬಳಸುತ್ತಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 1, 2025, 12:49 [IST]
English summary
Actor pankaj tripathi upgrades to toyota fortuner from tata nexon ev
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+