ಕುಡಿದು ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಾಯಿಸಿದ ಟ್ರಕ್ ಚಾಲಕ: ಈ ನಟ ಮಾಡಿದ್ದನ್ನು ನೀವ್ಯಾಕೆ ಮಾಡಬಾರದು?
ನಮಗೆ ಟ್ರಕ್ ಡ್ರೈವರ್‌ಗಳು ಎಂದರೆ ಸಾಕು, ದೊಡ್ಡ ದೊಡ್ಡ ಲಾರಿಗಳು ರಸ್ತೆಗಳಲ್ಲಿ ನಮ್ಮ ಮೈಮೇಲೆ ನುಗ್ಗುವಂತೆ ಬರುತ್ತಿರುವ ಕಲ್ಪನೆಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಇದಕ್ಕೆ ಕಾರಣ ಟ್ರಕ್ ಡ್ರೈವರ್‌ಗಳು ಲಾರಿಯನ್ನು ಓಡಿಸುವ ರೀತಿ. ಭಾರತದಲ್ಲಿ ಟ್ರಕ್ ಡ್ರೈವರ್‌ಗಳು ರಸ್ತೆಗಳಲ್ಲಿ ತಮ್ಮ ಟ್ರಕ್ಕನ್ನು ಅಡ್ಡಾದಿಡ್ಡಿಯಾಗಿ ಓಡಿಸುವುದು ಹೊಸತೇನಲ್ಲ.
ಇದೇ ರೀತಿ ಕುಡಿದು ತನ್ನ ಕಾರಿನ ಮುಂದೆ ಅಡ್ಡಾದಿಡ್ಡಿಯಾಗಿ ಅಪಾಯವಾಗುವಂತೆ ಲಾರಿಯನ್ನು ಓಡಿಸಿದ ಟ್ರಕ್ ಡ್ರೈವರ್ ವಿರುದ್ದ ಪ್ರಸಿದ್ದ ಮಲಯಾಳಂ ಚಿತ್ರರಂಗ ನಟನೊಬ್ಬ ಪೊಲೀಸ್ ದೂರು ನೀಡಿದ್ದು ಪೊಲೀಸರು ಆ ಟ್ರಕ್ ಡ್ರೈವರನ್ನು ಬಂಧಿಸಿ ಕಂಬಿ ಎಣಿಸಲು ನೇಮಿಸಿದ ಘಟನೆಯೊಂದು ಕೇರಳದಲ್ಲಿ ನಡೆದಿದೆ.

ಮಲಯಾಳಂ ನಟ ಮತ್ತು ರಾಜ್ಯ ಸಭಾ ಎಂಪಿ ಆಗಿರುವ ಸುರೇಶ್ ಗೋಪಿ (Suresh Gopi) ಪೊಲೀಸರಿಗೆ ಟ್ರಕ್ ಟ್ರೈವರ್ ವಿರುದ್ದ ದೂರು ನೀಡಿದ್ದು, ಬಂಧಿತನಾದ ಆರೋಪಿ ಟ್ರಕ್ ಡ್ರೈವರನ್ನು ತಮಿಳುನಾಡು ರಾಜ್ಯದ ಕಲ್ಲಕುರಿಚ್ಚಿ ಜಿಲ್ಲೆಯ ಮೂಲದ 29 ವಯಸ್ಸಿ ಭರತ್ ಎಂದು ಗುರುತಿಸಲಾಗಿದೆ.
ಎರ್ನಾಕುಳಂ ಜಿಲ್ಲೆಯಲ್ಲಿ ಘಟನೆ ಸಂಭವಿಸಿದ್ದು, ಘಟನೆಗೆ ಸಂಭಂಧಿಸಿದಂತೆ ನಟ ಸುರೇಶ್ ಗೋಪಿ, ತ್ರಿಶೂರ್ ಎಂಬಲ್ಲಿ ಕೊಲ್ಲಂ ಸುಧಿ ಎಂಬ ನಟನ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಮನೆಗೆ ಮರಳುತ್ತಿದ್ದರು. ಈ ಸಂಧರ್ಭದಲ್ಲಿ ಕಳಮಶೇರಿಯ ತೊಶಿಭಾ ಜಂಕ್ಷನ್ ಬಳಿ ಟ್ರಕ್ ಡ್ರೈವರ್ ಅಡ್ಡಾದಿಡ್ಡಿಯಾಗಿ ರಸ್ತೆ ತುಂಬಾ ಲಾರಿಯನ್ನು ಓಡಿಸುತ್ತಿದ್ದುದು ಕಂಡು ಬಂದಿದೆ.
ಈ ಸಂಧರ್ಭದಲ್ಲಿ ನಟ ಸುರೇಶ್ ಗೋಪಿ, ಹಾರ್ನ್ ಹೊಡೆದು ತನ್ನ ಕಾರಿಗೆ ಸೈಡ್ ನೀಡುವಂತೆ ಸೂಚಿಸಿದ್ದಾರೆ. ಆದರೆ ಇದನ್ನು ಲೆಕ್ಕಿಸದ ಟ್ರಕ್ ಡ್ರೈವರ್ ತನಗೆ ಮನ ಬಂದಂತೆ ರಸ್ತೆ ತುಂಬಾ ಲಾರಿಯನ್ನು ಚಲಾಯಿಸುವುದು ಮುಂದುವರೆಸಿದ್ದಾನೆ. ತನ್ನ ಕಾರಿಗೆ ಸೈಡ್ ಕೊಡುವ ಯಾವುದೇ ಲಕ್ಷಣಗಳು ಕಾಣಿಸದೇ ಇದ್ದಾಗ ಸುರೇಶ್ ಗೋಪಿ, ನೇರವಾಗಿ ಪೊಲೀಸರಿಗೆ ಫೋನ್ ಮಾಡಿ ದೂರು ದಾಖಲಿಸಿದ್ದಾರೆ.
ನಟ ಸುರೇಶ್ ಗೋಪಿ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಕೇರಳ ಪೊಲೀಸ್ ಕೂಡಲೇ ಆ ಟ್ರಕ್ ಅನ್ನು ಗುರುತಿಸಿ ಅಂಗಮಾಲಿ ಎಂಬಲ್ಲಿ ಅಡ್ಡ ಹಾಕಿ, ಚಾಲಕ ಭರತನ್ನು ಬಂಧಿಸಿದ್ದಾರೆ. ಇನ್ನು ಪೊಲೀಸ್ ವರದಿಯ ಪ್ರಕಾರ ಟ್ರಕ್ ಚಲಾವಣೆಯ ಸಮಯದಲ್ಲಿ ಚಾಲಕ ಮದ್ಯಪಾನ ಮಾಡಿರುವುದು ತಿಳಿದು ಬಂದಿದೆ.
ಇದರಿಂದ ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಿಕೊಂಡ ಪೊಲೀಸ್ ಚಾಲಕನ ವಿರುದ್ದ ಗಂಭೀರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಡಿದು ವಾಹನ ಚಲಾಯಿಸುವುದು ನಾವೇ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ ಎಂಬುವುದು ಹಗಲಿನಷ್ಟೇ ಸತ್ಯವಾದ ವಿಷಯ. ಇಂತಹ ಕೃತ್ಯವನ್ನು ಎಸೆಯುವವರ ಮೇಲೆ ಕಠಿಣ ಕ್ರಮ ಕೈಗೊಂಡು ತಕ್ಕ ಶಿಕ್ಷೆ ನೀಡಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications